ಆ ತಂದೆಯ ಮನಸ್ಸು ಎಷ್ಟು ನೊಂದಿರಬೇಕು. ಇಂಥಾ ಮಕ್ಕಳು ಯಾರಿಗೂ ಬೇಡಪ್ಪಾ. ತಂದೆ ಎನ್ನಿಸಿಕೊಂಡವನು ತನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳ ಶ್ರೇಯಸ್ಸಿಗೆ ಕತ್ತೆಯಂತೆ ಮಕ್ಕಳಿಗಾಗಿ ದುಡಿದು ತನ್ನೆಲ್ಲಾ ಆಸೆಗಳನ್ನ ತನ್ನಲ್ಲೇ... ಹಿಂಗಿಸಿಕೊಂಡು ತನ್ನ ಸುಖವನ್ನ ತನ್ನ ಮಕ್ಕಳಲ್ಲಿ ಕಾಣುತ್ತಾ ಯಾರ ಮುಂದೆನು ನನ್ನ ಮಕ್ಕಳು ಕಡಿಮೆ ಆಗಬಾರದು ಎಂದು ಅಷ್ಟು ಪ್ರೀತಿಯಿಂದ ಇಪ್ಪತ್ತು ವರ್ಷ ಸಾಕಿ ಸಲುಹಿದ ಆ ತಂದೆಯ ಬೆಲೆ ಕಟ್ಟಲಾಗದ ಪ್ರೀತಿಗೆ ಮಣ್ಣೆರಚಿ. ಕೇವಲ ಒಂದು ಎರಡು ವರ್ಷಗಳಲ್ಲಿ ಪರಿಚಯ ಆದ ಹುಡುಗನ ಪ್ರೀತಿಗೆ ಆಸೆಪಟ್ಟು ತಂದೆ ಅನ್ನೊ ಪದಕ್ಕೆ ಅರ್ಥ ಇಲ್ಲದ ಹಾಗೆ ಮಾಡುವ ಇಂಥಾ ಮಕ್ಕಳು ಇದ್ದರೇಷ್ಟು ಹೋದರೆಷ್ಟು. ಆ ತಂದೆ ಮಾಡಿರುವುದು ಸರಿಯಿದೆ. ಪ್ರೀತಿ ಮಾಡಬಾರದು ಅಂತ ಖಂಡಿತ ಹೇಳೋದಿಲ್ಲಾ ಪ್ರೀತಿ ಮಾಡುವ ಮೊದಲೆ ಪ್ರೀತಿ ಮಾಡಬೇಕು ಎಂದು ತಂದೆ ತಾಯಿ ಒಪ್ಪಿಗೆ ಕೇಳಿ. ನನಗೆ ಒಬ್ಬ ಹುಡುಗ ಇಷ್ಟಾ ಇದಾನೆ ಅಂತ ಬಲವಂತ ಮಾಡಿ ಒಪ್ಪಿಸಿ. ಒಪ್ಪಲಿಲ್ಲಾ ಅಂದ್ರೆ ಪ್ರೀತಿ ಮಾಡೋದನ್ನಾ ಕೈ ಬಿಡಿ. ಯಾಕಂದ್ರೆ ಅವರಿಗೂ ಕೂಡ ತನ್ನ ಮಕ್ಕಳಿಗೆ ಗಂಡು/ಹೆಣ್ಣು ಆ ರೀತಿ ಇರಬೇಕು ಈ ರೀತಿ ಇರಬೇಕು ಅಂತ ಕನಸು ಕಟ್ಟಿಕೊಂಡ್ ಇರ್ತಾರೆ ಯಾಕಂದ್ರೆ ಅವರು ನಮಗೆ ಜನ್ಮ ಕೊಟ್ಟಿರ್ತಾರೆ. ಹೆತ್ತ ಮಕ್ಕಳಿಗೆ ಮದುವೆ ಮಾಡುವ ಸೌಭಾಗ್ಯವು ಕೊನೆಗೆ ಅವರಿಂದ ಕಿತ್ತುಕೊಂಡಾಗ ಹೆತ್ತ ಕರುಳಿನ ಆ ಸಂಕಟ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತೆ. ಕೆಲವೊಂದು ಹೃದಯಗಳು ಕಲ್ಲು ಮನಸು ಮಾಡಿಕೊಂಡುಬಿಡುತ್ತವೆ ಒಂದು ಸರ್ತಿ ನಿರ್ಧಾರ ಮಾಡಿಕೊಂಡರೆ ಸಾಯೋವರೆಗೂ ಹತ್ತಿರ ಸೇರಿಸಿಕೊಳ್ಳೋದಿಲ್ಲ ಬಹುಶಃ ಈ ತಂದೆಯ ನಿರ್ಧಾರ ಕೂಡ ಇದೆ ಇರಬಹುದು. ಏನೆ ಆಗಲಿ ದಯವಿಟ್ಟು ಪ್ರೀತಿ ಮಾಡೋರಿಗೆ ನನ್ನ ಒಂದು ಸಣ್ಣ ಸಲಹೆ. 👉 ದಯವಿಟ್ಟು ತಂದೆ ತಾಯಿಗಳ ಮಾತನ್ನ ನಿರಾಕರಿಸಿ ಪ್ರೀತಿಯ ಹೆಸರಿನಲ್ಲಿ ಅವರಿಗೆ ನೋವನ್ನ ಉಂಟು ಮಾಡಬೇಡಿ. ಯಾಕಂದ್ರೆ ಮುಂದೊಂದು ದಿನ ಆ ಸ್ಥಾನಕ್ಕೆ ನೀವು ಬರ್ತೀರಾ ಆ ಸ್ಥಾನದಲ್ಲಿ ಇದ್ದು ಒಮ್ಮೆ ಯೋಚಿಸಿ ನೋಡಿ. 🙏🙏🙏
ಗಾಯಕ :
ಹಳ್ಳಿ ಕೋಗಿಲೆ ಜನಾಪದ ಕಲಾವಿದ
ಈಕಂಬಳ್ಳಿ ಮಂಜು ಕೋಲಾರ
ಜಿಲ್ಲಾಧ್ಯಕ್ಷ :
ಯುವ ಸೇನೆ ಕರುನಾಡು ಸಂಘಟನೆ (ರಿ) ಕೋಲಾರ
" ಜನಪರ ಧ್ವನಿ" ಕನ್ನಡ ವಾರ ಪತ್ರಿಕೆ
ಸಹ ಸಂಪಾದಕರು ಹಾಗೂ ವರದಿಗಾರರು
ಸಾಮಾಜಿಕ ಕಾರ್ಯಕರ್ತ : ಅಜಯ್ ಪುತ್ತೂರು
#puttur #likhith puttur #🚩🙏 Namma puttur 🙏🚩 #🚩ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು 🚩 #ಪುತ್ತೂರು ಮಹಾಲಿಂಗೇಶ್ವರ 🙏