ಮುಗೀತು WPL ರಿಟೆನ್ಶನ್ ನ ಟೆನ್ಶನ್ ; ಘಟಾನುಘಟಿ ಆಟಗಾರ್ತಿಯರೇ ರಿಲೀಸ್! ಇಲ್ಲಿದೆ ಸಮಗ್ರ ಚಿತ್ರಣ
WPL 2026 Retention List- ಅಂತೂ ಮಹಿಳಾ ಪ್ರೀಮಿಯರ್ ಲೀಗ್ ನ ರಿಟೆನ್ಶನ್ ಬಗೆಗಿದ್ದ ಕುತೂಹಲ ಇದೀಗ ತಣಿದು ಎಲ್ಲರ ಚಿತ್ತ ನವೆಂಬರ್ 27ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯ ಕಡೆಗೆ ನೆಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಘಟಾನುಘಟಿ ಆಟಗಾರ್ತಿಯರನ್ನೇ ಬಿಡುಗಡೆ ಮಾಡಿರುವುದರಿಂದ ಹರಾಜು ಪ್ರಕ್ರಿಯೆ ಬಹಳ ಪೈಪೋಟಿಯಿಂದ ಕೂಡಿರಬಹುದು ಎಂದು ಹೇಳಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಗೆ ಸಹ ಜೇಬಿನಲ್ಲಿರುವ 6.15 ಕೋಟಿ ರುಪಾಯಿಯಲ್ಲಿ 14 ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಭಾರೀ ಕುತೂಹಲವಿದೆ.