ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಮಾರುತಿ ಅಷ್ಟಗಿಯವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಬಹಿರಂಗ ಸವಾಲು ಬನ್ನಿ 2028 ರ ಚುನಾವಣೆಗೆ…! ಎಂದು ಸವಾಲೆಸೆದ ಅರವಿಂದ್ ಕಾರ್ಚಿ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಮಾರುತಿ ಅಷ್ಟಗಿಗೆ ಬಹಿರಂಗ ಸವಾಲು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅನಾವಶ್ಯಕ ಹೇಳಿಕೆಗಳನ್ನು ನೀಡುತ್ತಿರುವ ಮಾರುತಿ ಅಷ್ಟಗಿ ಅವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸ್ಪಷ್ಟ ಮತ್ತು ನೇರ ಸವಾಲು ಒಡ್ಡಿದ್ದಾರೆ. ಮೂರು ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಎದುರು ನಿಂತು ಜನರ ವಿಶ್ವಾಸ ಗಳಿಸಲು ವಿಫಲರಾದ ನೀವು, ಈಗಲೂ ಹಗುರ ಮಾತುಗಳಿಂದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿರುವುದು ಕ್ಷೇತ್ರದ ಜನರಿಗೆ ಚೆನ್ನಾಗಿ ತಿಳಿದಿದೆ. ಮಾತಿನಲ್ಲಿ ಗೆಲ್ಲಬಹುದು ಅನ್ನೋ ಭ್ರಮೆ ಇದ್ದರೆ, ನೆಲಮಟ್ಟದ ಕೆಲಸ, ಜನಸೇವೆಯ ಸಾಧನೆಗಳೇನು ಎಂಬುದನ್ನೂ ಒಮ್ಮೆ ನೆನಪಿಸಿಕೊಳ್ಳಿ ಎಂದು ಅರವಿಂದ್ ಕಾರ್ಚಿ ಅವರು ಮಾರುತಿ ಅಷ್ಟಗಿ ಅವರಿಗೆ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಹೆಸರು, ಹುದ್ದೆ ಅಥವಾ ಪ್ರಚಾರದ ಆರ್ಭಟದಿಂದಲ್ಲ; ಜನರ ಬದುಕಿನ ಜೊತೆ ನಿಂತು, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದಿಂದ ಕ್ಷೇತ್ರದ ಹೃದಯ ಗೆದ್ದ ನಾಯಕ. ಅದಕ್ಕೇ ಪ್ರತಿ ಚುನಾವಣೆಯಲ್ಲೂ ಜನರು ಸ್ಪಷ್ಟ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಹೇಳಿಕೆಗಳಲ್ಲೇ ರಾಜಕೀಯ ಮಾಡುವುದನ್ನು ಬಿಟ್ಟು, ಧೈರ್ಯವಿದ್ದರೆ 2028ರ ಚುನಾವಣೆಗೆ ಬನ್ನಿ. ಜನರ ನ್ಯಾಯಾಲಯದಲ್ಲಿ ಯಾರು ಬೇಕು, ಯಾರು ಬೇಡ ಅನ್ನೋದನ್ನು ಯಮಕನಮರಡಿಯ ಜನ ತೀರ್ಮಾನಿಸುತ್ತಾರೆ. ಮಾತಲ್ಲ, ಮತದಲ್ಲಿ ಉತ್ತರ ಸಿಗುತ್ತದೆ – 2028ಕ್ಕೆ ಕಾಯೋಣ! ಎಂದು ಮಾರ್ಮಿಕವಾಗಿ ಅರವಿಂದ ಕಾರ್ಚಿ ಕರೆನೀಡಿದ್ದಾರೆ. #Open #challenge #MarutiAshtagi #SatishJarkiholi #fans #AravindKarchi #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಮಾರುತಿ ಅಷ್ಟಗಿಯವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಬಹಿರಂಗ ಸವಾಲು ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS ಮಾರುತಿ ಅಷ್ಟಗಿಯವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಬಹಿರಂಗ ಸವಾಲು ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat