ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಸೆರೆಯಲ್ಲಿರುವ ಗುಬ್ಬಚ್ಚಿ ಸೀನಾ ಬರ್ತ್ ಡೇ ಪಾರ್ಟಿ ವಿಡಿಯೋ ವೈರಲ್ ಬೆಂಗಳೂರು: ಒಂದಲ್ಲ ಒಂದು ಕಾರಣಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುದ್ದಿಯಾಗುತ್ತಿದೆ. ಜೈಲಿನಲ್ಲಿರುವ ಕುಖ್ಯಾತ ಕೈದಿಗಳ ಸುದ್ದಿ ಒಂದು ಕಡೆಯಾದರೆ, ಇಲ್ಲಿನ ಸಿಬ್ಬಂದಿ ವಿರುದ್ಧ ಕೇಳಿ ಬರುವ ಆರೋಪಗಳು ಮತ್ತೊಂದು ಕಡೆ. ಇದರ ಜೊತೆಯಲ್ಲಿ ಕೈದಿಗಳಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕೂಡ ಸಿಗುತ್ತದೆ ಎನ್ನುವ ಆರೋಪಗಳಿವೆ. ಇವುಗಳಿಗೆ ಪೂರಕವೆಂಬಂತೆ ಇದೀಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ರೌಡಿ ಗುಬ್ಬಚ್ಚಿ ಸೀನ ಕೇಕ್ ಕಟ್ ಮಾಡಿ ಹುಟ್ಟುಹಬ್ಬದ ಪಾರ್ಟಿ ಮಾಡಿರುವ ಘಟನೆ ನಡೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಖ್ಯಾತ ರೌಡಿ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬದ ಪಾರ್ಟಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇಬಿನ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಗುಬ್ಬಚ್ಚಿ ಸೀನಾ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿ ಗುಬ್ಬಚ್ಚಿ ಸೀನ ಮೊಬೈಲ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮದ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೈಲು ಅಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ. #GubbacchiSeena #birthday #party #video #goes #viral #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat