"ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು, ಭಕ್ತ ದೇಹಿಕ, ದೇವ ಅನಿಮಿಷನಾಗಿ, ಕೂಡಲ ಸಂಗಮದೇವ, ಭಕ್ತನ ನುಡಿಯ ನಡುವೆ ರಾಶಿಯಾಗಿಪ್ಪನು.. ✍️ಬಸವಣ್ಣನವರು.. ವಚನದ ಭಾವಾರ್ಥ: "ಅಮೂರ್ತ ನಿರಾಕಾರ ಸ್ವರೂಪದ ದೇವರನ್ನು ಕಾಣಲಾಗದು, ಆದರೆ ದೇಹಧಾರಿಯಾದ ನೈಜ ಶಿವಭಕ್ತನ ನಡೆ ನುಡಿ ವಿಚಾರ ಆಚಾರ ಅನುಭಾವದಲ್ಲಿ ದೇವನ ಪ್ರತಿಬಿಂಬವನ್ನೇ ಅರಿಯಬಹುದು. ಸಾಕಾರ ಸ್ವರೂಪದ ಭಕ್ತನನ್ನು ಅರಿತರೆ ನಿರಾಕಾರ ದೇವರನ್ನೇ ಅರಿತಂತೆ.. ಶರಣು ಶರಣಾರ್ಥಿಗಳು🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು


