ಯುಜಿಸಿ ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ: 'ಭಾರತ್ ಬಂದ್' ಕರೆ ನಡುವೆಯೇ ಮಹತ್ವದ ಆದೇಶ
ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿದ್ದ ವಿವಾದಾತ್ಮಕ 'ಇಕ್ವಿಟಿ ನಿಯಮಗಳು 2026' ಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡಿದೆ. ಜನವರಿ 23 ರಂದು ಜಾರಿಗೆ ಬಂದಿದ್ದ ಈ ಮಾರ್ಗಸೂಚಿಗಳು ಅನಿಯಂತ್ರಿತ, ತಾರತಮ್ಯದಾಯಕ ಮತ್ತು ಭಾರತದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಅಂತಿಮ ತೀರ್ಪು ಹೊರಬರುವವರೆಗೆ ನಿಯಮಾವಳಿಯ ಜಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.ಯುಜಿಸಿಯ ಈ ಹೊಸ ನಿಯಮಗಳು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ವಿವಿಧ ರಾಜ್ಯಗಳಲ್ಲಿ ತೀವ