@thatsallkarnataka
@thatsallkarnataka

ThatsAll Karnataka

Just News

ಖಾಸಗಿ ಕನ್ನಡ ಶಾಲೆ ಮಕ್ಕಳಿಗೂ ಇನ್ನು ಮುಂದೆ ಸಿಗಲಿದೆ ಪೌಷ್ಠಿಕ ಆಹಾರ…
#

🏡ನಮ್ಮ ಊರು, ನಮ್ಮ ಸುದ್ದಿ

ಖಾಸಗಿ ಕನ್ನಡ ಶಾಲೆ ಮಕ್ಕಳಿಗೂ ಇನ್ನು ಮುಂದೆ ಸಿಗಲಿದೆ ಪೌಷ್ಠಿಕ ಆಹಾರ…
ಬೆಂಗಳೂರು : ಇನ್ನು ಮುಂದೆ ಅನುದಾನರಹಿತ ಖಾಸಗಿ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ಬಿಸಿಯೂಟ ಹಂಚಿಕೆಯಾಗಲಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.ಇಂಗ್ಲಿಷ್‌ ಮಾಧ್ಯಮಕ್ಕೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮವನ್ನು ಹೆಚ್ಚಾಗಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸದ್ಯದಲ್ಲಿಯೇ ಈ ಕುರಿತುಈ ಕುರಿತು ಅಧಿಕೃತವಾಗಿ ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ,'' ಎಂದು ತಮ್ಮ ಫೇಸ್‌ಬುಕ್‌ನಲ್ಲಿಬರೆದು ಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಚಿವರು ನೀಡಿಲ್ಲ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನಡೆದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸಚಿವ ಸಂಪುಟ ಸಭೆಯಲ್ಲಿಕೈಗೊಂಡ ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದರು. ಪದವಿ ಪೂರ್ವ ಕಾಲೇಜಿನ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ಹಾಗೂ ನರ್ಸರಿ ಮಟ್ಟದಲ್ಲಿ ಮೂರನೇ ವಯಸ್ಸಿನ ಮಕ್ಕಳಿಗೂ ಕಲಿಕೆಗೆ ಅವಕಾಶ ಕಲ್ಪಿಸಲು ಸರಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು.
55 ವೀಕ್ಷಿಸಿದ್ದಾರೆ
6 ನಿಮಿಷಗಳ ಹಿಂದೆ
ಯುವ ಭವಿಷ್ಯ: ಈ ರಾಶಿಯವರಿಗೆ ಮೊಬೈಲ್ ನಿಂದ ಸಂಕಷ್ಟ ಎದುರಾಗುತ್ತದೆ
#

🏡ನಮ್ಮ ಊರು, ನಮ್ಮ ಸುದ್ದಿ

ಯುವ ಭವಿಷ್ಯ: ಈ ರಾಶಿಯವರಿಗೆ ಮೊಬೈಲ್ ನಿಂದ ಸಂಕಷ್ಟ ಎದುರಾಗುತ್ತದೆ
ಯುವ ಭವಿಷ್ಯ: 23-10-19 - ಬುಧವಾರ ಶ್ರೀ ವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಋತು ಆಶ್ವಯುಜ ಮಾಸ ಕೃಷ್ಣ ಪಕ್ಷ ದಶಮಿ ತಿಥಿ ಆಶ್ಲೇಷಾ ನಕ್ಷತ್ರ ಮೇಷ ರಾಶಿ : ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ, ಆದರೆ ಮಾನಸಿಕವಾಗಿ ಕೊಂಚ ಕೊರಗುವ ಸಾಧ್ಯತೆ ಇದೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಹೃದಯ ಸಂಬಂಧಿ ಸಮಸ್ಯೆ ಕಾಡಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ವಿದ್ಯಾರ್ಥಿನಿಯರಿಗೆ ಖಿನ್ನತೆ ಕಾಡಲಿದೆ. ದೋಷಪರಿಹಾರ : ಕಡಲೆ - ತೊಗರಿ ದಾನ ಮಾಡಿ ವೃಷಭ : ಸ್ತ್ರೀಯರ ಮಾತು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ, ವಿದ್ಯಾರ್ಥಿಗಳಲ್ಲಿ ಉಗ್ರ ಭಾವನೆ ಕೆರಳಲಿದೆ, ಶಾಮತತೆ ಬೇಕು,  ಶತ್ರುಗಳ ದೃಷ್ಟಿ ನಿಮ್ಮ ಮೇಲಿರುವುದರಿಂದ ಎಚ್ಚರವಾಗಿರಿ, ಉದ್ಯೋಗದಲ್ಲಿ ಮಿತ್ರರೇ ಶತ್ರುಗಳಾಗುತ್ತಾರೆ, ನಿಮ್ಮ ಮಾತಿಗೆ ಮೌಲ್ಯವಿಲ್ಲದಾಗುತ್ತದೆ. ದೋಷ ಪರಿಹಾರ : ಅವರೆ ದಾನ ಮಾಡಿ ಮಿಥುನ :  ಅನ್ಯೋನ್ಯ ಮಿತ್ರರೂ ದೂರವಾಗುತ್ತಾರೆ, ನಿಮ್ಮ ಮಾತು ಹಾಗೂ ಚತುರತೆ ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ಮಿಶ್ರಫಲದ ದಿನವಾಗಿರಲಿದೆ, ಕಾರ್ಯ ಪ್ರಾರಂಭಕ್ಕೂ ಮುನ್ನ ಯೋಚಿಸಿ. ವೃಥಾ
74 ವೀಕ್ಷಿಸಿದ್ದಾರೆ
15 ನಿಮಿಷಗಳ ಹಿಂದೆ
ಯಡಿಯೂರಪ್ಪ ಎಲ್ಲಿದೀಯಪ್ಪ ಎಂದು ಕಾಂಗ್ರೆಸ್ ನಿಂದ ಲೇವಡಿ!
#

🏡ನಮ್ಮ ಊರು, ನಮ್ಮ ಸುದ್ದಿ

ಯಡಿಯೂರಪ್ಪ ಎಲ್ಲಿದೀಯಪ್ಪ ಎಂದು ಕಾಂಗ್ರೆಸ್ ನಿಂದ ಲೇವಡಿ!
ಬೆಂಗಳೂರು : ಕಾಂಗ್ರೆಸ್ ನಾಯಕರು ಸದ್ಯ ಸಿಎಂ ಯಡಿಯೂರಪ್ಪ ಅವರ ಕಾಲೇಳೆಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ನಿಖಿಲ್ ಎಲ್ಲಿದೀಯಪ್ಪ ಎಂದು ಪ್ರಾರಂಭವಾದ ಮಾತು ಸದ್ಯ ಯಡಿಯೂರಪ್ಪ ಎಲ್ಲಿದೀಯಪ್ಪ ಎಂಬಲ್ಲಿಗೆ ಬಂದು ನಿಂತಿದೆ. ಪ್ರವಾಹದ ನೋವಿನ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರವಾಹದಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ನೆಲೆಗೂ, ತಿನ್ನುವ ಆಹಾರಕ್ಕೂ ಪರದಾಟ ಶುರುವಾಗಿದೆ. ಸಂತ್ರಸ್ತರು ಯಡಿಯೂರಪ್ಪ ಎಲ್ಲಿದೀಯಪ್ಪ ಎಂದು ಕೂಗುತ್ತಿದ್ದಾರೆ. ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? 25 ಜನ ಸಂಸದರು ಕಾಣೆಯಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಬದುಕಿವೆಯೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಅಲ್ಲದೇ, ಸಂತ್ರಸ್ಥರನ್ನು ಕಾಪಾಡಿ ಕಾಪಾಡಿ ಎಂದು ಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿದೆ. ಕಳೆದ ಎರಡು ದಿನಗಳಿಂದ ಭಾರಿ ಮಳೆಯಿಂದ ನಲುಗಿ ಹೋಗಿರುವ ಕರ್ನಾಟಕದಲ್ಲಿನ ಜನತೆ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದಾರೆ. ಜನ - ಜಾನುವಾರ ಬೀದಿಗೆ ಬಂದು ನಿಂತಿವೆ. ಇಷ್ಟಿದ್ದರೂ ಆಡಳಿತ ಹಾಗೂ ವಿರೋಧ ಪಕ್ಷಗಳು ಜನರ ನೋವಿಗೆ ಸ್ಪಂದಿಸದೆ, ಪರಸ್ಪರ ಕಿತ್ತಾಡುತ್ತಿವೆ
319 ವೀಕ್ಷಿಸಿದ್ದಾರೆ
13 ಗಂಟೆಗಳ ಹಿಂದೆ

332 ವೀಕ್ಷಿಸಿದ್ದಾರೆ
13 ಗಂಟೆಗಳ ಹಿಂದೆ
ಇದೇನಾಯಿತು ಬಾಂಗ್ಲಾಗೆ…ಟೀಂ ಇಂಡಿಯಾ ಜೊತೆ ಸರಣಿ ಆಡಲ್ವಾ?
#

🏡ನಮ್ಮ ಊರು, ನಮ್ಮ ಸುದ್ದಿ

ಇದೇನಾಯಿತು ಬಾಂಗ್ಲಾಗೆ…ಟೀಂ ಇಂಡಿಯಾ ಜೊತೆ ಸರಣಿ ಆಡಲ್ವಾ?
ಮುಂಬಯಿ :  ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಗೆ ಬಾಂಗ್ಲಾ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿತ್ತು. ಆದರೆ, ಬಾಂಗ್ಲಾ ಆಟಗಾರರು ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತಕ್ಕೆ ಬರುತ್ತಾರಾ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.ಬಿಸಿಸಿಐಗೆ ನೂತನ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ಮಾತ್ರ ಬಾಂಗ್ಲಾ ದೇಶ ಭಾರತಕ್ಕೆ ಬಂದು ಆಡಲಿದೆ ಎಂಬ ಭರವಸೆ ನೀಡಿದ್ದಾರೆ. ಇದು ಬಾಂಗ್ಲಾ ದೇಶ ಆಟಗಾರರು ಹಾಗೂ ಅಲ್ಲಿನ ಕ್ರಿಕೆಟ್ ಮಂಡಳಿಯ ಆಂತರಿಕ ಸಮಸ್ಯೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬಾಂಗ್ಲಾದೇಶ ಇಲ್ಲಿಗೆ ಬರಲಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ನ. 3ರಿಂದ 3 ಟಿ20 ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದರೆ, ಬಾಂಗ್ಲಾ ಆಟಗಾರರು ಮಾತ್ರ ವೇತನ ಹೆಚ್ಚಳ, ಫ್ರಾಂಚೈಸಿ ಕ್ರಿಕೆಟ್ ಆಡಲು ಅನುಮತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದೆ.
175 ವೀಕ್ಷಿಸಿದ್ದಾರೆ
14 ಗಂಟೆಗಳ ಹಿಂದೆ
ಶಿವಣ್ಣ ಇವರನ್ನೇಕೆ ಇಷ್ಟು ಹೊಗಳಿದರು!?
#

🏡ನಮ್ಮ ಊರು, ನಮ್ಮ ಸುದ್ದಿ

ಶಿವಣ್ಣ ಇವರನ್ನೇಕೆ ಇಷ್ಟು ಹೊಗಳಿದರು!?
ಬೆಂಗಳೂರು : ಒಳ್ಳೆಯದಕ್ಕೆ ನಮ್ಮ ಶಿವಣ್ಣ ಒಳ್ಳೆಯವರು. ಉತ್ತಮರನ್ನು ಹೊಗಳಲು ಅವರು ಯಾವತ್ತೂ ಜಿಗುಪ್ಸೆ ಪಟ್ಟುಕೊಳ್ಳುವುದಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಿತ್ತು. ಸದ್ಯ ಇಂತಹ ಮಾತೊಂದು ಮತ್ತೊಮ್ಮೆ ಕೇಳಿ ಬಂದಿದೆ. ಅಲ್ಲದೇ, ಶಿವಣ್ಣ ಅವರ ಈ ವರ್ತನೆಗೆ ಸಿನಿ ರಸಿಕರು ಫುಲ್ ಫೀದಾ ಆಗಿದ್ದಾರೆ.ಸದ್ಯ ಶಿವಣ್ಣ ಅವರು ಹಿರಿಯ ನಟ ಅನಂತ್ ನಾಗ್ ಅವರನ್ನು ಹೊಗಳಿದ್ದಾರೆ. ಅವರು ನಮ್ಮ ಚಿತ್ರ ತಂಡದ ಮಹಾನ್ ವ್ಯಕ್ತಿ, ಧ್ರವ ತಾರೆ ಎಂತೆಲ್ಲ ಹೊಗಳಿದ್ದಾರೆ. ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಅದರ ಆಡಿಯೋ ಬಿಡುಗಡೆ ನಡೆಯಿತು. ಈ ಸಮಾರಂಭದಲ್ಲಿಯೇ ಶಿವಣ್ಣ ಅನಂತ್ ನಾಗ್ ಅವರನ್ನು ಹೊಗಳಿದ್ದಾರೆ.
328 ವೀಕ್ಷಿಸಿದ್ದಾರೆ
14 ಗಂಟೆಗಳ ಹಿಂದೆ
ದಿಲ್ ರಾಜು ಚಿತ್ರದಿಂದ ಕನ್ನಡದ ಬೆಡಗಿ ಹೊರ ಬಿದ್ದಿದ್ದೇಕೆ?
#

🏡ನಮ್ಮ ಊರು, ನಮ್ಮ ಸುದ್ದಿ

ದಿಲ್ ರಾಜು ಚಿತ್ರದಿಂದ ಕನ್ನಡದ ಬೆಡಗಿ ಹೊರ ಬಿದ್ದಿದ್ದೇಕೆ?
ಬೆಂಗಳೂರು : ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಲುವೆಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಟಿ. ಇವರ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ನಲ್ಲಿಯೂ ಇವರ ಅಭಿಮಾನಿಗಳಿಗೆ ಕೊರತೆಯಿಲ್ಲ.  ಸದ್ಯ ಈ ಬೆಡಗಿ ಬಾಲಿವುಡ್ ನಲ್ಲಿಯೂ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಆದರೆ, ಇವರೊಂದಿಗೆ ಸದ್ಯ ಹತ್ತಾರು ವಿವಾದಗಳು ಮೆತ್ತಿಕೊಳ್ಳುತ್ತಿವೆ. ಹಲವರು ಕಿರಿಕ್ ಹುಡುಗಿ ಎಂದು ಕೂಡ ಕರೆಯುತ್ತಿದ್ದಾರೆ. ಟಾಲಿವುಡ್ ನಿರ್ಮಾಪಕರೊಬ್ಬರ ಜೊತೆಗೆ ಸದ್ಯ ಇವರು ಸಂಭಾವನೆ ವಿಷಯವಾಗಿ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಸದ್ಯ ಸಾಕಷ್ಟು ಬ್ಯುಜಿ ಇರುವ ಇವರು, ತೆಲುಗಿನ ದಿಲ್ ರಾಜು ಬ್ಯಾನರ್ ನಡಿ ಎರಡು ಚಿತ್ರಗಳಿಗೆ ಒಪ್ಪಿದ್ದಾರಂತೆ.  ಆದರೆ, ಚಿತ್ರ ತಂಡ ಮಾತ್ರ ರಶ್ಮಿಕಾ ಅವರನ್ನು ಕೊಲೆ ಘಳಿಗೆಯಲ್ಲಿ ಕೈ ಬಿಟ್ಟಿದೆಯಂತೆ. ರಶ್ಮಿಕಾ ಮಂದಣ್ಣ ಅವರ ಹೆಚ್ಚಿನ ಸಂಭಾವಣೆಗೆ ಬೇಡಿಕೆ ಇಟ್ಟಿದ್ದರಂತೆ ಹೀಗಾಗಿ ಅವರನ್ನು ಕೈ ಬಿಡಲಾಗಿದೆ ಎಂಬ ಗುಸುಗುಸು ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
232 ವೀಕ್ಷಿಸಿದ್ದಾರೆ
14 ಗಂಟೆಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