BIGUPDATE #GOK #BENGALURU #REVENUEDEPT #DIGITALESTAMP #DATABASE
1 Post • 518 views
manmohan
665 views 1 months ago
ರಾಜ್ಯದಲ್ಲಿ 'ಡಿಜಿಟಲ್ ಇ-ಸ್ಟಾಂಪ್' ವ್ಯವಸ್ಥೆ ಜಾರಿ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ.! ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ 'ಇ- ಸ್ಟ್ಯಾಂಪ್‌' ಬದಲಿಗೆ 'ಡಿಜಿಟಲ್‌ ಇ- ಸ್ಟ್ಯಾಂಪ್‌' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್‌ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು 'ಡಿಜಿಟಲ್‌ ಇ- ಸ್ಟ್ಯಾಂಪ್‌' ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್‌ ಇದ್ದರೆ 24×7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್‌ ಪಾವತಿ ಮಾಡಲು ಕೂಡಾ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ. ಡಿಜಿಟಲ್ ಸ್ಟ್ಯಾಂಪ್ ಪಡೆಯುವುದು ಹೇಗೆ? https://kaveri.karnataka.gov.in/landing-page ಒ೦ದೇ ಬಾರಿ ನೋಂದಣಿ ಖಾತೆ ಸೃಷ್ಟಿಸಿ. ಲಾಗಿನ್ ಆದ ಬಳಿಕ ಬೇಕಾದ ದಸ್ತಾವೇಜಿನ ಪ್ರಕಾರವನ್ನು (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ. ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ Aadhaar ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಿ. ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ, ಸಿಸ್ಟಂ ಸರ್ಕಾರಿ ಡೇಟಾ ಬೇಸ್‌ಗಳಿಂದ ಆಸ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಿದೆ. ನಿಮ್ಮ ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಪಡೆಯಬಹುದು. ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್‌ವೇ ಮೂಲಕ ಪಾವತಿಸಿ. ಪಾವತಿ ದೃಢಪಟ್ಟನಂತರ ಸಿಸ್ಟಂ ಡಿಜಿಟಲ್ ಇ-ಸ್ಟ್ಯಾಂಪ್ ಸೃಷ್ಟಿಯಾಗುತ್ತದೆ. ಎಲ್ಲರ ಸಹಿ ಪಡೆಯಲು ಅವರ ಮೊಬೈಲ್‌ಗೆ ಲಿಂಕ್ ಬರುತ್ತದೆ. ಅದರಲ್ಲಿ Aadhaar e-Sign ಅಥವಾ DSC ಮೂಲಕ ಸಹಿ ಮಾಡಬಹುದು. ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡಲ್ಪಟ್ಟ ಹಾಗೂ ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯವಾಗುತ್ತದೆ. ಇದನ್ನು ಡೌನ್ಲೋಡ್ ಮಾಡಬಹುದು ಹಾಗೂ ನೋಂದಣಿಗೆ ಬಳಸಬಹುದು. #BIGUPDATE #GOK #BENGALURU #REVENUEDEPT #DIGITALESTAMP #DATABASE
7 likes
1 comment 7 shares