#🌍ವಿಶ್ವ ಪರಿಸರ ಆರೋಗ್ಯ ದಿನ🏞️ ಸ್ನೇಹಿತರೆ ಇಂದು ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನ ಪರಿಸರ ಮತ್ತು ಮನುಷ್ಯನಿಗೂ ಇರುವ ಸಂಬಂಧವನ್ನು ಎಷ್ಟು ಸ್ವಚ್ಛವಾಗಿರಬೇಕು ಎಂಬುದರ ಬಗ್ಗೆ ನಾವೆಲ್ಲರೂ ಅರಿತುಕೊಳ್ಳೋಣ ಸ್ನೇಹಿತರೆ ಇಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ಆಚರಿಸಲಾಗುತ್ತದೆ. ಈ ದಿನವು ಪರಿಸರ ಮತ್ತು ಮಾನವನ ಆರೋಗ್ಯದ ನಡುವಿನ ನಿಕಟ ಸಂಬಂಧದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಇದು ಶುದ್ಧ ಗಾಳಿ, ಸುರಕ್ಷಿತ ನೀರು, ಸರಿಯಾದ ನೈರ್ಮಲ್ಯ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಪ್ರಕೃತಿ ಮನುಷ್ಯನ ಜೀವನಕ್ಕೆ ಸಾಕಷ್ಟು ಕೊಟ್ಟಿದೆ, ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ನಗರೀಕರಣ, ಕೈಗಾರಿಕರಣದಂತಹ ವೇಗಗತಿಯಲ್ಲಿ ಸಾಗುತ್ತಿರುವ ಪ್ರಗತಿಯಿಂದ ಉಂಟಾದ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯದಂತಹ ಮಾಲಿನ್ಯಗಳು ಪರಿಸರವನ್ನು ಕಲುಷಿತಗೊಳಿಸಿದೆ. ಈ ನಿಟ್ಟಿನಲ್ಲಿ ಮಾಲಿನ್ಯವನ್ನು ತಡೆಗಟ್ಟಿ, ಪರಿಸರ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.ಇಂದಿನ ಮಾನವನ ಸ್ವಾರ್ಥಭರಿತ ಜೀವನಶೈಲಿಯಿಂದಾಗಿ ಪರಿಸರವು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಕಲುಷಿತ ಗಾಳಿ, ನೀರು ಹಾಗೂ ಆಹಾರ ಸೇವನೆಯಿಂದಾಗಿ ಅನೇಕ ರೋಗ ರುಜಿನಗಳು ಕಾಡುತ್ತಿದೆ. ಪರಿಸರವು ಸ್ವಚ್ಛವಾಗಿದ್ದರೆ ಮಾತ್ರ ನಾವುಗಳು ಶುದ್ಧ ಗಾಳಿಯನ್ನು ಉಸಿರಾಡಲು ಸಾಧ್ಯವಾಗುತ್ತದೆ. ಆದರೆ ಈ ಪರಿಸರವು ಹಾಳಾಗಲು ಪ್ರಾರಂಭಿಸಿದಾಗ ನಾವುಗಳು ಆರೋಗ್ಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಎದುರಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಪರಿಸರದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಈ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.ಒಬ್ಬ ವ್ಯಕ್ತಿಯು ತನ್ನದೇ ರೀತಿಯಲ್ಲಿ ಪರಿಸರವನ್ನು ಉಳಿಸಲು ಪ್ರಯತ್ನಿಸಿದರೆ, ಸಂಪನ್ಮೂಲಗಳನ್ನು ಅತಿಯಾಗಿ ಬಳಸದಿದ್ದರೆ ಮತ್ತು ಮಾಲಿನ್ಯವನ್ನು ಉತ್ತೇಜಿಸದಿದ್ದರೆ, ಪರಿಸರವನ್ನು ರಕ್ಷಿಸುವುದು ಸುಲಭ. ಈ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಪರಿಸರ ಹಾನಿಯನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ವಿಶ್ವ ಸಂಸ್ಥೆಯ ಅಂಕಿಅಂಶಗಳನ್ನು ಗಮನಿಸಿದಾಗ ಪ್ರತಿ ವರ್ಷ ಜಾಗತಿಕ ರೋಗಗಳಲ್ಲಿ ಶೇಕಡಾ 25 ರಷ್ಟು ನೇರವಾಗಿ ಪರಿಸರ ಮಾಲಿನ್ಯದಿಂದಲೇ ಉಂಟಾಗುತ್ತದೆ ಎನ್ನಬಹುದು. ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಜಾಗೃತಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಜನರಿಗೆ ಪರಿಸರ ರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತವೆ.ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು. ಬದಲಾಗಿ ನೈಸರ್ಗಿಕ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಬೇಕು.
* ಕಟ್ಟಿಗೆ,ಅನಿಲ ಇಂಧನಗಳನ್ನು ಅಡುಗೆಗೆ ಉರುವಲಾಗಿ ಉಪಯೋಗಿಸುವ ಬದಲು, ಸೌರಶಕ್ತಿ ಬಳಸಬಹುದು.
* ಇಂಧನಗಳನ್ನು ಮಿತವಾಗಿ ಅಗತ್ಯ ಇರುವಷ್ಟೇ ಬಳಸಬೇಕು. ವಾಹನಗಳು, ದೀಪಗಳು, ಅಗತ್ಯವಿಲ್ಲದಿರುವಾಗ ನಂದಿಸಬೇಕು.
* ಉಳಿದಿರುವ ಅರಣ್ಯವನ್ನು ಸಂರಕ್ಷಿಸುವ ಹೊಣೆ ನಮ್ಮದೇ ಆಗಿದೆ. ಮನೆ ಮನೆಗೊಂದು ಗಿಡ ನೆಟ್ಟು ವೃಕ್ಷ ಸಂಪತ್ತನ್ನು ಹೆಚ್ಚಿಸಬೇಕು. ಇದರಿಂದ ಬೇಸಿಗೆ ದಿನಗಳಲ್ಲಿ ತಂಪಾದ ವಾತಾವರಣವನ್ನು ನಿರ್ಮಾಣ ಮಾಡಿದ್ದಂತೆ ಆಗುತ್ತದೆ.
* ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಪರಿಸರವು ಕಲುಷಿತವಾಗುತ್ತಿದೆ. ಹೀಗಾಗಿ ಕೈಗಾರಿಕೆಗಳಿಂದ ಹೊರಬರುವ ಕಲುಷಿತ ರಾಸಾಯನಿಕ ಮತ್ತು ವಿಷಯುಕ್ತ ನೀರು ಮತ್ತು ಅನಿಲಗಳನ್ನು ಶುದ್ದೀಕರಿಸಿಯೇ ಹೊರಬಿಡಬೇಕು.ವಾಹನಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ವಾಹನದ ಯಂತ್ರಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಇಂಧನದ ಉಳಿತಾಯಕ್ಕಾಗಿ ಅವು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.
* ಆಹಾರ ತ್ಯಾಜ್ಯಗಳು, ಮತ್ತಿತರೆ ಕೊಳೆಯುವ ವಸ್ತುಗಳನ್ನು ನದಿ, ಕೆರೆ, ಸರೋವರಗಳಿಗೆ ಬಿಡುವ ಬದಲು ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸುವುದು ಉತ್ತಮ.
* ಹೆಚ್ಚಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸಬೇಕು. ಹತ್ತಿರದ ಸ್ಥಳಗಳಿಗೆ ನೆಡೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದಲೂ ಹಾಗೂ ಪರಿಸರಕ್ಕೂ ಒಳ್ಳೆಯದು
ಸ್ನೇಹಿತರೆ ರೈತರೇ ನಾವೆಲ್ಲರೂ ಪಣತೊಟ್ಟರೆ ಜಗತ್ತಿನ ಆರೋಗ್ಯ ಜಗತ್ತಿನೊಳಗಿರುವ ಜೀವರಾಶಿಗಳ ಆರೋಗ್ಯ ಹಸನ್ಮುಖಿಯಾಗಿರುತ್ತದೆ ಸದಾ ಏನು ಮಾಡಬೇಕು ಎಂಬುದರ ಬಗ್ಗೆ ಆಗಲೇ ತಿಳಿಸಿದ್ದೇನೆ ಸ್ನೇಹಿತರೆ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ನಿಮ್ಮ ಕೈ ಮೇಲಿರಲಿ ಎಂಬುವುದು ನನ್ನ ಪ್ರಾರ್ಥನೆ ನಿಮ್ಮೆಲ್ಲರಲ್ಲಿ ನಾಡಿನ ಸಮಸ್ತ ಜನತೆಗೆ ಹಾಗೂ ನಾಡಿನ ರೈತ ಬಾಂಧವರಿಗೆ ಹಾಗೂ ನಾಡಿನ ಯುವ ಶಕ್ತಿಗೆ ನಾನು ನಮ್ರತೆಯಿಂದ ನಿಮ್ಮೆಲ್ಲರಲ್ಲಿ ಬೇಡಿಕೊಳ್ಳುವುದೇನೆಂದರೆ ನಮ್ಮ ನಾಡಿನ ಹಾಗೂ ನಮ್ಮ ದೇಶದ ಪರಿಸರವನ್ನು ಸ್ವಚ್ಛವಾಗಿ ಇಡೋಣ ಹಾಗೂ ನಾವು ಹೊಲಸೆ ಹೋದಾಗ ಅಥವಾ ಪಿಕ್ನಿಕ್ ಹೋದಾಗ ಕಾಡಿನ ಸೌಂದರ್ಯದ ನಡುವೆ ಒಂದೆರಡು ದಿನ ಇದ್ದಾಗ ಆ ಸೌಂದರ್ಯವನ್ನು ಸವಿದು ಆ ಸುಂದರ ಮನಸ್ಸಿನಿಂದ ಪರಿಸರದೊಂದಿಗೆ ಯಾವುದೇ ಪ್ರೀತಿಯ ಅಚಾತುರ್ಯಗಳನ್ನು ಮಾಡದೆ ಪ್ಲಾಸ್ಟಿಕ್ ಬಳಸದೆ ನಮ್ಮ ಪರಿಸರವನ್ನು ಸುಂದರವಾಗಿ ಕಾಣುತ್ತಾ, ನಾಡಿನ ಆರೋಗ್ಯವನ್ನು ಹಾಗೂ ಜಗತ್ತಿನ ಆರೋಗ್ಯವನ್ನು ಕಾಪಾಡುವ ಈ ವಿಶ್ವ ಪರಿಸರ ಆರೋಗ್ಯ ದಿನದಂದು ಈ ದಿನದ ವಿಶೇಷತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ದಿನವನ್ನು ನಾವೆಲ್ಲರೂ ನಮ್ಮ ಪರಿಸರ ಸಂಪತ್ತನ್ನು ಸಂರಕ್ಷಿಸೋಣ ಎನ್ನುತ್ತಾ ವಿಶ್ವ ಪರಿಸರ ಆರೋಗ್ಯ ದಿನದ ಶುಭಾಶಯಗಳು ತಿಳಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


