ShareChat
click to see wallet page
search
ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ನೀಡಿದ ಕೊಡುಗೆ ಕಡಿಮೆಯೇನಲ್ಲ. ಆದರೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ನೆರೆ ದೇಶ... #ICC t20 World Cup 2026
ICC t20 World Cup 2026 - ShareChat
Sports Street- ಕೃತಘ್ನರಿಗೆ ಉಪಕಾರ ಮಾಡಿದ್ದೇ ತಪ್ಪಾಯ್ತು; ಬಾಂಗ್ಲಾ ಕ್ರಿಕೆಟ್ ಗೆ ಭಾರತದ ಕೊಡುಗೆಯೇನು ಕಡಿಮೆಯದ್ದಾ?
Indo Bangla Cricket Relations- ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶ ಹುಟ್ಟಿಕೊಂಡಿದ್ದೇ ಭಾರತದ ನೆರವಿನಿಂದ ಎಂಬುದು ಐತಿಹಾಸಿಕ ಸತ್ಯ ಹೇಗೂ ಇಂದು ಬಾಂಗ್ಲಾದಲ್ಲಿ ಕ್ರಿಕೆಟ್ ಈ ಪರಿ ಬೆಳೆಯಲು ಭಾರತವೇ ಕಾರಣ ಎಂಬುದು ಸಹ ಅಷ್ಟೇ ಸತ್ಯವಾದ ಸಂಗತಿ. ಆದರೆ ಈ ಎರಡರ ನೆನಪೂ ಆ ದೇಶಕ್ಕೆ ಇದ್ದಂತಿಲ್ಲ. ರಾಜಕೀಯದ ಬಳಿಕ ಇದೀಗ ಕ್ರಿಕೆಟ್ ನಲ್ಲೂ ಭಾರತದ ಶತ್ರುರಾಷ್ಟ್ರವಾದ ಪಾಕಿಸ್ತಾನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಆ ದೇಶಕ್ಕೆ ನಾಳೆ ಕುತ್ತು ತರಬಲ್ಲುದು ಎಂಬುದನ್ನು ಇನ್ನೂ ಅರ್ಥೈಸಿಕೊಂಡಿಲ್ಲ. ಅದರ ಪರಿಣಾಮವೇ ಈಗಿನ ಐಸಿಸಿ ಟಿ20 ವಿಶ್ವಕಪ್ ಗೆ ಹಾಕಿರುವ ಬಹಿಷ್ಕಾರ.