ಅಂಕುಡೊಂಕು ದಾರಿಯಲ್ಲಿ ಸಾಗಿದ ಮನಸ್ಸು.....
ಅದೊಂದು ದಾರಿ… ಹೋದಷ್ಟು ತಿರುವು ಮುರುವು ಪಡೆದುಕೊಳ್ಳುತ್ತಾ, ಮೌನವಾಗಿ ಸಾಗುತ್ತಿತ್ತು . ಟಾರ್ ರಸ್ತೆ ಬಿಟ್ಟು ಕಾಂಕ್ರೀಟ್ ಹಾಕಿದ್ದ ಆ ದಾರಿಯ ಮೇಲೆ ಮನುಜ ಮಾತ್ರ ನಡೆದು ಹೋಗುತ್ತಿದ್ದ. ರಸ್ತೆ ಹಾಳಾಗಬಾರದೆಂದು ಹಾಕಿದ ಕಾಂಕ್ರೀಟ್, ..
ದಾರಿಯ ಅಂಚಿನಲ್ಲಿ ನಿಂತಿದ್ದ ದೊಡ್ಡ ಮರವೊಂದು, ಅದೆಷ್ಟೋ ಹುಳುಹುಪ್ಪಟೆಗಳಿಗೆ ಆಶ್ರಯವಾಗಿತ್ತು. ಹಕ್ಕಿಗಳು ಅದರ ಕೊಂಬೆಗಳ ಮಧ್ಯೆ ಗೂಡು ಕಟ್ಟಿಕೊಂಡಿದ್ದವು.ಚಿಲಿಪಿಲಿ ಗುಟ್ಟುತ್ತ ಅತ್ತಿಂದತ್ತ ಹಾರಾಡುತ್ತ ಕುಪ್ಪಳಿಸುತಿದ್ದವು. ಬಿಸಿಲಲ್ಲಿ ದಣಿದ ಹಸುಎಮ್ಮೆಗಳು ಅದರ ನೆರಳಲ್ಲಿ ನಿಂತು ತುಸು ವಿಶ್ರಾಂತಿ ಪಡೆಯುತ್ತಿದ್ದವು. ಆ ಮರ ಯಾರನ್ನೂ ಪ್ರಶ್ನಿಸಲಿಲ್ಲ;
ಯಾರ ಬದುಕೂ ಅದು ತೀರ್ಮಾನಿಸಲಿಲ್ಲ. ತನ್ನ ನೆರಳನ್ನು ಎಲ್ಲರಿಗೂ ಸಮವಾಗಿ ಹಂಚುತ್ತಿತ್ತು. ಎಲ್ಲಿಯು ವಂಚನೆ ಮಾಡಿಲ್ಲ.
ಆ ದಾರಿಯಲ್ಲಿ ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದರು. ಒಬ್ಬಳು ಯುವತಿ, ಇನ್ನೊಬ್ಬಳು ಮದುವೆಯಾದ ಮಹಿಳೆ. ಅವರ ಹೆಜ್ಜೆಗಳು ಒಂದೇ ದಾರಿಯಲ್ಲಿ ಇದ್ದರೂ, ಅವರ ಮನಸ್ಸುಗಳು ಎರಡು ವಿಭಿನ್ನ ಲೋಕಗಳಲ್ಲಿ ತೇಲುತ್ತಿದ್ದವು. ಕಾಲ್ಪನಿಕ ವಾಗಿಯು ಕಾಡಿತು .
ಮದುವೆಯಾದ ಮಹಿಳೆಯ ಮುಖದಲ್ಲಿ ದಣಿವಿತ್ತು. ಕಣ್ಣಲ್ಲಿ ನಿದ್ರೆಯ ಕೊರತೆ, ಮನಸ್ಸಿನಲ್ಲಿ ನೊಂದ ನೋವು. ಆಕೆಯ ಮಾತುಗಳು ಯುವತಿಗೆ ತಲುಪುತ್ತಿದ್ದವು “ಈ ಜೀವನವೇ ಬೇಡ ಅಂತೆನಿಸುತ್ತೆ. ಸದಾ ಖುಷಿಯೇ ಇಲ್ಲ. ಮದುವೆ ಜೀವನ ಅಂದ್ರೆ ಮರದ ಕೊರಡಿನ ಮೇಲೆ ನಡೆಯುವಂತಿದೆ. ಸ್ವಾತಂತ್ರ್ಯವಿಲ್ಲ, ಉಸಿರಾಡೋಕೆ ಜಾಗವಿಲ್ಲ. ಹೆಂಡತಿಯಾದ್ಮೇಲೆ ನಾನು ನಾನು ಆಗಿರೋಕೆ ಅವಕಾಶವೇ ಇಲ್ಲ.”
ಅವಳ ಮಾತುಗಳಲ್ಲಿ ಗಂಡನ ಮೇಲೆ ಕೋಪಕ್ಕಿಂತಲೂ, ಬದುಕಿನ ಮೇಲೆ ಹತಾಶೆಯೇ ಹೆಚ್ಚು ಕಾಣಿಸುತ್ತಿತ್ತು. ಆಕೆ ನೆನಪಿಸಿಕೊಳ್ಳುತ್ತಿದ್ದಳು ತಾನೂ ಒಮ್ಮೆ ಕನಸುಗಳಿದ್ದ ಹುಡುಗಿಯಾಗಿದ್ದೆ, ನಗುತ್ತಿದ್ದೆ, ಇಷ್ಟದಂತೆ ಮಾತನಾಡುತ್ತಿದ್ದೆ. ಆದರೆ ಈಗ ಎಲ್ಲವೂ ಹೊಣೆಗಾರಿಕೆ, ಹೊಂದಾಣಿಕೆ, ಮೌನದ ಒತ್ತಡ.ಕಂಡಂತಿತ್ತು.
ಅದಕ್ಕೆ ವಿರುದ್ಧವಾಗಿ ಯುವತಿ ಅವಳ ಮನಸ್ಸು ಹೊಸ ಹೂವಿನಂತೆ ಅರಳಿತ್ತು. ಮೊನ್ನೆಯಷ್ಟೇ ಪ್ರೀತಿಯಾದ ಹುಡುಗನ ನೆನಪು ಅವಳ ಹೃದಯ ತುಂಬಿಕೊಂಡಿತ್ತು. ಅವನ ಮಾತು, ಅವನ ನಗು, ಅವನ ಉಸಿರಿನ ಸುಖ ಸ್ಪರ್ಶ ಎಲ್ಲವೂ ಅವಳನ್ನು ತಡಕಾಡಿಸುತ್ತಿತ್ತು. ಅವಳಿಗೆ ಬದುಕು ಎಂದರೆ ನೂರಾರು ಬಯಕೆಗಳಂತೆ. ಒಟ್ಟಿಗೆ ಸುತ್ತಾಟ, ಕೈ ಹಿಡಿದು ನಡೆಯುವ ಕನಸು, ಪ್ರೀತಿಯಲ್ಲಿ ಕರಗುವ ಕ್ಷಣಗಳು. ಅವಳಿಗೆ ಮದುವೆ ಭಯವಾಗಿರಲಿಲ್ಲ; ಅದು ಪ್ರೀತಿಯ ಮುಂದುವರಿಕೆಯಂತೆ ಕಾಣಿಸುತ್ತಿತ್ತು .
ಯುವತಿ ಮದುವೆಯಾದ ಮಹಿಳೆಯ ಮಾತುಗಳನ್ನು ಕೇಳುತ್ತಾ ಮೌನವಾಗಿದ್ದಳು.
ಹಕ್ಕಿಗಳು ಹಸುಗಳು ಸೂರು, ಆಹಾರ, ಸಂತಾನ. ನಾಳೆಯ ಚಿಂತೆಯಿಲ್ಲ. . ಅವುಗಳಿಗೆ ಹಣ, ಆಸೆ, ಅಕಾಂಕ್ಷೆಗಳಿಲ್ಲ. ಬದುಕು ಸರಳ.
ಮನುಜ ಮಾತ್ರ ವಿಭಿನ್ನ. ಅವನ ಜೊತೆ ಸದಾ ಚಿಂತೆ. ಹಣ, ಸ್ಥಾನ, ಗೌರವ, ಸಂಬಂಧ, ಸ್ವಾತಂತ್ರ್ಯ ಎಲ್ಲವೂ ಅವನನ್ನು ಕಟ್ಟಿಹಾಕುವ ದಾರಗಳು. ಬದುಕಿನುದ್ದಕ್ಕೂ ಅವು ಅವನ ಸಂಗಡವೇ ಸಾಗುತ್ತವೆ. ತಿರುವು ಮುರುವುಗಳ ದಾರಿಯಂತೆ, ಮನುಜರ ಜೀವನವೂ ನೇರವಾಗಿರದು.
. ಒಬ್ಬಳಿಗೆ ಹಿನ್ನೋಟದ ನೋವು, ಇನ್ನೊಬ್ಬಳಿಗೆ ಮುಂದಿನ ಕನಸು.... ಭಾವಗಳು ಮಾತ್ರ ಬದಲಾಗುತಿತ್ತು.ಮರ ಮಾತ್ರ ಬಿಸಿಲಿಗೆ ಮೈ ಒಡ್ಡಿ ತನ್ನವರಿಗಾಗಿ ತಂಪು ನೆರಳನ್ನು ನೀಡಿತ್ತು.
ರಾಂ ಅಜೆಕಾರು ಕಾರ್ಕಳ
#dailyquots #dailystories #udupikarkala #coorg #udupimanipal #karkalaudupi #trendingstories #🙏🏻🌺☘️5 ನೇ ದಿನ ದೇವಿ ಸ್ಕಂದ ಮಾತಾ 🌅 ಶುಭೋದಯ ಶುಭ ಗುರುವಾರ #🎊 2️⃣0️⃣2️⃣6️⃣ ಹೊಸ ವರ್ಷಕ್ಕೆ 2 ದಿನ ಬಾಕಿ🤩 #👋 ಬೈ ಬೈ 2025😊 #🎥 2025ರ ಸವಿ ನೆನಪುಗಳು⏪
ಕರಾವಳಿ ಕಥೆ
ಉಡುಪಿ ಜಿಲ್ಲೆಯ ಕರಾವಳಿ… ಒಂದು ಕಡೆ ಅಲೆಗಳ ಹೊಮ್ಮುವ ಸಮುದ್ರ, ಮತ್ತೊಂದು ಕಡೆ ಮೌನವಾಗಿ ಹರಿಯುವ ನದಿ. ನದಿಮುಖಜ ಈ ಭೂಮಿ ಅನೇಕ ಪೀಳಿಗೆಗಳಿಂದ ಮನುಷ್ಯ ಮತ್ತು ಸಮುದ್ರದ ಆತ್ಮೀಯ ಸಂಗಮವಾಗಿದೆ. ದೋಣಿಗಳ ಮೇಲೆ ಬದುಕು ಕಟ್ಟಿಕೊಂಡ ಮೀನುಗಾರರು, ಅದೆಷ್ಟೋ ಜನ ,
ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಇಲ್ಲಿ ಗಟ್ಟಿಯಾಗಿ ಅರಳುತ್ತಿದೆ. ಕರಾವಳಿ ಬೀಚ್‌ಗಳು ಟ್ರೆಂಡ್ ಆಗಿ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿವೆ. ‘ಉಡುಪಿಯ ಹೋಟೆಲ್ ’ ಎಂಬ ಹೆಸರೇ ಇಂದಿಗೆ ವಿಶ್ವದ ಹೋಟೆಲ್‌ಗಳಿಗೆ ಖದರು. ಮೀನು ಪ್ರೀತಿಯಿಂದ ಬಡಿಸುವ ಈ ನಾಡು, ಮಂಗಳೂರು ಕಾರವಾರವರೆಗಿನ ಸಮುದ್ರ ಬಂದರು ವಾಣಿಜ್ಯ ಪ್ರವಾಸೋದ್ಯಮದ ಒಗ್ಗೂಡಿದ ನಾಡಾಗಿದೆ.
ಅಂತಹ ಕರಾವಳಿಯೇ ಹೂಡೆ ಬೀಚ್. ಸಾಮಾನ್ಯ ದಿನಗಳಲ್ಲಿ ಮೌನವಾಗಿರುವ ಈ ಸಮುದ್ರ, ಕೆಲವೊಮ್ಮೆ ಅಯ್ಯೋ! ಗಾಳಿ ವೇಗವಾಗಿ ಬೀಸಿದರೆ ಅಲೆಗಳೇ ರಾಕ್ಷಸರಂತೆ ಎತ್ತರವರೆಗೆ ಚಿಮ್ಮುತ್ತವೆ.
ಅಮಾವಾಸ್ಯೆಯ ಒಂದು ಸಂಜೆ ಸಮುದ್ರ ಅಬ್ಬರಿಸುತ್ತಿತ್ತು. ಆ ದಿನ ಬೀಚ್‌ಗೆ ಬಂದಿದ್ದ ಮೂರು ಸ್ನೇಹಿತರಿಗೆ ಆ ಅಬ್ಬರದ ಅರ್ಥ ತಿಳಿದಿರಲಿಲ್ಲ.
ಈ ಮೂವರು ಇತ್ತೀಚೆಗೇ ದ್ವಿತೀಯ ಪಿಯುಸಿ ಉತ್ತಮ ಅಂಕಗಳಿಸಿದ್ದವರು. ಪೋಷಕರು ಸಾಲ–ಸೋಲ ಮಾಡಿ, ಭವಿಷ್ಯ ಕಟ್ಟಿಕೊಡಲಿ ಎಂಬ ಆಶೆಯಿಂದ ಅವರನ್ನು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದರು. ಹೊಸ ಊರು, ಹೊಸ ಸ್ನೇಹಿತರು, ಹೊಸ ಕನಸುಗಳು… ಕಾಲೇಜಿನ ಮೊದಲ ದಿನಗಳ ಉತ್ಸಾಹ ಹೂಡೆ ಬೀಚ್‌ವರೆಗೂ ಅವರನ್ನು ಕರೆತಂದಿತ್ತು
ಸಮುದ್ರದ ಬಳಿಯಲ್ಲಿ ನಿಂತಾಗ “ಇಷ್ಟು ಸೈಲೆಂಟ್ ಸಮುದ್ರಕ್ಕೆ ಏನೂ ಆಗೋದಿಲ್ಲ” ಎಂದು ಭಾವಿಸಿದ್ದರು. ಮತ್ತೆ ಅದಕ್ಕೂ ಮೊದಲು ಹೋದ ಮೀನಿನ ಹೊಟೆಲಿನಲ್ಲಿ ಹಾಟ್ ಫಿಶ್ ಫ್ರೈ ತಿಂದ ಸಂತೋಷ ಇನ್ನೂ ಬಾಯಲ್ಲಿ ರುಚಿಸುತ್ತಿತ್ತು.
ಆದರೆ ಅಮಾವಾಸ್ಯೆಯ ಅಲೆಗಳು ಅಬ್ಬರಿಸಿ ಬೊಬ್ಬಿರಿಸುತ್ತವೆ.
ಸ್ನಾನಕ್ಕೆ ಇಳಿದ ತಕ್ಷಣ ಒಬ್ಬ ಸ್ನೇಹಿತ ತೀವ್ರ ಅಲೆಯ ಹೊಡೆತಕ್ಕೆ ಒಳಗಾದ. ಅವನು ಕೈ ಬೀಸಿ ಕೂಗುತ್ತಿದ್ದಾನೆಂಬುದನ್ನು ಬೇರಿಬ್ಬರೂ ಗಾಬರಿಯಿಂದ ಗಮನಿಸಿದರು.
ಒಬ್ಬನು ತಕ್ಷಣ ಅವನ ಕಡೆಗೆ ಓಡಿದ – “ನನ್ನ ಗೆಳೆಯನನ್ನು ಉಳಿಸಬೇಕು!” ಆದರೆ ಅಲೆಗಳು ಮನುಷ್ಯನಿಗೆ ದಯೆ ತೋರಲಿಲ್ಲ.
ಇವರಿಬ್ಬರು ಕೆಳಕ್ಕೆ ಇಳಿದರು.ಇಬ್ಬರು ಕೂಡ ಸಮುದ್ರದ ಅಲೆಯಲ್ಲಿ ಸೆಳೆತಕ್ಕೆ ಒಳಗಾದರು
ಮೂರನೆಯವನ ಹೃದಯ ನಡುಗಿತು. "ಏನಾದರೂ ಆಗಲಿ, ಇಬ್ಬರನ್ನಾದರೂ ಹೊರತೆಗೆದು ತರಲೇಬೇಕು ಎಂದು ದೌಡಾಯಿಸಿದ. ಆದರೆ ಅವನ ಕೈಗೂ ಬಂದದ್ದು ಸಮುದ್ರದ ಕರುಣೆಯಿಲ್ಲದೆ ಹೋಯಿತು..
ಹೀಗೆ… ಮೂರು ಜೀವಗಳು, ಮೂರು ಕನಸುಗಳು, ಮೂರು ಮನೆಗಳ ಆಸೆಗಳು ಅಮಾವಾಸ್ಯೆಯ ಒಂದೇ ಅಲೆಗೆ ಮಿಂಚಿನಂತೆ ಮಣ್ಣುಮಾಡಿಕೊಂಡವು.
ಮೀನುಗಾರರಿಗೆ ಸಮುದ್ರ ಅನ್ನದ ಬಟ್ಟಲು. ಅದೇ ಸಮುದ್ರ ಕೆಲವರಿಗೆ ಸ್ಮಶಾನ. ಅದರ ರೌದ್ರಕ್ಕೆ ಯಾರೂ ದೊಡ್ಡವರಲ್ಲ. ಮನುಷ್ಯ ಎನ್ನೋದು ಅದರ ಮುಂದೆ ಒಂದು ಸಣ್ಣ ಕಣದಷ್ಟೇ.
ಪೋಷಕರ ಆಕ್ರಂದನ ಅಂದು ಆಕಾಶ ಮುಟ್ಟಿತ್ತು. ಸಾಲ ಮಾಡಿ ಓದಿಸಲು ಕಳುಹಿಸಿದ ಮಕ್ಕಳನ್ನು ಮರಣದ ಮೌನದಲ್ಲಿ ನೋಡಿದಾಗ ಮಾತಿಗೆ ಕಣ್ಣೀರಿಗೇ ದಾರಿ.
ಅದು ದುರಂತ.
ರಾಂ ಅಜೆಕಾರು ಕಾರ್ಕಳ
#ದಿನಕ್ಕೊಂದು ಕಥೆ #ರಾಂಅಜೆಕಾರು #ಉಡುಪಿ #ಮಲ್ಪೆ #ಉಡುಪಿಪ್ರವಾಸ #ಬೀಚ್ #ಉಡುಪಿಬೀಚ್ಪ್ರವಾಸ #karkalaudupi #udupimanipal #udupibeach #udupimalpe #ಗುರುವಾರ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ #🙏🏻🌺☘️5 ನೇ ದಿನ ದೇವಿ ಸ್ಕಂದ ಮಾತಾ 🌅 ಶುಭೋದಯ ಶುಭ ಗುರುವಾರ
ಕಾರ್ಕಳ: ತುಳುನಾಡಿನ ವೈವಿಧ್ಯಮಯ ಜನಪದ ಪರಂಪರೆಯ ಮುಖ್ಯ ಅಂಗವಾಗಿದ್ದ ಕೋಲಾಟ ಇಂದು ಸಂಸ್ಕೃತಿಯ ಅಂಚಿನಲ್ಲೇ ನಿಂತಿದೆ. ಒಂದು ಕಾಲದಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಗ್ರಾಮಗಳಲ್ಲಿ ಮನೆಮನೆಗೆ ಪ್ರತಿಧ್ವನಿಯಾಗಿದ್ದ ಕೋಲಾಟದ ಹಾಡುಗಳು, ಪದ್ಯಗಳು, ಲಯಬದ್ಧ ಸಾಲುಗಳು ಇಂದು ಬಹುತೇಕ ನಾಪತ್ತೆಯಾಗುವ ಹಂತಕ್ಕೇರಿವೆ. ಕಾಲ ಬದಲಾವಣೆ, ಯುವ ತಲೆಮಾರಿನ ಗಮನ ಬೇರೆಡೆ ತಿರುಗಿರುವುದು, ಗ್ರಾಮೀಣ ಜೀವನದ ಬದಲಾವಣೆ ಇವನ್ನೆಲ್ಲ ದಾಟಿ ಈಗ ಸಂಪ್ರದಾಯ ಉಳಿದಿರುವುದು ಕೇವಲ ಮೂರು ಕುಟುಂಬಗಳು ಜೀವಂತವಾಗಿಟ್ಟುಕೊಂಡಿರುವ ಶ್ರಮದಿಂದ ಮಾತ್ರ. ಈ ಕೋಲಾಟ ಕಾಣಸಿಗುವುದು ಹೆಬ್ರಿ ತಾಲೂಕಿನ ಪಡುಕುಡೂರು ಸಾಂಪ್ರದಾಯಿಕಕಂಬಳದಲ್ಲಿ
ಕಂಬಳದಂತೆ ಶತಮಾನಗಳಿಂದ ಆಚರಿಸಲಾಗುತ್ತಿರುವ ಪ್ರಮುಖ ಸಂಪ್ರದಾಯಗಳಿಗೆ ಕೋಲಾಟ ಊರಿನ ಸೌಹಾರ್ದ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಸೇತುವೆಯಾಗಿತ್ತು. ವಿಶೇಷವಾಗಿ ಕೊಡಮಣಿತ್ತಾಯ ಕಂಬಳದ ಸಮಯದಲ್ಲಿ ಕೋಲಾಟದ ನಿರಂತರ ಹಾಡು, ಅದರ ಲಯಬದ್ಧ ಹೆಜ್ಜೆ ಮತ್ತು ಪರಂಪರಾತ್ಮಕ ರೂಪವು ಪಡುಕುಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಒಂದು ಜೀವಂತ ಉತ್ಸವದಂತೆ ಕಾಣಿಸುತ್ತಿತ್ತು.
200 ವರ್ಷಗಳ ಇತಿಹಾಸ
ಪಡುಕುಡೂರಿನ ಹಿರಿಜೀವ ಕಾಳಿ ಅವರ ಕುಟುಂಬವು ಸುಮಾರು ಎರಡು ಶತಮಾನಗಳಿಂದ ಕೋಲಾಟದ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದೆ. ಕಾಲದ ವೇಗಕ್ಕೆ ತಲೆಬಾಗದೆ, ತಲೆಮಾರಿನಿಂದ ತಲೆಮಾರಿಗೆ ಈ ಕಲೆಯನ್ನು ಹಸ್ತಾಂತರಿಸುವ ಕೆಲಸವು ಇವರ ಮೂಲಕ ಇಂದು ಕೂಡ ಮುಂದುವರಿದಿದೆ. ಕಾಳಿ ಅವರೊಂದಿಗೆ ಕುಟುಂಬದ ಮಹಿಳೆಯರಾದ ಶೋಭಕ್ಕ, ಸುಗಂಧಿ, ಗುಲಾಬಿ, ಬೊಮ್ಮಿ, ಬೇಬಿ ಎಲ್ಲರೂ ಸೇರಿ ಕೋಲಾಟದ ಹಾಡುಗಳನ್ನು ಜೀವಂತಗೊಳಿಸುತ್ತಿದ್ದಾರೆ. ಇವರ ತಂಡವು ಹಾಡಿನೊಂದಿಗೆ ಆಟವಾಡಿ, ಕೋಲಾಟದ ನೈಜ ಪರಂಪರಾ ರೂಪವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ.
ಕಂಬಳದ ವಾರದಲ್ಲಿ ಊರುತಿರುಗಾಟ
ಕೊಡಮಣಿತ್ತಾಯ ಕಂಬಳದ ವಾರ ಬಂದರೂ ಸಾಕು ಕೋಲಾಟದ ತಂಡವು ಪಡುಕುಡೂರಿನಿಂದ ತಮ್ಮ ಸಂಪ್ರದಾಯದ ಮೆರವಣಿಗೆಯನ್ನು ಆರಂಭಿಸುತ್ತದೆ. ಮುನಿಯಾಲು, ಎಳಗೋಳಿ ಸೂರಿ ಮಣ್ಣು, ಪಡುಕುಡೂರು ದೊಡ್ಡ ಮನೆ, ಪಟ್ಲೆರ್ ಮನೆ, ಪೊಸಟ ಸೇರಿದಂತೆ ಅನೇಕ ಮನೆ ಹಾಗೂ ಗುತ್ತುಮನೆಗಳನ್ನು ಕಾಲ್ನಡಿಗೆಯಲ್ಲೇ ಸಂದರ್ಶಿಸುತ್ತಾರೆ. ಪ್ರತಿ ಮನೆಗೆ ಬಂದಾಗ ಹಾಡಿನ ಸದ್ದು, ಕೋಲಾಟದ ಲಯ, ಗಜ್ಜೆಗಳ ಧ್ವನಿ ಊರನೂರು ಮನೆಯಲ್ಲಿ ಮರುಉತ್ಸಾಹ ಉಂಟುಮಾಡುತ್ತದೆ. “ಕೋಲಾಟದ ಹಾಡಿನ ಪ್ರತಿಧ್ವನಿಯಿಂದ ಊರು ಜೀವಂತವಾಗುತ್ತದೆ” ಎನ್ನುವುದು ಸ್ಥಳೀಯರ ಮಾತು.
ಕೋಲಾಟದ ಬಳಿಕ ಮನೆ ಮಾಲೀಕರು ಸಂಪ್ರದಾಯದಂತೆ ಅಕ್ಕಿ ಬತ್ತ,ತೆಂಗು, ಅಡಿಕೆ, ಹಣ, ವೀಲ್ಯದೆಲೆ ನೀಡುವುದು ಇಂದಿಗೂ ಉಳಿದಿರುವ ರೂಢಿ. ಈ ಸಂಪ್ರದಾಯದ ಮೂಲಕ ಊರಿನ ಬಾಂಧವ್ಯ, ಸಹಕಾರ, ಸಮೂಹ ಬದುಕಿನ ಅನುಬಂಧಗಳು ಶಕ್ತಿಯಾಗುತ್ತವೆ.
ಕಟ್ಟುನಿಟ್ಟಿನ ನಿಯಮಗಳ ಪಾಠ
ಕಾಳಿ ಕುಟುಂಬವು ಸಂಪ್ರದಾಯವು ಕೇವಲ ಹಾಡು ಆಟವಲ್ಲ, ಅದು ಶ್ರದ್ಧೆಯ ವಿಷಯ ಕೂಡ ಎಂಬುದನ್ನು ಅಚ್ಚುಕಟ್ಟಾಗಿ ಮೆರೆಯುತ್ತದೆ. ಇದಲ್ಲದೇ ಅವರು ಪಾಲಿಸುತ್ತಿರುವ ಕೆಲವು ಶತಮಾನಗಳಿಂದ ಬಂದ ನಿಯಮಗಳು ಇಂದಿಗೂ ಅಚರಿಸುತ್ತಾರೆ.
ಅಕ್ಕಿಬತ್ತವನ್ನು ಕೈಯಲ್ಲಿ ಹಿಡಿಯಬಾರದು
ಯಾವುದೇ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ, ಗಾಡಿ ಅಥವಾ ಎರಡು ಚಕ್ರ ವಾಹನ ಬಳಸದೇ, ಸಂಪೂರ್ಣ ಕಾಲ್ನಡಿಗೆಯಲ್ಲೇ ಸಂಚಾರ
ಅಮೆ ಸುತಕ ಇರುವ ಮನೆಗಳ ಸಮೀಪ ಮಾತನಾಡದೇ ಗೌರವ ತೋರಿಸುವುದು, ಪ್ರತಿನಿತ್ಯ ಸರಾಸರಿ 10 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಂಚಾರ
ಕೋಲಾಟದ ಕೋಲುಗಳನ್ನು ತುಳಸಿ ಕಟ್ಟೆಯ ಬಳಿಯಲ್ಲಿ ದೀಪವಿಟ್ಟು, ಸುಣ್ಣಬೊಟ್ಟು ಹಾಕಿ, ತೆಂಗಿನೆಣ್ಣೆ ಹಚ್ಚಿ ಪೂಜಿಸುವುದು ಸಂಪ್ರದಾಯ. ಕಂಬಳದ ದಿನ ಪೂಜಿಸಿದ ಕೋಲುಗಳನ್ನು ಮನೆಯ ಪುಣ್ಯದ ಸ್ಥಳದಲ್ಲಿ ವರ್ಷಪೂರ್ತಿ ಇರಿಸಲಾಗುತ್ತದೆ. ಮುಂದಿನ ಕಂಬಳದ ಸಂದರ್ಭದಲ್ಲಿ ಮರುಪೂಜೆ ಮೂಲಕ ಅವುಗಳನ್ನು ಪುನಃ ಬಳಕೆಗೊಳಿಸಲಾಗುತ್ತದೆ.
ತುಳುನಾಡಿನ ಜನಪದ ಸಾಹಿತ್ಯದಲ್ಲಿ ಪ್ರತಿ ಸಮುದಾಯಕ್ಕೂ ತಮಗನುಗುಣವಾದ ಕೋಲಾಟದ ಹಾಡುಗಳಿವೆ. ನಾಗ, ಕಾಡ್ಯ, ದೇವಿ, ದೈವ, ಗುತ್ತಿನ ಮನೆ—ಪ್ರತಿ ಸಮೂಹಕ್ಕೆ ಅವರದೇ ವಿಶೇಷ ಪದ್ಯಗಳು. ಗುತ್ತಿನ ಮನೆಗಳಲ್ಲಿ ದೇವತೆಗಳಿಗೆ ನಡೆಯುವ ಪೂಜಾ ವಿಧಿವಿಧಾನದ ಸಂದರ್ಭದಲ್ಲಿ, ಅವರ ಪರಂಪರೆಯ ಹಾಡುಗಳನ್ನು ಹಾಡುವುದು ಇಲ್ಲಿ ವಿಶೇಷ.
ಕುಟುಂಬಗಳೆ ಆಧಾರ:
ಒಂದು ಕಾಲದಲ್ಲಿ ಊರುತಿಂಗಳು, ಹಬ್ಬಗಳು, ಮೆರವಣಿಗೆಗಳು ಎಲ್ಲೆಡೆ ಕೇಳಿಸುತಿದ್ದ ಕೋಲಾಟದ ಹಾಡುಗಳು ಇಂದು ಮೂರು ಮನೆಗಳಲ್ಲಿ ಮಾತ್ರ ಶಕ್ತಿ ಉಳಿಸಿಕೊಂಡಿವೆ. ತರಬೇತಿ, ಆಸಕ್ತಿ ಮತ್ತು ಕಾಲದ ಕೊರತೆ ಇವೆಲ್ಲವು ಸೇರಿ ಸಂಪ್ರದಾಯ ನಿಧಾನವಾಗಿ ನಶಿಸುತ್ತಿರುವುದು ಚಿಂತಾಜನಕ.
ಇವರ ಶ್ರಮವೇ ಇಂದಿಗೂ ಕೋಲಾಟದ ಉಸಿರು. ಸಂಸ್ಕೃತಿ ಉಳಿಯಬೇಕಾದರೆ ಇಂತಹ ಪರಂಪರೆಯ ಕಲೆಗೆ ಉತ್ತೇಜನ, ಗುರುತಿನ, ಮತ್ತು ಯುವ ತಲೆಮಾರಿನ ಭಾಗವಹಿಸುವಿಕೆಯ ಅಗತ್ಯ ತೀವ್ರವಾಗಿದೆ..
ರಾಂ ಅಜೆಕಾರು ಕಾರ್ಕಳ
#lambani samskruthi #🇬🇭🌀🏳🌈🌏🌏Namma samskruthi namma hemme🌄🌅🌞 #maduveya Acharane nam samskruthi #🌹tulu nadina samskruthi
.
ಹಳ್ಳಿಬದುಕು : ಕೋಳಿ ಕಳ್ಳ ನಾಯಿ
ತುಳುನಾಡಿನಲ್ಲಿ ಪ್ರತಿಯೊಂದಕ್ಕೂ ಒಂದು ಹಿನ್ನೆಲೆ, ಒಂದು ಪರಂಪರೆ ಇದೆ. ಕೋಳಿ ಎಂಬುದಕ್ಕೆ ನಮ್ಮ ಊರಿನ ಜನರಿಗೆ ವಿಶೇಷ ಪ್ರೀತಿನೀರ್ದೋಸೆ ಜೊತೆ ಕೋಳಿಸುಕ್ಕ ಎಂದರೆ ಬಾಯಲ್ಲಿ ನೀರೂರದವರು ವಿರಳ. ದೈವಗಳ ನೇಮ, ಹರಕೆ, ಸಾಂಪ್ರದಾಯಿಕ ಆಚರಣೆ… ಎಲ್ಲದಲ್ಲಿಯೂ ಕೋಳಿಯ ಸ್ಥಾನ ವಿಶಿಷ್ಟ.
ಹಳ್ಳಿಗಳಲ್ಲಿ ಹಲವರು ತಮ್ಮ ಮನೆಬಾಗಿಲಲ್ಲೇ ಸಣ್ಣ ಗುಡಿಸಲು ಕಟ್ಟಿಕೊಂಡು ಕೋಳಿಗಳನ್ನು ಸಾಕುವುದು ಸಾಮಾನ್ಯ. ನೇಮೊತ್ಸವ, ಕೊಳಿಯಂಕಗಳುಈ ಎಲ್ಲಾ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಒಮ್ಮೆ ಕಾಲದಲ್ಲಿ ಮನೆಯಲ್ಲೇ ಬೆಳೆದ ಕೋಳಿಗಳು “ಒಳ್ಳೆಯ ರೇಟಿಗೆ ಹೋಗುತ್ತವೆ” ಎಂದು ರೈತರು ನಂಬುತ್ತಿದ್ದರು.
ಕೋಳಿ ಸಾಕಿದ್ದ ಯಜಮಾನ ತನ್ನ ಕೊಳಿಗಳನ್ನು ಕಟ್ಟಿಯೊ ಅಥವಾ ಗೂಡಿನಲ್ಳಿಟ್ಟು ಸಾಕುವ ವ್ಯವಧಾನ ಅವನಲ್ಲೂ ಇಲ್ಲಾ
ಅದೇ ಹಳ್ಳಿಯಲ್ಲಿ ಪಕ್ಕದ ಮನೆಯ ರೈತನೊಬ್ಬನ ಬಳಿ ನಿಷ್ಟಾವಂತ ನಾಯಿ ಇತ್ತು. ಅದು ಮನೆಯವರ ಮಾತಿಗೆ ನಿಷ್ಟೆ ತೋರುತಿತ್ತು, ಗದ್ದೆಯ ಕಾಯುವ ಕೆಲಸದಲ್ಲಿ ಚಾಕಚಕ್ಯ. ಯಾರೆ ಬಂದರೂ, ಯಾರೆ ದಾಟಿದರೂ ತನ್ನ ಸೀಮಾ ವ್ಯಾಪ್ತಿಯವರೆಗೆ ಹಿಂಬಾಲಿಸಿ ಬೊಗಳುವುದು ಅದರ ಸ್ವಭಾವ. ತನ್ನ ಮನೆಯನ್ನೆ ಕಾಪಾಡಬೇಕು ಎಂಬ ಅರಿವು ಅದಕ್ಕಿತ್ತು.
ಒಮ್ಮೆ ರೈತನ ತರಕಾರಿ ಗದ್ದೆಗೆ ಪಕ್ಕದ ಮನೆಯ ಕೋಳಿಗಳ ಹಿಂಡು ನುಗ್ಗಿತು. ತರಕಾರಿ ಗಿಡ ಬಳ್ಳಿಗಳ ಬುಡದ ಗೊಬ್ಬರದ ಬಳಿ ಕಾಲಿನಿಂದ ಅಗೆದು ಎರೆಹುಳ ಹುಡುಕುತ್ತಿದ್ದವು. ಇದನ್ನು ನೋಡಿದ ನಾಯಿ, ಅದನ್ನು ‘ಬೇರೆ ಮನೆಯ ಕೋಳಿ’ ಎನ್ನುವ ಭೇದವಿಲ್ಲದೆ, ತನ್ನ ಜವಾಬ್ದಾರಿಯಂತೆ ಕಂಡು ಒಂದು ಕೋಳಿಯನ್ನು ಕೊಂದು ಹಾಕಿತು. ಹೀಗೆ ದಿನಗಳು ಕಳೆದಂತೆ, ನಾಯಿಯ ದಾಳಿ ಹೆಚ್ಚಿತು.
ಕೋಳಿ ಸಾಕುತ್ತಿದ್ದ ಪಕ್ಕದ ಮನೆಯ ಯಜಮಾನನಿಗೆ ನೋವಾಯಿತು. ಕೋಳಿ ಬೆಳೆದು, ಮೊಟ್ಟೆ ಇಟ್ಟು, ಮನೆಯವರೊಂದಿಗೆ ಬೆರೆತು, “ಕುಟುಂಬದ ಹಿತ್ತಲಿನ ಮತ್ತೊಬ್ಬ ಸದಸ್ಯ” ಆಗುವಷ್ಟರಲ್ಲೇ ಅದು ಬಲಿಯಾಗುವುದೆಂದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ?
ಆದರೂ ಅವರು ಇಬ್ಬರೂ ಒಳ್ಳೆಯ ಸ್ನೇಹಿತರು. ನೋವು ಇದ್ದರೂ, ಪರಸ್ಪರದ ಮನಸ್ಸು ನೋಯಬಾರದೆಂದು ಮೌನವಾಗಿದ್ದರು. ಆದರೆ ನೋವಿನ ಮೇಲೆ ನೋವು ಕೋಳಿಗಳು ಪುನಃ ಪುನಃ ಬಲಿಯಾಗುತ್ತಿದ್ದಂತೆ, ಆತನ ಮನಸ್ಸೇ ಮುರಿದು, ಕೊನೆಗೆ ಕೋಳಿ ಸಾಕುವುದನ್ನೇ ಬಿಟ್ಟುಬಿಟ್ಟ.
ಕಾಲ ಬದಲಾಯಿತು. ನೋವು ನಲಿವು ಮಸುಕಾಯಿತು. ಆದರೆ ಒಮ್ಮೆ ಆ ನಾಯಿ ಊರಿನ ಕೋಳಿ ಪಾರ್ಮ್‌ಗೂ ನುಗ್ಗಿ ಕೋಳಿಗಳನ್ನು ಬೇಟೆಯಾಡತೊಡಗಿತು. ಮನೆಯಲ್ಲೂ ಗಿಡಗಳ ಬೇರು ಕಿತ್ತು ತಿನ್ನುವುದರ ಮೇಲೆ ದಾಳಿ ಇತ್ತು. ಕೋಳಿಗಳು ಕಾಟ ಕೊಡುತ್ತಿವೆ ಎನ್ನುವುದು ಅದರ ಕಣ್ಣುಗಳಲ್ಲಿ ‘ಕಾರಣ’, ಆದರೆ ಮನುಷ್ಯರ ಮನಸ್ಸಿನಲ್ಲಿ ಅದು ‘ಕೋಳಿ ಕಳ್ಳ ನಾಯಿ’.
ಹೀಗೆ ಊರಿನಲ್ಲೆಲ್ಲಾ ಆ ನಾಯಿಗೆ ಕೆಟ್ಟ ಹೆಸರು ಬಂತು. ಕೊನೆಗೆ ಜನರು ಸೇರಿ, ದೊಣ್ಣೆ ಹಿಡಿದು ಕಾದು ಕೂತು, ಮನೆಗೆ ಆಹಾರಕ್ಕಾಗಿ ಬಂದಾಗ ಹಿಡಿದು ಕೊಂದುಹಾಕಿದರು.
ಆ ನಾಯಿ ಮಾನವನ ಸಂಗದಿಂದಲೇ ಬೇಟೆಯ ಕೌಶಲ್ಯ ಕಲಿತುಕೊಂಡಿತ್ತು. ಇಲ್ಲಿ ಕೋಳಿಗಳು ಕರಗಿದವು… ಗಿಡಗಳು ಹಾಳಾದವು… ಕೊನೆಗೆ ನಾಯಿ ಜೀವವನ್ನೇ ಕಳೆದುಕೊಂಡಿತು.
ನಾಯಿಯಲ್ಲಿ ನಿಷ್ಠೆ ಇತ್ತು, ತನ್ನ ಮನೆಯನ್ನೇ ಕಾಪಾಡಬೇಕೆಂಬ ಸ್ವಭಾವ ಮಾತ್ರ. ಬುದ್ದಿ ಕಲಿಸಬೇಕಾಗಿರುವುದು ಮನುಷ್ಯನೇ. ಯಾಕಂದರೆ ಮನುಷ್ಯನು ತಪ್ಪು ಮಾಡಿದಾಗ ಊರಿಡೀ ಹೆಸರು ಹಾಳಾಗುತ್ತದೆ; ಕೊನೆಗೂ ಜೈಲು ಗತಿಯವರೆಗೆ ತಲುಪುತ್ತಾನೆ. ಆದರೆ ಪ್ರಾಣಿಗೆ ಅದೆಲ್ಲ ಅರಿವಿಲ್ಲ—ಅದು ನೋಡಿದಂತೆ, ಕಲಿತಂತೆ, ಬದುಕಿನ ಹಾದಿಯಲ್ಲಿ ನಡೆದಂತೆಯೇ ನಡೆದುಕೊಳ್ಳುತ್ತದೆ.
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/12/02/dailystories-10/ #ದಿನಕ್ಕೊಂದು ನುಡಿಮುತ್ತು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭
http://ramajekar.travel.blog/2025/12/02/dailystories-10/
Read my thoughts on YourQuote app at https://www.yourquote.in/ram-ajekar-d2xl/quotes/duraase-dveess-asuuye-bittttu-priitiy-hncu-nemmdiyind-bduku-cxq8lm #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ನುಡಿಮುತ್ತು
ಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆ
ಒಂದು ಕಾಲದಲ್ಲಿ ತುಳುನಾಡು ಮಲೆನಾಡಿನಲ್ಲೆಲ್ಲಾ ಹಸುಗಳ ಹಿಂಡೆಗಳು ಸಾಮಾನ್ಯವಾಗಿ ಕಾಣಿಸುತಿದ್ದವು. ಮಲೆನಾಡಿನ ಗಿಡ್ಡ ಹಸುಗಳು ರಸ್ತೆಗಳ ಬದಿಯಲ್ಲಿ ಮೇಯುತ್ತಾ, ತಮ್ಮ ಸದ್ದಿನಿಂದ ಊರನ್ನು ಗಲಿಬಿಲಿಗೊಳಿಸುತ್ತಿದ್ದ ಆ ದಿನಗಳು ಇನ್ನೂ ಮನಸ್ಸಿನಲ್ಲಿ ಹಸಿದಾಗಿವೆ.
ತುಂಬಾ ತೊಂದರೆ ಕೊಡುವ, ಅಡ್ಡದಾರಿಯಲ್ಲಿ ಹೊಕ್ಕು ಗದ್ದೆ ಹಾಳುಮಾಡುವ ಹಸುಗಳಿಗೆ ಹಳ್ಳಿಯ ರೈತರು ಕುತ್ತಿಗೆಯಲ್ಲಿ ಮರದ ತುಂಡು ಕಟ್ಟುತ್ತಿದ್ದವರು. ಈ ಮರದ ತುಂಡಿನಿಂದ ಹಸುಗಳು ಗದ್ದೆಗೆ ನುಗ್ಗುವುದು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ರಸ್ತೆ ಬದಿಯಲ್ಲೇ ಹುಲ್ಲು ಮೇಯುತ್ತಾ ಹೊಟ್ಟೆ ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದವು. ಏನೇ ಬಳಲಲಿ ಹಸುವೂ ತನ್ನ ಹೊಟ್ಟೆಯ ಹಸಿವಿಗೋಸ್ಕರ ಸಾಗುವುದು ಸಹಜ.
ಕೆಲವರು ಹಸುಗಳಿಗೆ ಕಂಚಿನ ಅಥವಾ ಕಬ್ಬಿಣದ ಘಂಟಾಮಣಿ ಕಟ್ಟುತ್ತಿದ್ದರು. ಕೆಲ ಹಳ್ಳಿಗರು ಬಿದಿರಿನಿಂದ ಮಾಡಿದ ಮೃದು ಧ್ವನಿಯ ಗಂಟೆಗಳನ್ನು ಬಳುಕುತ್ತಿದ್ದರು , ಹಸು ಇರುವಿಕೆಯ ಗುರುತು “ನಾನು ಇಲ್ಲಿದ್ದೇನೆ” ಎಂಬುದನ್ನು ರೈತನಿಗೆ ಸದ್ದಿನಮೂಲಕ ತಿಳಿಸುವ ಕೆಲಸ ಮಾಡುತಿತ್ತು.
ಸಾಧಾರಣ ಹುಲ್ಲಿನಿಂದ ಹೊಟ್ಟೆ ತುಂಬದ ಕೆಲ ಜೋರು ಹಸುಗಳು ನಾಟಿದ ಗದ್ದೆಗಳಿಗೆ ಹೊಕ್ಕು ಭತ್ತದ ಚಿಗುರುಗಳನ್ನು ಸಾಕಷ್ಟು ತಿಂದುಬಿಡುತ್ತಿದ್ದವು. ಇದರಿಂದ ರೈತರು ಬೇಸರಗೊಂಡು ಮರದ ತುಂಡುಗಳನ್ನು “ಸ್ಪೀಡ್ ಗವರ್ನರ್” ಆಗಿ ಕುತ್ತಿಗೆಯಲ್ಲಿ ಕಟ್ಟುತ್ತಿದ್ದರು. ಹೀಗೆ ತೊಂದರೆ ಕೊಡುತ್ತಿದ್ದ ಹಸುಗಳಿಂದ ಕೆಲವು ಮನೆಗಳ ಯಜಮಾನರು ಸಹ ಬೇಸತ್ತು, ಆಕ್ರೋಶದಿಂದ ರೈತರ ನಡುವೆ ಗಲಾಟೆಗಳೂ ನಡೆಯುತಿದ್ದವು.
ಒಮ್ಮೆ ಊರಿನ ಭೋಜಣ್ಣನ ಹಸು ಕೂಡಾ ಹೀಗೆಯೇ ಬೇರೆ ರೈತರ ಗದ್ದೆಗಳಿಗೆ ಹೋಗಿ ಬೆಳೆ ಹಾನಿ ಮಾಡುತ್ತಿತ್ತು. ಸಿಟ್ಟುಮಾಡಿ ಮೊದಲು ಗಂಟೆ ಕಟ್ಟಿ ನೋಡಿದರು . ಕೇಳದೇ ಹೋಗಿತ್ತು. ಭೋಜಣ್ಣನ ಹಾಗು ಪಕ್ಕದ ಮನೆಯ ರೈತನ ನಡುವೆ ಜಗಳವು ನಡೆದಿತ್ತು. ಬಳಿಕ ಕುತ್ತಿಗೆಗೆ ದೊಡ್ಡ ಮರದ ತುಂಡು ಕಟ್ಟಿಸಿ ಮೇಯಲು ಬಿಟ್ಟರು.
ಸಂಜೆಯಾದರೂ ಹಸು ಮನೆಗೆ ಬರಲಿಲ್ಲ. ಚಿಂತೆಯಲ್ಲಿ ಮುಳುಗಿದ ಭೋಜಣ್ಣ ಸುತ್ತಲಿನಲ್ಲೇ ಹುಡುಕಲು ಶುರುಮಾಡಿದರು. ಇತ್ತೀಚೆಗೆ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಕೆಲಸ ನಡೆಯುತ್ತಿತ್ತು ಎನ್ನುವದು ನೆನಪಾಯಿತು. ಬೇರೆಯವರ ಗದ್ದೆಗಳಿಗೆ ಹೋಗುವ ಮಾರ್ಗವೂ ಅಲ್ಲಿಯೇ ಆಗಿತ್ತು.
ಪೈಪ್ ಹಾಕುತ್ತಿದ್ದ ಹೊರರಾಜ್ಯದ ಭೈಯ್ಯನವರು ತಮಗೆ ಕೆಲಸ ಎಂದರೆ ಅಗೆದು ಹೋದರೆ ಸಾಕು, ಮಣ್ಣಿನಿಂದ ಮುಚ್ಚುವುದು, ಸುರಕ್ಷತೆ ಇತ್ಯಾದಿ ಅವರ ಗೊಣಗಾಟದಲ್ಲಿಲ್ಲ. ಸರಕಾರದ ಕೆಲಸಗಳೆ ಹಾಗೇ…
ಅವರ ನಿರ್ಲಕ್ಷ್ಯದ ನಡುವೆ, ಭೋಜಣ್ಣನ ಹಸು ಕುತ್ತಿಗೆಯ ಮರದ ತುಂಡಿನಿಂದ ಹೊಂಡಕ್ಕೆ ಜಾರಿ ಸಿಲುಕಿತೋ? ಹೊಸ ಮಣ್ಣಿನ ವಾಸನೆಗೆ ಓಡಿತ್ತೋ? ಹಾದಿ ದಾಟಲು ಯತ್ನಿಸಿತ್ತೋ? ಯಾರು ಹೇಳಲು ಸಾಧ್ಯ? ಆದರೆ , ಹಸು ಹೊಂಡದೊಳಗೆ ಸಿಲುಕಿ ಉಸಿರುಗಟ್ಟಿಕೊಂಡಿತ್ತು.
ರಾತ್ರಿ ತುಂಬಾ ಹುಡುಕಿ ಹೋದ ಭೋಜಣ್ಣಕ್ಕೆ, ಕೊನೆಗೆ ಹಸುವಿನ ಮೃತದೇಹ ಪೈಪ್‌ಲೈನ್ ಹೊಂಡದಲ್ಲಿ ಸಿಕ್ಕಿತು. ಆ ದಿನದ ನಂತರ ಉಳಿದ ಹಸುಗಳನ್ನು ಮನೆಯಲ್ಲೇ ಅಥವಾ ಹಗ್ಗದಲ್ಲಿ ಕಟ್ಟಿಕೊಂಡು ನೋಡಿಕೊಳ್ಳುವ ನಿರ್ಬಂಧದ ಬದುಕು ಶುರುವಾಯಿತು.
ಹಸುಗಳು ತಪ್ಪೇನೂ ಮಾಡ್ತಿರಲಿಲ್ಲ ಹೊಟ್ಟೆಯ ಹಸಿವನ್ನು ನೀಗಿಸಲು ಹೋಗುತ್ತಿದ್ದವು. ಆದರೆ ಸರಕಾರದ ಕೆಲಸಗಳಲ್ಲಿ ಇರುವ ನಿರ್ಲಕ್ಷ್ಯ, ಕಾರ್ಮಿಕರ ಅರ್ದಂಬರ್ದ ಕೆಲಸಗಳು… ಇದರ ಮಧ್ಯೆ ಬದುಕು ಸಾಗಿಸಲು ಹೋರಾಡುವ ರೈತರ ಕಥೆಗಳು ಅನೇಕ.
ರಾಂ ಅಜೆಕಾರು ಕಾರ್ಕಳ
#ramajekar #dailystories #trendingstories #udupikarkala #karkala #udupimangalore #udupi #mangalore #cow
http://ramajekar.travel.blog/2025/11/16/daily-stories-26/ #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು
#🙏ಸಂಕಷ್ಟಿ ಚತುರ್ಥಿ 🕉️ #🙏ಸಂಕಷ್ಟಿ ಚತುರ್ಥಿ 🕉️ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು
#🌺ಕಾರ್ತಿಕ ಪೂರ್ಣಿಮಾ 🙏 ಕೆಂಪಿಯ ಮಮತೆಗೆ ಸಮನಾರು ಉಂಟೆ
ಅಮ್ಮನ ಕೈಯಲ್ಲಿ ಮುದ್ದಾಗಿ ಮಗುವಾಗುವ ಆಸೆ ಎಲ್ಲ ಜೀವಿಗಳಲ್ಲೂ ಇರುತ್ತದೆ. ಹಟ್ಟಿಯ ಹಸು ಕೆಂಪಿಗೆ ಆ ದಿನ ಆ ಕನಸು ನಿಜವಾಯಿತು. ಎರಡು ದಿನಗಳ ಹಿಂದೆ ಕರು ಹಾಕಿದ್ದ ಕೆಂಪಿ ಆಕೆ, ಕಿವಿ ನಿಮಿರಿಸಿಕೊಂಡು “ನಾನು ಅಮ್ಮನಾದೆ” ಎಂಬ ಆನಂದದಲ್ಲಿ ಕರುವನ್ನು ಹತ್ತಿರ ಸೆಳೆದು ಹಾಲುಣಿಸುತ್ತಿದ್ದಳು. ಕರು ಹಾಲು ಕುಡಿಯುತ್ತಾ ಛಂಗನೆ ಹಾರಿ ನಲಿಯುತ್ತಿದ್ದರೆ, ಕೆಂಪಿಯ ಕಣ್ಣು ಕರುಮೇಲೆ ನೆಟ್ಟಿತ್ತು ಎಲ್ಲೋ ಓಡಬಾರದು ಎಂದು. ಕರು ತಾಯಿಯ ನೆರಳಲ್ಲಿ ಹಾಲು ಕುಡಿಯುತ್ತಿದ್ದಾಗ, ಹಟ್ಟಿಯ ಸುತ್ತ ಮಮತೆಯ ವಾತಾವರಣ ಹರಡಿತ್ತು.
ಅ ಮನೆಯ ಯಜಮಾನಿ ಜ್ಯೋತಿಯಕ್ಕ ಪ್ರತಿದಿನ ಕೆಂಪಿಗೆ ಹುಲ್ಲು, ನೀರು, ಆಹಾರ ನೀಡುತ್ತಿದ್ದರು. ದನದ ಹಾಲು ಕರೆಯುವುದು, ಕರುಗೆ ಆರೈಕೆ ಮಾಡುವುದು ಎಲ್ಲವೂ ಅವರ ದಿನಚರಿಯ ಭಾಗವಾಗಿತ್ತು. ಕೆಂಪಿಯ ಕರುಗೆ ಮತ್ತು ಜ್ಯೋತಿಯಕ್ಕನಿಗೆ ಅಕ್ಕರೆಯ ಬಂಧವೊಂದು ಬೆಳೆದಿತ್ತು. ಜ್ಯೋತಿಯಕ್ಕ ಮಾತಾಡಿದರೆ, ಕೆಂಪಿ ಕಿವಿ ಎತ್ತಿ ಕೇಳುವಂತಿತ್ತು.
ರಾತ್ರಿ ವೇಳೆಗೆ ಕರುವನ್ನು ದನದಿಂದ ಸ್ವಲ್ಪ ದೂರ ಕಟ್ಟುತ್ತಿದ್ದರು, ಏಕೆಂದರೆ ಬೇರೆ ದನಗಳು ಹಾಯ್ದು ಗಾಯ ಮಾಡಬಹುದೆಂಬ ಕಾಳಜಿ. ಆದರೆ ಆ ಕ್ಷಣ ಕೆಂಪಿಗೂ ಕರುಕ್ಕೂ ದೂರವು ನೋವಿನ ಕ್ಷಣವಾಗುತ್ತಿತ್ತು.
ಒಂದು ದಿನ ಜ್ಯೋತಿಯಕ್ಕ ಸಂಬಂಧಿಕರ ಮನೆಗೆ ತೆರಳಬೇಕಾಯಿತು. ಆ ಸಮಯದಲ್ಲಿ ಮನೆಯ ಯಜಮಾನ ಕೆಂಪಿಯ ಹಾಲು ತೆಗೆಯಲು ಹೋದಾಗ, ಕೆಂಪಿ ಕಾಲಿನಿಂದ ಒದ್ದು ಅವನಿಗೆ ಗಾಯಗೊಳಿಸಿತು. ಕರು ಬಿಟ್ಟಾಗ ಮಾತ್ರ ಹಾಲು ಕುಡಿಯಲು ಬಿಡುತ್ತಿದ್ದರೂ, ಯಾರಾದರೂ ಹಾಲು ತೆಗೆಯಲು ಬಂದರೆ ತಾಯಿಯ ಕಾಳಜಿಯಿಂದ ಕೆಂಪಿ ಅಸಹನೆ ತೋರಿಸುತ್ತಿತ್ತು.
ಸಿಟ್ಟಿನಿಂದ ಉನ್ಮತ್ತನಾದ ಯಜಮಾನ, ಜ್ಯೋತಿಯಕ್ಕ ಮನೆಗೆ ಬರುವ ಮೊದಲು ಕೆಂಪಿ ಮತ್ತು ಆಕೆಯ ಕರು ಎರಡನ್ನೂ ಸ್ಥಳೀಯರಿಗೆ ಮಾರಿಬಿಟ್ಟ. ಹಸು ವಾಹನಕ್ಕೆ ಹತ್ತುವಾಗ ತಿರುಗಿ ಹಟ್ಟಿಯತ್ತ ನೋಡಿತು ಕಣ್ಣಿನಲ್ಲಿ ಕರುಬಿಟ್ಟು ಹೋಗುವ ನೋವು. ಕರು ಮಾತ್ರ “ಅಮ್ಮಾ” ಎನ್ನುವಂತೆ ಅಳುತ್ತಾ ಜ್ಯೋತಿಯಕ್ಕ ಹುಡುಕುತ್ತಿತ್ತು.
ಮೂರು ದಿನಗಳ ನಂತರ ಜ್ಯೋತಿಯಕ್ಕ ಮನೆಗೆ ಬಂದರು. ಹಟ್ಟಿಯ ಅಂಗಳ ಖಾಲಿ. “ಕೆಂಪಿ… ಕರು…” ಎಂದು ಕರೆದರೂ ಪ್ರತಿಕ್ರಿಯೆ ಬಾರಲಿಲ್ಲ. ಅಂಗಳದ ಒಂದು ಮೂಲೆಯಲ್ಲಿ ಖಾಲಿ ಕುಟ್ಟಿಗೆಯ ಕಟ್ಟಿ, ಹಾಲಿನ ಬಾಣಸಿಗೆ, ಕತ್ತೆಯ ಕಡ್ಡಿ ಮಾತ್ರ ಉಳಿದಿತ್ತು. ಕ್ಷಣದಲ್ಲೇ ಅವರ ಕಣ್ಣಲ್ಲಿ ನೀರು ತುಂಬಿತು. ಕರು ಮತ್ತು ಕೆಂಪಿಯ ನೆನಪಿನಲ್ಲಿ ಅವರ ಮನ ಕಲುಕಿತು.
ಜ್ಯೋತಿಯಕ್ಕ ತಮಗೆ ಅರ್ಥವಾಯಿತು ಪ್ರೀತಿಯ ಬಾಂಧವ್ಯ ರಕ್ತಸಂಬಂಧದಲ್ಲೇ ಅಲ್ಲ, ಮನಸ್ಸಿನ ಬಂಧದಲ್ಲಿದೆ. ಕೆಂಪಿ ತನ್ನ ಕರುಗಾಗಿ ತಾಯಿಯಂತೆ ಬದುಕಿತ್ತು; ಅವರು ಕೆಂಪಿಗಾಗಿ ಮಮತೆಯ ಅಕ್ಕನಾಗಿದ್ದರು.
ಅಂದು ರಾತ್ರಿ ಹಟ್ಟಿಯ ಗಾಳಿಯಲ್ಲಿ ಗಂಟೆಯ ಸದ್ದು ಕೇಳಿಸಿತು ಕೆಂಪಿಯ ನೆನಪಿನ ಮೃದು ನಾದದಂತೆ. ಜ್ಯೋತಿಯಕ್ಕನ ಕಣ್ಣೀರು ತಣ್ಣಗೆ ಬಿದ್ದಾಗ, ಅವರ ಮನದೊಳಗೆ ಒಂದು ಮಾತು ಪ್ರತಿಧ್ವನಿಸಿತು: “ಮಗುವೆಂದರೆ ಮನುಜನೇ ಅಷ್ಟೆ ಅಲ್ಲ, ಪ್ರೀತಿಯಿಂದ ಪಾಲನೆ ಮಾಡುವ ಪ್ರತಿಯೊಂದು ಜೀವಿಯೂ ಅಮ್ಮನಾಗಬಲ್ಲದು.”
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/11/05/daily-stories-24/ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ
#ದಿನಕ್ಕೊಂದುಕಥೆ #ರಾಂಅಜೆಕಾರು #ಪ್ರೀತಿ #ಮಮತೆ #ಹಸುಕರು #ಕಾರ್ಕಳ #dailystories #dailyquots #udupikarkala #ramajekar #dailyquots
#💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು
ಕೃಷಿಕನ ಮನದಾಳದ ನೋವು
ಕೃಷಿಕ ಎಂದಿಗೂ ಸ್ವಾರ್ಥ ಬಯಸಲಾರ. ಏಕೆಂದರೆ ಅವನ ಶ್ರದ್ಧೆಯಿಂದ ಮಾಡುತ್ತಿರುವ ಕೃಷಿಯ ಫಲದಿಂದಲೇ ನಾವೆಲ್ಲರಿಗೂ ಹೊಟ್ಟೆಗೆ ತುತ್ತು ಸಿಗುತ್ತದೆ. ಆತ ಬೆಳೆದರೆ ಮಾತ್ರ ನಮ್ಮ ಬದುಕು ಸಾಗುತ್ತದೆ ಇಲ್ಲದಿದ್ದರೆ ಏನೂ ಸಾಧ್ಯವಿಲ್ಲ ಅಲ್ವಾ
ಸುಮಾರು ಹತ್ತು ಎಕರೆ ಕೃಷಿಭೂಮಿಯಲ್ಲಿ ಶ್ರಮಿಸುತ್ತಿರುವ ರೈತನು, ಸಾಫ್ಟ್‌ವೇರ್ ಇಂಜಿನಿಯರಿಂಗ್ ಅಥವಾ ಎಂ.ಬಿ.ಎ. ಮಾಡಿದವರಿಗಿಂತ ವಿಭಿನ್ನ. ಯಾಕೆಂದರೆ ವಿದ್ಯಾಭ್ಯಾಸದಿಂದ ಎಷ್ಟು ಉನ್ನತಿಗೆ ಹೋದರೂ, ಅನ್ನದ ಮಹತ್ವವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಊಟಕ್ಕೆ ಅನ್ನವನ್ನು ಕೊಡುವವರು ರೈತರು ಮಾತ್ರ.
ಗದ್ದೆಯನ್ನು ಹದಮಾಡಿ, ನೇಜಿ ನೆಟ್ಟು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿ, ನಿರಂತರ ನೀರಾವರಿ ಒದಗಿಸಿ, ಹವಾಮಾನ ವೈಪರೀತ್ಯಗಳನ್ನೆಲ್ಲ ಎದುರಿಸಿ ನಾಲ್ಕು ತಿಂಗಳು ಶ್ರಮಿಸುವ ಕೃಷಿಕನಿಗೆ ಮಾತ್ರ ಗೊತ್ತು ಅದರ ನಿಜವಾದ ಬೆಲೆ.
ಹಳ್ಳಿಯಲ್ಲಿ ಎಲ್ಲರೂ “ಮಷಿನರಿ ಬಳಸಿ ಕೃಷಿ ಮಾಡಿ” ಎಂದು ಸಲಹೆ ನೀಡುವರು. ಆದರೆ ಕೃಷಿ ಕಾಲ ಬಂದಾಗ ಆ ಯಂತ್ರೋಪಕರಣಗಳು ಸಕಾಲಕ್ಕೆ ಸಿಗದೆ, ಗದ್ದೆ ಪಡೀಲು ಇಡುವ ಸಂದರ್ಭಗಳು ಬಂದೇ ಬರುತ್ತವೆ.
ಒಮ್ಮೆ ಹಳ್ಳಿಯೊಬ್ಬ ರೈತನ ಜೀವನ ಇದೇ ರೀತಿಯಾಗಿ ತಿರುಗಿತು. ಆತ ಶ್ರಮಜೀವಿ ರೈತನಾದರೂ, ತನ್ನ ಮಗನು ರೈತನಾಗಿ ಕಷ್ಟಪಡುವುದನ್ನು ಬಯಸಲಿಲ್ಲ. ಅದಕ್ಕಾಗಿ ಅವನನ್ನು ಉತ್ತಮವಾಗಿ ಓದಿಸಿ, ವಿದೇಶಕ್ಕೆ ಕಳುಹಿಸಿ ವಿದ್ಯಾಭ್ಯಾಸ ಮಾಡಿಸಿದ. ಮಗನೂ ಅಲ್ಲಿ ಉತ್ತಮ ಉದ್ಯೋಗವನ್ನು ಪಡೆದು ವಿದೇಶದಲ್ಲೇ ನೆಲೆಸಿದ.
ಈಗ ತಂದೆ ವಯೋವೃದ್ಧನಾಗಿದ್ದ. ತಾನು ಕೈಯಿಂದಲೇ ಬೆಳೆಸಿದ ಗದ್ದೆಗಳು ಬಾಡಿಬಿಟ್ಟಿದ್ದವು. ಸೊಪ್ಪುಗಳು, ಕಾಳುಗಳು, ಕಾಡುಕುರುಚಲು ಗಿಡಗಳು ಎಲ್ಲೆಡೆ ಆವರಿಸಿಕೊಂಡಿದ್ದವು. ಹತ್ತಿರದಲ್ಲಿ ಸಹಾಯ ಮಾಡಲು ಯಾರೂ ಇಲ್ಲ. ಮಗ ದೂರದ ದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ತಂದೆಯು ಬಾವುಕನಾಗಿ, “ನಾನು ಶ್ರಮಿಸಿ ಉಳಿಸಿಕೊಂಡ ಗದ್ದೆ ಹಾಳಾಗುತ್ತಿದೆ” ಎಂಬ ನೋವಿನಿಂದ ಬದುಕುತ್ತಿದ್ದ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ರಾಂ ಅಜೆಕಾರು ಕಾರ್ಕಳ
http://ramajekar.travel.blog/2025/11/01/daily-stories-23/
#ಕೃಷಿಬದುಕು #ಕರಾವಳಿ #ramajekar #karavalikarnataka #dailystories #udupikarkala #ರಾಂಅಜೆಕಾರು
Read my thoughts on YourQuote app at https://www.yourquote.in/ram-ajekar-d2xl/quotes/arth-maaddikolllluv-mnssu-iddre-maatr-priitisu-illdiddre-nnn-cxm3ys #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭













