ವಿಷ್ಣು ಪ್ರಿಯ 🦚💙
ShareChat
click to see wallet page
@vishnupriya4723
vishnupriya4723
ವಿಷ್ಣು ಪ್ರಿಯ 🦚💙
@vishnupriya4723
ಐ ಲವ್ ಶೇರ್ ಚಾಟ್
#ಹರೇ ಕೃಷ್ಣ #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🙏ಭಕ್ತಿ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼
ಹರೇ ಕೃಷ್ಣ - ShareChat
00:33
#ಮಹಾಭಾರತ #ಪಾಂಡವರು 👌💐🥰 #ಮಹಾಭಾರತ ದ ದ್ರೌಪದಿ ಅಗ್ನಿಜಾತೆಯಾದ ದ್ರೌಪತಿಯ ದೈವೀ ಕಥೆ:- ಮಹಾಭಾರತದಲ್ಲಿ ಪಂಚ ಪಾಂಡವರು ಹಿಂದಿನ ಜನ್ಮದಲ್ಲಿ ದೇವತೆಗಳು ಆಗಿದ್ದ ರು. ತುಂಬಾ ಅಹಂಕಾರ ಪಡುತ್ತಿದ್ದರು. ನಂತರ ಕೋಪ, ತಾಪ, ಶಾಪ ಗಳಿಗೆ ಗುರಿಯಾಗಿ, ಪಶ್ಚಾತಾಪಗೊಂಡ ಅವರು ಹಿಮವತ್ ಪರ್ವತದಲ್ಲಿ ಕಠಿಣ ತಪಸ್ಸು ಮಾಡಿ ವಿಮೋಚನೆ ಮಾಡಿಕೊಂಡು ಧರ್ಮಮಾರ್ಗದಲ್ಲಿ ನಡೆಯುವ ಸಲುವಾಗಿ ಪಾಂಡವರಾಗಿ ಜನ್ಮ ತಾಳಿದ್ದರು. ದ್ರೌಪತಿಯು ಹಿಂದಿನ ಜನ್ಮದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಬಡಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ್ದಳು. ಒಳ್ಳೆಯ ಗುಣವಂತೆ, ರೂಪವಂತೆ ಆಗಿದ್ದರೂ, ಎಷ್ಟು ಕಾಲವಾದರೂ ಮದುವೆಯಾಗಲಿಲ್ಲ. ಆಗ ಅವಳು ಈಶ್ವರನನ್ನು ಕುರಿತು ಕಠಿಣ ತಪಸ್ಸು ಮಾಡಿದಳು. ಈಶ್ವರನು ಪ್ರತ್ಯಕ್ಷನಾದನು ಅವನನ್ನು ನೋಡಿ ಗಾಬರಿಗೊಳಗಾದಳು, ನಿನಗೆ ಏನು ಬರಬೇಕು ಎಂದು ಈಶ್ವರನು ಕೇಳಲು, ಗಂಡ ಬೇಕು, ಗಂಡ ಬೇಕು, ಅಂತ ಐದು ಸಲ ಹೇಳಿದಳು. ಶಿವನು ತಥಾಸ್ತು ಎಂದು ಹೇಳಿ, ಮುಂದಿನ ಜನ್ಮದಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಗುಣವಿರುವ ಐದು ಜನ ಪತಿಯರನ್ನು ಪಡೆಯುವೆ ಎಂದು ವರ ಕೊಟ್ಟನು. ಇದನ್ನು ಕೇಳಿ ಗಾಬರಿಯಾಗಿ, ಪರಮೇಶ್ವರ ಹೀಗಾದರೆ ಜನಗಳು ನನ್ನ ಪಾತಿವ್ರತ್ಯವನ್ನು ಕುರಿತು ಮಾತನಾಡುತ್ತಾರೆ ಏನು ಮಾಡಲಿ ಎಂದಳು. ಆಗ ಶಿವನು ಐದು ಜನರು ಅಂದರೆ ವ್ಯಕ್ತಿಯಲ್ಲ. ಬೇರೆ ಬೇರೆ ದೇವತೆಗಳ ಅಂಶದಿಂದ ಬಂದಿರುತ್ತಾರೆ. ಆದ್ದರಿಂದ ಅವರೆಲ್ಲಾ ನಿನ್ನ ಪತಿ ಯಾಗುತ್ತಾರೆ. ಮತ್ತೆ ಶಿವನು ಇನ್ನೊಂದು ವರವನ್ನು ಕೊಡುತ್ತಾನೆ. ಐದು ಜನರ ಜೊತೆ ಮದುವೆಯಾದ ಮೇಲೆ ನೀನು ಮಂಗಳಸ್ನಾನ ಮಾಡಿದಾಗಲೆಲ್ಲ ಮರಳಿ ಕನ್ಯತ್ವವ ನ್ನು ಪಡೆಯುವೆ. ಈ ರೀತಿ, ಐದುಜನ ಪತಿಭಾಗ್ಯದ ಜೊತೆಗೆ, ಇನ್ನೊಂದು ವರವನ್ನು ದ್ರೌಪತಿಗೆ ಶಿವನು ಕೊಡುತ್ತಾನೆ. ಹೀಗಾಗಿ ದ್ರೌಪದಿಯು ತನ್ನ ಐದು ಜನರಲ್ಲಿ ಒಬ್ಬರಿಂದ ಮತ್ತೊಬ್ಬರು ಬಳಿ ಹೋಗುವಾಗ ಮಂಗಳ ಸ್ನಾನ ಮಾಡಿ ಆಯಾ ದೇವತೆಯನ್ನು ಆವಾಹನೆ ಮಾಡಿಕೊಂಡು ಹೋಗುತ್ತಿದ್ದಳು. ಹೀಗಾಗಿಯೇ ದ್ರುಪದನು ದ್ರೌಪತಿಯನ್ನು ಐದು ಜನ ಪಾಂಡವರಿಗೆ ಕೊಟ್ಟು ಸಂಭ್ರಮದಿಂದ ವಿವಾಹ ಮಾಡುತ್ತಾನೆ. ಆದರೆ ಒಂದೇ ದಿನವೇ ಐದು ಜನ ಪಾಂಡವರಿಗೂ ಕೊಟ್ಟು ಮದುವೆ ಮಾಡದೆ, ಧಾರ್ಮಿಕ ವಿಧಿ-ವಿಧಾನಗಳಂತೆ ಮೊದಲು ಧರ್ಮರಾಯ , ಎರಡನೇ ದಿನ ಭೀಮ, ಮೂರನೆಯ ದಿನ ಅರ್ಜುನ , ನಾಲ್ಕನೆ ದಿನ ನಕುಲ , ಐದನೆಯ ದಿನ ಸಹದೇವನಿಗೆ ಕೊಟ್ಟು ಅದ್ದೂರಿಯಾಗಿಯೇ ವಿವಾಹ ಮಾಡುತ್ತಾನೆ. ಈ ರೀತಿ ಮದುವೆ ಮಾಡಲು ಕಾರಣ ಆಯಾ ದಿನಗಳಲ್ಲಿ ಆಯಾ ದೇವತೆಗಳ ಅಂಶ ಅವರಲ್ಲಿ ಸೇರಿರುತ್ತದೆ. ದ್ರೌಪತಿ ಮದುವೆ ವ್ಯಕ್ತಿ ಜೊತೆ ಆಗಿರದೆ, ಆಯಾ ದೇವತೆಗಳ ಜೊತೆ ಮಾಡಬೇಕಿತ್ತು . ಇದೆಲ್ಲವೂ ವೇದವ್ಯಾಸರ ಆಣತಿಯಂತೆ ನಡೆಯಿತು. ಇದರಲ್ಲಿ ವೇದವ್ಯಾಸರ ದೂರದೃಷ್ಟಿಯ ಆಲೋಚನೆ ಇರುತ್ತದೆ. ಐದು ಜನ ಪಾಂಡವರು ಒಟ್ಟಾಗಿ ಇದ್ದರೆ ಮಾತ್ರ ಅಧರ್ಮವನ್ನು ನಾಶಮಾಡಬಹುದು. ಹಾಗೆಯೇ ದ್ರೌಪತಿಗಿರುವ ದೈವೀಶಕ್ತಿ ಇನ್ಯಾರಲ್ಲೂ ಇರಲು ಸಾಧ್ಯವಿಲ್ಲ. ಈ ರೀತಿ ವೇದವ್ಯಾಸರು ಶಕ್ತಿದೇವತೆ ದ್ರೌಪತಿಯನ್ನು ಪಂಚಪಾಂಡವರಿಗೆ ಕೊಟ್ಟು ಮದುವೆ ಮಾಡಿಸುವ ಮೂಲಕ ಧರ್ಮದ ಪರಂಪರೆ ಮುಂದುವರೆಸಿದರು. ಸ್ವಯಂವರದಲ್ಲಿ ಅರ್ಜುನನು ಸಭೆಯಲ್ಲಿ ಮೀನಿನ ಕಣ್ಣಿಗೆ ಬಾಣ ಹೊಡೆಯುವುದರ ಮೂಲಕ ದ್ರೌಪತಿಯನ್ನು ವರಿಸಿ ಮದುವೆ ಮಾಡಿಕೊಂಡು ಉಳಿದ ಸಹೋದರರ ಜೊತೆ ಮನೆಗೆ ಬಂದನು. ಒಳಗೆ ಕೆಲಸದಲ್ಲಿ ಮಗ್ನಳಾದ ಕುಂತಿ ಮಕ್ಕಳು 'ಹೆಣ್ಣು' ತಂದಿದ್ದೇವೆ ಎಂದು ಹೇಳಿದ್ದನ್ನು 'ಹಣ್ಣು' ಎಂದು ಕುಂತಿ ಕಿವಿಗೆ ಕೇಳಿಸಿ, ಐದು ಜನರು ಹಂಚಿಕೊಳ್ಳಿ ಎಂದಳು. ನಂತರ ಪಶ್ಚಾತಾಪ ಗೊಂಡು, ತನ್ನಿಂದ ಹೀಗಾಯಿತಲ್ಲ ಎಂದು ಕೊಂಡಿರುವಾಗ ಕೃಷ್ಣನು ಮುಂದೆ ಬಂದು, ಅತ್ತೆ ಇವೆಲ್ಲವೂ ವಿಧಿ ನಿಯಮದಂತೆ ನಡೆದಿದ್ದು. ನೀನು ನೆಪಮಾತ್ರ ಹಿಂದಿನ ಜನ್ಮದಲ್ಲಿ ದ್ರೌಪತಿಯು ಪರಮೇಶ್ವರನ ಪರಮ ಭಕ್ತೆಯಾಗಿದ್ದಳು. ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಧರ್ಮ ಪಾಲಿಸುವ, ಹಾಗೂ ಶಕ್ತಿಶಾಲಿ, ಬಿಲ್ವಿದ್ಯೆ ಪರಿಣತ, ಸುಂದರ ಮತ್ತು ಧೈರ್ಯವಂತನಾದ ಪತಿಬೇಕು ಎಂದು ಶಿವನನ್ನು ಕೇಳಿದಳು. ಆಗ ಶಿವನು ಈ ತರಹ 5 ಗುಣಗಳಿರುವ ಒಬ್ಬನೇ ವ್ಯಕ್ತಿ ಇರುವುದಿಲ್ಲ. ಆದ್ದರಿಂದ ಒಬ್ಬೊಬ್ಬರಲ್ಲಿ ಒಂದೊಂದು ಗುಣವಿರುವ ಐದು ಜನ ಪತಿಯರು ನಿನಗೆ ದೊರೆಯುತ್ತಾರೆ ಎಂದು ಶಿವನು ವರ ಕೊಟ್ಟ ವಿಚಾರವನ್ನ ಕುಂತಿಗೆ ಹೇಳಿದನು. ದುರ್ಯೋಧನ ಮತ್ತು ಶಕುನಿಯ ಕುತಂತ್ರದಿಂದ ಪಗಡೆಯಾಟದಲಿ ಸೋತ ಪಾಂಡವರು ದ್ರೌಪದಿಯ ಸಹಿತ ವನವಾಸಕ್ಕೆ ಹೊರಟು, ನಡೆಯುತ್ತಿರುವಾಗ ಮಧ್ಯದಲ್ಲಿ ಮೈತ್ರೇಯ ಮುನಿಗಳು ಅವರಿಗೆ ಸಿಗುತ್ತಾರೆ.ಧರ್ಮರಾಜನು ಮುನಿಗಳಿಗೆ ನಮಸ್ಕರಿಸಿ, ಮಹರ್ಷಿಗಳೇ ಮುಂದೆ ನಮ್ಮ ಗತಿಯೇನು? ನಮ್ಮ ಆಹಾರದ ವ್ಯವಸ್ಥೆಗೆ ಏನು ಮಾಡೋಣ ಹೇಗೆ ನಡೆಯುತ್ತದೆ ಎಂದು ಕೇಳಿದಾಗ, ಮೈತ್ರೇಯರು, ಧರ್ಮರಾಯ ನೀನು ಯೋಚಿಸುವುದು ಬೇಡ ನಿನ್ನ ಪತ್ನಿ ದ್ರೌಪತಿ ಮಹಾಭಕ್ತಳಾಗಿದ್ದು, ಹಿಂದಿನ ಜನ್ಮದಲ್ಲಿ ಅನ್ನದಾನ ಮಾಡುತ್ತಾ, ಧರ್ಮಗಳನ್ನು ಶ್ರದ್ಧೆಯಿಂದ ಆಚರಿಸಿದಳು. ಅವಳು ಮಾಡಿದ ಪುಣ್ಯದಿಂದ, ಅವಳು ನಿಮ್ಮ ಜೊತೆ ಇದ್ದರೆ ಯಾವತ್ತಿಗೂ ನಿಮಗೆ ಊಟಕ್ಕೆ ತೊಂದರೆಯಾ ಗುವುದಿಲ್ಲ ಎಂದು ಧೈರ್ಯ ತುಂಬಿದರು. ಧೃತಿ, ಕ್ಷಮಾ, ದಮೋಸ್ತೇಯಂ, ಶೌಚಂ ಇಂದ್ರಿಯನಿಗ್ರಹ ! ಧೀರ್ವಿದ್ಯಾ ಸತ್ಯಮ ಕ್ರೋಧೋ ದಶಕಮ್ ಧರ್ಮಲಕ್ಷ್ಮಣಂ ಧೈರ್ಯ, ಕ್ಷಮಾಗುಣ ,ಮನಸ್ಸಿನ ಹಿಡಿತ, ಕಳ್ಳತನ ಮಾಡದಿರುವುದು,ಶುಚಿತ್ವ, ಇಂದ್ರಿಯಗಳ ನಿಯಂತ್ರಣ, ಬುದ್ಧಿ, ವಿದ್ಯೆ, ಸತ್ಯತೆ ಮತ್ತು ಕೋಪಿಸಿಕೊಳ್ಳದಿರುವು ದು ಈ ಹತ್ತು ಧರ್ಮದ ಲಕ್ಷಣಗಳು. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಮಹಾಭಾರತ - ShareChat
#🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥 #ಓಂ ನಮಃ ಶಿವಾಯ
🙏 ಭಕ್ತಿ ವಿಡಿಯೋಗಳು 🌼 - ShareChat
00:21
#ಹರೇ ಕೃಷ್ಣ #🙏ಭಕ್ತಿ ಸ್ಟೇಟಸ್
ಹರೇ ಕೃಷ್ಣ - ShareChat
01:27
#ಹರೇ ಕೃಷ್ಣ 💚🙏ನಮೋ ವಾಸುದೇವಾ🙏💚 🙏ಭಕ್ತರು🙏 ಒಬ್ಬ ಭಕ್ತನು ಮಾತ್ರ ತೊಂದರೆಗಳನ್ನು ಪಡೆಯುತ್ತಾನೆ, ಏಕೆಂದರೆ ಇದು ಭಕ್ತರ ಕೊನೆಯ ಜನ್ಮ; ಅನೇಕ ಕರ್ಮಗಳನ್ನು ರೂಪಿಸಬೇಕಾಗಿದೆ ಮತ್ತು ಈ ಜನ್ಮದಲ್ಲಿ ಭಕ್ತರು ಭಗವಂತನೊಂದಿಗೆ ಒಂದಾಗಬೇಕು. ಭಗವಂತ ತನ್ನ ಭಕ್ತನಿಗೆ ತೊಂದರೆಗಳನ್ನು ಮತ್ತು ವಿಪತ್ತುಗಳನ್ನು ಭರಿಸಲು ಅಪಾರ ತಾಳ್ಮೆ ಮತ್ತು ಶಕ್ತಿಯನ್ನು