Ram Ajekar
ShareChat
click to see wallet page
@ajekarram
ajekarram
Ram Ajekar
@ajekarram
journalist
ಹಳ್ಳಿಬದುಕು : ಕೋಳಿ ಕಳ್ಳ ನಾಯಿ ತುಳುನಾಡಿನಲ್ಲಿ ಪ್ರತಿಯೊಂದಕ್ಕೂ ಒಂದು ಹಿನ್ನೆಲೆ, ಒಂದು ಪರಂಪರೆ ಇದೆ. ಕೋಳಿ ಎಂಬುದಕ್ಕೆ ನಮ್ಮ ಊರಿನ ಜನರಿಗೆ ವಿಶೇಷ ಪ್ರೀತಿನೀರ್ದೋಸೆ ಜೊತೆ ಕೋಳಿಸುಕ್ಕ ಎಂದರೆ ಬಾಯಲ್ಲಿ ನೀರೂರದವರು ವಿರಳ. ದೈವಗಳ ನೇಮ, ಹರಕೆ, ಸಾಂಪ್ರದಾಯಿಕ ಆಚರಣೆ… ಎಲ್ಲದಲ್ಲಿಯೂ ಕೋಳಿಯ ಸ್ಥಾನ ವಿಶಿಷ್ಟ. ಹಳ್ಳಿಗಳಲ್ಲಿ ಹಲವರು ತಮ್ಮ ಮನೆಬಾಗಿಲಲ್ಲೇ ಸಣ್ಣ ಗುಡಿಸಲು ಕಟ್ಟಿಕೊಂಡು ಕೋಳಿಗಳನ್ನು ಸಾಕುವುದು ಸಾಮಾನ್ಯ. ನೇಮೊತ್ಸವ, ಕೊಳಿಯಂಕಗಳುಈ ಎಲ್ಲಾ ಸಂದರ್ಭದಲ್ಲಿ ಬೇಡಿಕೆ ಹೆಚ್ಚು. ಒಮ್ಮೆ ಕಾಲದಲ್ಲಿ ಮನೆಯಲ್ಲೇ ಬೆಳೆದ ಕೋಳಿಗಳು “ಒಳ್ಳೆಯ ರೇಟಿಗೆ ಹೋಗುತ್ತವೆ” ಎಂದು ರೈತರು ನಂಬುತ್ತಿದ್ದರು. ಕೋಳಿ ಸಾಕಿದ್ದ ಯಜಮಾನ ತನ್ನ ಕೊಳಿಗಳನ್ನು ಕಟ್ಟಿಯೊ ಅಥವಾ ಗೂಡಿನಲ್ಳಿಟ್ಟು ಸಾಕುವ ವ್ಯವಧಾನ ಅವನಲ್ಲೂ ಇಲ್ಲಾ ಅದೇ ಹಳ್ಳಿಯಲ್ಲಿ ಪಕ್ಕದ ಮನೆಯ ರೈತನೊಬ್ಬನ ಬಳಿ ನಿಷ್ಟಾವಂತ ನಾಯಿ ಇತ್ತು. ಅದು ಮನೆಯವರ ಮಾತಿಗೆ ನಿಷ್ಟೆ ತೋರುತಿತ್ತು, ಗದ್ದೆಯ ಕಾಯುವ ಕೆಲಸದಲ್ಲಿ ಚಾಕಚಕ್ಯ. ಯಾರೆ ಬಂದರೂ, ಯಾರೆ ದಾಟಿದರೂ ತನ್ನ ಸೀಮಾ ವ್ಯಾಪ್ತಿಯವರೆಗೆ ಹಿಂಬಾಲಿಸಿ ಬೊಗಳುವುದು ಅದರ ಸ್ವಭಾವ. ತನ್ನ ಮನೆಯನ್ನೆ ಕಾಪಾಡಬೇಕು ಎಂಬ ಅರಿವು ಅದಕ್ಕಿತ್ತು. ಒಮ್ಮೆ ರೈತನ ತರಕಾರಿ ಗದ್ದೆಗೆ ಪಕ್ಕದ ಮನೆಯ ಕೋಳಿಗಳ ಹಿಂಡು ನುಗ್ಗಿತು. ತರಕಾರಿ ಗಿಡ ಬಳ್ಳಿಗಳ ಬುಡದ ಗೊಬ್ಬರದ ಬಳಿ ಕಾಲಿನಿಂದ ಅಗೆದು ಎರೆಹುಳ ಹುಡುಕುತ್ತಿದ್ದವು. ಇದನ್ನು ನೋಡಿದ ನಾಯಿ, ಅದನ್ನು ‘ಬೇರೆ ಮನೆಯ ಕೋಳಿ’ ಎನ್ನುವ ಭೇದವಿಲ್ಲದೆ, ತನ್ನ ಜವಾಬ್ದಾರಿಯಂತೆ ಕಂಡು ಒಂದು ಕೋಳಿಯನ್ನು ಕೊಂದು ಹಾಕಿತು. ಹೀಗೆ ದಿನಗಳು ಕಳೆದಂತೆ, ನಾಯಿಯ ದಾಳಿ ಹೆಚ್ಚಿತು. ಕೋಳಿ ಸಾಕುತ್ತಿದ್ದ ಪಕ್ಕದ ಮನೆಯ ಯಜಮಾನನಿಗೆ ನೋವಾಯಿತು. ಕೋಳಿ ಬೆಳೆದು, ಮೊಟ್ಟೆ ಇಟ್ಟು, ಮನೆಯವರೊಂದಿಗೆ ಬೆರೆತು, “ಕುಟುಂಬದ ಹಿತ್ತಲಿನ ಮತ್ತೊಬ್ಬ ಸದಸ್ಯ” ಆಗುವಷ್ಟರಲ್ಲೇ ಅದು ಬಲಿಯಾಗುವುದೆಂದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ? ಆದರೂ ಅವರು ಇಬ್ಬರೂ ಒಳ್ಳೆಯ ಸ್ನೇಹಿತರು. ನೋವು ಇದ್ದರೂ, ಪರಸ್ಪರದ ಮನಸ್ಸು ನೋಯಬಾರದೆಂದು ಮೌನವಾಗಿದ್ದರು. ಆದರೆ ನೋವಿನ ಮೇಲೆ ನೋವು ಕೋಳಿಗಳು ಪುನಃ ಪುನಃ ಬಲಿಯಾಗುತ್ತಿದ್ದಂತೆ, ಆತನ ಮನಸ್ಸೇ ಮುರಿದು, ಕೊನೆಗೆ ಕೋಳಿ ಸಾಕುವುದನ್ನೇ ಬಿಟ್ಟುಬಿಟ್ಟ. ಕಾಲ ಬದಲಾಯಿತು. ನೋವು ನಲಿವು ಮಸುಕಾಯಿತು. ಆದರೆ ಒಮ್ಮೆ ಆ ನಾಯಿ ಊರಿನ ಕೋಳಿ ಪಾರ್ಮ್‌ಗೂ ನುಗ್ಗಿ ಕೋಳಿಗಳನ್ನು ಬೇಟೆಯಾಡತೊಡಗಿತು. ಮನೆಯಲ್ಲೂ ಗಿಡಗಳ ಬೇರು ಕಿತ್ತು ತಿನ್ನುವುದರ ಮೇಲೆ ದಾಳಿ ಇತ್ತು. ಕೋಳಿಗಳು ಕಾಟ ಕೊಡುತ್ತಿವೆ ಎನ್ನುವುದು ಅದರ ಕಣ್ಣುಗಳಲ್ಲಿ ‘ಕಾರಣ’, ಆದರೆ ಮನುಷ್ಯರ ಮನಸ್ಸಿನಲ್ಲಿ ಅದು ‘ಕೋಳಿ ಕಳ್ಳ ನಾಯಿ’. ಹೀಗೆ ಊರಿನಲ್ಲೆಲ್ಲಾ ಆ ನಾಯಿಗೆ ಕೆಟ್ಟ ಹೆಸರು ಬಂತು. ಕೊನೆಗೆ ಜನರು ಸೇರಿ, ದೊಣ್ಣೆ ಹಿಡಿದು ಕಾದು ಕೂತು, ಮನೆಗೆ ಆಹಾರಕ್ಕಾಗಿ ಬಂದಾಗ ಹಿಡಿದು ಕೊಂದುಹಾಕಿದರು. ಆ ನಾಯಿ ಮಾನವನ ಸಂಗದಿಂದಲೇ ಬೇಟೆಯ ಕೌಶಲ್ಯ ಕಲಿತುಕೊಂಡಿತ್ತು. ಇಲ್ಲಿ ಕೋಳಿಗಳು ಕರಗಿದವು… ಗಿಡಗಳು ಹಾಳಾದವು… ಕೊನೆಗೆ ನಾಯಿ ಜೀವವನ್ನೇ ಕಳೆದುಕೊಂಡಿತು. ನಾಯಿಯಲ್ಲಿ ನಿಷ್ಠೆ ಇತ್ತು, ತನ್ನ ಮನೆಯನ್ನೇ ಕಾಪಾಡಬೇಕೆಂಬ ಸ್ವಭಾವ ಮಾತ್ರ. ಬುದ್ದಿ ಕಲಿಸಬೇಕಾಗಿರುವುದು ಮನುಷ್ಯನೇ. ಯಾಕಂದರೆ ಮನುಷ್ಯನು ತಪ್ಪು ಮಾಡಿದಾಗ ಊರಿಡೀ ಹೆಸರು ಹಾಳಾಗುತ್ತದೆ; ಕೊನೆಗೂ ಜೈಲು ಗತಿಯವರೆಗೆ ತಲುಪುತ್ತಾನೆ. ಆದರೆ ಪ್ರಾಣಿಗೆ ಅದೆಲ್ಲ ಅರಿವಿಲ್ಲ—ಅದು ನೋಡಿದಂತೆ, ಕಲಿತಂತೆ, ಬದುಕಿನ ಹಾದಿಯಲ್ಲಿ ನಡೆದಂತೆಯೇ ನಡೆದುಕೊಳ್ಳುತ್ತದೆ. ರಾಂ‌ ಅಜೆಕಾರು ಕಾರ್ಕಳ http://ramajekar.travel.blog/2025/12/02/dailystories-10/ #ದಿನಕ್ಕೊಂದು ನುಡಿಮುತ್ತು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 http://ramajekar.travel.blog/2025/12/02/dailystories-10/
ದಿನಕ್ಕೊಂದು ನುಡಿಮುತ್ತು - Ram Ajekar official Ram Ajekar official - ShareChat
Read my thoughts on YourQuote app at https://www.yourquote.in/ram-ajekar-d2xl/quotes/duraase-dveess-asuuye-bittttu-priitiy-hncu-nemmdiyind-bduku-cxq8lm #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ನುಡಿಮುತ್ತು
ದಿನಕ್ಕೊಂದು ಕವನ. 🌻🎭 - Your uotein దురాని; ದ್ವೇಷ; ಬಿಟ್ಚು ಅಸೂಯೆ ಪ್ರೀತಿಯ ಹಂಚು,  ನೆಮ್ಮಂ ದಿಯಿಂದ బదురు Ram Ajekar Your uotein దురాని; ದ್ವೇಷ; ಬಿಟ್ಚು ಅಸೂಯೆ ಪ್ರೀತಿಯ ಹಂಚು,  ನೆಮ್ಮಂ ದಿಯಿಂದ బదురు Ram Ajekar - ShareChat
ಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆಹಸುವಿನ ಕುತ್ತಿಗೆಗೆ ಕಟ್ಟುವ ಗಂಟೆ ಒಂದು ಕಾಲದಲ್ಲಿ ತುಳುನಾಡು ಮಲೆನಾಡಿನಲ್ಲೆಲ್ಲಾ ಹಸುಗಳ ಹಿಂಡೆಗಳು ಸಾಮಾನ್ಯವಾಗಿ ಕಾಣಿಸುತಿದ್ದವು. ಮಲೆನಾಡಿನ ಗಿಡ್ಡ ಹಸುಗಳು ರಸ್ತೆಗಳ ಬದಿಯಲ್ಲಿ ಮೇಯುತ್ತಾ, ತಮ್ಮ ಸದ್ದಿನಿಂದ ಊರನ್ನು ಗಲಿಬಿಲಿಗೊಳಿಸುತ್ತಿದ್ದ ಆ ದಿನಗಳು ಇನ್ನೂ ಮನಸ್ಸಿನಲ್ಲಿ ಹಸಿದಾಗಿವೆ. ತುಂಬಾ ತೊಂದರೆ ಕೊಡುವ, ಅಡ್ಡದಾರಿಯಲ್ಲಿ ಹೊಕ್ಕು ಗದ್ದೆ ಹಾಳುಮಾಡುವ ಹಸುಗಳಿಗೆ ಹಳ್ಳಿಯ ರೈತರು ಕುತ್ತಿಗೆಯಲ್ಲಿ ಮರದ ತುಂಡು ಕಟ್ಟುತ್ತಿದ್ದವರು. ಈ ಮರದ ತುಂಡಿನಿಂದ ಹಸುಗಳು ಗದ್ದೆಗೆ ನುಗ್ಗುವುದು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ರಸ್ತೆ ಬದಿಯಲ್ಲೇ ಹುಲ್ಲು ಮೇಯುತ್ತಾ ಹೊಟ್ಟೆ ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದವು. ಏನೇ ಬಳಲಲಿ ಹಸುವೂ ತನ್ನ ಹೊಟ್ಟೆಯ ಹಸಿವಿಗೋಸ್ಕರ ಸಾಗುವುದು ಸಹಜ. ಕೆಲವರು ಹಸುಗಳಿಗೆ ಕಂಚಿನ ಅಥವಾ ಕಬ್ಬಿಣದ ಘಂಟಾಮಣಿ ಕಟ್ಟುತ್ತಿದ್ದರು. ಕೆಲ ಹಳ್ಳಿಗರು ಬಿದಿರಿನಿಂದ ಮಾಡಿದ ಮೃದು ಧ್ವನಿಯ ಗಂಟೆಗಳನ್ನು ಬಳುಕುತ್ತಿದ್ದರು , ಹಸು ಇರುವಿಕೆಯ ಗುರುತು “ನಾನು ಇಲ್ಲಿದ್ದೇನೆ” ಎಂಬುದನ್ನು ರೈತನಿಗೆ ಸದ್ದಿನ‌ಮೂಲಕ ತಿಳಿಸುವ ಕೆಲಸ ಮಾಡುತಿತ್ತು. ಸಾಧಾರಣ ಹುಲ್ಲಿನಿಂದ ಹೊಟ್ಟೆ ತುಂಬದ ಕೆಲ ಜೋರು ಹಸುಗಳು ನಾಟಿದ ಗದ್ದೆಗಳಿಗೆ ಹೊಕ್ಕು ಭತ್ತದ ಚಿಗುರುಗಳನ್ನು ಸಾಕಷ್ಟು ತಿಂದುಬಿಡುತ್ತಿದ್ದವು. ಇದರಿಂದ ರೈತರು ಬೇಸರಗೊಂಡು ಮರದ ತುಂಡುಗಳನ್ನು “ಸ್ಪೀಡ್ ಗವರ್ನರ್” ಆಗಿ ಕುತ್ತಿಗೆಯಲ್ಲಿ ಕಟ್ಟುತ್ತಿದ್ದರು. ಹೀಗೆ ತೊಂದರೆ ಕೊಡುತ್ತಿದ್ದ ಹಸುಗಳಿಂದ ಕೆಲವು ಮನೆಗಳ ಯಜಮಾನರು ಸಹ ಬೇಸತ್ತು, ಆಕ್ರೋಶದಿಂದ ರೈತರ ನಡುವೆ ಗಲಾಟೆಗಳೂ ನಡೆಯುತಿದ್ದವು. ಒಮ್ಮೆ ಊರಿನ ಭೋಜಣ್ಣನ ಹಸು ಕೂಡಾ ಹೀಗೆಯೇ ಬೇರೆ ರೈತರ ಗದ್ದೆಗಳಿಗೆ ಹೋಗಿ ಬೆಳೆ ಹಾನಿ ಮಾಡುತ್ತಿತ್ತು. ಸಿಟ್ಟುಮಾಡಿ ಮೊದಲು ಗಂಟೆ ಕಟ್ಟಿ ನೋಡಿದರು . ಕೇಳದೇ ಹೋಗಿತ್ತು. ಭೋಜಣ್ಣನ ಹಾಗು ಪಕ್ಕದ ಮನೆಯ ರೈತನ ನಡುವೆ ಜಗಳವು ನಡೆದಿತ್ತು. ಬಳಿಕ ಕುತ್ತಿಗೆಗೆ ದೊಡ್ಡ ಮರದ ತುಂಡು ಕಟ್ಟಿಸಿ ಮೇಯಲು ಬಿಟ್ಟರು. ಸಂಜೆಯಾದರೂ ಹಸು ಮನೆಗೆ ಬರಲಿಲ್ಲ. ಚಿಂತೆಯಲ್ಲಿ ಮುಳುಗಿದ ಭೋಜಣ್ಣ ಸುತ್ತಲಿನಲ್ಲೇ ಹುಡುಕಲು ಶುರುಮಾಡಿದರು. ಇತ್ತೀಚೆಗೆ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಕೆಲಸ ನಡೆಯುತ್ತಿತ್ತು ಎನ್ನುವದು ನೆನಪಾಯಿತು. ಬೇರೆಯವರ ಗದ್ದೆಗಳಿಗೆ ಹೋಗುವ ಮಾರ್ಗವೂ ಅಲ್ಲಿಯೇ ಆಗಿತ್ತು. ಪೈಪ್ ಹಾಕುತ್ತಿದ್ದ ಹೊರರಾಜ್ಯದ ಭೈಯ್ಯನವರು ತಮಗೆ ಕೆಲಸ ಎಂದರೆ ಅಗೆದು ಹೋದರೆ ಸಾಕು, ಮಣ್ಣಿನಿಂದ ಮುಚ್ಚುವುದು, ಸುರಕ್ಷತೆ ಇತ್ಯಾದಿ ಅವರ ಗೊಣಗಾಟದಲ್ಲಿಲ್ಲ. ಸರಕಾರದ ಕೆಲಸಗಳೆ ಹಾಗೇ… ಅವರ ನಿರ್ಲಕ್ಷ್ಯದ ನಡುವೆ, ಭೋಜಣ್ಣನ ಹಸು ಕುತ್ತಿಗೆಯ ಮರದ ತುಂಡಿನಿಂದ ಹೊಂಡಕ್ಕೆ ಜಾರಿ ಸಿಲುಕಿತೋ? ಹೊಸ ಮಣ್ಣಿನ ವಾಸನೆಗೆ ಓಡಿತ್ತೋ? ಹಾದಿ ದಾಟಲು ಯತ್ನಿಸಿತ್ತೋ? ಯಾರು ಹೇಳಲು ಸಾಧ್ಯ? ಆದರೆ , ಹಸು ಹೊಂಡದೊಳಗೆ ಸಿಲುಕಿ ಉಸಿರುಗಟ್ಟಿಕೊಂಡಿತ್ತು. ರಾತ್ರಿ ತುಂಬಾ ಹುಡುಕಿ ಹೋದ ಭೋಜಣ್ಣಕ್ಕೆ, ಕೊನೆಗೆ ಹಸುವಿನ ಮೃತದೇಹ ಪೈಪ್‌ಲೈನ್ ಹೊಂಡದಲ್ಲಿ ಸಿಕ್ಕಿತು. ಆ ದಿನದ ನಂತರ ಉಳಿದ ಹಸುಗಳನ್ನು ಮನೆಯಲ್ಲೇ ಅಥವಾ ಹಗ್ಗದಲ್ಲಿ ಕಟ್ಟಿಕೊಂಡು ನೋಡಿಕೊಳ್ಳುವ ನಿರ್ಬಂಧದ ಬದುಕು ಶುರುವಾಯಿತು. ಹಸುಗಳು ತಪ್ಪೇನೂ ಮಾಡ್ತಿರಲಿಲ್ಲ ಹೊಟ್ಟೆಯ ಹಸಿವನ್ನು ನೀಗಿಸಲು ಹೋಗುತ್ತಿದ್ದವು. ಆದರೆ ಸರಕಾರದ ಕೆಲಸಗಳಲ್ಲಿ ಇರುವ ನಿರ್ಲಕ್ಷ್ಯ, ಕಾರ್ಮಿಕರ ಅರ್ದಂಬರ್ದ ಕೆಲಸಗಳು… ಇದರ ಮಧ್ಯೆ ಬದುಕು ಸಾಗಿಸಲು ಹೋರಾಡುವ ರೈತರ ಕಥೆಗಳು ಅನೇಕ. ರಾಂ ಅಜೆಕಾರು ಕಾರ್ಕಳ #ramajekar #dailystories #trendingstories #udupikarkala #karkala #udupimangalore #udupi #mangalore #cow http://ramajekar.travel.blog/2025/11/16/daily-stories-26/ #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು
ದಿನಕ್ಕೊಂದು ಕತೆಗಳು - 0व7 DICIO 0व7 DICIO - ShareChat
#🙏ಸಂಕಷ್ಟಿ ಚತುರ್ಥಿ 🕉️ #🙏ಸಂಕಷ್ಟಿ ಚತುರ್ಥಿ 🕉️ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು
ದಿನಕ್ಕೊಂದು ಕವನ. 🌻🎭 - @ Ram Aekaroricial @ Ram Aekaroricial - ShareChat
#🌺ಕಾರ್ತಿಕ ಪೂರ್ಣಿಮಾ 🙏 ಕೆಂಪಿಯ ಮಮತೆಗೆ ಸಮನಾರು ಉಂಟೆ ಅಮ್ಮನ ಕೈಯಲ್ಲಿ ಮುದ್ದಾಗಿ ಮಗುವಾಗುವ ಆಸೆ ಎಲ್ಲ ಜೀವಿಗಳಲ್ಲೂ ಇರುತ್ತದೆ. ಹಟ್ಟಿಯ ಹಸು ಕೆಂಪಿಗೆ ಆ ದಿನ ಆ ಕನಸು ನಿಜವಾಯಿತು. ಎರಡು ದಿನಗಳ ಹಿಂದೆ ಕರು ಹಾಕಿದ್ದ ಕೆಂಪಿ ಆಕೆ, ಕಿವಿ ನಿಮಿರಿಸಿಕೊಂಡು “ನಾನು ಅಮ್ಮನಾದೆ” ಎಂಬ ಆನಂದದಲ್ಲಿ ಕರುವನ್ನು ಹತ್ತಿರ ಸೆಳೆದು ಹಾಲುಣಿಸುತ್ತಿದ್ದಳು. ಕರು ಹಾಲು ಕುಡಿಯುತ್ತಾ ಛಂಗನೆ ಹಾರಿ ನಲಿಯುತ್ತಿದ್ದರೆ, ಕೆಂಪಿಯ ಕಣ್ಣು ಕರುಮೇಲೆ ನೆಟ್ಟಿತ್ತು ಎಲ್ಲೋ ಓಡಬಾರದು ಎಂದು. ಕರು ತಾಯಿಯ ನೆರಳಲ್ಲಿ ಹಾಲು ಕುಡಿಯುತ್ತಿದ್ದಾಗ, ಹಟ್ಟಿಯ ಸುತ್ತ ಮಮತೆಯ ವಾತಾವರಣ ಹರಡಿತ್ತು. ಅ ಮನೆಯ ಯಜಮಾನಿ ಜ್ಯೋತಿಯಕ್ಕ ಪ್ರತಿದಿನ ಕೆಂಪಿಗೆ ಹುಲ್ಲು, ನೀರು, ಆಹಾರ ನೀಡುತ್ತಿದ್ದರು. ದನದ ಹಾಲು ಕರೆಯುವುದು, ಕರುಗೆ ಆರೈಕೆ ಮಾಡುವುದು ಎಲ್ಲವೂ ಅವರ ದಿನಚರಿಯ ಭಾಗವಾಗಿತ್ತು. ಕೆಂಪಿಯ ಕರುಗೆ ಮತ್ತು ಜ್ಯೋತಿಯಕ್ಕನಿಗೆ ಅಕ್ಕರೆಯ ಬಂಧವೊಂದು ಬೆಳೆದಿತ್ತು. ಜ್ಯೋತಿಯಕ್ಕ ಮಾತಾಡಿದರೆ, ಕೆಂಪಿ ಕಿವಿ ಎತ್ತಿ ಕೇಳುವಂತಿತ್ತು. ರಾತ್ರಿ ವೇಳೆಗೆ ಕರುವನ್ನು ದನದಿಂದ ಸ್ವಲ್ಪ ದೂರ ಕಟ್ಟುತ್ತಿದ್ದರು, ಏಕೆಂದರೆ ಬೇರೆ ದನಗಳು ಹಾಯ್ದು ಗಾಯ ಮಾಡಬಹುದೆಂಬ ಕಾಳಜಿ. ಆದರೆ ಆ ಕ್ಷಣ ಕೆಂಪಿಗೂ ಕರುಕ್ಕೂ ದೂರವು ನೋವಿನ ಕ್ಷಣವಾಗುತ್ತಿತ್ತು. ಒಂದು ದಿನ ಜ್ಯೋತಿಯಕ್ಕ ಸಂಬಂಧಿಕರ ಮನೆಗೆ ತೆರಳಬೇಕಾಯಿತು. ಆ ಸಮಯದಲ್ಲಿ ಮನೆಯ ಯಜಮಾನ ಕೆಂಪಿಯ ಹಾಲು ತೆಗೆಯಲು ಹೋದಾಗ, ಕೆಂಪಿ ಕಾಲಿನಿಂದ ಒದ್ದು ಅವನಿಗೆ ಗಾಯಗೊಳಿಸಿತು. ಕರು ಬಿಟ್ಟಾಗ ಮಾತ್ರ ಹಾಲು ಕುಡಿಯಲು ಬಿಡುತ್ತಿದ್ದರೂ, ಯಾರಾದರೂ ಹಾಲು ತೆಗೆಯಲು ಬಂದರೆ ತಾಯಿಯ ಕಾಳಜಿಯಿಂದ ಕೆಂಪಿ ಅಸಹನೆ ತೋರಿಸುತ್ತಿತ್ತು. ಸಿಟ್ಟಿನಿಂದ ಉನ್ಮತ್ತನಾದ ಯಜಮಾನ, ಜ್ಯೋತಿಯಕ್ಕ ಮನೆಗೆ ಬರುವ ಮೊದಲು ಕೆಂಪಿ ಮತ್ತು ಆಕೆಯ ಕರು ಎರಡನ್ನೂ ಸ್ಥಳೀಯರಿಗೆ ಮಾರಿಬಿಟ್ಟ. ಹಸು ವಾಹನಕ್ಕೆ ಹತ್ತುವಾಗ ತಿರುಗಿ ಹಟ್ಟಿಯತ್ತ ನೋಡಿತು ಕಣ್ಣಿನಲ್ಲಿ ಕರುಬಿಟ್ಟು ಹೋಗುವ ನೋವು. ಕರು ಮಾತ್ರ “ಅಮ್ಮಾ” ಎನ್ನುವಂತೆ ಅಳುತ್ತಾ ಜ್ಯೋತಿಯಕ್ಕ ಹುಡುಕುತ್ತಿತ್ತು. ಮೂರು ದಿನಗಳ ನಂತರ ಜ್ಯೋತಿಯಕ್ಕ ಮನೆಗೆ ಬಂದರು. ಹಟ್ಟಿಯ ಅಂಗಳ ಖಾಲಿ. “ಕೆಂಪಿ… ಕರು…” ಎಂದು ಕರೆದರೂ ಪ್ರತಿಕ್ರಿಯೆ ಬಾರಲಿಲ್ಲ. ಅಂಗಳದ ಒಂದು ಮೂಲೆಯಲ್ಲಿ ಖಾಲಿ ಕುಟ್ಟಿಗೆಯ ಕಟ್ಟಿ, ಹಾಲಿನ ಬಾಣಸಿಗೆ, ಕತ್ತೆಯ ಕಡ್ಡಿ ಮಾತ್ರ ಉಳಿದಿತ್ತು. ಕ್ಷಣದಲ್ಲೇ ಅವರ ಕಣ್ಣಲ್ಲಿ ನೀರು ತುಂಬಿತು. ಕರು ಮತ್ತು ಕೆಂಪಿಯ ನೆನಪಿನಲ್ಲಿ ಅವರ ಮನ ಕಲುಕಿತು. ಜ್ಯೋತಿಯಕ್ಕ ತಮಗೆ ಅರ್ಥವಾಯಿತು