"ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗ ಪ್ರಳಯಂಗಳ ಬಲ್ಲವರಾರಯ್ಯಾ??? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ??? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ
ಭೇದಿಸಿ ನೋಡಿ ಅರಿವರಿನ್ನಾರಯ್ಯಾ??? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರ ಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.. ✍️ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ವಚನಗಳು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ


