ಶಬರಿಮಲೆ ಭಕ್ತರಿಗೆ ಸಿಹಿ ಸುದ್ದಿ: ಈಗ ಎಲ್ಲವೂ ಆನ್‌ಲೈನ್.! ಬುಕ್ಕಿಂಗ್ ಎಂದಿನಿಂದ ತಿಳಿಯಿರಿ…
ಶಬರಿಮಲೆ ಅಯ್ಯಪ್ಪ ದೇವಾಲಯ ಯಾತ್ರೆಗೆ ಸಿದ್ಧತೆ ನಡೆದಿದೆ. ನವೆಂಬರ್ 17 ರಿಂದ ಯಾತ್ರೆ ಆರಂಭವಾಗಲಿದೆ. ಭಕ್ತರಿಗೆ ದರ್ಶನ, ಪೂಜೆ ಮತ್ತು ವಸತಿಗಾಗಿ ಆನ್‌ಲೈನ್ ಬುಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಅಪಘಾತಕ್ಕೀಡಾದ ಭಕ್ತರಿಗೆ 5 ಲಕ್ಷ ರೂ.ಗಳವರೆಗೆ ಅಪಘಾತ ವಿಮೆ ನೀಡಲಾಗುವುದು. ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ.