ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಧ್ರುವಂತ್ ನಿರ್ಧಾರ: ಕ್ಯಾಮೆರಾ ಎದುರು ಮನವಿ - AIN Kannada
ಬಿಗ್ ಬಾಸ್ ಮನೆಯಲ್ಲಿ ತನ್ನ ಅಸ್ಥಿರ ವರ್ತನೆ ಮತ್ತು ಬದಲಾಗುವ ನಿಲುವಿನಿಂದ ಧ್ರುವಂತ್ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದಾರೆ. ಯಾರು, ಯಾವ ಕ್ಷಣದಲ್ಲಿ, ಅವರ ಜೊತೆ ಹೇಗೆ ವರ್ತಿಸುವರು ಎಂಬುದು ಊಹಿಸಲಾಗದ ಕಾರಣ ಇತರ ಸ್ಪರ್ಧಿಗಳು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಒಮ್ಮೆ ಸ್ನೇಹಪೂರ್ಣವಾಗಿ ಮಾತನಾಡುವ ಅವರು, ನಂತರ ಅದೇ ವ್ಯಕ್ತಿಗೆ ವಿರುದ್ಧ ಪಿತೂರಿ ಮಾಡುತ್ತಾರೆ ಎಂದು ಮನೆಯೊಳಗಿನ ಸ್ಪರ್ಧಿಗಳು ಸುದೀಪ್ ಎದುರೇ ದೂರು ಸಲ್ಲಿಸಿದ್ದರು. ಇದೇ ಹಿನ್ನೆಲೆಯಲ್ಲಿ ಧ್ರುವಂತ್ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.