ಪ್ರೀತಿಯ ಬಾಂಧವ್ಯ ರಕ್ತಸಂಬಂಧದಲ್ಲೇ ಅಲ್ಲ, ಮನಸ್ಸಿನ ಬಂಧದಲ್ಲಿದೆ. ಕೆಂಪಿ ತನ್ನ ಕರುಗಾಗಿ ತಾಯಿಯಂತೆ ಬದುಕಿತ್ತು; ಅವರು ಕೆಂಪಿಗಾಗಿ ಮಮತೆಯ ಅಕ್ಕನಾಗಿದ್ದರು. ಅಂದು ರಾತ್ರಿ ಹಟ್ಟಿಯ ಗಾಳಿಯಲ್ಲಿ ಗಂಟೆಯ ಸದ್ದು ಕೇಳಿಸಿತು ಕೆಂಪಿಯ ನೆನಪಿನ ಮೃದು ನಾದದಂತೆ. ಜ್ಯೋತಿಯಕ್ಕನ ಕಣ್ಣೀರು ತಣ್ಣಗೆ ಬಿದ್ದಾಗ, ಅವರ ಮನದೊಳಗೆ ಒಂದು ಮಾತು ಪ್ರತಿಧ್ವನಿಸಿತು: “ಮಗುವೆಂದರೆ ಮನುಜನೇ ಅಷ್ಟೆ ಅಲ್ಲ, ಪ್ರೀತಿಯಿಂದ ಪಾಲನೆ ಮಾಡುವ ಪ್ರತಿಯೊಂದು ಜೀವಿಯೂ ಅಮ್ಮನಾಗಬಲ್ಲದು.” ರಾಂ ಅಜೆಕಾರು ಕಾರ್ಕಳ http://ramajekar.travel.blog/2025/11/05/daily-stories-24/ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ಕತೆಗಳು #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದುಕಥೆ #ರಾಂಅಜೆಕಾರು #ಪ್ರೀತಿ #ಮಮತೆ #ಹಸುಕರು #ಕಾರ್ಕಳ #dailystories #dailyquots #udupikarkala #ramajekar #dailyquots
🌺ಕಾರ್ತಿಕ ಪೂರ್ಣಿಮಾ 🙏 - Ro ~e  Ro ~e - ShareChat
#💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು ಕೃಷಿಕನ ಮನದಾಳದ ನೋವು ಕೃಷಿಕ ಎಂದಿಗೂ ಸ್ವಾರ್ಥ ಬಯಸಲಾರ. ಏಕೆಂದರೆ ಅವನ ಶ್ರದ್ಧೆಯಿಂದ ಮಾಡುತ್ತಿರುವ ಕೃಷಿಯ ಫಲದಿಂದಲೇ ನಾವೆಲ್ಲರಿಗೂ ಹೊಟ್ಟೆಗೆ ತುತ್ತು ಸಿಗುತ್ತದೆ. ಆತ ಬೆಳೆದರೆ ಮಾತ್ರ ನಮ್ಮ ಬದುಕು ಸಾಗುತ್ತದೆ ಇಲ್ಲದಿದ್ದರೆ ಏನೂ ಸಾಧ್ಯವಿಲ್ಲ ಅಲ್ವಾ ಸುಮಾರು ಹತ್ತು ಎಕರೆ ಕೃಷಿಭೂಮಿಯಲ್ಲಿ ಶ್ರಮಿಸುತ್ತಿರುವ ರೈತನು, ಸಾಫ್ಟ್‌ವೇರ್ ಇಂಜಿನಿಯರಿಂಗ್‌ ಅಥವಾ ಎಂ.ಬಿ.ಎ. ಮಾಡಿದವರಿಗಿಂತ ವಿಭಿನ್ನ. ಯಾಕೆಂದರೆ ವಿದ್ಯಾಭ್ಯಾಸದಿಂದ ಎಷ್ಟು ಉನ್ನತಿಗೆ ಹೋದರೂ, ಅನ್ನದ ಮಹತ್ವವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಊಟಕ್ಕೆ ಅನ್ನವನ್ನು ಕೊಡುವವರು ರೈತರು ಮಾತ್ರ. ಗದ್ದೆಯನ್ನು ಹದಮಾಡಿ, ನೇಜಿ ನೆಟ್ಟು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿ, ನಿರಂತರ ನೀರಾವರಿ ಒದಗಿಸಿ, ಹವಾಮಾನ ವೈಪರೀತ್ಯಗಳನ್ನೆಲ್ಲ ಎದುರಿಸಿ ನಾಲ್ಕು ತಿಂಗಳು ಶ್ರಮಿಸುವ ಕೃಷಿಕನಿಗೆ ಮಾತ್ರ ಗೊತ್ತು ಅದರ ನಿಜವಾದ ಬೆಲೆ. ಹಳ್ಳಿಯಲ್ಲಿ ಎಲ್ಲರೂ “ಮಷಿನರಿ ಬಳಸಿ ಕೃಷಿ ಮಾಡಿ” ಎಂದು ಸಲಹೆ ನೀಡುವರು. ಆದರೆ ಕೃಷಿ ಕಾಲ ಬಂದಾಗ ಆ ಯಂತ್ರೋಪಕರಣಗಳು ಸಕಾಲಕ್ಕೆ ಸಿಗದೆ, ಗದ್ದೆ ಪಡೀಲು ಇಡುವ ಸಂದರ್ಭಗಳು ಬಂದೇ ಬರುತ್ತವೆ. ಒಮ್ಮೆ ಹಳ್ಳಿಯೊಬ್ಬ ರೈತನ ಜೀವನ ಇದೇ ರೀತಿಯಾಗಿ ತಿರುಗಿತು. ಆತ ಶ್ರಮಜೀವಿ ರೈತನಾದರೂ, ತನ್ನ ಮಗನು ರೈತನಾಗಿ ಕಷ್ಟಪಡುವುದನ್ನು ಬಯಸಲಿಲ್ಲ. ಅದಕ್ಕಾಗಿ ಅವನನ್ನು ಉತ್ತಮವಾಗಿ ಓದಿಸಿ, ವಿದೇಶಕ್ಕೆ ಕಳುಹಿಸಿ ವಿದ್ಯಾಭ್ಯಾಸ ಮಾಡಿಸಿದ. ಮಗನೂ ಅಲ್ಲಿ ಉತ್ತಮ ಉದ್ಯೋಗವನ್ನು ಪಡೆದು ವಿದೇಶದಲ್ಲೇ ನೆಲೆಸಿದ. ಈಗ ತಂದೆ ವಯೋವೃದ್ಧನಾಗಿದ್ದ. ತಾನು ಕೈಯಿಂದಲೇ ಬೆಳೆಸಿದ ಗದ್ದೆಗಳು