#ಬೆಳಂದಿಗಳ_ಬಾಲೆ
ಅನುರಾಗ ತುಂಬಿದ ಕಣ್ಣುಗಳಿಗೆ
ಕಣ್ಣೀರಿನ ರುಚಿ ತೋರಿಸಿದ
ದೇವತೆ ನೀನು...
ಕೈಗೆಟುಕದ ಹೂವಾಗಿ
ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸಿದ
ಚಂಚಲೆ ನೀನು...!
ಪ್ರೀತಿ ಮಾತಿನ ಸೊಗಸಲ್ಲೇ
ನಂಬಿಸಿ ಕತ್ತು ಕುಯ್ದ
ಸಕಲ ಕಲಾ ವಲ್ಲಭ ನೀನು...
ಗೆಲುವಲ್ಲೇ ಮೈಮರೆತ ನನಗೆ
ಸೋಲಿನ ಪಾಠ ಕಲಿಸಿದ
ಗುರುವು ನೀನು...
ಕೇವಲ ನೆನಪುಗಳಲ್ಲಿಯೇ ಸುಳಿದಾಡುತ
ಬಿಟ್ಟರೂ ಬಿಡದೆ ಕಾಡಿದ
ಬೆಳದಿಂಗಳ ಬಾಲೆ ನೀನು..!
ನಿನ್ನಂತವಳನ್ನು ಮರಿಯೋಕೆ ಆಗುತ್ತಾ..!!
#✍ನನ್ನ ಇಷ್ಟದ ಕವಿತೆ #🖋️ ನನ್ನ ಬರಹ #📝ನನ್ನ ಕವಿತೆಗಳು #💓ಮನದಾಳದ ಮಾತು #💓ಲವ್ ಸ್ಟೇಟಸ್