
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,_
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ! ಇದೇ ನಮ್ಮ ಕೂಡಲ ಸಂಗಮದೇವ ನೊಲಿಸುವ ಪರಿ..! ✍🏻 ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ
"ಕಾಣಬಾರದ ಘನವ ಕರಸ್ಥಲದಲ್ಲಿ ತೋರಿದ, ಹೇಳಬಾರದ ಘನವ ಮನಸ್ಥಲದಲ್ಲಿ ತೋರಿದ, ಉಪಮಿಸಬಾರದ ಘನವ ನಿಮ್ಮ ತೃಪ್ತಿಯ ಮುಖದಲ್ಲಿ ತೋರಿದ. ಇಂತೀ ತ್ರಿವಿಧವು ಏಕಾರ್ಥವಾಗಿಹ ಭೇದವ ಚೆನ್ನಬಸವಣ್ಣನು ತೋರಿದನಾಗಿ ಆನು ಬದುಕಿದೆನು ಕಾಣಾ ಕೂಡಲಸಂಗಮದೇವಾ.. ✍️ ಕ್ರಾಂತಿಯೋಗಿ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
"ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗಿರದನ್ನಕ್ಕ??? ಮಣಿಯ ಕಟ್ಟಿ ಏವೆನಯ್ಯಾ. ಮನ ಮುಟ್ಟದನ್ನಕ್ಕ??? ನೂರನೋದಿ ಏವೆನಯ್ಯಾ, ನಮ್ಮ ಕೂಡಲಸಂಗಮ ದೇವರ ಮನಮುಟ್ಟಿ ನೆನೆಯದನ್ನಕ್ಕ??? ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯನಮಃ.. “ಮನಕ್ಕೆ ಬಂದಂತೆ ಹಲವು ಪರಿಯ ವೇಷವತೊಟ್ಟ ಹರಿದಾಡುವ ಜಾತಿಕಾರರ ಈಶ್ವರನು ಮೆಚ್ಚನು. ಸದಾಶಿವನು ಸೈರಣೆಯ ಮಾಡನು. ಅಮುಗೇಶ್ವರ ಲಿಂಗವನರಿಯದ ಅನಾಚಾರಿಗಳ ಕಂಡಡೆ ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು”.. ✍️ ಅಮುಗೆ ರಾಯಮ್ಮನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಶ್ರೀ ಗುರು ಬಸವ ಲಿಂಗಾಯ ನಮಃ.. "ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ??? ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ??? ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ??? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ??? ಕರಸ್ಥಲದೊಳಗೆ ಲಿಂಗವಿರ್ದ ಬಳಿಕ, ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ??? ✍🏻 ಶೂನ್ಯ ಪೀಠ ಧೀಶ ಅಲ್ಲಮಪ್ರಭುದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯನಮಃ.. "ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ??? ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ??? ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವ ಹೊದ್ದುವ ಭಾವ.. ✍️ ಆಯ್ದಕ್ಕಿ ಲಕ್ಕಮ್ಮನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ವಿಶ್ವಗುರು ಬಸವಣ್ಣನವರ ವಚನ. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಿಶ್ವಗುರು ಬಸವಣ್ಣನವರ ವಚನ. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
"ಕರಗಿಸಿ ಎನ್ನ ಮನದ ಕಾಕಳಿಯ ಕಳೆಯಯ್ಯಾ, ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ, ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು ಕೂಡಲಸಂಗಮದೇವಾ.. ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಅಡಿಗಡಿಗೆ ಎನ್ನ ಮನವ ಜಡಿದು ನೋಡಿದರಯ್ಯಾ, ಬಡವನೆಂದೆನ್ನ ಕಾಡದಿರಯ್ಯಾ, ಎನಗೆ ಒಡೆಯರುಂಟು ನಮ್ಮ ಕೂಡಲಸಂಗನ ಶರಣರು.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು