ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಬಸವಣ್ಣ, ಗಾಂಧಿ, ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ದೊರೆಯುವಂತೆ ಮಾಡಿದ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ರೂವಾರಿ ದೇವರಾಜ ಅರಸು ಅವರ ಕನಸಿಗೆ ಬೆಳಕಾದ ಸಾಮಾನ್ಯ ಜನರ ನಾಯಕ ಸಿದ್ದರಾಮಯ್ಯು ಅವರಿಗೆ ಅಭಿನಂದನೆ. ಕರ್ನಾಟಕದಲ್ಲಿ ಮೊಟ್ಟಮೊದಲಿಗೆ ತಳವರ್ಗಗಳಿಗೆ ಸಾಮಾಜಿಕ ನ್ಯಾಯ, ಅಧಿಕಾರ ಹಾಗೂ ಭೂಮಿ ಹಂಚಿಕೆ ಮೂಲಕ ಧ್ವನಿಯೇ ಇಲ್ಲದ ಬಡವರಿಗೆ ಧ್ವನಿಯಾಗಿದ್ದ ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಕೈಗಾರಿಕೆ, ವಾಣಿಜ್ಯ ಪ್ರಗತಿಗೂ ಮೊದಲು ಹಸಿದ ಬಾಯಿಗೆ ಅನ್ನ ಕೊಡಬೇಕು ಎನ್ನುತ್ತಿದ್ದರು. ಇವರ ಹಾದಿಯಲ್ಲಿಯೇ ಸಾಗಿ ಬಂದ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಬಡತನದ ನೋವು ಉಂಡವರು. ಒಂದುಹೊತ್ತಿನ ಅನ್ನಕ್ಕಾಗಿ ಪರಿತಪಿಸಿದ ಅನುಭವ ಹೊಂದಿದವರು. ಹೀಗಾಗಿ ರಾಜ್ಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದು ಬಸವಣ್ಣ, ಗಾಂಧಿಜೀ ಪ್ರತಿಪಾದಿಸಿದ, ಅಂಬೇಡ್ಕರ್ ಪ್ರತಿಪಾದಿಸಿದ ಪ್ರತಿ ವ್ಯಕ್ತಿಗೂ ನ್ಯಾಯ, ಸಮಾನತೆ ದೊರೆಯುವಂತೆ ಮಾಡಿದವರು. ಸಿದ್ದರಾಮಯ್ಯ ಅವರ ಬೆಂಬಲಕ್ಕೆ ರಾಹುಲ್‌ ಗಾಂಧಿ ಇರುವುದು, ಡಿ.ಕೆ.ಶಿವಕುಮಾರ್‌ ಅಂತಹವರು ಕೈಜೋಡಿಸಿದ್ದು ನಮ್ಮಂತ ಬಡ ಹಿನ್ನೆಲೆಯಿಂದ ಬಂದವರಿಗೆ ಇವರ ಕೊಡುಗೆ ದೊಡ್ಡ ಸಾಧನೆಯೇ ಸರಿ. ಅನ್ನ ನೀಡುವ ಗ್ಯಾರಂಟಿ ಯೋಜನೆಯಾಗಲಿ ಹಾಗೂ ಇತರೆ ಜನಪರ ಯೋಜನೆಗಳು, ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ವ್ಯಾಸಂಗದ, ಆರೋಗ್ಯ ಭಾಗ್ಯದ ಅನುಕೂಲದಂತಹ ಯೋಜನೆಗಳು ಬಡವರ ಬದುಕಿನ ದಿಕ್ಕನ್ನೆ ಬದಲಿಸಿವೆ. ಒಟ್ಟಾರೆ ಇವರ ಅವಧಿ ಶೋಷಿತ ವರ್ಗಕ್ಕೆಅಭಿವೃದ್ಧಿಪರ್ವವಾಗಿದೆ. ಸಚಿವರಿಗೆ, ಶಾಸಕರಿಗೆ, ಬಿಬಿಎಂಪಿ ಸದಸ್ಯರಿಗೆ ಹರಿದು ವ್ಯರ್ಥವಾಗುತ್ತಿದ್ದ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಜನರಿಗೆ ಹಣವೆಲ್ಲ ಸಲ್ಲುವಂತೆ ಮಾಡಿದ ಸಿದ್ದರಾಮಯ್ಯ ಅವರ ಆಡಳಿತವು ದಾಖಲೆಯ ಸಾಧನೆಯೇ ಸರಿ. ಸಾಮಾಜಿಕವಾಗಿ ಶೋಷಿತರಾಗಿದ್ದಅಲೆಮಾರಿ, ಬುಡಕಟ್ಟುಗಳು, ದಲಿತರು, ಹಿಂದುಳಿದ ವರ್ಗದವರಿಗೆ ಅವಕಾಶ ವಂಚಿತರಿಗೆಲ್ಲನ್ಯಾಯ ಸಿಗುವಂತೆ ಮಾಡಿದರು. ನನ್ನಂತಹ ಹೆಚ್ಚು ಓದಿಯೂ ಎಲ್ಲೂ ಸಲ್ಲದವರಂತ್ತಿದ್ದದ್ದನ್ನು ಗುರುತಿಸಿ ಸರ್ಕಾರದ `ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ’ಗೆ ಅಧ್ಯಕ್ಷ ಸ್ಥಾನ ಕೋಡಿಸಿದ್ದು, ಯಾವುದೇ ಪ್ರತಿಫಲಾಪೇಕ್ಷೆಇಲ್ಲದೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಅದೆ ನಮ್ಮ ಸಮುದಾಯದ ಒಬ್ಬಉಪಸಭಾಪತಿ ರುದ್ರಪ್ಪ ಲಮಾಣಿ ತನ್ನವರಿಗೆ ಸೇವಾಲಾಲ್ ಪ್ರಶಸ್ತಿ ಸಿಗಬೇಕು ಎಂದು ಪ್ರಶಸ್ತಿ ಪ್ರಕಟವಾದ ಮೇಲೆ ಕೋರಿ ಅಕಾಡೆಮಿಗೆ ಪತ್ರ ಬರೆದು ಬಿ.ಟಿ. ಲಲಿತಾನಾಯಕರಿಗೆ ಈ ಪ್ರಶಸ್ತಿಯನ್ನು ನೀಡಿದ ನಂತರ ಪಡೆಯಲು ವಿಫಲರಾದ ಮೇಲೆ ಸೇಡಿನ ಮನೋಭಾವದಿಂದ ಒಂದು ವರ್ಷಇಬ್ಬರು ಹಿರಿಯ ಅಧಿಕಾರಿಗಳನ್ನು ಸಂಸ್ಕೃತಿ ಇಲಾಖೆಗೆ ನೇಮಿಸಿಕೊಂಡು ಸದಸ್ಯರು, ಲೆಕ್ಕಾಧಿಕಾರಿ, ರಿಜಿಸ್ಟ್ರಾರ್‌ಗಳನ್ನು ತಮ್ಮಂತೆ ಮಾಡಿ ಅಧ್ಯಕ್ಷ ಸ್ಥಾನದಿಂದ ಇಳಿಸುವಲ್ಲಿ ನಿರಂತರ ದಾಳಿ ಮಾಡಿ ಮುಖ್ಯ ಮಂತ್ರಿಗಳಿಗೆ ವಿಷಯ ತಿಳಿಯುವ ಮೊದಲೆ ಅವರಿಗೆ ತಿಳಿಯದಂತೆಯೇ ಸಹಿ ಹಾಕಿಸಿದ ಸಮುದಾಯದ ವ್ಯಕ್ತಿ ಸಾಧನೆ ಎಲ್ಲಿ? ಸಿದ್ದರಾಮಯ್ಯ ಅವರೆಲ್ಲಿ? ಇವರನ್ನು ನಾವು ಹಿಂದುಳಿದವರ ನಾಯಕ ಅನ್ನುವುದು ಇದಕ್ಕಾಗಿ. ಇನ್ನೂ ಹೆಚ್ಚಿನ ಇಂತಹ ಜನಪರ ಯೋಜನೆಗಳನ್ನು ರೂಪಿಸಲಿ, ದೇವರಾಜ ಅರಸು ಅವರ ಸಾಧನೆ ಸುದೀರ್ಘ ಆಡಳಿತವನ್ನು ಮಾತ್ರ ಸರಿಗಟ್ಟದೆ ಅವರು ಹಾಕಿದ ದಾರಿಯನ್ನು ಯಶಸ್ವಿಯಾಗಿಸಿದ್ದಾರೆ. ಇಂದಿಗೂ ಅಸ್ಪೃಶೃತೆ, ಜಾತಿವಾದಿತನ ರಾಜ್ಯದಲ್ಲಿ ಪ್ರಬಲವಾಗಿದ್ದು, ಇದನ್ನು ಸಹ ಶಾಶ್ವತವಾಗಿ ಹೋಗಲಾಡಿಸುವ ಪರಿಹಾರ ಕೊಡಿಸಲಿ. ಮಾನ್ಯ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಂತರದ ರಾಜಕಾರಣದ ದಿಕ್ಕೂ ಬದಲಾಗಬಹುದು. ಮುಂದೆ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನೀರಿಕ್ಷಿಸಲು ಸಾಧ್ಯವೆ ಎನಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗೆ ಸಮಸ್ತ ಬಂಜಾರ ಸಮುದಾಯದ ಪರವಾಗಿನಾನು ಅಭಿನಂದಿಸುತ್ತೇನೆ. - ಡಾ. ಎ.ಆರ್. ಗೋವಿಂದಸ್ವಾಮಿ, ಮಾಜಿ ಅಧ್ಯಕ್ಷ, ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ #Siddaramaiah #made #equality #advocated #Basavanna #Gandhi #Ambedkar #ARGovindaswamy #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಬಸವಣ್ಣ, ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಗಾಂಧಿ ದೊರೆಯುವಂತೆ ಮಾಡಿದ ಸಿದ್ದರಾಮಯ್ಯ ಸುದ್ರಿ & ಈಂಯಲ್ಲ್ EXRRESS Please subscribe to Malgudi Express YouTube and Website ಬಸವಣ್ಣ, ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಗಾಂಧಿ ದೊರೆಯುವಂತೆ ಮಾಡಿದ ಸಿದ್ದರಾಮಯ್ಯ ಸುದ್ರಿ & ಈಂಯಲ್ಲ್ EXRRESS Please subscribe to Malgudi Express YouTube and Website - ShareChat