ShareChat
click to see wallet page
search
#🎥 Motivational ಸ್ಟೇಟಸ್ ಬೆಂಗಳೂರು ಕೇವಲ ಸಂಚಾರ ದಟ್ಟಣೆ ಅಲ್ಲ ಅದು ಒಬ್ಬ ಸಾಮಾನ್ಯ ನಾಗರಿಕನ ಕೋಪ ಹತಾಶೆ ಮತ್ತು ನಿರಾಶೆಯ ಜೀವಂತ ಅನುಭವ ಅಂತರರಾಷ್ಟ್ರೀಯ ಒಂದು ವರದಿ ಪ್ರಕಾರ ಬೆಂಗಳೂರು ನಗರ ಸಂಚಾರ ದಟ್ಟಣೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ ವರದಿ ಎಷ್ಟೇ ಇರಲಿ ಇಂದು ರಸ್ತೆಯ ಮೇಲೆ ವಾಹನಗಳಲ್ಲಿ ಕಾದಾಗ ಇದು ವಾಸ್ತವವೇ ಅನ್ನೋದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಇನ್ನು ಈ ಸ್ಥಿತಿ ಹೀಗೇ ಮುಂದುವರಿದರೆ ಇನ್ನೂ ಒಂದು ವರ್ಷದೊಳಗೆ ಮೊದಲ ಸ್ಥಾನಕ್ಕೂ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ ಇದಕ್ಕೆ ಕಾರಣ ಒಂದಲ್ಲ ಹಲವು ಅದರಲ್ಲಿ ನಿತ್ಯವೂ ಬೆಂಗಳೂರು ಕಡೆಗೆ ತಂಡೋಪತಂಡವಾಗಿ ಹೊರರಾಜ್ಯ ಹೊರದೇಶಗಳಿಂದ ವಲಸೆ ಬರುವ ಜನಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವ ಹೊಸ ವಾಹನಗಳು ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾಣದ ರಸ್ತೆ ವ್ಯವಸ್ಥೆ ವೈಜ್ಞಾನಿಕ ಯೋಜನೆಗಳ ಕೊರತೆ ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಪಕ್ಷದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತದೆ ನಮ್ಮ ರಾಜಕಾರಣಿಗಳು ಅಧಿಕಾರಕ್ಕಾಗಿ ಯಾವ ಮಾರ್ಗ ಬೇಕಾದರೂ ಹಿಡಿಯುತ್ತಾರೆ ಆದರೆ ರಾಜ್ಯದ ಜನಸಾಮಾನ್ಯರ ಹಿತಾಸಕ್ತಿ ಅವರ ಆದ್ಯತೆಯಲ್ಲ ಕುರ್ಚಿಗಾಗಿ ದಿನನಿತ್ಯದ ಹೊಡೆದಾಟ ಆರೋಪ ಪ್ರತ್ಯಾರೋಪ ಉಚಿತ ಯೋಜನೆಗಳ ಹೆಸರಿನಲ್ಲಿ ಹಣ ಹಂಚುವ ಸ್ಪರ್ಧೆ ನೀವು ಉಚಿತ ಕೊಡೋದು ಜನರ ಅಭಿವೃದ್ಧಿಗಾಗಿ ಅಲ್ಲ ಬದಲಾಗಿ ನಿಮ್ಮ ಅಧಿಕಾರ ಕುರ್ಚಿಗೋಸ್ಕರ ಅಷ್ಟೇ ನೀವು ನಿಜಕ್ಕೂ ಉಚಿತ ಕೊಡುವುದಾದರೆ ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ಕೊಡಿ ಅದು ದೇಶದ ಭವಿಷ್ಯಕ್ಕೆ ಹೂಡಿಕೆ ಆದರೆ ರಸ್ತೆ ಸಂಚಾರ ಮೂಲಸೌಕರ್ಯಗಳನ್ನು ನಿರ್ಲಕ್ಷಿಸಿದರೆ ಅದರ ಬೆಲೆ ಜನಸಾಮಾನ್ಯರು ದಿನನಿತ್ಯ ತಮ್ಮ ಸಮಯ ಶಾಂತಿ ಮತ್ತು ಶ್ರಮದಿಂದ ಕಟ್ಟಬೇಕಾಗುತ್ತದೆ ಇಂದು ಸಂಚಾರ ದಟ್ಟಣೆಯಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಾಗ ಉಂಟಾದ ಕೋಪ ತಾಪ ಮತ್ತು ಹತಾಶೆ ನನ್ನನ್ನು ಈ ಬರಹ ಬರೆಯುವಂತೆ ಮಾಡಿದೆ ಇದು ನನ್ನೊಬ್ಬನ ಸಮಸ್ಯೆ ಅಲ್ಲ ಇದು ಪ್ರತಿದಿನ ಬೆಂಗಳೂರಿನ ಲಕ್ಷಾಂತರ ಜನರ ನೋವು ಅಭಿವೃದ್ಧಿ ಭಾಷಣಗಳಲ್ಲಿ ಅಲ್ಲ ರಸ್ತೆಗಳ ಮೇಲೆ ಕಾಣಬೇಕು ಇದೀಗಲಾದರೂ ಆಡಳಿತಗಾರರು ಎಚ್ಚೆತ್ತುಕೊಳ್ಳಲಿ ಇಲ್ಲವಾದರೆ ಈ ನಗರ ಓಡುವುದಿಲ್ಲ…ಎಚ್ಚರಿಕೆ
🎥 Motivational ಸ್ಟೇಟಸ್ - 79 {ಷ ು  మ  79 {ಷ ು  మ - ShareChat