ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಪೊಲೀಸರ ಅತಿಥಿಯಾದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಕಳ್ಳ ಬೆಂಗಳೂರು: ತಮ್ಮ ಹೆಂಡತಿಯನ್ನು ಅಕ್ಕ ಎಂದು ಪರಿಚಯಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಐನಾತಿ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದು ವಿಚಾರಣೆ ವೇಳೆ ಅನೇಕ ವಿಷಯ ತಿಳಿಸಿದ್ದಾನೆ. ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಂಬಂಧಿ ಹಾಗೂ ಆಪ್ತ ಎಂದು ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿ ಆಗುತ್ತಿದ್ದ ಈತ ವಿಚಾರಣೆ ವೇಳೆ ನೀಡಿದ ಮಾಹಿತಿ ಕೇಳಿ ಪೊಲೀಸರೇ ಆಶ್ಚರ್ಯಪಟ್ಟಿದ್ದಾರೆ. ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬರು ನೀಡಿದ ದೂರಿನ ಅನ್ವಯ ಕೆಲವು ದಿನಗಳ ಹಿಂದೆ ಕಾಡುಗೋಡಿ ಠಾಣೆಯಲ್ಲಿ ವಿಜಯ್ ರಾಜ್ ಗೌಡ ಸೇರಿ ಆತನ ಇಡೀ ಕುಟುಂಬದ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಆಸಾಮಿ ಮ್ಯಾಟ್ರಿಮೋನಿಯಲ್ಲಿ ಮೋಸ ಮಾಡಿರುವುದು ಇದೇ ಮೊದಲಲ್ಲ ಎಂಬುದು ಗೊತ್ತಾಗಿದೆ. ಕಳೆದ 2019 ರಿಂದಲೂ 2026 ರ ವರೆಗೆ ಹಲವಾರು ಯುವತಿಯರಿಗೆ ಮೋಸ ಮಾಡಿದ್ದು, ಕಂಡುಬಂದಿದೆ. 2019 ರಲ್ಲಿ ಕುಣಿಗಲ್ನಲ್ಲಿ, 2022 ರಲ್ಲಿ ಅತ್ತಿಬೆಲೆಯಲ್ಲಿ 2023 ರಲ್ಲಿ ಶಿವಮೊಗ್ಗ, 2025 ರಲ್ಲಿ ಬೆಂಗಳೂರು, 2026 ರಲ್ಲಿ ಕಾಡುಗೋಡಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ನಂತರ, ‘ನಾನು ದೊಡ್ಡ ಉದ್ಯಮಿ, ಇಡಿಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ನನಗೆ ಸೇರಿದ ಅಪಾರ ಪ್ರಮಾಣದ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಹಣವನ್ನು ಬಿಡಿಸಲು ಸ್ವಲ್ಪ ಹಣ ಬೇಕಾಗಿದೆ’ ಎಂದು ಹೇಳಿ ಮದುವೆಯಾಗಲು ಬಯಸುತ್ತಿದ್ದ ಯುವತಿಯರನ್ನು ನಂಬಿಸುತ್ತಿದ್ದ. ಲಕ್ಷ ಲಕ್ಷ ಹಣ ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವುದಕ್ಕೆ ಬೇಕಾದ ನಕಲಿ ದಾಖಲೆಗಳನ್ನು, ಕೋರ್ಟ್ ಪ್ರತಿಗಳನ್ನು ತೋರಿಸಿ ಹಣ ಪಡೆದುಕೊಂಡು ನಂತರ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ. ಹೀಗೆ ಒಬ್ಬೊಬರಿಂದ 10 ಲಕ್ಷ, 30 ಲಕ್ಷ, 13 ಲಕ್ಷ ಪಡೆದಿದ್ದಾನೆ. ಕೆಂಗೇರಿಯಲ್ಲಿ 1.53 ಕೋಟಿ ರೂ. ಹಣ ಪಡೆದುಕೊಂಡು ಹೆಂಡತಿಯನ್ನು ಅಕ್ಕ ಎಂದು ಪರಿಚಯ ಮಾಡಿಕೊಟ್ಟಿದ್ದ. ಈ ಆರೋಪಿ ಟೆಂಡರ್ ಕೊಡಿಸುವ ಡೀಲ್ನಲ್ಲಿ ಕುಣಿಗಲ್ನಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಡಿ ಕೆ ಸುರೇಶ್ ನನಗೆ ಆಪ್ತರು ಎಂದು ಹೇಳಿಕೊಂಡು ಟೆಂಡರ್ ಕೊಡಿಸುವುದಾಗಿ ನಂಬಿಸಿದ್ದ. ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನದ ಗುತ್ತಿಗೆ ಕೊಡಿಸುವುದಾಗಿ ಕೂಡ ಹೇಳಿದ್ದ. 2019ರಲ್ಲಿ ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಾಜೆಕ್ಟ್ ಕೊಡಿಸುವುದಕ್ಕೆ ನಕಲಿ ಸಹಿ ಸೀಲ್ ರೆಡಿ ಉಪಯೋಗಿಸಿಕೊಂಡು ವಂಚಿಸಿದ್ದ. ಆನೇಕಲ್ನಲ್ಲಿ ಸಿಮೆಂಟ್ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಹಣ ಪಾವಸ್ ಕೊಡುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಆರೋಪಿ ವಿರುದ್ಧ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗೆ ಕಳೆದ ಕೆಲವು ವರ್ಷಗಳಿಂದ ಮೋಸ, ವಂಚನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. #Thief #stole #crores #rupees #become #police #guest #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಪೊಲೀಸರ ಅತಿಥಿಯಾದ ಕೋಟ್ಯಂತರ ರೂಪಾಯಿ లబటాయిసిది శెళ్ళ FIR 13 ಸುಟ್ನಿ ಶ ಆಯರಿಯಲ್ಲಿ ನ ನಂನಿ httpsllmalgudiexpresscoin/ EXPRESS ಪೊಲೀಸರ ಅತಿಥಿಯಾದ ಕೋಟ್ಯಂತರ ರೂಪಾಯಿ లబటాయిసిది శెళ్ళ FIR 13 ಸುಟ್ನಿ ಶ ಆಯರಿಯಲ್ಲಿ ನ ನಂನಿ httpsllmalgudiexpresscoin/ EXPRESS - ShareChat