ShareChat
click to see wallet page
search
ವಿಶ್ವ ಗುರು ಬಸವಣ್ಣ ನವರು ಲಿಂಗೈಕ್ಯರಾಗಿರುವ ಕುರಿತಾದ ವಚನಗಳನ್ನು ಕಾಣಬಹುದು, ಅವರ ವ್ಯಕ್ತಿತ್ವವನ್ನು ಕುಗ್ಗಿಸಲು ಕೆಲವರು ಕೊಲೆ, ಅತ್ಮಹತ್ಯೆ, ಎಂದು ಕಟ್ಟು ಕಥೆ ಕಟ್ಟಿ ಅವರ ವ್ಯಕ್ತಿತ್ವಕ್ಕೆಮಸಿಬಳಿಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಈಗಲೂ ಮಾಡುತಿದ್ದಾರೆ ಆದರೆ ಸತ್ಯದ ಮುಂದೆ ಅಸತ್ಯ ತಲೆತಗ್ಗಿಸಲೇಬೇಕು ಆ ಕಾಲದಲ್ಲಿ ಮತ್ತು ಬಸವಣ್ಣ ನಿಜ ನಿಲುವು ಏನಾಗಿತ್ತು ಅವರೆಂತಹ ಸಾಧಕರಾಗಿದ್ದರು ಎಂತ ದೈವಿಕ ಪುರುಷನಾಗಿದ್ದರು ಎಂಬದನ್ನು ವಚನಗಳಲ್ಲಿ ಕಾಣಬಹುದು ತಪ್ಪದೇ ಓದಿ ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು ನೋಡಯ್ಯಾ ಅರಿವು ಅಂತರಂಗದಲ್ಲಿ ಭರಿತವಾಗಿಪ್ಪುದಾಗಿ ಮನೋಮುಕ್ತನು ನೀನು ನೋಡಯ್ಯಾ. ಅರ್ಪಿತ ಪರಿಣಾಮದಲ್ಲಿ ಅವಿರಳವಾಗಿಪ್ಪುದಾಗಿ, ಸರ್ವಾಂಗಲಿಂಗೈಕ್ಯನು ನೀನು ನೋಡಯ್ಯಾ. ಮುಕ್ತನಲ್ಲವೆಂಬ ಬಳಕೆಯ ಮಾತಂತಿರಲಿ ! ಬಯಲ ಭ್ರಮೆಯ ಕಳೆದು, ಭವದ ಬಟ್ಟೆಯ ಹರಿದಿಪ್ಪುದ ` ನಮ್ಮ ಗುಹೇಶ್ವರಲಿಂಗ ಬಲ್ಲನು. ಮರೆಯಾಗಿ ನುಡಿವರೆ ಸಂಗನಬಸವಣ್ಣಾ ? (ಅಪ್ರವ ೧೨೯೦) ಅಂಗದಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ ! ಪ್ರಾಣದ ಕೊನೆಯ ಮೊನೆಯ ಮೇಲೆ ಭಾವಸೂತಕದ ಹೊದಕೆಯ ಕಳೆದು ನಿರ್ಭಾವ ನಿಸ್ಪೂತಕಿಯಾಗಿಪ್ಪ ನಿಜಲಿಂಗ ಸಮಾಧಿಯ ಘನವನಾರಿಗೆಯೂ ಕಾಣಬಾರದು ನೋಡಾ ! ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು ನಾನು ಬದುಕಿದೆನು ಕಾಣಾ ಚನ್ನಬಸವಣ್ಣಾ ! - (ಅ.ಪ್ರ.ವ : ೧೨೯೨) ತಾನಿದಿರೆಂಬೆರಡರಿಯದೆ ಧ್ಯಾನನಷ್ಟವಾಗಿ ಜ್ಞಾತೃ ಜ್ಞಾನ ಜೇಯವೆಂಬ ತ್ರಿವಿಧವರತ ಮಹಿಮ ಹೊರಗೊಳಗೆಂಬೆರಡರ ಬಗೆಯನರಸದೆ ಎರಡರ ತರನೆಂಬ ನುಡಿಯು ಮುನ್ನವೆ ತಾನರಿಯದೆ || ಅರಿವಿನ ಮೂಲವ ಹರಿದು ಮರಹು ನಷ್ಟವಾದ ಅರಿತರಿವಿನ ಮರಿವೆಯ ಕುರುಹಳಿದ ನಿಶ್ಚಿಂತ ಉಲುಹಡಗಿದ ಸಮುದ್ರದ ನಿಲವಿನ ಘಾತದಂತೆ ತಿಳಿವಿನ ಮಹಾಘನವಿವೇಕ ಹರಿಹಂಚಾಗಿ || ಉಳಿದೆನೆಂಬ ಉಳಿಮೆಯ ಮೂಲವ ಮರೆದು ಕಳೆಯ ಬೆಳಗಳಿದು ನಿಜದೊಳು ನಿಂದ ಮಹಿಮ ಉರಿ ಕರ್ಪೂರ ಒಡಗೂಡಿ ಎರಡೂ ಆಳಿದ ಬಳಿಕ ಮರಳಿ ನೋಡಿಹೆನೆಂದಡೆ ಭಸ್ಮವಿಲ್ಲ ನೋಡಾ || ಅರಿವನರಿದಿಹೆನೆಂಬ ಅರಿವಿನ ಮೂಲವ ದಹಿಸಿ ಧರಿಸಿದ ಜ್ಞಾನಭಸ್ಮವೆಂಬುದಿಲ್ಲದ ಮಹಿಮ ನಿಜದಲ್ಲಿ ನಿರ್ಣಯವಡಗಿ ಗತಿಮತಿ ನಷ್ಟವಾಗಿ ಕಳೆಯೊಳಗಣ ಬೆಳಗು ತಾನೆಂದು ತೋರುತಿಪ್ಪ || ತೊಳಗಿ ಬೆಳಗುವ ಚೈತನ್ಯ ತನ್ನಲಿ ತಾನೇ ನಿಃ-ಕಳೆಯಾಗಿ ನಿಜದೊಳು ನಿಶೂನ್ಯವಾದ ಮಹಿಮ ತನ್ನೊಳು ತಾನೆಯಾಗಿ ಎನ್ನಲ್ಲಿ ತಾನರಿದು ಎನ್ನಲ್ಲಿ ನಾನರಿದೆನೆಂಬ ಅರಿವಿಂಗೆ ತೆರಿಹುಗುಡದೆ ||ಬಿಮ್ಮು ಬೀಸರವಾಗಿ ಹಮ್ಮು ಶೂನ್ಯವಾಗಿ ನಿರ್ಮಳ ನಿಜಪದವಾದ ಉಪಮಾತೀತ ಮಹಿಮ ಜ್ಞಾನಜ್ಯೋತಿಯ ಪ್ರಭೆಯೆ ತಾನಾಗಿ ನಿಂದಿರ್ದು ತಾನಾಗಿರ್ದೆನೆಂಬ ಜ್ಞಾನಶೂನ್ಯವಾಗಿ || ತಾನೆ ತನ್ನೊಳು ಮೈಮರಿದೊರಿಗಿದ ನಿರಾಳ ಜ್ಞಾನಾತೀತ ನಿರುಪಮ ನಿಶ್ಚಲ ನಿರ್ಭೇದ್ಯ ಶಬ್ದ ನಿಶ್ಯಬ್ಧವಾಗಿ ನಿಶ್ಯಬ್ಧವನಾಹತವಾಗಿ ಶಬ್ದ ನಿಶ್ಯಬ್ದವೆಂಬ ಬುದ್ದಿ ನಿರ್ವಯಲಾಗಿ | ಇದ್ದುದು ಹೋದುದೆಂಬುದುನರಿಯದೆ ಮೇರೆಗೆಟ್ಟ ನಿಃ-ಶಬ್ದ ಗಂಭೀರ ಗುಹೇಶ್ವರ ನಿಮ್ಮ ಬಸವಣ್ಣ ಶರಣ ದೃಷ್ಟಾದೃಷ್ಟ ಕಾಣಯ್ಯಾ; ಮುಟ್ಟದೆ ಮುಟ್ಟುವ ಕಾಣಯ್ಯಾ; ಆಗಿನ ಆಗು ಕಾಣಯ್ಯಾ; ಭೇದದ ಭೇದ ಕಾಣಯ್ಯಾ; ಅರಿವಿನ ಅರಿವು ಕಾಣಯ್ಯಾ. ಲಿಂಗದಲ್ಲಿ ಹಿಂಗದ ಬಿಂದು, ಕೂಡಲಚನ್ನಸಂಗಾ, ನಿಮ್ಮಲ್ಲಿ ಸಂಗನ ಬಸವಣ್ಣ ಕಾಣಯ್ಯಾ. -.. ವೇದವೇದಾರ್ಥಸಾರಾಯದಿಂದ ಆಜು ಶಾಸ್ತ್ರ ಹದಿನೆಂಟು ಪುರಾಣಂಗಳಾದವು. ಆ ಪುರಾಣಂಗಳನರಿವುದರಿಂದ ಜ್ಯೋತಿರ್ಜ್ಞಾನವಾಯಿತ್ತು. ಆ ಜ್ಯೋತಿರ್ಜ್ಞಾನದಿಂದ ಮತಿಜ್ಞಾನ, ಶ್ರುತಜ್ಞಾನ, ಮನಪರಿಪೂರ್ಣಜ್ಞಾನ, ಅವಧಿಜ್ಞಾನ, ಕೇವಲಜ್ಞಾನ - ಇಂತೀ ಪಂಚಜ್ಞಾನವೆ ಪಂಚಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ, ಶ್ರುತಜ್ಞಾನವುಳ್ಳಾತನೆ ಮಹೇಶ್ವರ, ಮನಪರಿಪೂರ್ಣಜ್ಞಾನವುಳ್ಳಾತನೆ ಪ್ರಸಾದಿ, ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ, ಕೇವಲಜ್ಞಾನವುಳ್ಳಾತನೆ ಶರಣ; ಶರಣಸ್ಥಲವೆಂಬುದು ಭವಂ ನಾಸ್ತಿ. ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿರ್ಜ್ಞಾನವೆ ಪಂಚಸ್ಥಲದಲ್ಲಿ ಏಕಾಕಾರದ ಐಕ್ಯನು. ಇಂತೆಂದುದಾಗಿ, ಕೂಡಲಚನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು. (ಚ.ಬ.ವ.: ೧೩೪೦ ಅಪ್ಪುವನಪ್ಪಿದ ವಾರಿಕಲ್ಲಂತೆ, ವಾಯುವನಪ್ಪಿದ ಪರಿಮಳದಂತೆ, ಲಿಂಗವನಪ್ಪಿದ ಶರಣನ ದೇಹಿ ಎನಬಹುದೆ? ಅನಲನಪ್ಪಿದ ಕರ್ಪೂರದಂತೆ, ಕೂಡಲಚನ್ನಸಂಗಯ್ಯಾ, ನಿಮ್ಮ ಶರಣ ಬಸವಣ್ಣನ ನಿಲವು. ಎರಡು ಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುಮಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ, ಜಗದೇವ ಮೊಲ್ಲೆ ಬೊಮ್ಮಣ್ಣಿಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ, ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು, ಆ ಬಸವಣ್ಣ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ......... ಅಂಗಾಲಕಣ್ಣವರಾಗಬಹುದಲ್ಲದೆ ಮೈಯಲ್ಲ ಕಣ್ಣವರಾಗಬಾರದು. ಮೈಯೆಲ್ಲ ಕಣ್ಣವರಾಗಬಹುದಲ್ಲದೆ ನೊಸಲಕಣ್ಣು ಚತುರ್ಭುಜರಾಗಬಾರದು. ನೊಸಲಕಣ್ಣು ಚತುರ್ಭುಜದವರಾಗಬಹುದಲ್ಲದೆ ಪಂಚವಕ್ರ ದಶಭುಜದವರಾಗಬಾರದು. ಪಂಚವಕ್ರ ದಶಭುಜದವರಾಗಬಹುದಲ್ಲದೆ ಸರ್ವಾಂಗಲಿಂಗವಾಗಬಾರದು. ಸರ್ವಾಂಗಲಿಂಗಿಗಳಾಗಬಹುದಲ್ಲದೆ ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ಪ್ರಣವ ಪ್ರಜ್ವಲಿತವಾಯಿತ್ತು, ಪ್ರಸಾದ ನಿಂದ ಸ್ಥಲವು. ಪ್ರಸಾದ ಪ್ರಜ್ವಲಿತವಾಯಿತ್ತು, ಅನುಭಾವ ನಿಂದ ಸ್ಥಲವು. ಅನುಭಾವ ಪ್ರಜ್ವಲಿತವಾಯಿತ್ತು. ಇಂತಾ ಮಹಾಘನವು ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಜೈಕ್ಯದ ನಿಲವು ಶಿವಶಕ್ತಿ ಸಂಪುಟವಾದ ಮಹಾಮಹಿಮರನಿಲವು, ನಾದದ ಉತ್ಪವ್ಯವ ಸೋಂಕದು. ಬಿಂದುವಿನಾಶ್ರಯದಲ್ಲಿ ಬೆಳೆಯದು ಶುಕ್ಲಶೋಣಿತವೆಂಬ ಪಂಚವರ್ಣಾಶ್ರಯವನು ಹೊದ್ದದು. ಅಷ್ಟದಳಕಮಲವ ಮುಟ್ಟದು. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳಿಚ್ಛೆಯಲ್ಲಿ ಸುಳಿದಾಡದು. ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು. ಹೃದಯಕಮಲಪದ್ಮ ಪತ್ರ ಉಸಿರನಾಲಿಸಿ, ಶಿವಸಂಪುಟದ ಜಂಗಮದಾಟವನಾಡುವುದು. ಲಿಂಗದ ನೋಟವ ನೋಡುವುದು, ಮಹಾಘನದಲ್ಲಿ ಬೆಳೆವುದು, ನಿಜನಿರಾಳದಲ್ಲಿ ನಿವಾಸಿಯಾಗಿಪ್ಪುದು ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು.. ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು. ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು. ಉಭಯದ ಹಂಗ ಹಳಿದು ಉಪಮಾತೀತನಾದ ನಮ್ಮ ಬಸವಯ್ಯನು. ಸಂಗಯ್ಯನಲ್ಲಿ ಕೂಡಿ ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು. (ಶಿ.ವ) - (ನೀಲಮ್ಮ : ೧) ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ. ಆಕಾರವಳಿದ ಬಸವಾ; ನಿರಾಕಾರವಳಿದ ಬಸವಾ. ಸಂಗವಳಿದ ಬಸವಾ; ನಿಸ್ಸಂಗವಳಿದ ಬಸವಾ. ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ. (ಶಿ,ವ.ನೀಲಮ್ಮ) ಎಲೆ ಅಯ್ಯಾ ಎಲೆ ಅಯ್ಯಾ, ಏಕಾಕ್ಷರರೂಪ ಬಸವಾ. ಎಲೆ ಅಯ್ಯಾ ಎಲೆ ಅಯ್ಯಾ, ನಿರಕ್ಷರರೂಪ ಬಸವಾ. ಎಲೆ ಅಯ್ಯಾ ಎಲೆ ಅಯ್ಯಾ, ಪ್ರಣವಸ್ವರೂಪ ಬಸವಾ. ಎಲೆ ಅಯ್ಯಾ ಎಲೆ ಅಯ್ಯಾ, ಮುನಿಮಾರ್ಗಶೀಲ ಬಸವಾ. ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು. (ಶಿ,ವ, ನೀಲಮ್ಮ ) ಏತದಲ್ಲಿಯೂ ಹೆಸರಿಲ್ಲದ ಕುರುಹು ಈ ವಸ್ತು ಬಸವಯ್ಯನು. ಏತದಲ್ಲಿಯೂ ನೆಲೆಯಿಲ್ಲದ ಮೂರ್ತಿ ಈ ವಸ್ತು ಬಸವಯ್ಯನು. ಏತದಲ್ಲಿಯೂ ತೆಜಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು. ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ, ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ ಸಂಗಯ್ಯನಲ್ಲಿ ಬಸವ ಸ್ವಲಿಂಗಿಯಾದ ಬಳಿಕ. (ಶಿ,ವ) - (ನೀಲಮ್ಮ : ೨೧) ಭಕ್ತಿಪ್ರಸಾದ, ಮುಕ್ತಿಪ್ರಸಾದ, ಇರಹಪರ ಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು. ತಾವರಿಯದ ವಿವರ ತಮಗೆಲ್ಲಿಯದೊ? ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ ಮತ್ತಾರನೂ ಕಾಣೆನಯ್ಯಾ. (ಶಿ, ವ, ನೀಲಮ್ಮ ) ತನುವಾವುದಯ್ಯಾ ಬಸವಾ? ಮನವಾವುದಯ್ಯಾ ಬಸವಾ? ನೆನಹಿನ ಪರಿಣಾಮವಾವುದಯ್ಯಾ ಬಸವಾ? ಉಭಯ ಗುಣ ನಷ್ಟವಾದ ಬಳಿಕ ಪ್ರಸನ್ನ ಸುಖಭಾವವುಂಟೆ, ಸಂಗಯ್ಯನ ಗುರುಬಸವಾ? (ಶಿ,ವ) - (ನೀಲು: ೨೪) ಮನವಿಲ್ಲ ಬಸವಯ್ಯಂಗೆ, ತನುವಿಲ್ಲ ಬಸವಯ್ಯಂಗೆ, ನೆನಹಿನ ತನುಮನ ನಷ್ಟವಾದ ಬಳಿಕ,”ಸಂಗಯ್ಯನಲ್ಲಿ ಬಸವಯ್ಯನ ರೂಪು ನಿರೂಪಾದ ಬಳಿಕ. (ಶಿ.ವ) - (ನೀಲಮ್ಮ : ೨೯) ಏಕ ಏವ ದೇವ ಬಸವಾ, ಏಕ ಲಿಂಗಾಂಗಿ ಬಸವಾ, ಪ್ರಸಾದ ಪರಿಪೂರ್ಣಮೂರ್ತಿ ಬಸವಾ, ಪರಿಣಾಮವಡಗಿ ಪ್ರಸನ್ನನಾದ ಬಸವಾ. ಕಾಯವಿಲ್ಲದ ಗಮನಿ ಬಸವಾ, ಕಲೆಯಳಿದುಳಿದ ಬಸವಾ, ಪ್ರಭಾವವಡಗಿ ಸಂಗಯ್ಯನಲ್ಲಿ ನಿಃಸಂಗಿಯಾದೆಯಾ ಬಸವಾ. 20 (ಶಿ.ವ) - (ನೀಲಮ್ಮ : ೪೭) ಕಲ್ಲ ಮಾಲೆಯ ಕಡಿದಾತ ಬಸವಯ್ಯನು, ಕಾಲನ ಗೆಲಿದಾತ ಬಸವಯ್ಯನು; ಎಲ್ಲವ ಮರೆದಾತ ಬಸವಯ್ಯನು, ಜ್ಞಾನವನರಿದಾತ ಬಸವಯ್ಯನು; ಸಂಗಯ್ಯನಲ್ಲಿ ಬೆರೆದು ನಿಃಪತಿಯಾದಾತ ನಮ್ಮ ಬಸವಯ್ಯನು. (ಶಿ.ವ) - (ನೀಲಮ್ಮ : ೫೨) #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
//🌳ವಚನ ಸಾಹಿತ್ಯ 🌳// - ವಿಶ್ವಗುರು ಬಸವಣ್ಣನವರು ವಿಶ್ವಗುರು ಬಸವಣ್ಣನವರು - ShareChat