ನೀಡುತ್ತಾನೆ. ಭಕ್ತ ಎಂದೆಂದಿಗೂ ಶಾಂತ ಮತ್ತು ಹರ್ಷಚಿತ್ತದಿಂದ ಇರುತ್ತಾನೆ. ಭಗವಂತನ ಆಲೋಚನೆಯಲ್ಲಿ ಅವರ ಮನಸ್ಸು ಎಂದೆಂದಿಗೂ ವಾಸಿಸುತ್ತಿರುವುದರಿಂದ ಭಕ್ತಿನಿಗೆ ತೊಂದರೆಗಳು ಕನಿಷ್ಠ ಪರಿಣಾಮ ಬೀರುವುದಿಲ್ಲ. ಭಕ್ತನಿಗೆ ದೇಹ ಪ್ರಜ್ಞೆ ಇಲ್ಲ. ಗೊಣಗಬೇಡಿ, . ದೇವರ ಚಿತ್ತವಿಲ್ಲದೆ ಒಂದು ಎಲೆ ಕೂಡ ಚಲಿಸಲು ಸಾಧ್ಯವಿಲ್ಲ. ದೇವರ ಇಚ್ಛೆಯಂತೆ ನಡೆಯಲು ಉದ್ದೇಶಿಸಲಾಗಿರುವುದು, ನಡೆಯುತ್ತದೆ. ಪ್ರತಿ ಕಷ್ಟ ಮತ್ತು ಜೀವನದ ಯುದ್ಧವನ್ನು ತಾಳ್ಮೆಯಿಂದ ಮತ್ತು ವೀರೋಚಿತವಾಗಿ ಕಿರುನಗೆಯಿಂದ ಎದುರಿಸಿ. ಧೈರ್ಯಶಾಲಿಯಾಗಬೇಕು ನಮ್ಮ ನಂಬಿಕೆಯನ್ನು ತೀವ್ರಗೊಳಿಸಲು, ನಮ್ಮ ಇಚ್ಛೆ ಇಚ್ಛಾಶಕ್ತಿ ಮತ್ತು ಸಹಿಷ್ಣುತೆಯ ಶಕ್ತಿಯನ್ನು ಬಲಪಡಿಸಲು ಮತ್ತು ನಮ್ಮ ಮನಸ್ಸನ್ನು ಹೆಚ್ಚು ಹೆಚ್ಚು ದೇವರ ಕಡೆಗೆ ತಿರುಗಿಸಲು ತೊಂದರೆಗಳು ಮತ್ತು ನೋವುಗಳು ಬರುತ್ತವೆ. ನೋವುಗಳಿಂದ ಕಣ್ಣು ತೆರೆಯುವವನು. ಅದು ನಮ್ಮ ಮೂಕ ಶಿಕ್ಷಕ. ಇದು ದೇವರನ್ನು ನೆನಪಿಡುವಂತೆ ಮಾಡುತ್ತದೆ. ಕುಂತಿ ದೇವರನ್ನು ಪ್ರಾರ್ಥಿಸುತ್ತಿದ್ದಳು ಓ ದೇವರೇ! ಶ್ರೀಕೃಷ್ಣ! ನಾನು ಯಾವಾಗಲೂ ನಿನ್ನನ್ನು ನೆನಪಿಸಿಕೊಳ್ಳುವ ಹಾಗೆ ನನಗೆ ಯಾವಾಗಲೂ ನೋವು ಕೊಡು. ಅಂತ. ನಾವು ಪಡೆಯುವ ಹೆಚ್ಚು ತೊಂದರೆಗಳು ಬಲವಾದ ಮತ್ತು ದೃಢ ವಾದ ದೇವರ ಮೇಲಿನ ನಂಬಿಕೆಯಾಗುತ್ತದೆ. ನಮಗೆ ಬರುವ ಕೆಟ್ಟ ತೊಂದರೆಗಳು ಮತ್ತು ಪ್ರತಿಕೂಲಗಳು ಅವುಗಳಲ್ಲಿ ದೊಡ್ಡ ಉದ್ದೇಶ ಮತ್ತು ಅರ್ಥವನ್ನು ಹೊಂದಿವೆ. ದೇವರು ನಮ್ಮನ್ನು ದೈವಿಕ ಜೀವಿಗಳಾಗಿ ರೂಪಿಸುತ್ತಾರೆ. ನೋವುಗಳಿಗೆ ಸ್ವಾಗತಿಸಿ ಮತ್ತು ಹೇಳಿ: ನಾನು ನಿನ್ನವನು, ಎಲ್ಲವೂ ನಿನ್ನದು, ನಿನ್ನ ಚಿತ್ತ ನೆರವೇರುತ್ತದೆ, ಓ ನನ್ನ ಭಗವಂತ. ನಮ್ಮ ಹೃದಯ, ಮನಸ್ಸು ಮತ್ತು ಆತ್ಮದಿಂದ ಭಗವಂತನನ್ನು ಸಂಪರ್ಕಿಸುವ. ಯಾವುದೇ ಮೀಸಲಾತಿಯನ್ನು ಇಟ್ಟುಕೊಳ್ಳಬೇಡಿ. ಯಾವುದೇ ರಹಸ್ಯ ಸಂತೃಪ್ತಿಯನ್ನು ಇಟ್ಟುಕೊಳ್ಳಬೇಡಿ. ನಾವು ದೇವರಿಗೆ ಹತ್ತಿರವಾಗಿ ಅತ್ಯಂತ ಆಶೀರ್ವದಿಸಲ್ಪಡುತ್ತೇವೆ. ಮತ್ತು ಭಗವಂತ ನ ಪೂರ್ಣ ಅನುಗ್ರಹವನ್ನು ಪಡೆಯುತ್ತೇವೆ. ಪ್ರಹ್ಲಾದ, ಮೀರಾ ಮತ್ತು ಸಕ್ಕು ಬಾಯಿ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು. ಆದರೆ ಭಗವಂತ ಅವರಿಗೆ ಶಕ್ತಿ ಮತ್ತು ಶಾಂತಿಯನ್ನು ಕೊಟ್ಟನು. ಅವರು ಸ್ವಲ್ಪವೂ ಚಿತ್ರಹಿಂಸೆ ಅನುಭವಿಸಲಿಲ್ಲ. ಭಗವಂತ ಅವರಿಗೆ ದರ್ಶನ ನೀಡಿ ಆಶೀರ್ವದಿಸಿದರು. ಭಗವಂತನ ಅನುಗ್ರಹವು ಸ್ವಯಂ-ಶರಣಾಗತಿಯ ಮಟ್ಟಕ್ಕೆ ಅನುಗುಣವಾಗಿರುತ್ತದೆ. ಎಷ್ಟು ಶರಣಾಗುತ್ತದೆಯೋ ಅಷ್ಟು ಅವನ ಅನುಗ್ರಹ ಜಾಸ್ತಿಯಾಗಿರುತ್ತದೆ.. ಓಂ ನಮೋ ಭಗವತೇ ವಾಸುದೇವಾಯ 💚🙏ಕೃಷ್ಣ...ಕೃಷ್ಣ...ಕೃಷ್ಣ🙏💚 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಹರೇ ಕೃಷ್ಣ - 99 9 +9@ eo ~9;9   9 99 9 +9@ eo ~9;9   9 - ShareChat
#ಶುಭೋದಯ ತಾಳ್ಮೆಯಿಂದಿರಿ ಸರಿಯಾದ ಸಮಯಕ್ಕೆ ಪ್ರತಿಯೊಂದನ್ನು ಪಡೆದುಕೊಳ್ಳುತ್ತಿರಿ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಶುಭೋದಯ - ShareChat
#🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🙏ಭಕ್ತಿ ಸ್ಟೇಟಸ್
🔱 ಭಕ್ತಿ ಲೋಕ - ShareChat
00:21
#ತಿರುಪ್ಪಾವೈ ಪಾಶುರಂ ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 1 ಶ್ರೀ ನೀಳಾ ದೇವೈ ನಮಃ ತಿರುಪ್ಪಾವೈ ಕನ್ನಡದಲ್ಲಿ ಲೇಖನಮಾಲೆಯ ಪೀಠಿಕೆ ಇಲ್ಲಿದೆ ಮಾರ್ಕಳಿ ತ್ತಿಂಗಳ್ಮದಿನಿರೈಂದ ನನ್ನಾಳಾ। ನೀರಾಡ ಪ್ಪೋದುವೀರ್,ಪೋದುಮಿನೋ ನೇರಿಲೈಯೀರ್। ಶೀರ್ ಮಲ್ಗುಂ ಆಯ್ ಪ್ಪಾಡಿ ಶೆಲ್ವಚ್ಚಿರು ಮೀರ್ ಕಾಳ್ । ಕೂರ್ವೇಲ್ ಕೊಡುಂದೊಳಿಲನ್ ನಂದಗೋಪನ್ ಕುಮರನ್। ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ ಕಾರ್ಮೇನಿಚ್ಚಜ್ಞ್ಗಣ್ ಕದಿರ್ಮದಿಯಂ ಬೋಲ್ ಮುಗತ್ತಾನ್ ನಾರಾಯಣನೇ ನಮಕ್ಕೇ ಪರೈತರುವಾನ್ ಪಾರೋರ್ ಪುಗಳಪ್ಪಡಿಂದೇಲೋ ರೆಂಬಾವಾಯ್ ॥1॥ ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ: ನಂದಗೋಪಕುಮಾರ, ನಳಿನಾಕ್ಷ, ರವಿಚಂದ್ರರಂದವಡೆದಿಹ, ವದನ ಮಂಡಲದಿ ಶೋಭಿಸುವ ಮಂದಹಾಸ ತ್ರಿಮುಖ, ಸರ್ವಜೀವ ಪ್ರಮುಖ, ಮೇಘವರ್ಣಾಂಗ ಹರಿಯು | ಚಂದದೀ ಮಾರ್ಗಶಿರಮಾಸದಲಿ , ಶೋಭಿಸಿಹ ಚಂದಿರನ ಬೆಳಕಿನೊಳು ಕ್ರೀಡೆಗೆಳಸುವ ಸೊಬಗಿನಿಂದು ಮುಖಿಯರು ಬನ್ನಿ , ಬನ್ನಿ ನೀವ್ ಗೆಳತಿಯರೆ, ಕಾದಿರ್ಪ ವ್ರತಾಮುಕ್ತಿಗೆ ||1|| ಮಾಸಗಳೊಳಗೆ ಉತ್ತಮವಾದ ಮಾರ್ಗಶೀರ್ಷ ಮಾಸವು ಬಾರ್ಹ್ಯಸ್ಪತ್ಯ ರೀತ್ಯ ಮೊದಲ ತಿಂಗಳು. ಗೋದಾದೇವಿಗೆ ಈ ತಿಂಗಳು ‘ಯುಗಾದಿ’ ಅಂದರೆ ಮೊದಲನೆಯ ದಿನವಾಗಿ ಕಂಡು ಬಂದಿದೆ. ದ್ವಾದಶ ನಾಮಗಳಿಗೆಲ್ಲ ಮೊದಲನೆಯದಾದ ಶ್ರೀ ಕೇಶವನೆಂಬ ನಾಮವುಳ್ಳ ಮಾಸವಿದು. ಈ ತಿಂಗಳಿಗೆ ‘ಕೇಶವನೇ” ಅಧಿದೇವತೆ. ಆದ್ದರಿಂದಲೇ ಒಂದು ಕಾಲದಲ್ಲಿ ವರ್ಷಾರಂಭವಿದ್ದಿತೆಂದು ಕೆಲವೆರೆನ್ನುವರು:- “ಆದಾಯ ಮಾರ್ಗಶೀರ್ಷಾದಿದೌದೌ ಮಾಸೌ ಋತುರ್ಮತಃ”– (ಕಾತ್ಯಾಯನ) “ಮಾರ್ಗಾದೀನಾಂ ಯುಗೈಹಿ ಕ್ರಮಾತ್” – (ಅಮರಸಿಂಹ) ಎಲ್ಲಕ್ಕೂ ಒಳ್ಳೆಯ ಕಾಲವೆಂಬುದು ಬಹು ಮುಖ್ಯ. ಅನಾದಿ ಕಾಲದಿಂದ ನಡೆದು ಬಂದ ವಿಪರೀತರುಚಿ ನೀಗಿ ನಿರ್ವೇದದಿಂದ ಭಗವಂತನಲ್ಲಿ ರುಚಿ ಹುಟ್ಟುವ ಕಾಲವೇ ಆತ್ಮನಿಗೆ ಒಳ್ಳೆಯ ಕಾಲ. ಬರೀ ಬಾಹ್ಯ ಮುಂಜಾನೆ ಮಾತ್ರವಲ್ಲದೆ ಆಂತರಕ್ಕೂ ಮುಂಜಾನೆಯಿದು. ಅನಾದಿ ಮಾಯೆಯಿಂದ ನಿದ್ರಿಸುತ್ತಿರುವ ಜೀವನಿಗೆ ಆಂತರ ಪ್ರಬೋಧವಿದು. ಸಂಸಾರ ಚಕ್ರದಲ್ಲಿ ಸಿಕ್ಕಿ ಸ್ವಕರ್ಮಗಳಿಂದ ಸುತ್ತುತ್ತ ದುಃಖಾಕುಲನಾದ ಜೀವನಿಗೆ ಭಗವತ್ಪ್ರಸಾದ ವಿಶೇಷ ಲಭಿಸುವಂತೆ ಮಾಡುವ ಒಂದು ವಿಶೇಷ ವ್ರತಾಚರಣೆ ಏರ್ಪಟ್ಟ ದಿವಸವಾದ್ದರಿಂದ ಇದಕ್ಕೆ ಬಹಳ ಪ್ರಾಮುಖ್ಯವಿದೆ. ಮಾರ್ಗಳಿ ತ್ತಿಂಗಳ್: ‘ಮಾ’ ಎನ್ನುವ ಮಂಗಲವಾಚಕ ಅಕ್ಷರವು ಮೊದಲಲ್ಲಿದೆ. ಇಂತಹ ಶ್ರೇಷ್ಠವಾದ ಮಾಸದಲ್ಲಿ (ಮತಿನಿರೈನ್ದ) ಚಂದಿರನ ಪೂರ್ಣವಾದ ಬೆಳದಿಂಗಳಿಂದ ಕೂಡಿದ ಶುಭ ದಿನದಲ್ಲಿ ಸ್ನಾನ ಮಾಡ ಹೋಗಲು ಆಸಕ್ತಿವುಳ್ಳವರೇ ಬನ್ನಿರಿ. ಐಶ್ವರ್ಯದಿಂದ ತುಂಬಿ ತುಳುಕುವ ಗೋಕುಲದ ಶ್ರೀಮಂತ ಕನ್ಯೆಯರೇ, ಸುಂದರ ಬಾಲೆಯರೇ, ಶ್ಲಾಘ್ಯವಾದ ಆಭರಣವುಳ್ಳವರೇ, ಅಂದರೆ ಪರಮಾತ್ಮನನ್ನು ಸೇರಬೇಕೆಂಬ ಭಕ್ತಿ ಪರವಶತೆಯುಳ್ಳ ಶೇಷತ್ವ ಜ್ಞಾನವುಳ್ಳವರೆ ಬನ್ನಿ- ಹೀಗೆ ಗೋದಾದೇವಿ ಮಾಸದ ಮಹಿಮೆಯನ್ನು ಹಾಗು ಸಖಿಯರನ್ನು ವರ್ಣಿಸುತ್ತಾಳೆ. ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ. ಚೂಪಾದ ವೇಲಾಯುಧವನ್ನು ಧರಿಸಿ, (ಕೂರ್ವೇಲ್ ಕೊಡುಂದೊಳಿಲನ್ ) ದುಷ್ಟ ನಿಗ್ರಹಕ್ಕಾಗಿ ಉಪಯೋಗಿಸಿ, ತನ್ನ ಭಕ್ತರನ್ನು ಸಂರಕ್ಷಿಸುವವನೂ, ನಂದಗೋಪನಿಗೆ ಮಗನಾದ, (ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ) ಯಶೋದೆಯ ವಾತ್ಸಲ್ಯ ಪೂರ್ಣ ನೇತ್ರಗಳಿಗೆ ಸಿಂಹದ ಮರಿಯಂತೆ ಇರುವವನೂ, ನೀಲ ಮೇಘ ಶ್ಯಾಮನಾಗಿ, ತಾವರೆ ಹೂವಿನ ದಳದಂತೆ ಕಣ್ಣುಳ್ಳವನೂ , ಸೂರ್ಯನ ತೇಜಸ್ಸಿನಂತೆ ಮುಖವುಳ್ಳವನೂ, ಜಗತ್ಕಾರಣನೂ, ರಕ್ಷಕನೂ, ಲಯಕರ್ತನೂ- ಆದ ದೈವವೇ ಈಗ ಶ್ರೀಕೃಷ್ಣನಾಗಿ ನಿಂತಿರುವವನು. ಅವನ ಪಾದಾರವಿಂದವನ್ನೇ ಅನನ್ಯರಾಗಿ ಆಶ್ರಯಿಸಿರುವ ನಮಗೆ ವ್ರತಸಾಧನೆಗಳನ್ನು ಕೊಡುವನು. ಈ ಲೋಕದವರೆಲ್ಲ ಸ್ತೋತ್ರ ಮಾಡುವಂತೆ ಅವಧಾನದಿಂದ ಇದ್ದರೆ ನಮ್ಮ ಈ ವ್ರತವು ಅದ್ವಿತೀಯವಾಗುವುದೆನ್ನುತ್ತಾಳೆ. ಮಾರ್ಗಶೀರ್ಷ ಮಾಸವು, ಆಂಡಾಳ್ ದೇವಿಗೆ ಬಹು ಇಷ್ಟವಾದ ಮಾಸ. ಇದು ಶ್ರೀ ತಿರುಪ್ಪಾವೈ ಅನುಭವದ ಮೇಲ್ಮೈಯಿಂದ ಬಂದುದು. ಇದು ಸುಪಕ್ವವಾದ ಸಸ್ಯಾದಿ ಸಂಪನ್ನವಾದುದು, ಸರ್ವ ಸಸ್ಯಗಳೂ ಫಲಿಸಿ ಪಕ್ವವಾಗಿರುವಂತೆ, ತಮ್ಮ ಸಾತ್ವಿಕ ಸಾಧನೆಗೆ ಅನುಕೂಲಕರವೆಂದೂ, ಕಾತ್ಯಾಯಿನಿ ವ್ರತ ಹಾಗು ತಿರುಪ್ಪಾವೈ ವ್ರತಗಳನ್ನು ಆಚರಿಸಿ ಸಿದ್ಧಿಪಡೆಯುವುದು. ಗೋ-ಕ್ಷೀರ ಸಮೃದ್ಧಿಯುಳ್ಳದ್ದು. ಶಿಷ್ಟರು ನಡೆಸುವ ನವಾಗ್ರಯಣ ಪೂಜೆಗಳಿಂದ ಪಿತೃ ದೇವತೆಗಳೂ ಸಂತೋಷಿಸುವ ಕಾಲ. ದಕ್ಷಿಣಾಯನವೆಂಬುದು ದೇವತೆಗಳಿಗೆ ರಾತ್ರಿ. ಆ ರಾತ್ರಿಗೆ ಇದು ಉಷಃಕಾಲ, ಬ್ರಾಹ್ಮೀ ಮುಹೂರ್ತದಂತೆ ಇದು ಸತ್ತ್ವೋನ್ಮೇಷಕರವಾದ ಕಾಲ. ‘ಮೃಗಶೀರ್ಷಾ’ ನಕ್ಷತ್ರಸಹಿತನಾಗಿ ಚಂದ್ರನು ಪೂರ್ಣವಾಗಿ ಉದಯಿಸುವುದು ಈ ಮಾಸದಲ್ಲಿ. ಈ ನಕ್ಷತ್ರಕ್ಕೆ ಅಧಿದೇವತೆ ಚಂದ್ರ. ಈ ಕಾಲದಲ್ಲಿ ದೇವತೆಗಳೂ, ಪಿತೃಗಳೂ ನಮಗೆ ಸನ್ನಿಹಿತರಾಗುತ್ತಾರೆ. ಆದ್ದರಿಂದ, ಮುಂಜಾನೆ ಎದ್ದು ಶುದ್ಧರಾಗಿ ಅವರನ್ನು ಪೂಜಿಸುವುದಕ್ಕೆ ಮತ್ತು ಚಿಂತಿಸುವುದಕ್ಕೆ ಅನುಕೂಲಕರ. ಧನುರ್ಮಾಸದಲ್ಲಿ ಬೆಳದಿಂಗಳಿಂದ ಕೂಡಿದ ತಂಪಾದ ಉಷಃ ಕಾಲ ವ್ರತಾನುಷ್ಠಾನಕ್ಕೆ ಸೂಕ್ತ. ಅದು ಮನುಷ್ಯನಲ್ಲಿ ಸತ್ವ ಗುಣವನ್ನು ಉದ್ರೇಕಗೊಳಿಸಿ, ಭಗವಧ್ಯಾನವೇ ಮುಂತಾದ ಮಾನಸಿಕ ಕ್ರಿಯೆಗಳಿಗೆ ಮನಸ್ಸನ್ನು ಮುದಗೊಳಿಸುತ್ತದೆ. ಕೆಲ ಕೆಲವು ವ್ರತಗಳನ್ನು ಆಚರಿಸಲು ಬೇಕಾದ ಅರ್ಹತೆಯು ಕೆಲವರಿಗೆ ಮಾತ್ರ ಇರುವುದೆಂದು ಹೇಳುವರು. ಅದೇ ರೀತಿ, ’ತಿರುಪ್ಪಾವೈ’ ವ್ರತವನ್ನು ಆಚರಿಸಲು ಬೇಕಾದದ್ದು ‘ಮನಸ್ಸಿನ ಇಚ್ಛೆ’ . ‘ಪೋದುಮಿನೋ’ ಎಂದು ಕರೆಯುವುದು ‘ಇಚ್ಛೆಯುಳ್ಳವರೆಲ್ಲಾ’ ಬರಬಹುದೆಂಬ ಭಾವ. ಹಾಗೆ ಗೊಲ್ಲಕನ್ಯೆಯರಿಗೆ ವ್ರತಾನುಷ್ಠಾನಕ್ಕೆ ಬೇಕಾಗುವ ‘ಪರೈ’ ಎಂಬ ವಾದ್ಯ ವಿಶೇಷವನ್ನು ಶ್ರೀಕೃಷ್ಣನು ಕೊಡುತ್ತಾನೆ ಎನ್ನುವ ಭಾವ. ಮುಂದೆ ಕೆಲವು ಸಾಲುಗಳಲ್ಲಿ, ನಂದಗೋಪನನ್ನು ಮಹಾಸಾಹಸಿ ಮತ್ತು ಪುಟ್ಟ ಶ್ರೀಕೃಷ್ಣನ ರಕ್ಷಣಾರ್ಥವಾಗಿ ಮಹಾಧೈರ್ಯಶಾಲಿಯೂ ಆದನೆಂದು ವ್ಯಾಖ್ಯಾನಿಸಲಾಗಿದೆ. ಅದೇ ರೀತಿ ಕೃಷ್ಣನನ್ನು ಸದಾ ನೋಡುತ್ತಾ, ಅವನ ತುಂಟಾಟವನ್ನು ಕಣ್ತುಂಬಿಸಿಕೊಂಡ ಯಶೋದಾದೇವಿಯು “ಏರಾರಂದ ಕಣ್ಣೇ” ಆದಳು. ಶ್ರೀ ಕೃಷ್ಣನ ಮುಖಕಾಂತಿಯು ತೀಕ್ಷ್ಣವಾದ ಸೂರ್ಯನ ಕಾಂತಿಗೂ, ಸೌಮ್ಯವಾದ ಚಂದ್ರನ ಕಾಂತಿಗೂ ಹೋಲಿಸಲ್ಪಟ್ಟಿದೆ. ಕೃಷ್ಣನು ತನ್ನ ವಿರೋಧಿಗಳಿಗೆ ಸೂರ್ಯನ ತೀಕ್ಷ್ಣ ಕಾಂತಿಯಿಂದ ಪ್ರತಾಪಶಾಲಿಯೂ ಮತ್ತು ತನ್ನ ಹಿತೈಷಿಗಳಿಗೆ ಹಾಗು ಭಕ್ತರಿಗೆ ಚಂದ್ರನಂತೆ ಆಹ್ಲಾದಕರವಾಗಿಯೂ ಕಾಣುತ್ತಾನೆ. ತತ್ವಾರ್ಥ: “ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ”– ಎಂದು ದಾಸರು ಹೇಳಿದಂತೆ, ನೀರಾಡಲ್ ಅಥವಾ ಸ್ನಾನ ಮಾಡುವಿಕೆ ಎಂದರೆ, ಭಗವಂತನ ಗುಣಗಳನ್ನು ಸ್ಮರಿಸಿ, ತಲ್ಲೀನರಾಗಿ ಆನಂದಿಸುವುದು ಹಾಗು ಅವನ ಧ್ಯಾನದಲ್ಲಿ ಮಗ್ನವಾಗುವುದು. ಇದಕ್ಕೆ ಇಚ್ಚಾ ಪ್ರವೃತ್ತಿಗಳಲ್ಲದೆ ಬೇರೆ ಅಧಿಕಾರ ಮತ್ತು ಸಂಪತ್ತು ಬೇಕಿಲ್ಲ. ಸೌಂದರ್ಯಾದಿ ಪ್ರಸಾಧನಗಳು ಶರೀರಕ್ಕೆ ಮುಖ್ಯಾಲಂಕಾರ. ಶಾಂತ್ಯಾದಿ ಗುಣಗಳು ಆತ್ಮನಿಗೆ ಅಲಂಕಾರ. ಅಂತಹ ಸಾತ್ವಿಕ ಗುಣಗಳನ್ನು ವೃದ್ಧಿ ಮಾಡಿಕೊಂಡು, ವಿಷಯಾಕರ್ಷಣೆಯಿಂದ ದೂರವಾಗಿ ಪರಮಾತ್ಮನ ಸೇವೆ ಮಾಡಿದರೆ ಭಗವಂತನ ಅಪರಿಮಿತ ಪ್ರೀತಿಗೆ ಪಾತ್ರರಾಗುವುದು ಖಂಡಿತ. ಆ ಅನಂತನನ್ನು ಧ್ಯಾನಿಸಲು “ಓಂ ನಮೋ ನಾರಾಯಣಾಯ!” ಎಂಬ ತಿರುಮಂತ್ರವೇ ಆಧಾರ. ಭಗವದ್ ಧ್ಯಾನದ ಫಲವಾಗಿ ಅವನು ನಮಗೆ ಅವನ ಸೇವೆಯ ಆನಂದವನ್ನು ಮತ್ತು ಮೋಕ್ಷವನ್ನು ಅನುಗ್ರಹಿಸುವನು. “ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ “– ಭಗವಂತನ ದಿವ್ಯರೂಪ ಸಕಲತಾಪಗಳನ್ನು ನೀಗಿಸುವ ಅದ್ವಿತೀಯ ರತ್ನ ತಟಾಕದಂತೆ . ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ ಶ್ರೀ ಎಸ್. ಕೃಷ್ಣಾತಾತಾಚಾರ್ಯ ) (1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ –ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ ) ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 1) @highlight ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ತಿರುಪ್ಪಾವೈ ಪಾಶುರಂ - @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc - ShareChat