#😏ಇದೇ ಪ್ರಪಂಚ ಕ್ಷಮಿಸಿ! ಈ ಪ್ರಶ್ನೆಗೆ ಉತ್ತರಿಸಲು ನಾನು ಸೂಕ್ತ ವ್ಯಕ್ತಿ ಅಲ್ಲ. ಏಕೆಂದರೆ ನನಗೆ ಹದಿಹರೆಯದಲ್ಲಿ ಪ್ರೀತಿಯ ಸಾಂಗತ್ಯ ದೊರೆಯಲಿಲ್ಲ. ನಾನು ಯಾರೊಬ್ಬರಿಗೂ ಪ್ರೀತಿ ಯ ನಿವೇದನೆ ಅಥವ ಭಿಕ್ಷೆಯನ್ನು ಬೇಡಲಿಲ್ಲ. ನನಗೂ ಯಾರೂ ಯಾಚಿಸಲಿಲ್ಲ.
ಪ್ರತಿ ವಿಷಯದಲ್ಲೂ ಪ್ರೀತಿ….!? ಖಂಡಿತವಾಗಿಯೂ ನಾನು ಯಾವುದೇ ಸಜೀವ, ನಿರ್ಜೀವ ,ಇತ್ಯಾದಿ ಅವಶ್ಯಕತೆಗಿಂತ ಹೆಚ್ಚಿನ ಮಮತೆ ತೋರಿಸಿಲ್ಲ. ಇನ್ನೂ ವೈಫಲ್ಯವನ್ನು ಕಾಣುವುದು ಹೇಗೆ?
ಬಹುಶಃ (ಈ ಉತ್ತರ ಬರೆಯುವಾಗ ಒಳ ಮನಸ್ಸು ಹೇಳಿದ್ದರಿಂದ) ನಾನು ಶ್ರೀಮಂತಿಕೆ ( ಸಜೀವ, ನಿರ್ಜೀವ ಅಲ್ಲದ) ಯನ್ನು ಅಲ್ಪ ಮಟ್ಟಿಗೆ ಮೋಹಿಸುತಿದ್ದೀನಿ ಅನಿಸುತ್ತೆ.
ಉತ್ತರಕ್ಕೆ ಬರೋಣ. 1. ಮಾನವನ ಮನಸ್ಸು ವಯಸ್ಸಿಗೆ ತಕ್ಕಂತೆ ಅಭಿಲಾಷೆಗಳನ್ನು ಉತ್ಪತ್ತಿ ಮಾಡುತ್ತದೆ (ವಿಕೃತವಾಗಿರುತ್ತದೆ) ಎಂಬುದನ್ನು ಅರಿತುಕೊಳ್ಳ ಬೇಕು.
2. ಪ್ರಪಂಚದಲ್ಲಿ ಸುಂದರವಾದ ಸ್ತ್ರೀ/ಪುರುಷ/ಪ್ರಾಣಿ/ಮೂರ್ತಿ/ವಸ್ತು ಗಳು ಹುಟ್ಟಿದ್ದಾವೆ, ಹುಟ್ಟುತ್ತಲೇ ಇರುತ್ತಾವೆ ಎಂಬ ಸತ್ಯ ತಿಳಿದು ಮೋಹದಲ್ಲಿ ಬೀಳಬೇಕು. ಒಂದು ಹೋದರೆ ಇನ್ನೂಂದು ಎಂಬ ಕಲ್ಪನೆ ಅಂತರಂಗದಲ್ಲಿ ಇರಬೇಕು.
3. ಧಾರಾಳವಾಗಿ ಅತ್ತು ಬಿಡಿ ಕಣ್ಣೀರು ಬರುವವರೆಗೆ.(ಕಣ್ಣೀರು ಬರದಿದ್ದರೆ ನಿಮ್ಮ ಅಂತರಂಗದಲ್ಲಿ ಇದೆ ಎಂದರ್ಥ).
4. ಮಲಗಿದಾಗ ಅಥವ ಒಬ್ಬಂಟಿ ಆಗಿದ್ದರೆ ಸುಂದರವಾದ ಸ್ತ್ರೀ/ಪುರುಷ/ಪ್ರಾಣಿ/ಮೂರ್ತಿ/ವಸ್ತು ಗಳು ನಿಮ್ಮ ಜೊತೆಯಲ್ಲಿ ಇರುವಂತೆ ಧನಾತ್ಮಕವಾಗಿ ಕಲ್ಪಿಸಿಕೊಳ್ಳಿ.
5. ಸ್ನೇಹಿತರೊಂದಿಗೆ ಬೆರೆಯಿರಿ. ಬಿಟ್ಟು ಹೋದವರ ಬಗ್ಗೆ ವಿಷಯ ಪ್ರಸ್ತಾಪಿಸದಂತೆ ವಿನಂತಿಸಿ.
6. ಸಾಧ್ಯವಾದರೆ ಊರು ಬಿಡಿ. ಬೇರೆ ಪರಿಸರ ಮನಸ್ಸನ್ನು ಪ್ರಫುಲ್ಲಗೊಳಿಸಬಹುದು.
7. ಪದೇ ಪದೇ ಬಿಟ್ಟವರು ನಿಮ್ಮ ಮುಂದೆ ಬರುವ ಪ್ರಸಂಗವಿದ್ದರೆ ಉತ್ತಮ ಸಮಯಕ್ಕಾಗಿ ಕಾಯಿರಿ. ಅದು 3 ರಿಂದ 6 ತಿಂಗಳು ಮಾತ್ರ! (ಪಾಯಿಂಟ್ 2 ನ್ನು ಮನಸ್ಸಿನಲ್ಲಿಟ್ಟು ಮುಂದುವರೆಯಿರಿ).

