Gayatri Hobbies
ShareChat
click to see wallet page
@gayatrihobbies
gayatrihobbies
Gayatri Hobbies
@gayatrihobbies
lifesytle
‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ ನಿನ್ನೆ (ಶುಕ್ರವಾರ) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಪ್ರಕಟಗೊಂಡಿವೆ. ಆದರೆ ಜನ ಸಿನಿಮಾ ನೋಡಲು ಬಂದಿಲ್ಲ. ಇದು ಅನೀಶ್ ಅವರಿಗೆ ತೀವ್ರ ನೋವುಂಟು ಮಾಡಿದ್ದು, ಕಣ್ನೀರು ಹಾಕುತ್ತಾ ಭಾವುಕವಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ (Love OTP) ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. #😢ಸಿನಿಮಾಗೆ ನೀರಸ ಪ್ರತಿಕ್ರಿಯೆ, ಕಣ್ಣೀರು ಹಾಕಿದ ಖ್ಯಾತ ನಟ😞
😢ಸಿನಿಮಾಗೆ ನೀರಸ ಪ್ರತಿಕ್ರಿಯೆ, ಕಣ್ಣೀರು ಹಾಕಿದ ಖ್ಯಾತ ನಟ😞 - ShareChat
ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದರಿಂದ ಡ್ಯಾನ್ಸರ್ ಸುಧೀಂದ್ರ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲ್ಲೂಕಿನ ಪೆಮ್ಮನಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆಯಷ್ಟೇ ಹೊಸ ಕಾರು ಡಿಲಿವರಿ ಪಡೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಸುಧೀಂದ್ರ ಹೊಸ ಇಕೋ ಕಾರಿನಲ್ಲಿ ಹೋಗುವಾಗ ರಸ್ತೆ ಮಧ್ಯೆ ಕಾರ್ ಕೆಟ್ಟು ನಿಂತಿದೆ. ಇದರಿಂದಾಗಿ ಕಾರ್ ಪರೀಕ್ಷಿಸಲು ಸುಧೀಂದ್ರ ಕಾರ್ ನಿಂದ ಇಳಿದು ಕಾರ್ ಹಿಂಭಾಗ ನಿಂತಿದ್ದಾಗ, ಹಿಂದಿನಿಂದ ಬಂದ ಕ್ಯಾಂಟರ್‌, ಸುಧೀಂದ್ರಗೆ ಡಿಕ್ಕಿ ಹೊಡೆದಿದೆ. ಇದರಿಂದ ಸುಧೀಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಕಾರ್‌ಗೆ ಕ್ಯಾಂಟರ್‌ ಡಿಕ್ಕಿ ಹೊಡೆಯುವ ದೃಶ್ಯ ಸಮೀಪದಲ್ಲೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯವನ್ನು ನೋಡಿದರೇ, ಇದು ಅಪಘಾತದಂತೆ ಕಾಣುತ್ತಿಲ್ಲ. ದುರುದ್ದೇಶಪೂರ್ವಕವಾಗಿಯೇ ಕ್ಯಾಂಟರ್‌ ಚಾಲಕ, ಇಕೋ ಕಾರಿನ ಬಳಿಗೆ ಬಂದು ಡಿಕ್ಕಿ ಹೊಡೆದು ಮರ್ಡರ್ ಮಾಡಿದಂತೆ ಕಾಣುತ್ತಿದೆ. ಹೆದ್ದಾರಿ ಸಂಪೂರ್ಣ ಖಾಲಿ ಇತ್ತು. ಬಲಭಾಗದಲ್ಲಿ ಯಾವುದೇ ವಾಹನಗಳು ಇರಲಿಲ್ಲ. ಆದರೂ, ಕ್ಯಾಂಟರ್‌ ಚಾಲಕ ಹೆದ್ದಾರಿಯ ಎಡಭಾಗದಲ್ಲಿ ನಿಂತಿದ್ದ ಇಕೋ ಕಾರಿನ ಬಳಿಗೆ ಲಾರಿ ಬಂದು ಹೆದ್ದಾರಿಯಲ್ಲಿ ನಿಂತಿದ್ದ ಡ್ಯಾನ್ಸರ್ ಸುಧೀಂದ್ರ ಹಾಗೂ ಇಕೋ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. #💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭
💔ರಸ್ತೆ ಅಪಘಾತದಲ್ಲಿ ಖ್ಯಾತ ಡ್ಯಾನ್ಸರ್ ಸಾವು 😭 - ShareChat
ಚಿತ್ರರಂಗದಲ್ಲಿ ಅನೇಕ ಜನರು ತಾರೆಗಳಾಗಿದ್ದಾರೆ. ಕೆಲವರು ಸಿನಿಮಾ ಅವಕಾಶಗಳಿಲ್ಲದೆ ಕಂಗೆಟ್ಟಿದ್ದಾರೆ. ಅನೇಕ ನಟರು ಈಗ ಚಲನಚಿತ್ರಗಳ ಕೊರತೆಯಿಂದ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ ರಸ್ತೆಗೆ ಬಿದ್ದ ಘಟನೆಗಳು ಹಲವು ಇವೆ. ಅನೇಕರು ಈಗಾಗಲೇ ಮಾಧ್ಯಮಗಳಿಗೆ ಬಂದು ತಮ್ಮ ಕಳಪೆ ಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ ಘಟನೆಗಳು ಹಲವು ಇವೆ. ಈ ನಟ ಅಂತಹ ಜನರಲ್ಲಿ ಒಬ್ಬರು. ಅವರು ಒಂದು ಕಾಲದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದರು. ಈಗ ಅವರು ಆರ್ಥಿಕ ಸಂಕಷ್ಟದಿಂದಾಗಿ ಆಟೋ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ. ಬೆಳ್ಳಿ ಪರದೆಯ ಮೇಲೆ ಬೆಳಕು ಚೆಲ್ಲಿದ ನಂತರ ಆಸ್ಕರ್ ರೇಸ್‌ನಲ್ಲಿರುವ ಆ ನಟನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.ಈ ನಟ ಒಂದು ಕಾಲದಲ್ಲಿ ಬಾಲ ಕಲಾವಿದನಾಗಿ ಮಿಂಚಿದ್ದರು. ತಮ್ಮ ನಟನೆಯಿಂದ ಅನೇಕ ಪ್ರೇಕ್ಷಕರನ್ನು ಆಕರ್ಷಿಸಿದರು. ಅವರು ತಮ್ಮ ನಟನೆಯಿಂದ ಅನೇಕ ಪ್ರಶಸ್ತಿಗಳನ್ನು ಗೆದ್ದರು. ಅಷ್ಟೇ ಅಲ್ಲ, ಅವರು ನಟಿಸಿದ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. ಆದರೆ ನಂತರ, ಅವರಿಗೆ ಕಡಿಮೆ ಅವಕಾಶಗಳು ಸಿಕ್ಕವು. ಈಗ ಅವರು ಆಟೋ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಅವರ ಹೆಸರು ಶಫೀಕ್ ಸೈಯದ್. ಅವರು ಸಲಾಮ್ ಬಾಂಬೆ ಚಿತ್ರದಿಂದ ಮನ್ನಣೆ ಪಡೆದರು! 1988 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವ ಮೂಲಕ ಅವರು ಪ್ರಭಾವಿತರಾದರು. #😮ಸಿನಿಮಾ ಅವಕಾಶಗಳಿಲ್ಲದೇ ಕಂಗೆಟ್ಟು ಆಟೋ ಓಡಿಸುತ್ತಿರುವ ಖ್ಯಾತ ನಟ😢
😮ಸಿನಿಮಾ ಅವಕಾಶಗಳಿಲ್ಲದೇ ಕಂಗೆಟ್ಟು ಆಟೋ ಓಡಿಸುತ್ತಿರುವ ಖ್ಯಾತ ನಟ😢 - ShareChat
ಅಮೃತವರ್ಷಿಣಿ ಖ್ಯಾತಿಯ ಸೀರಿಯಲ್‌ ನಟಿ ರಜನಿಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರುಣ್ ಗೌಡ ಅವರನ್ನು ಒರಸಿರುವ ಅವರು ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಪ್ರೀತಿಯ ಹೆಸರು ನೀಡಿದ್ದ ಅವರು ಈಗ ಕೊನೆಗೂ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತರೆ ನಟಿ ರಜನಿಯವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಮತ್ತು ಜೀ ಕನ್ನಡ ವಾಹಿನಿಯ ಹಿಟ್ಲರ್‌ ಕಲ್ಯಾಣ ಧಾರಾವಾಹಿ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡಿದ್ದ ಈ ಜೋಡಿ, ಎಲ್ಲರಿಗೂ ಇಷ್ಟವಾಗಿತ್ತು ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರುವುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಇನ್ನು ಇವರಿಬ್ಬರ ಅನ್ಯೂನ್ಯತರಯನ್ನು ನೋಡಿದವರೆಲ್ಲ ಕೆಲವು ಬಾರಿ ಲವ್ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಸ್ನೇಹಿತರು ಎಂದು ಉತ್ತರಿಸಿದ್ದ ನಟಿ ರಜಿನಿ ಈಗ ಕೊನೆಗೂ ಆ ಸ್ನೇಹಕ್ಕೆ ಮದುವೆ ಮೂಲಕ ಅರ್ಥ ನೀಡಿದ್ದಾರೆ. ಅರುಣ್ ಗೌಡ ಅವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು ಫಿಟ್‌ನೆಸ್‌ ಪ್ರಿಯರಾಗಿದ್ದಾರೆ. #💖ಜಿಮ್ ಟ್ರೈನರ್ ಜೊತೆ ಸಪ್ತಪದಿ ತುಳಿದ ಖ್ಯಾತ ನಟಿ 😍
💖ಜಿಮ್ ಟ್ರೈನರ್ ಜೊತೆ ಸಪ್ತಪದಿ ತುಳಿದ ಖ್ಯಾತ ನಟಿ 😍 - ShareChat
ನಟ ದಿವಂಗತ ಕೆ ಎಸ್ ಅಶ್ವತ್ಥ್ ಅವರ ಧರ್ಮಪತ್ನಿ , ಶಂಕರ್ ಅಶ್ವತ್ಥ್ ರ ತಾಯಿ ಇಂದು ದೈವಾಧೀನ. 96 ವರ್ಷದ ಶಾರದಾ ಅಶ್ವಥ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಮಧ್ಯಾಹ್ನ 12 ಗಂಟೆಗೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ. #😭💔ಖ್ಯಾತ ಹಿರಿಯ ನಟನ ತಾಯಿ ನಿಧನ😭💔
😭💔ಖ್ಯಾತ ಹಿರಿಯ ನಟನ ತಾಯಿ ನಿಧನ😭💔 - ShareChat
ಗೆದ್ದ ಕ್ಯಾನ್ಸರ್, ಖ್ಯಾತ ಖಳನಟ ಹರೀಶ್ ರಾಯ್ ನಿಧನಖಳನಟ ಹರೀಶ್ ರಾಯ್ ನಿಧನ: ‘ಓಂ’, ‘ನಲ್ಲ’ ಇತ್ತೀಚೆಗಿನ ಬ್ಲಾಕ್ ಬಸ್ಟರ್ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಖಳನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 06) ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಹಲವು ನಟ-ನಟಿಯರು ಆರ್ಥಿಕ ಸಹಾಯ ಮಾಡಿದ್ದರು.ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದೊಂದಿಗೆ ಸತತ ಹೋರಾಟ ಮಾಡುತ್ತಲೇ ಇದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದ ಹರೀಶ್ ರಾಯ್ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಟ ಯಶ್ ಸೇರಿದಂತೆ ಇನ್ನೂ ಹಲವರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಆದರೆ ಅಂತಿಮವಾಗಿ ಹರೀಶ್ ಅವರು ಇಂದು ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತೆ ಆಗಿದ್ದರು ಹರೀಶ್ ರಾಯ್. ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದರು. ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ಸಹ ಈ ಹಿಂದೆಯೇ ತಮಗೆ ಸಹಾಯ ಮಾಡಿರುವುದಾಗಿ ಹರೀಶ್ ರಾಯ್ ಹೇಳಿಕೊಂಡಿದ್ದರು.  ಹಲವಾರು ಮಂದಿ ಸಿನಿಮಾ ಮಂದಿ ಹೋಗಿ ಹರೀಶ್ ರಾಯ್ ಅವರನ್ನು ಮಾತನಾಡಿಸಿ ತಾವು ಜೊತೆಗೆ ಇರುವುದಾಗಿ ಭರವಸೆ ನೀಡಿದ್ದರು. ಹಲವು ಯೂಟ್ಯೂಬರ್​​ಗಳು ಸಹ ಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದಲೂ ಸತತವಾಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇದ್ದರು ಹರೀಶ್ ರಾಯ್. ಇದೀಗ ಕೊನೆಗೆ ನಿಧನ ಹೊಂದಿದ್ದಾರೆ.ಕರಾವಳಿ ಮೂಲಕ ಹರೀಶ್ ರಾಯ್ ಅವರು 90ರ ದಶಕದ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ಅಸಲಿಗೆ ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಪಾಲಾಗಿದ್ದರು. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಹರೀಶ್ ರಾಯ್, ತಮ್ಮ ಜೈಲು ದಿನಗಳನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದರು. ಹರೀಶ್ ರಾಯ್ ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಹರೀಶ್ ರಾಯ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಅಂಡರ್​ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್​ವುಡ್​ನ ಟಾಪ್ ಸಿನಿಮಾ ಕೆಜಿಎಫ್​​ ಚಾಪ್ಟರ್ 1 ಹಾಗೂ ಕೆಜಿಎಫ್​​ ಚಾಪ್ಟರ್ 2 ನಲ್ಲಿ ಅಭಿನಯಿಸಿದ್ದಾರೆ. #😭ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ನಿಧನ 💔
😭ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ನಿಧನ 💔 - ShareChat
ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ತತ್ತರಿಸಿರುವ ಪಿಂಚಣಿದಾರರು ತಮ್ಮ ಜೀವನ ಮಟ್ಟವನ್ನು ಸುಧಾರಿಸಲು ಕನಿಷ್ಠ ಪಿಂಚಣಿ ಮೊತ್ತವನ್ನು ₹7,500ಕ್ಕೆ ಹೆಚ್ಚಿಸುವಂತೆ ಬಹುಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ [ಪಿಂಚಣಿ ಪರಿಷ್ಕರಣೆಗೆ ಮುಂದಾಗಿದೆ. ಇತ್ತೀಚಿಗೆ ನಡೆದ ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆಯಲ್ಲಿ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000ದಿಂದ ಹೆಚ್ಚಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಂಚಣಿದಾರರ ಜೀವನದಲ್ಲಿ ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಸಮಾಲೋಚನೆ ನಡೆಸಲಾಗಿದ್ದು, ಸರ್ಕಾರ ಕನಿಷ್ಠ ಮಾಸಿಕ ಪಿಂಚಣಿಯ ಮೊತ್ತವನ್ನು ₹7,500ವರೆಗೆ ಪರಿಷ್ಕರಿಸಲು ಚಿಂತನೆ ನಡೆಸಲಾಗಿದೆ. #🚨ಪಿಂಚಣಿದಾರರಿಗೆ ಸಿಹಿ ಸುದ್ಧಿ: ಮಾಸಿಕ ಪಿಂಚಣಿ ₹7,500ಕ್ಕೆ ಏರಿಕೆ🤩
🚨ಪಿಂಚಣಿದಾರರಿಗೆ ಸಿಹಿ ಸುದ್ಧಿ: ಮಾಸಿಕ ಪಿಂಚಣಿ ₹7,500ಕ್ಕೆ ಏರಿಕೆ🤩 - ShareChat
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತರಾದ ನಟ ಪುನೀತ್ ರಾಜ್‌ಕುಮಾರ್ ಅವರು ಕರ್ನಾಟಕದ ಲಕ್ಷಾಂತರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕನ್ನಡದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29, 2021 ರಂದು ತಮ್ಮ 46 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಗೌರವಾನ್ವಿತ ದಂತಕಥೆಯಾಗಿದ್ದ ಡಾ. ರಾಜ್‌ಕುಮಾರ್ ಅವರ ಕಿರಿಯ ಮಗ ಪುನೀತ್ ತಮ್ಮ ಹಿರಿಯ ಸಹೋದರರಾದ ಡಾ. ಶಿವ ರಾಜ್‌ಕುಮಾರ್ ಮತ್ತು ಡಾ. ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ಜನಮನದಲ್ಲಿ ಬೆಳೆದರು, ಇಬ್ಬರೂ ಪ್ರಮುಖ ನಟ-ನಿರ್ಮಾಪಕರು. ಅವರ ಕುಟುಂಬ ಮತ್ತು ಕರ್ನಾಟಕದ ಜನರು ಪ್ರೀತಿಯಿಂದ 'ಅಪ್ಪು' ಎಂದು ಕರೆಯಲ್ಪಡುವ ಪುನೀತ್ ಅವರ ಪರಂಪರೆಯನ್ನು ಅವರ ನಿಧನದ ನಂತರವೂ ಅಭಿಮಾನಿಗಳು ಮತ್ತು ಕುಟುಂಬವು ಪಾಲಿಸುತ್ತದೆ ಮತ್ತು ಆಚರಿಸುತ್ತದೆ. #❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐
❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐 - ShareChat
ಚಿತ್ರದಲ್ಲಿ ನಾಯಕನಷ್ಟೇ ಖಳನಾಯಕನೂ ಮುಖ್ಯ. ತಮಿಳು ಸಿನಿಮಾ ರಂಗದಲ್ಲಿ ಹಲವು ಖಳನಾಯಕ ನಟರು ಇದ್ದಾರೆ. ಆದರೆ ಖಳನಾಯಕನ ಪಾತ್ರವನ್ನು ವಾಸ್ತವಿಕವಾಗಿ ಚಿತ್ರಿಸುವ ನಟರು ಬಹಳ ಕಡಿಮೆ. ಸುಂದರ ದೇಹ ಹೊಂದಿರದಿದ್ದರೂ, ತಮ್ಮ ನೋಟ ಮತ್ತು ನಟನೆಯಲ್ಲಿ ಖಳನಾಯಕನ ಪಾತ್ರವನ್ನು ಚಿತ್ರಿಸುವ ಮೂಲಕ ತಮಿಳು ಅಭಿಮಾನಿಗಳನ್ನು ಭಯಭೀತಗೊಳಿಸಿರುವ ನಟ ಉದಯಪ್ರಕಾಶ್. ಅವರ ಹೆಸರು ಹೇಳಿದರೆ ಗೊತ್ತಿಲ್ಲ ಎನ್ನುವವರೇ ಇಲ್ಲ.. ತಮಿಳು ಸಿನಿಮಾವನ್ನು ಪ್ರಸಿದ್ಧಿಗೆ ತಂದ ಚಿತ್ರ 'ಚಿನ್ನತಂಬಿ'. ಈ ಚಿತ್ರದಲ್ಲಿ, ಅವರು ಖುಷ್ಬೂ ಅವರ ಸಹೋದರರಲ್ಲಿ ಒಬ್ಬರ ಪಾತ್ರವನ್ನು ನಿರ್ವಹಿಸುತ್ತಿದ್ದು ಸಹ ಉದಯಪ್ರಕಾಶ್.ಅವರು ಮತ್ತೊಮ್ಮೆ ಮಾರಕ ಕುಡಿತದ ಚಟಕ್ಕೆ ವ್ಯಸನಿಯಾದರು.. ಅವರು ಈಗಾಗಲೇ ಆಸ್ತಮಾದಿಂದ ಬಳಲುತ್ತಿದ್ದು, ಅವರ ಯಕೃತ್ತು ಕೂಡ ಕುಡಿತದಿಂದ ಹಾಳಾಗಿತ್ತು.. ಅವರನ್ನು ಉಳಿಸುವ ಪ್ರಯತ್ನದಲ್ಲಿ, ನಿರ್ದೇಶಕ ಪಿ. ವಾಸು ಅವರನ್ನು ಆಸ್ಪತ್ರೆಗೆ ದಾಖಲಿಸಿ ಸಹಾಯ ಮಾಡಿದರು. ಆದರೆ ಇನ್ನೂ ಚಿಕಿತ್ಸೆ ಪಡೆಯುತ್ತಿರುವಾಗ, ಆಸ್ಪತ್ರೆಯಿಂದ ಹೊರಬಂದ ಉದಯಪ್ರಕಾಶ್ ಮತ್ತೆ ಕುಡಿದು, ತಮ್ಮ ಸ್ಥಿತಿಯನ್ನು ಅರಿತುಕೊಳ್ಳದೆ, ನಾಡಿಗರ್ ಸಂಗಮ್ ಬಳಿ ರಸ್ತೆಯ ಮಧ್ಯದಲ್ಲಿ ಬಿದ್ದು ಪ್ರಾಣ ಕಳೆದುಕೊಂಡರು. ಆ ಸಮಯದಲ್ಲಿ ಅವರಿಗೆ 40 ವರ್ಷ ವಯಸ್ಸಾಗಿತ್ತು. ಕುಟುಂಬವನ್ನು ಬಿಟ್ಟು ಚೆನ್ನೈಗೆ ಬಂದ ಉದಯಪ್ರಕಾಶ್ ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾದರು, ಆದರೆ ಇನ್ನೊಂದು ದುರಂತವೆಂದರೆ ಅವರು ಮದ್ಯದ ಭೂತಕ್ಕೆ ಸಿಲುಕಿ ತಮ್ಮ ಕನಸಿನ ಜೀವನವನ್ನು ಕಳೆದುಕೊಂಡರು. 'ಕುಡಿತ ಜೀವನವನ್ನು ಹಾಳು ಮಾಡುತ್ತದೆ' ಎಂಬ ಮಾತಿಗೆ ಉದಾಹರಣೆಯಾಗಿ ಉದಯಪ್ರಕಾಶ್ ಇಹಲೋಕ ತ್ಯಜಿಸಿದರು. ಚಲನಚಿತ್ರಗಳಲ್ಲಿ ಅವರು ಖಳನಾಯಕರ ಪಾತ್ರಗಳನ್ನು ನಿರ್ವಹಿಸಿದರೂ, ಉದಯಪ್ರಕಾಶ್ ಅವರ ಕೆಟ್ಟ ಅಭ್ಯಾಸಗಳು ಕ್ರಮೇಣ ಅವರನ್ನು ನಾಶಮಾಡಿದವು. #😭💔ನಡುರಸ್ತೆಯಲ್ಲೇ ಪ್ರಾಣ ಬಿಟ್ಟ ಖ್ಯಾತ ನಟ!😭
😭💔ನಡುರಸ್ತೆಯಲ್ಲೇ ಪ್ರಾಣ ಬಿಟ್ಟ ಖ್ಯಾತ ನಟ!😭 - ShareChat
ಖ್ಯಾತ ನಟಿ ರೇಖಾ ಸಿನಿಮಾಗಳು ಎಂದರೇ ಸಿನಿಪ್ರಿಯರಿಗೆ ಹಬ್ಬದಂತೆ.. ವೃತ್ತಿ ಜೀವನದಲ್ಲಿ ಇಷ್ಟರ ಮಟ್ಟಿಗೆ ಕ್ರೇಜ್‌ ಗಳಿಸಿದರು ಇವರ ವೈಯಕ್ತಿಕ ಜೀವನ ಮಾತ್ರ ಕಷ್ಟದಿಂದಲೇ ಕೂಡಿತ್ತು. ಅಮಿತಾಬ್ ಬಚ್ಚನ್ ರೇಖಾ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿದ ಮೊದಲ ನಟ ಅಲ್ಲ. ರೇಖಾ ಅವರ ಹೆಸರು ಮೊದಲು ಜೀತೇಂದ್ರನೊಂದಿಗೆ ಸೇರಿಕೊಂಡಿತ್ತು. ನಟಿ ಅವರ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದಾಳೆ. ಜಿತೇಂದ್ರ ಇದಕ್ಕೂ ಮೊದಲೇ ಮದುವೆಯಾಗಿದ್ದರಿಂದ ಆ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು. #🎦ಸಿನಿಮಾ ಜಗತ್ತನ್ನೇ ಆಳಿದ ಸ್ಟಾರ್‌ ನಟಿ ಈಗಲೂ ಒಂಟಿ😦
🎦ಸಿನಿಮಾ ಜಗತ್ತನ್ನೇ ಆಳಿದ ಸ್ಟಾರ್‌ ನಟಿ ಈಗಲೂ ಒಂಟಿ😦 - ShareChat