ರಾಮ ನಾಮದ ಮಹಿಮೆ :-
ಪಾಂಡವರು ಕಾಮ್ಯಕ ವನದಲ್ಲಿದ್ದ ಪಾಂಡವರನ್ನು ನೋಡ ಲು ಬಂದ ಶ್ರೀ ಕೃಷ್ಣನನ್ನು ಪ್ರೀತಿಯಿಂದ ಸ್ವಾಗತಿಸಿದ ಯುಧಿ ಷ್ಠಿರ ಬಹಳ ಆತಂಕದಲ್ಲಿದ್ದ . ಕೃಷ್ಣನನ್ನು ಸತ್ಕರಿಸಿ ಕೇಳಿದ ಹೇ ವಾಸುದೇವ, ನನಗೆ ರಾಜ್ಯ, ಕೋಶ, ಅಧಿಕಾರ ದಲ್ಲಿ ಆಸಕ್ತಿ ಇಲ್ಲ. ಆದರೆ ನನ್ನಿಂದಾಗಿ ನನ್ನ ತಾಯಿ, ತಮ್ಮಿಂದಿರು ಮತ್ತು ದ್ರೌಪದಿ ಕಷ್ಟ ಪಡುವಂತಾಗಿದೆ. ಇದಕ್ಕೆ ಕಾರಣರಾದ ಶತ್ರುಗಳನ್ನು ಸಂಹಾರ ಮಾಡಿ ನನ್ನ ರಾಜ್ಯವನ್ನು ಪಡೆಯಲು ನಾನು ಏನು ಮಾಡಬೇಕು ನೀನೆ ದಾರಿ ತೋರು ಎಂದು ಕೇಳಿದ. ಕೃಷ್ಣ ಧರ್ಮರಾಯನ ಸಮೀಪ ಬಂದು ಅವನ ಕಿವಿಯಲ್ಲಿ 'ರಾಮ ನಾಮ ಮಂತ್ರ' ಉಪದೇಶ ಮಾಡಿ ನೀನು ಯಾವಾಗಲೂ 'ಶ್ರೀ ರಾಮ ಜಯ ರಾಮ' ಈ ಮಂತ್ರ ವನ್ನು ಜಪಿಸುತ್ತಿರು ಇದರಿಂದ ನಿನ್ನ ಸಕಲ ಕಷ್ಟಗಳು ಕಳೆದು ರಾಜ್ಯ ಲಭಿಸುತ್ತದೆ ಎಂದನು. ಆದರೆ ಅನುಮಾನ ಕೊಂಡ ಧರ್ಮರಾಜ, ಕೃಷ್ಟಾ 'ರಾಮ ನಾಮ' ಮಂತ್ರ ಜಪಿಸಿ ಫಲ ಪಡೆದವರು ಯಾರಾದರೂ ಇದ್ದಾರೆಯೇ? ಎಂದು ಕೇಳಿದ.
ಕೃಷ್ಣ ಹೇಳಿದ, ತ್ರೇತಾಯುಗದಲ್ಲಿ ನಾನು ರಾಮನಾಗಿದ್ದೆ. ಹನುಮಂತ ಸೀತಾನ್ವೇಷಣೆಗೆ ಹೊರಟಾಗ, ನಿನ್ನ ಕಾರ್ಯದಲ್ಲಿ ಜಯವಾಗಲಿ ಎಂದು “ರಾಮ ನಾಮ” ಮಂತ್ರೋಪದೇಶ ಮಾಡಿದೆ. ಅವನಿಗೆ ಎದುರಾಗುವ ದೊಡ್ಡ ದೊಡ್ಡ ಅಡೆತಡೆ ಗಳನ್ನೆಲ್ಲಾ ಹೊಡೆದೋಡಿಸಿ ಕಾರ್ಯ ಸಾಧಿಸುವಲ್ಲಿ ಜಯ ಶಾಲಿ ಯಾದನು. 'ರಾಮ ನಾಮ' ಮಂತ್ರವನ್ನು ಸಾಕ್ಷಾತ್ ಪರಮೇಶ್ವರನೇ ಜಪಿಸುತ್ತಿದ್ದನು. ರಾಮನಿಗಿಂತ ಮೊದಲೇ 'ರಾಮ’ನ ಹೆಸರು ಇತ್ತು. ಪ್ರಾಚೀನ ಕಾಲದಲ್ಲಿ ಶಿವನನ್ನು 'ರಾಮಾ' ಎಂದು ಕರೆಯುತ್ತಿದ್ದರು. ಇಕ್ವಾಕು ವಂಶದ ಗುರು ವಶಿಷ್ಠರು ಸಪ್ತ ಋಷಿಗಳಲ್ಲಿ ಒಬ್ಬರು. ಸಾವಿರಾರು ವರ್ಷ ಬದುಕಿದ್ದವರು ಎಂದು ಕಾವ್ಯಗಳೇ ಹೇಳುತ್ತವೆ. ವಸಿಷ್ಠರ ನೂರು ಮಕ್ಕಳಲ್ಲಿ ಹಿರಿಯ ಮಗ ಶಕ್ತಿ, ಇವನ ಮಗ ಪರಾ ಶರ, ಪರಾಶರರ ಮಗ ವೇದವ್ಯಾಸರು. ವಶಿಷ್ಠರು ರಾಮನ ವಂಶದವರಿಗೆ ಗುರುವಾಗಿ ಇಕ್ವಾಕು ವಂಶ ನಡೆಸಿದರೆ, ವೇದ ವ್ಯಾಸರು ಮಹಾಭಾರತವನ್ನು ನಡೆಸಿದವರು. ಅಂದರೆ ಈ ವಂಶದವರು ತ್ರೇತಾಯುಗದಿಂದ ದ್ವಾಪರದ ತನಕ ಬಂದಿರುವರು.
ರಾಮ- ಲಕ್ಷ್ಮಣಗೆ ವಶಿಷ್ಠರೇ ಹೆಸರಿಟ್ಟರು. ಯುಗ ಯುಗಗಳು ಕಳೆದರೂ ‘ರಾಮ’ ಹೆಸರು ಶಾಶ್ವತವಾಗಿರಲು, ವಿಷ್ಣುವಿನ ಹೆಸರು 'ನಾರಾಯಣ' ದಲ್ಲಿ 'ರಾ- ಇಲ್ಲದಿದ್ದರೆ ನಾಯಣ ಅಂದರೆ ಇಲ್ಲ ಎಂದಾಗುತ್ತದೆ. 'ಶಿವನ' ಓಂ ನಮಃ ಶಿವಾಯದಲ್ಲಿ 'ಮ' ಇಲ್ಲದಿದ್ದರೆ 'ನಾ ಶಿವಾಯ' ಶಿವ ಇಲ್ಲ ಎಂದಾಗುತ್ತದೆ.
ನಾರಾಯಣದಲ್ಲಿ 'ರಾ' ಎಂಬ ಬೀಜಾಕ್ಷರ, ನಮಃ ಶಿವಾಯ ದಲ್ಲಿ 'ಮ' ಎಂಬ ಬೀಜಾಕ್ಷರವನ್ನು ಸೇರಿಸಿ 'ರಾಮ' ಎಂಬ ಹೆಸರನ್ನು ಇಟ್ಟರು. ಇದರಿಂದ 'ಶೈವ- ವೈಷ್ಣವರು' ಎಲ್ಲರಿಗೂ ರಾಮ ಪ್ರಿಯನಾದನು. ಇಂಥ ಮಹಿಮೆಯ ರಾಮ ನಾಮದ ಪ್ರಯೋಜನವನ್ನು ಲೆಕ್ಕವಿಲ್ಲದಷ್ಟು ಭಕ್ತರು ಪಡೆದಿದ್ದಾರೆ.
