#😏ಇದೇ ಪ್ರಪಂಚ ಹೆದರಿಸಲು ಅಲ್ಲೇನೂ ಇಲ್ಲ, ಅದೊಂದು ಸ್ಥಿತಿ ಅಷ್ಟೆ. ಭಯ ಎನ್ನುವುದು ನಮ್ಮ ಬದುಕಿನಲ್ಲಿ ಮುಂಬರುವ ಕ್ಷಣಗಳು ನಮ್ಮನ್ನ ಯಾವ ಸ್ಥಿತಿಗೆ ತಂದು ನಿಲ್ಲಿಸುತ್ತದೋ ಏನೋ ಎಂಬ ಅಂತರವನ್ನು ಸೃಷ್ಟಿಸುತ್ತದೆ , ಅದೆ ಭಯ. ಹೃದಯದ ಬಡಿತದಲ್ಲಿ ವ್ಯತ್ಯಾಸ ವಾಗುತ್ತದೆ. ಸಂತೋಷದಿಂದ ಇದ್ದಾಗ ಹೃದಯದ ಬಡಿತ ಶಾಂತವಾಗಿರುತ್ತದೆ, ಪ್ರತಿಯೊಂದು ಹಾರ್ಮೋನ್ಸ್ ಗಳ ಕೆಲಸವೆಂದರೆ ತಪ್ಪಾಗಲಾರದು.
ಈ ಹಾರಾಮೋನ್ಸ್ ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ನಾವು ಸೇವಿಸಿದ ಆಹಾರ ರಕ್ತವಾಗಿ ಪರಿವರ್ತನೆ ಹೊಂದುತ್ತದೆ. ದೇಹದಲ್ಲಿ ಹಸಿವು ಬಾಯಾರಿಕೆ ಇದ್ದಾಗ ನಮಗೆ ಯಾವ ಬಯಕೆ ಆಸೆ ಏನೂ ಇರೋದಿಲ್ಲ, ತೃಪ್ತಿ ದಾಯಕ ಆಹಾರ ಸೇವನೆ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ , ಅಲ್ಲಿಗೆ ದೇಹದ ಕೆಲಸ ಮುಗಿಯಿತು.ಕಣ್ಣು ನಮಗೆ ಯಾವುದು ಸುಂದರವಾಗಿ ಕಾಣುತ್ತದೋ ಅದನ್ನು ಸೆರೆಹಿಡಿಯುತ್ತದೆ, ಮನಸ್ಸು ನಾವು ಯಾವುದೆಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಯೋಚಿಸುತ್ತೇವೋ ಅದರಂತೆ ಕಲ್ಪಿಸಿಕೊಂಡುಬಿಡುತ್ತದೆ, ಈ ಕಲ್ಪನೆಗೆ ಪ್ರೋತ್ಸಾಹ ನೀಡುವುದು ಹಾರ್ಮೋನ್ಸ್ ಗಳು. ಹಾಗೆ ನಾವು ಸಂತೋಷದಿಂದ ಇದ್ದಾಗ ಅದಕ್ಕೆ ಸಂಬಂಧಿಸಿದಂತೆ ರಾಸಾಯನಿಕ ಕ್ರಿಯೆಯಲ್ಲಿ ಅವು ತೊಡಗಿಸಿಕೊಳ್ಳುತ್ತವೆ, ದುಃಖ ದಲ್ಲಿ ಇದ್ದಾಗಲೂ ಹಾರ್ಮೋನ್ಸ್ ಗಳು ತೊಡಗಿಕೊಳ್ಳುತ್ತವೆ. ಆಸೆ ,ಬಯಕೆ ,ಪ್ರೀತಿ ,ವಿಶ್ವಾಸ, ಸ್ನೇಹ , ಕಾಮ , ಪ್ರತೀ ವಿಷಯದಲ್ಲೂ ಅವು ತೊಡಗಿಸಿಕೊಳ್ಳುತ್ತವೆ.
ಆದ್ದರಿಂದ ನಮಗೆ ಭಯ ಹೋಗಬೇಕೆಂದರೆ ನಾವು ನಮ್ಮನ್ನ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಭಯವೇಕಿದೆ !?ಎಂದರೆ, ನಾವು ನಿರಂತರ ಮುಂದೆ ಒದಗಬಹುದಾದ ಲಾಭ ನಷ್ಟವನ್ನು ಯೋಚಿಸುತ್ತೇವೆ , ಒಳಿತು ಕೆಡುಕಿನ ಬಗ್ಗೆ ಚಿಂತಿಸುತ್ತೇವೆ . ಈ ಚಿಂತನೆ ನಮ್ಮಲ್ಲಿ ಈ ಕ್ಷಣದ ನೆಮ್ಮದಿಯನ್ನು ಹಾಳುಮಾಡುತ್ತದೆ, ಇದೆ ಭಯಕ್ಕೆ ಮೂಲ ಕಾರಣ. ಪ್ರತಿಯೊಂದನ್ನೂ ಒಪ್ಪಿಕೊಳ್ಳಿ , ಇಂದು ನೋವು ಇದೆ ಎಂದರೆ ನಾಳೆ ನಲಿವು ಇದೆ ಎಂದರ್ಥ. ಈಗ ಖುಃಷಿ ಇದೆ ಎಂದರೆ ನಾಳೆ ದುಃಖ ಇದೆ ಎಂದರ್ಥ. ಎಲ್ಲವನ್ನೂ ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಒಳಗೂಡಿಸಿಕೊಳ್ಳಿ. ಒಳಗೂಡಿಸಿಕೊಂಡಾಗ ಬದುಕಿನಲ್ಲಿ ಸುಃಖ ದುಃಖಗಳು ಬರುವುದಿಲ್ಲವೇ ! ಎಂದು ಕೇಳಬಹುದು? ಬರುತ್ತದೆ, ಆದರೆ ಅವುಗಳನ್ನು ನಿಭಾಯಿಸಲು ನೀವು ಸಮರ್ಥರಾಗಿರುತ್ತೀರಿ. ಹಾಗಿದ್ದಾಗ ಭಯ ಹೇಗೆ ಬರಲುಸಾಧ್ಯ. !?..