ಬಾಡಿಬಿಟ್ಟಿದ್ದವು. ಸೊಪ್ಪುಗಳು, ಕಾಳುಗಳು, ಕಾಡುಕುರುಚಲು ಗಿಡಗಳು ಎಲ್ಲೆಡೆ ಆವರಿಸಿಕೊಂಡಿದ್ದವು. ಹತ್ತಿರದಲ್ಲಿ ಸಹಾಯ ಮಾಡಲು ಯಾರೂ ಇಲ್ಲ. ಮಗ ದೂರದ ದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ತಂದೆಯು ಬಾವುಕನಾಗಿ, “ನಾನು ಶ್ರಮಿಸಿ ಉಳಿಸಿಕೊಂಡ ಗದ್ದೆ ಹಾಳಾಗುತ್ತಿದೆ” ಎಂಬ ನೋವಿನಿಂದ ಬದುಕುತ್ತಿದ್ದ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ರಾಂ ಅಜೆಕಾರು ಕಾರ್ಕಳ http://ramajekar.travel.blog/2025/11/01/daily-stories-23/ #ಕೃಷಿಬದುಕು #ಕರಾವಳಿ #ramajekar #karavalikarnataka #dailystories #udupikarkala #ರಾಂಅಜೆಕಾರು
💛❤️ಕನ್ನಡ ರಾಜ್ಯೋತ್ಸವದ ಶುಭಾಶಯಗಳು💖⭐ - CPam CPam - ShareChat
Read my thoughts on YourQuote app at https://www.yourquote.in/ram-ajekar-d2xl/quotes/arth-maaddikolllluv-mnssu-iddre-maatr-priitisu-illdiddre-nnn-cxm3ys #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭
👏ದಿನಕ್ಕೊಂದು ಮುತ್ತಿನ ನುಡಿ - ಮಾಡಿಕೊಳ್ಳುವ అథిణ మేనెస్సు' ಇದ್ದರೆ ಮಾತ್ರ ಪ್ರೀತಿಸು;, ಇಲ್ಲದಿದ್ದರೆ ಮನಸ್ಸು నెన్న' ರಂಗವಲ್ಲ . ನಾಟಕದ Ram Ajckar Your uote.in ಮಾಡಿಕೊಳ್ಳುವ అథిణ మేనెస్సు' ಇದ್ದರೆ ಮಾತ್ರ ಪ್ರೀತಿಸು;, ಇಲ್ಲದಿದ್ದರೆ ಮನಸ್ಸು నెన్న' ರಂಗವಲ್ಲ . ನಾಟಕದ Ram Ajckar Your uote.in - ShareChat
#📢ಅಕ್ಟೋಬರ್ 29ರ ಅಪ್ಡೇಟ್ಸ್ 👈 “ಸತ್ಯವಂತರು ಹಳ್ಳಿಗಳಲ್ಲಿ ಮಾತ್ರ ಸಿಗುತ್ತಾರೆ, ಸಿಟಿಗಳಲ್ಲಿ ಅಲ್ಲ,” ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಎಲ್ಲೋ ಒಂದು ಚಿಕ್ಕ ಹಳ್ಳಿ. ಅಲ್ಲಿ ಒಬ್ಬ ಹಿರಿ ಜೀವ ಅವರ ಮುಖದ ನೆರಿಗೆಯೇ ಶ್ರಮದ ಗುರುತು. ಹೆಸರು ಯಾರಿಗೂ ಗೊತ್ತಿಲ್ಲ, ಆದರೆ “ಶ್ರಮಿಕ” ಅಂದರೆ ಇವರೇ ಮಾದರಿ ಎಂದು ಎಲ್ಲರೂ ಹೇಳುತ್ತಾರೆ. ಎಂಭತ್ತರ ವಯಸ್ಸು ದಾಟಿದ್ದರೂ, ಇಂದಿಗೂ ದಿನವನ್ನೂ ವ್ಯರ್ಥ ಮಾಡದವರು. ಬೆಳಗಿನ ಹೊತ್ತಿಗೆ ತಲೆ ಮೇಲೆ ಮುಟ್ಟಾಳೆ ಇಟ್ಟು, ಅದಕ್ಕೆ ಬಟ್ಟೆ ಕಟ್ಟಿ ಅದು ಅತ್ತಿತ್ತ ಅಲ್ಲಾಡದಂತೆ ಬಿಗಿಯಾಗಿ ಸುತ್ತಿಕೊಂಡು ಗದ್ದೆಗೇ ಹೊರಡುತ್ತಾರೆ. ಅಲ್ಲಿ ದನಗಳಿಗೆ ಹುಲ್ಲು ಕತ್ತರಿಸಿ, ಕಟ್ಟಿ, ಮನೆಗೆ ತಂದು ಹಸುಗಳಿಗೆ ಹಾಕುತ್ತಾರೆ. ಮನೆಗೆ ಬಂದಾಗ ಮೊದಲ ಕೆಲಸ ಬಂದವರಿಗೂ ನೀರು ಬೆಲ್ಲ ನೀಡಿ, ನೀರಡಿಕೆಯನ್ನು ಅಳಿಸುವುದು. ಕೆಲವೊಮ್ಮೆ ಮಜ್ಜಿಗೆಯೂ ಕೊಡುತ್ತಾರೆ; ಆತಿಥ್ಯ ಅವರ ಹೃದಯದ ಸ್ವಭಾವ. “ಒಂದು ಹೊತ್ತು ಕೂಡ ಕುಳಿತು ಕಾಲಹರಣ ಮಾಡಬಾರದು,” ಎನ್ನುವುದು ಅವರ ಜೀವನ ಮಂತ್ರ. ಗದ್ದೆಯಲ್ಲಿ ಕೃಷಿ ನೆಟ್ಟು, ಹಸುಗಳು ಒಳಬಾರದಂತೆ ಮರದ ಕಂಬಗಳಿಂದ ಬೇಲಿ ಕಟ್ಟಿದವರು. “ಇಷ್ಟು ಸಾಕು, ಹಸುಗಳು ಅರ್ಥ ಮಾಡ್ಕೊಳ್ತವೆ,” ಎಂದು ನಗುತ್ತಾ ಹೇಳುವವರು. ಆದರೆ ಮಂಗಗಳು ತೆಂಗಿನ ಎಳನೀರು ಕುಡಿಯುತ್ತಾ ತೆಂಗಿನಕಾಯಿಗಳನ್ನು ಹಾಳು ಮಾಡುತ್ತಿದ್ದವು. ಹಳ್ಳಿಯ ಹಿರಿಯರು ಹೇಳಿದಂತೆ “ಬೆಟ್ಟದ ಪಾರ್ಶ್ವದ ಹನುಮಂತ ದೇವರ ದೇವಸ್ಥಾನದಲ್ಲಿ ದೇವರಿಗೆ ಎಳನೀರು ಅಭಿಷೇಕ ಮಾಡಿದರೆ ಮಂಗಗಳು ಬರೋದಿಲ್ಲ” ಎಂದು ಆ ಹಿರಿಯಜ್ಜ ಆ ನಂಬಿಕೆಯನ್ನು ನಿಷ್ಠೆಯಿಂದ ಪಾಲಿಸುತ್ತಿದ್ದರು. ಒಂದು ದಿನ ಅವರು ಹಾಸ್ಯಮಿಶ್ರಿತ ಹೇಳಿದರು: “ಮಂಗಗಳು ಎಷ್ಟೇ ಎಳನೀರು ಕುಡಿದರೂ ಹೊಟ್ಟೆ ತುಂಬೋಕೆ ಕುಡುತ್ತವೆ, ಹಾಳು ಮಾಡಲು ಅಲ್ಲ; ಹಾಳು ಮಾಡೋದು ನಾವು!” ಎಂದು ನಕ್ಕರು. ಒಮ್ಮೆ ಕೃಷಿ ಕಾಲದಲ್ಲಿ ಇಲಿ ಕಾಟ ಹೆಚ್ಚಾಗಿತ್ತು. ಹಳ್ಳಿ ಜನರು “ಹಾವು ಬಂದರೆ ಇಲಿಗಳು ಸಾಯ್ತವೆ” ಎಂದು ಹೇಳುತ್ತಿದ್ದರು. ಆದರೆ ಒಂದೇ ದಿನ ವಿಷಕಾರಿ ಹಾವು ತನ್ನ ಮರಿಗಳನ್ನು ಗದ್ದೆಯಲ್ಲಿ ಇಟ್ಟಿತ್ತು. ಕೊಯ್ಲಿನ ಸಮಯದಲ್ಲಿ ಅದನ್ನು ಕಂಡು ಜನರು ಓಡಿಹೋದರು. ಮೂರು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ನವಿಲುಗಳು ಬಂದು ಆ ಹಾವನ್ನು ಬೇಟೆಯಾಡಿದವು. ಹಾವುಗಳೂ ಇಲಿಗಳೂ ನಾಶವಾದವು ಕೃಷಿ ಅದ್ಭುತವಾಗಿ ಬೆಳೆದಿತು. ಆ ದಿನ ಹಿರಿಯಜ್ಜ ಎಲೆಯಡಿಕೆ ಮೆಲ್ಲುತ್ತಾ ನಕ್ಕರು: “ಪರಿಸರವೇ ನಮಗೆ ಪಾಠ ಹೇಳ್ತದೆ ಅಯ್ಯಾ ಆದರೆ ಕಳೆದ ಎರಡು ಮೂರು ವರ್ಷಗಳಿಂದ ಆನೆಯ ಕಾಟ ಹೆಚ್ಚಾಗಿತ್ತು. ಬೆಳೆ ನಾಶವಾಗಿತ್ತು. ಹಿರಿಯಜ್ಜ ಹೇಳಿದರು: “ಈ ಬಾರಿ ಗಣಪತಿ ದೇವರ ಮುಂದೆ ಹಣ್ಣುಕಾಯಿ ಮಾಡ್ತೀವಿ, ಎಲ್ಲವೂ ಸುಧಾರಿಸತ್ತೆ.” ಅವರು ಹಣ್ಣುಕಾಯಿ ಮಾಡಿದ ನಾಲ್ಕು ತಿಂಗಳು ಕಳೆದವು ಆನೆ ಮತ್ತೆ ಬಂದಿಲ್ಲ. ಅದೇ ಸಮಯದಲ್ಲಿ ಕಾಡಿನೊಳಗೆ ಹಸಿರು ತುಂಬಿತ್ತು, ಹಲಸಿನ ಮರಗಳು ಹಣ್ಣುಗಳಿಂದ ತುಂಬಿಕೊಂಡಿದ್ದವು. ಆನೆಗಳು ಅಲ್ಲಿ ಸಂತೃಪ್ತಿಯೊಡನೆ ಊಟ ಮಾಡಿಕೊಂಡಿದ್ದವು. ಹಿರಿಯಜ್ಜ ನಗುತ್ತಾ ಹೇಳಿದರು: “ದೇವರು ಎಲ್ಲೆಡೆ ಇದ್ದಾನೆ. ಹಣ್ಣುಕಾಯಿಯೂ ಒಂದು ನಂಬಿಕೆ, ನಂಬಿಕೆಯೂ ಒಂದು ಕೃಷಿ.” ಅದನ್ನು ಕೇಳಿ ನಾನು ಯೋಚನೆಗೆ ಒಳಗಾದೆ “ಸತ್ಯವಂತರು ಹಳ್ಳಿಗಳಲ್ಲಿ ಮಾತ್ರ ಸಿಗುತ್ತಾರೆ, ಸಿಟಿಗಳಲ್ಲಿ ಅಲ್ಲ,” ಎಂದು. ಮಾತಿಲ್ಲದೆ ಸೈಲೆಂಟ್ ಆಯ್ತು ನನ್ನ ಮನಸ್ಸು. ರಾಂ ಅಜೆಕಾರು ಕಾರ್ಕಳ #ಹಿರಿಯಜ್ಜ #ರಾಂಅಜೆಕಾರು #ದಿನಕ್ಕೊಂದುಕಥೆ #dailystories #udupikarkala #trendingstories http://ramajekar.travel.blog/2025/10/31/daily-stories-22/ # #ದಿನಕ್ಕೊಂದು ಕತೆಗಳು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು #👏ದಿನಕ್ಕೊಂದು ಮುತ್ತಿನ ನುಡಿ
📢ಅಕ್ಟೋಬರ್ 29ರ ಅಪ್ಡೇಟ್ಸ್ 👈 - RamAearoica  RamAearoica - ShareChat
Read my thoughts on YourQuote app at https://www.yourquote.in/ram-ajekar-d2xl/quotes/nenpugllu-khaaliputt-idd-haage-nnn-nenpugllu-nnnene-nnn-bgge-cxm1ry #ದಿನಕ್ಕೊಂದು ಕಥೆ ನಾ ನಿಮ್ಮ ಜೊತೆ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ಕತೆಗಳು
ದಿನಕ್ಕೊಂದು ಕಥೆ ನಾ ನಿಮ್ಮ ಜೊತೆ - ನೆನಪುಗಳು ಖಾಲಿಪುಟ ಇದ್ದ ಹಾಗೆ , నెన్ననినెవుగళు నెన్నిని ನನ್ನಬಗ್ಗೆ ಓದುವ ಪರಿ ಬೇಡ, మెనెస్సు' ಮುರಿದ ಮೇಲೆ ಅದರಲ್ಲಿ ಅರ್ಥವಿಲ್ಲ , ಸ್ಪಂದನವಿಲ್ಲ . Ram Ajekar Your( uotein ನೆನಪುಗಳು ಖಾಲಿಪುಟ ಇದ್ದ ಹಾಗೆ , నెన్ననినెవుగళు నెన్నిని ನನ್ನಬಗ್ಗೆ ಓದುವ ಪರಿ ಬೇಡ, మెనెస్సు' ಮುರಿದ ಮೇಲೆ ಅದರಲ್ಲಿ ಅರ್ಥವಿಲ್ಲ , ಸ್ಪಂದನವಿಲ್ಲ . Ram Ajekar Your( uotein - ShareChat
#❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐 ಪುನೀತ್ ರಾಜ್‌ಕುಮಾರ್ (ಮಾರ್ಚ್ 17, 1975 – ಅಕ್ಟೋಬರ್ 29, 2021) ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ಗಾಯಕ, ನಿರ್ಮಾಪಕ ಹಾಗೂ ದಾತರಾಗಿದ್ದರು. ಅವರನ್ನು ಜನಪ್ರೀಯವಾಗಿ “ಅಪ್ಪು” ಎಂದೇ ಕರೆಯಲಾಗುತ್ತದೆ. ಇವರ ಬಗ್ಗೆ ಕೆಲವು ಮುಖ್ಯ ವಿಚಾರಗಳು 👇 🎬 ಚಿತ್ರರಂಗ ಪ್ರವೇಶ: ಬಾಲನಟನಾಗಿ ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಪ್ರವೇಶಿಸಿದರು. ಭಕ್ತ ಪ್ರಹ್ಲಾದ, ಯೆರಡು ನಕ್ಕು, ಭವಿಷ್ಯವಾಣಿ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಬೆಟ್ಟದ ಹೂವು ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯೂ ಪಡೆದಿದ್ದರು. 🌟 ಹೀರೋ ಆಗಿ: 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕನಾಗಿ ತೆರೆಗೆ ಬಂದರು. ಆ ಚಿತ್ರ ಬ್ಲಾಕ್‌ಬಸ್ಟರ್ ಆಗಿ, ಅವರ ಹೆಸರು “ಅಪ್ಪು” ಎಂದೇ ಜನಮನದಲ್ಲಿ ಉಳಿಯಿತು. ನಂತರ ಮೌರ್ಯ, ಅಭಿ, ಅರ್ಜುನ್, ಮಿಲನ, ಜಾಕಿ, ಪವರ್, ರಾ.ರಾ., ಯುವರತ್ನ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. 🎤 ಗಾಯಕ: ಬಾಲ್ಯದಿಂದಲೇ ಸುಂದರವಾದ ಧ್ವನಿಯುಳ್ಳ ಗಾಯಕನಾಗಿದ್ದರು. ಅನೇಕ ಹಾಡುಗಳನ್ನು ತಮ್ಮ ಸಿನಿಮಾಗಳಲ್ಲಿ ಹಾಗೂ ಇತರರ ಚಿತ್ರಗಳಿಗೂ ಹಾಡಿದ್ದಾರೆ. 💖 ಸಾಮಾಜಿಕ ಸೇವೆ: ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಸೇವೆಗಳ ಕ್ಷೇತ್ರದಲ್ಲಿ ಅನೇಕ ಕಾರ್ಯಗಳನ್ನು ನಿಶ್ಶಬ್ದವಾಗಿ ನೆರವೇರಿಸಿದರು. ಅವರ ನಿಧನದ ನಂತರ ಕಣ್ಣು ದಾನದಿಂದ ಐವರಿಗೆ ದೃಷ್ಟಿ ದೊರೆತಿತ್ತು — ಇದು ಅನೇಕರಿಗೆ ಪ್ರೇರಣೆ ಆಯಿತು. 🕊️ ಅಕಾಲಿಕ ನಿಧನ: ಅಕ್ಟೋಬರ್ 29, 2021ರಂದು ಹೃದಯಾಘಾತದಿಂದ ಅವರು ನಿಧನರಾದರು. ಅವರ ನಿಧನ ಕರ್ನಾಟಕದಾದ್ಯಂತ ಮತ್ತು ವಿಶ್ವದ ಕನ್ನಡಿಗರ ಮನಗಳಲ್ಲಿ ಆಘಾತ ಉಂಟುಮಾಡಿತು. 🌺 ಸ್ಮರಣೆ: ಇಂದಿಗೂ ಪುನೀತ್ ರಾಜ್‌ಕುಮಾರ್ ಅವರನ್ನು ಜನಮನದ ಅಪ್ಪು, ನಿಜವಾದ ಹೀರೋ, ಮತ್ತು ಕರ್ನಾಟಕದ ಪ್ರೇರಣೆ ಎಂದು ನೆನಪಿಸಲಾಗುತ್ತದೆ. #puneeth rajkumar #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #Power star puneeth Raj Kumar sir #puneeth raj kumar hits
❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐 - ShareChat