"ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ: ನಿನ್ನ ಸುತ್ತಿಪ್ಪುದು ಎನ್ನ ಮನ, ನೋಡಯ್ಯಾ! ನೀನು ಜಗಕ್ಕೆ ಬಲ್ಲಿದನು: ಆನು ನಿನಗೆ ಬಲ್ಲಿದನು, ಕಂಡಯ್ಯಾ! ಕರಿಯು ಕನ್ನಡಿಯೊಳಗಡಗಿದಂತಯ್ಯಾ, ಎನ್ನೊಳಗೆ ನೀನಡಗಿದೆ, ಕೂಡಲಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು


