ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ತುಮಕೂರು ಜಿಲ್ಲೆಯ ಪದವಿ ಹಂತದ ವಿದ್ಯಾರ್ಥಿಗಳಿಗಾಗಿ ಲೇಖನ ಸ್ಪರ್ಧೆ ತುಮಕೂರು: ಪ್ರೊ. ಬರಗೂರು ರಾಮಚಂದ್ರಪ್ಪ ಅವರ 'ಬಯಲಾಟದ ಭೀಮಣ್ಣ' ಕಥೆ ಅಥವಾ 'ಮನುಷ್ಯರು ಬೇಕಾಗಿದ್ದಾರೆ, ಹುಡುಕೋಣ ಬನ್ನಿ' ಲೇಖನ ಮತ್ತು ಡಾ. ಲಲಿತಾ ಸಿದ್ಧಬಸಯ್ಯ ಅವರ 'ಮೇಡಂ ಅಂಡ್ ಆಡಂ' ಕಥೆ ಅಥವಾ ಆಯ್ದ ಐದು ಕವಿತೆಗಳ ಕುರಿತು ವಿಮರ್ಶಾ ಬರಹಗಳನ್ನು ಕಳುಹಿಸಲು ಆತ್ಮೀಯ ಕರೆ... ಸೂಚನೆಗಳು: ಈ ಮೇಲಿನ ಇಬ್ಬರೂ ಲೇಖಕರ ಎರಡು ಬರಹಗಳಲ್ಲಿ, ತಲಾ ಒಂದೊಂದು ಬರಹವನ್ನು ಕುರಿತು ವಿಮರ್ಶೆ ಬರೆಯಬೇಕು. ಅಂದರೆ ಸ್ಪರ್ಧೆಗೆ ಎರಡು ಲೇಖನಗಳನ್ನು ಕಳುಹಿಸಬೇಕು. ಒಂದೇ ಲೇಖಕರ ಎರಡು ಬರಹಗಳನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ. ಗರಿಷ್ಠ ಮಿತಿ: ಎರಡೂ ಲೇಖನಗಳು ಸೇರಿ ಫುಲ್‌ಸ್ಕೇಪ್ 8-10 ಪುಟ ಅಥವಾ 2000-3000 ಪದಗಳು. ವಿದ್ಯಾರ್ಥಿಯು ಕಾಲೇಜಿನ ಐಡಿ ಕಾರ್ಡ್ ಜೆರಾಕ್ಸ್ ಪ್ರತಿ ಮತ್ತು ವಿದ್ಯಾರ್ಥಿಯ ಸ್ವಂತ ಬರಹವೆಂದು ಪ್ರಮಾಣೀಕರಿಸಲಾದ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರವನ್ನು ಲಗತ್ತಿಸಿರಬೇಕು. ಪ್ರತಿ ಕಾಲೇಜಿನಿಂದ ಗರಿಷ್ಠ ನಾಲ್ಕು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಡೆಯ ದಿನಾಂಕ ಜನವರಿ, 27, 2026 ರ ಒಳಗೆ ಡಾ. ನಾಗಭೂಷಣ ಬಗ್ಗನಡು, ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, 577502 (ಮೊ. 9964852581) ಇವರಿಗೆ ತಲುಪುವಂತೆ ಬರಹಗಳನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು. ಆಯ್ದ ಸಾಹಿತಿಗಳ ಲೇಖನ ಮತ್ತು ಕಥೆಗಳನ್ನು ಈ ಪೋಸ್ಟರ್‌ನೊಂದಿಗೆ ಕಳುಹಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಿಮ್ಮ ಕಾಲೇಜಿನ ಆಯೋಜಕರಿಂದ ಪಡೆದುಕೊಳ್ಳಬಹುದು. ಗಮನಿಸಿ: ಭಾನುವಾರ, ಫೆಬ್ರವರಿ 1, 2026 ರಂದು, ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು. ಪ್ರಥಮ ಬಹುಮಾನ: ರೂ.1500/- ದ್ವಿತೀಯ ಬಹುಮಾನ: ರೂ.1250/- ತೃತೀಯ ಬಹುಮಾನ: ರೂ.1000/- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮಹೇಶ್ ಕುಮಾರ್ ಸಿ. ಎಸ್., ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, 88841 51513 ಸರ್ವೆ ನಂ. 66, ಬುರುಗುಂಟೆ ಹಳ್ಳಿ, ಬಿಕ್ಕನಹಳ್ಳಿ ಮುಖ್ಯರಸ್ತೆ, ಸರ್ಜಾಪುರ, ಬೆಂಗಳೂರು - 562125 | 080 66144900 #Essay #competition #graduate #students #Tumkur #district #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat