SBI ಸರ್ಕಲ್ ಬೇಸ್ಡ್ ಆಫೀಸರ್ (CBO) ನೇಮಕಾತಿ – 2026 ಜನವರಿ 29ರಿಂದ ಅರ್ಜಿ ಸ್ವೀಕಾರ – ಫೆಬ್ರವರಿ 18 ಕೊನೆ ದಿನ
ಭಾರತೀಯ ಸ್ಟೇಟ್ ಬ್ಯಾಂಕ್ (SBI) ದೇಶದ ವಿವಿಧ ವಲಯಗಳಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 29ರಿಂದ ಫೆಬ್ರವರಿ 18ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಈ ನೇಮಕಾತಿ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಹಾಗೂ ಸಂದರ್ಶನದ ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸಲು ಬೇರೆ ಯಾವುದೇ ವಿಧಾನವನ್ನು ಅನುಮತಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.ಅರ್ಜಿ ಶುಲ್ಕಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಎಸ್ಸಿ, ಎಸ್ಟಿ ಹಾಗ