ShareChat
click to see wallet page
search
ಕರಾವಳಿ ಕಥೆ ಉಡುಪಿ ಜಿಲ್ಲೆಯ ಕರಾವಳಿ… ಒಂದು ಕಡೆ ಅಲೆಗಳ ಹೊಮ್ಮುವ ಸಮುದ್ರ, ಮತ್ತೊಂದು ಕಡೆ ಮೌನವಾಗಿ ಹರಿಯುವ ನದಿ. ನದಿಮುಖಜ ಈ ಭೂಮಿ ಅನೇಕ ಪೀಳಿಗೆಗಳಿಂದ ಮನುಷ್ಯ ಮತ್ತು ಸಮುದ್ರದ ಆತ್ಮೀಯ ಸಂಗಮವಾಗಿದೆ. ದೋಣಿಗಳ ಮೇಲೆ ಬದುಕು ಕಟ್ಟಿಕೊಂಡ ಮೀನುಗಾರರು, ಅದೆಷ್ಟೋ ಜನ , ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಇಲ್ಲಿ ಗಟ್ಟಿಯಾಗಿ ಅರಳುತ್ತಿದೆ. ಕರಾವಳಿ ಬೀಚ್‌ಗಳು ಟ್ರೆಂಡ್ ಆಗಿ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿವೆ. ‘ಉಡುಪಿಯ ಹೋಟೆಲ್ ’ ಎಂಬ ಹೆಸರೇ ಇಂದಿಗೆ ವಿಶ್ವದ ಹೋಟೆಲ್‌ಗಳಿಗೆ ಖದರು. ಮೀನು ಪ್ರೀತಿಯಿಂದ ಬಡಿಸುವ ಈ ನಾಡು, ಮಂಗಳೂರು ಕಾರವಾರವರೆಗಿನ ಸಮುದ್ರ ಬಂದರು ವಾಣಿಜ್ಯ ಪ್ರವಾಸೋದ್ಯಮದ ಒಗ್ಗೂಡಿದ ನಾಡಾಗಿದೆ. ಅಂತಹ ಕರಾವಳಿಯೇ ಹೂಡೆ ಬೀಚ್. ಸಾಮಾನ್ಯ ದಿನಗಳಲ್ಲಿ ಮೌನವಾಗಿರುವ ಈ ಸಮುದ್ರ, ಕೆಲವೊಮ್ಮೆ ಅಯ್ಯೋ! ಗಾಳಿ ವೇಗವಾಗಿ ಬೀಸಿದರೆ ಅಲೆಗಳೇ ರಾಕ್ಷಸರಂತೆ ಎತ್ತರವರೆಗೆ ಚಿಮ್ಮುತ್ತವೆ. ಅಮಾವಾಸ್ಯೆಯ ಒಂದು ಸಂಜೆ ಸಮುದ್ರ ಅಬ್ಬರಿಸುತ್ತಿತ್ತು. ಆ ದಿನ ಬೀಚ್‌ಗೆ ಬಂದಿದ್ದ ಮೂರು ಸ್ನೇಹಿತರಿಗೆ ಆ ಅಬ್ಬರದ ಅರ್ಥ ತಿಳಿದಿರಲಿಲ್ಲ. ಈ ಮೂವರು ಇತ್ತೀಚೆಗೇ ದ್ವಿತೀಯ ಪಿಯುಸಿ ಉತ್ತಮ ಅಂಕಗಳಿಸಿದ್ದವರು. ಪೋಷಕರು ಸಾಲ–ಸೋಲ ಮಾಡಿ, ಭವಿಷ್ಯ ಕಟ್ಟಿಕೊಡಲಿ ಎಂಬ ಆಶೆಯಿಂದ ಅವರನ್ನು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದರು. ಹೊಸ ಊರು, ಹೊಸ ಸ್ನೇಹಿತರು, ಹೊಸ ಕನಸುಗಳು… ಕಾಲೇಜಿನ ಮೊದಲ ದಿನಗಳ ಉತ್ಸಾಹ ಹೂಡೆ ಬೀಚ್‌ವರೆಗೂ ಅವರನ್ನು ಕರೆತಂದಿತ್ತು ಸಮುದ್ರದ ಬಳಿಯಲ್ಲಿ ನಿಂತಾಗ “ಇಷ್ಟು ಸೈಲೆಂಟ್ ಸಮುದ್ರಕ್ಕೆ ಏನೂ ಆಗೋದಿಲ್ಲ” ಎಂದು ಭಾವಿಸಿದ್ದರು. ಮತ್ತೆ ಅದಕ್ಕೂ ಮೊದಲು ಹೋದ ಮೀನಿನ ಹೊಟೆಲಿನಲ್ಲಿ ಹಾಟ್ ಫಿಶ್ ಫ್ರೈ ತಿಂದ ಸಂತೋಷ ಇನ್ನೂ ಬಾಯಲ್ಲಿ ರುಚಿಸುತ್ತಿತ್ತು. ಆದರೆ ಅಮಾವಾಸ್ಯೆಯ ಅಲೆಗಳು ಅಬ್ಬರಿಸಿ ಬೊಬ್ಬಿರಿಸುತ್ತವೆ. ಸ್ನಾನಕ್ಕೆ ಇಳಿದ ತಕ್ಷಣ ಒಬ್ಬ ಸ್ನೇಹಿತ ತೀವ್ರ ಅಲೆಯ ಹೊಡೆತಕ್ಕೆ ಒಳಗಾದ. ಅವನು ಕೈ ಬೀಸಿ ಕೂಗುತ್ತಿದ್ದಾನೆಂಬುದನ್ನು ಬೇರಿಬ್ಬರೂ ಗಾಬರಿಯಿಂದ ಗಮನಿಸಿದರು. ಒಬ್ಬನು ತಕ್ಷಣ ಅವನ ಕಡೆಗೆ ಓಡಿದ – “ನನ್ನ ಗೆಳೆಯನನ್ನು ಉಳಿಸಬೇಕು!” ಆದರೆ ಅಲೆಗಳು ಮನುಷ್ಯನಿಗೆ ದಯೆ ತೋರಲಿಲ್ಲ. ಇವರಿಬ್ಬರು ಕೆಳಕ್ಕೆ ಇಳಿದರು.ಇಬ್ಬರು ಕೂಡ ಸಮುದ್ರದ ಅಲೆಯಲ್ಲಿ ಸೆಳೆತಕ್ಕೆ ಒಳಗಾದರು ಮೂರನೆಯವನ ಹೃದಯ ನಡುಗಿತು. "ಏನಾದರೂ ಆಗಲಿ, ಇಬ್ಬರನ್ನಾದರೂ ಹೊರತೆಗೆದು ತರಲೇಬೇಕು ಎಂದು ದೌಡಾಯಿಸಿದ. ಆದರೆ ಅವನ ಕೈಗೂ ಬಂದದ್ದು ಸಮುದ್ರದ ಕರುಣೆಯಿಲ್ಲದೆ ಹೋಯಿತು.. ಹೀಗೆ… ಮೂರು ಜೀವಗಳು, ಮೂರು ಕನಸುಗಳು, ಮೂರು ಮನೆಗಳ ಆಸೆಗಳು ಅಮಾವಾಸ್ಯೆಯ ಒಂದೇ ಅಲೆಗೆ ಮಿಂಚಿನಂತೆ ಮಣ್ಣುಮಾಡಿಕೊಂಡವು. ಮೀನುಗಾರರಿಗೆ ಸಮುದ್ರ ಅನ್ನದ ಬಟ್ಟಲು. ಅದೇ ಸಮುದ್ರ ಕೆಲವರಿಗೆ ಸ್ಮಶಾನ. ಅದರ ರೌದ್ರಕ್ಕೆ ಯಾರೂ ದೊಡ್ಡವರಲ್ಲ. ಮನುಷ್ಯ ಎನ್ನೋದು ಅದರ ಮುಂದೆ ಒಂದು ಸಣ್ಣ ಕಣದಷ್ಟೇ. ಪೋಷಕರ ಆಕ್ರಂದನ ಅಂದು ಆಕಾಶ ಮುಟ್ಟಿತ್ತು. ಸಾಲ ಮಾಡಿ ಓದಿಸಲು ಕಳುಹಿಸಿದ ಮಕ್ಕಳನ್ನು ಮರಣದ ಮೌನದಲ್ಲಿ ನೋಡಿದಾಗ ಮಾತಿಗೆ ಕಣ್ಣೀರಿಗೇ ದಾರಿ. ಅದು ದುರಂತ. ರಾಂ ಅಜೆಕಾರು ಕಾರ್ಕಳ #ದಿನಕ್ಕೊಂದು ಕಥೆ #ರಾಂಅಜೆಕಾರು #ಉಡುಪಿ #ಮಲ್ಪೆ #ಉಡುಪಿಪ್ರವಾಸ #ಬೀಚ್ #ಉಡುಪಿಬೀಚ್ಪ್ರವಾಸ #karkalaudupi #udupimanipal #udupibeach #udupimalpe #ಗುರುವಾರ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ #🙏🏻🌺☘️5 ನೇ ದಿನ ದೇವಿ ಸ್ಕಂದ ಮಾತಾ 🌅 ಶುಭೋದಯ ಶುಭ ಗುರುವಾರ
ಗುರುವಾರ - ameरय ameरय - ShareChat