ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ ಗುಡ್ ನ್ಯೂಸ್! ICC ರ‍್ಯಾಂಕಿಂಗ್ ಪಟ್ಟಿಯಲ್ಲಿ ಏಕಾಏಕಿ ಎತ್ತರಕ್ಕೇರಿದ SKY!
Suryakumar Yadav Performance- ದೀರ್ಘಕಾಲದಿಂದ ಫಾರ್ಮ್ ಕೊರತೆ ಅನುಭವಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಈಗ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 32, 82 ಮತ್ತು 57 ರನ್ ಗಳಿಸಿ ಭಾರತಕ್ಕೆ ಸರಣಿ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ಈಗ ಅವರು ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ ಬೌಲರ್ ಗಳಪಟ್ಟಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ 13ನೇ ಸ್ಥಾನಕ್ಕೇರಿದ್ದಾರೆ.