ಹನುಮಂತನ ರೋಮ ರೋಮಗಳಲ್ಲೂ ರಾಮ ನಾಮ ತುಂಬಿದೆ. ರಾಮ ತನ್ನ ಅವತಾರ ಮುಗಿಸಿ ವೈಕುಂಠ ಕ್ಕೆ ಹೊರಟಾಗ ಹನುಮಂತನನ್ನು ನೀನು ಬರುವೆಯಾ? ಎಂದು ಕೇಳಿದಾಗ, ಭೂಲೋಕದಲ್ಲಿ ರಾಮನಾಮ ಸ್ಮರಣೆ ಎಲ್ಲಿಯ ತನಕ ನನ್ನ ಕಿವಿಗೆ ಕೇಳುತ್ತದೋ ಅಲ್ಲಿಯತನಕ ನಾನು ಬರುವುದಿಲ್ಲ ಇಲ್ಲೇ ಇರುತ್ತೇನೆ ಎಂದ ಹನುಮಂತ. 'ರಾಮ' ಎಂಬ ಹೆಸರಿನ ಮಹಿಮೆಯೇ ಅಂತದ್ದು. ಸಂತ 'ಕಬೀರ'ರು ಹುಟ್ಟಿನಿಂದ ಯಾವ ಜಾತಿ ಗೊತ್ತಿಲ್ಲ. ನೇಕಾರ ದಂಪತಿಗೆ ಮರದ ಕೆಳಗೆ ದೊರೆತ ಮಗುವಿಗೆ 'ಕಬೀರ' ಎಂದು ಹೆಸರಿಟ್ಟು ಸಾಕಿದರು. ಕಬೀರ ಭಕ್ತಿ ಪಂಥದ ಕವಿ ಆಗಿದ್ದನು. ರಾಮ ಭಕ್ತನಾದ ಕಬೀರ ಕಾಶಿಯಲ್ಲಿ ಇದ್ದನು, ಕಬೀರನ ಗುರುಗಳು ರಾಮಾನಂದರು. ಗುರುಗಳಿಂದ ‘ರಾಮ ನಾಮ’ ಉಪದೇಶ ಪಡೆಯಲು ಕಬೀರ ಬಯಸಿದ ಆ ದಿನಗಳಲ್ಲಿ ದೀಕ್ಷೆ ಅಷ್ಟು ಸುಲಭವಾಗಿ ಕೊಡುವ ಹಾಗೆ ಇರಲಿಲ್ಲ. ಅದರದೇ ಆದ ನಿಯಮಗಳಿದ್ದವು. ಆದರೆ ಕಬೀರನಿಗೆ ಗುರುಗಳಿಂದಲೇ ಉಪದೇಶ ಬೇಗ ಪಡೆಯ ಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಒಂದು ಉಪಾಯ ಮಾಡಿದ “ರಮಾನಂದರು” ಬೆಳಗಿನ ಜಾವವೇ ಗಂಗಾ ನದಿ ಸ್ನಾನಕ್ಕೆ ಬರುವರೆಂದು ತಿಳಿದು, ಅವನು ಅದೇ ಸಮಯಕ್ಕೆ ಹೋಗಿ ನದಿಯ ಮೆಟ್ಟಿಲ ಮೇಲೆ ಮಲಗಿದನು. ಎಂದನಂತೆ ರಮಾನಂದರು ರಾಮನಾಮ ಸ್ಮರಣೆ ಮಾಡುತ್ತಾ ಮೆಟ್ಟಿಲ ಮೇಲೆ ಇಳಿದು ಬರುತ್ತಿದ್ದರು. ಅವರ ಕಾಲಲ್ಲಿ ಪಾದುಕೆ ಇತ್ತು. ಕತ್ತಲಲ್ಲಿ ಕಾಣದೆ ಕಬೀರನ ತಲೆಯ ಮೇಲೆ ತುಳಿದು ಬಿಟ್ಟರು. ತಕ್ಷಣ ಕಬೀರ ಮೇಲೆದ್ದು, ಗುರುಗಳೇ ನನಗೆ ದೀಕ್ಷೆ ಕೊಟ್ಟಿದಿರಿ ಎಂದು ಓಡುತ್ತಾ ಹೋದನು. ಎದುರಿಗೆ ಬಂದವರಿಗೆಲ್ಲ ಗುರುಗಳು ನನಗೆ ದೀಕ್ಷೆ ಕೊಟ್ಟರು ಎಂದು ಹೇಳಿದನು. ಇವನಿಗೆ ಹೇಗೆ ಇಷ್ಟು ಬೇಗ ದೀಕ್ಷೆ ಕೊಟ್ಟರೂ ಎಂದು ಉಳಿದವರಿಗೆಲ್ಲ ಆಶ್ಚರ್ಯ, ಅವರೆಲ್ಲ ಕಬೀರನನ್ನು ಕರೆದುಕೊಂಡು ಬಂದು ಗುರುಗಳ ಎದುರೆ ನಿಲ್ಲಿಸಿ, ಇವನಿಗೆ ರಾಮ ನಾಮ ಉಪದೇಶ ಕೊಟ್ಟಿದ್ದೀರಾ ಎಂದು ಕೇಳಿದರು. ತಕ್ಷಣ, ಗುರುಗಳೇ ನೀವು ನನಗೆ 'ರಾಮ-ನಾಮ'ದ ದೀಕ್ಷೆ ಕೊಟ್ಟಿದ್ದೀರಿ ಅಲ್ಲವೇ? ಎಂದು ಕಬೀರ ಕೇಳಿದ,
ಇದನ್ನು ಕೇಳಿದ ರಮಾನಂದರಿಗೆ ಕೋಪ ಬಂದು 'ಅಯ್ಯೋ ರಾಮ್ ರಾಮಾ' ಏನ್ ಹೇಳ್ತಾ ಇರುವೆ ಎಂದಾಗ, ಕಬೀರ
ಮತ್ತಷ್ಟು ಸಂತೋಷದಿಂದ ಹೇಳಿದ, ಗುರುಗಳೇ ಆ ದಿನ ಅ
ಕತ್ತಲಲ್ಲಿ ಗಂಗಾ ನದಿಯ ದಡದಲ್ಲಿ ನನಗೆ ದೀಕ್ಷೆ ಕೊಟ್ಟಿದ್ದು ಯಾರಿಗೂ ತಿಳಿದಿರಲಿಲ್ಲ. ಈ ದಿನ ಎಲ್ಲರೆದುರಿಗೆ ನೀವು
ದೀಕ್ಷೆ ಕೊಟ್ಟಿದ್ದಿರಿ ನಾನೇ ಧನ್ಯ ಎಂದನು. ರಮಾನಂದರ
ಅತ್ಯುತ್ತಮ ಶಿಷ್ಯ ಎಂದರೆ ಅದು ನೀನೇ ಎಂದು ಗುರುಗಳು
ಎಲ್ಲರ ಎದುರಿಗೆ ಕಬೀರಗೆ ಹೇಳಿದರು.
ಭಕ್ತಿ ಪಂಥದ ದಾರಿ ತೋರಿದ ಪ್ರಮುಖರಲ್ಲಿ, ರಮಾನಂದರು, ಸಮರ್ಥ ರಾಮದಾಸರು, ತುಳಸಿದಾಸರು, ಕಬೀರ ದಾಸರು, ಶ್ರೀಧರ ಸ್ವಾಮಿಗಳು, ಗುರು ಗೋಂದಾವಳ ಮಹಾರಾಜರು, ಇನ್ನು ಅನೇಕಾನೇಕ ಭಕ್ತ ಸಂತರು ರಾಮ ನಾಮ ಜಪಿಸಿ ಮುಕ್ತಿ ಪಡೆದರು. “ರಾಮ ನಾಮ” ಜಪಕ್ಕೆ ಅದ್ಭುತವಾದ ಶಕ್ತಿ ಇದೆ. ಬೆಂಕಿಗೆ, ಹೇಗೆ ಸುಡುವ ಶಕ್ತಿ ಇದೆ ಯೋ ಹಾಗೆ, ಆಕಸ್ಮಿಕವಾಗಿ ಮಾಡಿದ “ಪಾಪ” ಗಳನ್ನು ಕಳೆವ ಶಕ್ತಿ ರಾಮನಾಮ ದಲ್ಲಿ ಇದೆ. 'ರಾ' ಎನ್ನಲು ಬಾಯಿ ಕಳೆಯುತ್ತೇವೆ, ಒಳಗಿದ್ದ ಪಾಪ ಹೊರಗೆ ಹೋಗುತ್ತದೆ. 'ಮಾ' ಎಂದು ಹೇಳುವಾಗ 'ತುಟಿ' ಮುಚ್ಚುತ್ತದೆ. ಅಂದರೆ ಹೊರಗೆ ಹೋದ ಪಾಪ ಒಳಗೆ ಮತ್ತೆ ಸೇರುವುದಿಲ್ಲ. ನಂಬಿಕೆ ಇರಬೇಕು. ರಾಮನಾಮದ ಮಹಿಮೆ ಬಲ್ಲವರೇ ಬಲ್ಲರು.
❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್


