ShareChat
click to see wallet page
search
"ಅಂದು- ಇಂದು, ಮತ್ತೊಂದೆನಬೇಡ, ದಿನವಿಂದೇ ಶಿವ ಶರಣೆಂಬವಂಗೆ, ದಿನವಿಂದೇ ಹರ ಶರಣೆಂಬವಂಗೆ, ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನವಂಗೆ.. ✍️ ಬಸವಣ್ಣನವರ ವಚನ.. ವಚನದ ಭಾವಾರ್ಥ: ಶುಭಕಾಲ, ಅಶುಭ ಕಾಲ, ಅಮಾವಾಸ್ಯೆ ಪೂರ್ಣಿಮೆ ಏಕಾದಶಿ ದ್ವಾದಶಿ, ಸೋಮವಾರ, ಮಂಗಳವಾರ, ಪಂಚಮಿ ರಾಹುಕಾಲ ಗುಳಿಕಕಾಲ ಮುಂತಾದ ಕಾಲಕ್ಕೆ ಸಂಬಂಧಿಸಿದಂತೆ ಎಲ್ಲಾ ಶುಭ, ಅಶುಭ ಕಲ್ಪನೆಗಳನ್ನು ಎಲ್ಲಾ ಸಂತರು ಶರಣರು ದಾಸರು ಅನುಭಾವಿಗಳು ನಿರಾಕರಿಸಿದ್ದಾರೆ. ಶುಭಕಾಲ ಬರುವುದೆಂದು ಕಾಲಹರಣ ಮಾಡದೇ ಮನದಲ್ಲಿರುವ ದೇವರನ್ನು ನೆನೆದು, ಎಲ್ಲಾ ಕಾಲವು, ಎಲ್ಲಾ ದಿನವೂ ಎಲ್ಲಾ ಸಮಯವೂ ಶುಭವೆಂದು ಭಾವಿಸಬೇಕೆಂದು, ಬಸವಣ್ಣನವರು ಅಭಿಪ್ರಾಯಪಡುತ್ತಾರೆ..! #ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ShareChat