ShareChat
click to see wallet page
search
#👑ಶ್ರೀ ಕೃಷ್ಣದೇವರಾಯರ ಜಯಂತಿ🔥 ವಿಶ್ವ ಧರ್ಮ ದಿನ ಎಲ್ಲಾ ಧರ್ಮದ ಪುಸ್ತಕ ಹೇಳುವುದೊಂದೇ ಮಾನವನಾಗು ಮೊದಲು ಮಾನವನಾಗು ಮಾನವನಾಗಿ ವಿಶ್ವ ಮಾನವನಾಗು ಧರ್ಮ ಶಬ್ದವನ್ನು ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಲಾಗುತ್ತದೆ. ಧರ್ಮದ ಕಲ್ಪನೆಯು ಲೋಕದ ಕಲ್ಯಾಣಕ್ಕಾಗಿ, ಸರ್ವಜನರ ಹಿತಕ್ಕಾಗಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ವಿವಿಧ ಮತ ಪ್ರಚಾರಕರು ಬೇರೆ ಬೇರೆ ರೀತಿಗಳಲ್ಲಿ ಹೇಳಿದ್ದಾರೆ. ಅವರು ಸೂಚಿಸಿರುವ ವಿಧಾನಗಳು ಭಿನ್ನ ಭಿನ್ನ ವಾಗಿ ಕಂಡು ಬಂದರೂ ಅವರೆಲ್ಲರ ಗುರಿ ಒಂದೇ ಧಾರ್ಮಿಕ ಜೀವನದ ಅವಶ್ಯಕತೆ ಏನೆಂದು ಸಾರುವುದು.ಪ್ರಪಂಚದಲ್ಲಿರುವ ನೂರಾರು ರಾಷ್ಟ್ರಗಳಲ್ಲಿ ಸಾವಿರಾರು ಸಂಸ್ಕೃತಿಗಳಿವೆ ಮತ್ತು ಲೆಕ್ಕವಿಲ್ಲದಷ್ಟು ಧರ್ಮಗಳೂ ಇವೆ. ಅವುಗಳಲ್ಲಿ ಹಿಂದೂ, ಕ್ರಿಶ್ಚಿಯನ್‌, ಮುಸ್ಲಿಂ, ಬೌದ್ಧ, ಯಹೂದಿ, ಜೈನ್‌, ಶಿಂಟೊ ಪ್ರಮುಖ ಧರ್ಮಗಳಾಗಿವೆ. ವಿಶ್ವದಲ್ಲಿಯ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವುದು ಎಲ್ಲ ಧರ್ಮಗಳ ಹೆಗ್ಗುರಿಯಾಗಿದೆ. ನಮ್ಮ ಜಗತ್ತಿನಲ್ಲಿರುವ ಸಾವಿರಾರು ಧರ್ಮದ ಕುರಿತು ಮಾಹಿತಿ ನೀಡುವುದು ಮತ್ತು ಅದು ಸಾರುವ ಸಂದೇಶಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಪ್ರಮುಖ ಉದ್ದೇಶಕ್ಕಾಗಿ ಪ್ರತಿ ವರ್ಷ ಜನವರಿ 17ರಂದು ವಿಶ್ವದಾದ್ಯಂತ ವಿಶ್ವ ಧರ್ಮ ದಿನವನ್ನು ಆಚರಿಸಲಾಗುತ್ತದೆ.ವಿಶ್ವ ಧರ್ಮ ದಿನವನ್ನು ಮೊದಲಿಗೆ ಪೋರ್ಟ್‌ಲ್ಯಾಂಡ್‌ನಲ್ಲಿ ವರ್ಲ್ಡ್‌ ಪೀಸ್‌ ಥ್ರೂ ವರ್ಲ್ಡ್‌ ರಿಲೀಜನ್‌ ಎಂಬ ಶೀರ್ಷಿಕೆಯಲ್ಲಿ ಆಚರಿಸಲಾಯಿತು. 1947ರ ಜನವರಿ 17ರಂದು ಫಿರೂಜ್‌ ಕಜೆಮ್ಜದೆ ಎಂಬವರು ವಿಶ್ವಧರ್ಮದ ಕುರಿತು ಉಪನ್ಯಾಸವೊಂದನ್ನು ನೀಡಿದರು. ಹಾಗಾಗಿ ಪ್ರತಿವರ್ಷ ಜನವರಿ 17ರಂದು ವಿಶ್ವ ಧರ್ಮ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ ವಿವಿಧೆಡೆ ಖ್ಯಾತ ಲೇಖಕರು, ಶೈಕ್ಷ ಣಿಕ ತಜ್ಞರು, ತತ್ವಜ್ಞಾನಿಗಳು ವಿಶ್ವಧರ್ಮದ ಮಹತ್ವದ ಕುರಿತು ಭಾಷಣ ಮಾಡುತ್ತಾರೆ. ಸ್ನೇಹಿತರೆ ಮೊದಲು ಮಾನವರಾಗೋಣ ಮಾನವಕುಲಕ್ಕೆ ಒಳಿತಾಗುವಂತೆ ಜೀವನ ಸಾಧಿಸೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
👑ಶ್ರೀ ಕೃಷ್ಣದೇವರಾಯರ ಜಯಂತಿ🔥 - 2 35 HAPPV WORLD RELIGION DAY 2 35 HAPPV WORLD RELIGION DAY - ShareChat