NEWSUPDATES #KARNATAKA #JOGFALLS #TOURPACKAGE #NWKRTC
4 Posts • 579 views
manmohan
679 views 3 months ago
ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ವೇಗದೂತ ಬಸ್ ವ್ಯವಸ್ಥೆ: ಟಿಕೆಟ್ ದರ, ಸಮಯದ ವಿವರ ತಿಳಿಯಿರಿ.! ಉತ್ತರ ಕರ್ನಾಟಕ ಭಾಗದ ಹಲವು ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಒದಗಿಸುತ್ತಿರುವ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾವೇರಿ ಜಿಲ್ಲೆಯಿಂದ ವಿಶೇಷ ಟೂರ್ ಪ್ಯಾಕೇಜ್ (Tour Package) ಘೋಷಣೆ ಮಾಡಿದೆ. ನಿರಂತರ ಮಳೆಯಿಂದ ವಿಶ್ವ ವಿಖ್ಯಾತ ಜೋಗ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುವವರಿಗೆ ಇದು ಸೂಕ್ತ ಕಾಲ ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 'ವೇಗದೂತ ಸಾರಿಗೆ ಸೇವೆ' ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲಿಂದ, ನಿಲ್ದಾಣ ಹಾಗೂ ಸಮಯದ ಪೂರ್ಣ ಮಾಹಿತಿ ಇಲ್ಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆಯಾಗಿರುವ ಹಾವೇರಿ ವಿಭಾಗದಿಂದ ಜೋಗ ಫಾಲ್ಸ್ ಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷವೆಂದರೆ ಜಿಲ್ಲೆಯ ಎರಡು ಭಾಗಗಳಿಂದ ಶಿವಮೊಗ್ಗ ಜಿಲ್ಲೆ ಜೋಗ ಫಾಲ್ಸ್‌ಗೆ ಬಸ್ ಕಾರ್ಯಾಚರಣೆ ಮಾಡಲಿವೆ. ಇವು ಪ್ರತಿ ಭಾನುವಾರ ಮತ್ತು ರಜಾದಿನಗಳಂದು ಪ್ರಯಾಣಿಕರಿಗೆ ಸೇವೆ ನೀಡಲಿವೆ. ಇದೇ ಜುಲೈ 13ರಿಂದ ಜೋಗ್ ಜಲಪಾತ ಪ್ರವಾಸ ಪ್ರಯಾಣ ಸೇವೆ ಆರಂಭವಾಗಲಿದೆ. ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹಾವೇರಿ ಬಸ್ ನಿಲ್ದಾಣ ಹಾಗೂ ರಾಣೇಬೆನ್ನೂರು ನಿಲ್ದಾಣದಿಂದ ಜೋಗ ಫಾಲ್ಸ್ ಗೆ ವೇಗದೂತ ಬಸ್ ಓಡಾಡಲಿವೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳುವಂತೆ NWKRTC ವಿಭಾಗದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಬಸ್ ಬಿಡುವ ಸಮಯ, ಟಿಕೆಟ್ ದರ.. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವೇಗದೂತ ಬಸ್ ಜುಲೈ 13ರಂದು ಹಾವೇರಿಯಿಂದ ಬೆಳಗ್ಗೆ 08 ಗಂಟೆಗೆ ಬಿಡಲಿದೆ. ಮಧ್ಯಾಹ್ನ 12 ಗಂಟೆಗೆ ಜೋಗಕ್ಕೆ ತಲುಪಲಿದೆ. ಮರಳಿ ಅಲ್ಲಿಂದ ಸಂಜೆ 4 ಗಂಟೆಗೆ ಬಿಡಲಿದ್ದು, ಅಲ್ಲಿಂದ 7.30ಕ್ಕೆ ಹಾವೇರಿ ತಲುಪುತ್ತದೆ. ಶಿರಸಿ, ಸಿದ್ಧಾಪುರ ಮಾರ್ಗವಾಗಿ ಬಸ್ ತೆರಳಲಿದ್ದು, ಬೆಳಗ್ಗೆ ಹೋಗುವಾಗ ಮಾರ್ಗ ಮಧ್ಯ ಶಿರಸಿ ಮಾರಿಕಾಂಬ ಸನ್ನಿಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಅಲ್ಲಿಂದ ನೇರ ಜೋಗಕ್ಕೆ ಹೋಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರಾಣಿಬೆನ್ನೂರು ಬಸ್ ನಿಲ್ದಾಣದಿಂದ ಜೋಗ ಜಲಪಾತಕ್ಕೆ ಜುಲೈ 13ರಂದು ಬೆಳಗ್ಗೆ 08 ಗಂಟೆಗೆ ಹೊರಟು ಮಧ್ಯಾಹ್ನ 11.30ಕ್ಕೆ ಜೋಗಕ್ಕೆ ತಲುಪಲಾಗುತ್ತದೆ. ಮರಳಿ ಅಲ್ಲಿಂದ ಸಂಜೆ 4 ಗಂಟೆಗೆ ಬಿಟ್ಟು ರಾತ್ರಿ 7.30 ಗಂಟೆಗೆ ರಾಣಿಬೆನ್ನೂರು ಬಸ್ ನಿಲ್ದಾಣಕ್ಕೆ ಬರಲಾಗುವುದು. ಈ ಬಸ್ ಹಿರೇಕೆರೂರು, ಶಿರಾಳಕೊಪ್ಪ, ಸೊರಬ ಹಾಗೂ ಸಿದ್ದಾರಪುರ ಮಾರ್ಗವಾಗಿ ತೆರಳುತ್ತದೆ. ಟಿಕೆಟ್ ಶುಲ್ಕ ಎಷ್ಟು? ಮಹಿಳೆಯರಿಗೆ ವಿಶೇಷ ಸೂಚನೆ..? ಹಾವೇರಿಯಿಂದ ತೆರಳುವ ಜೋಗ ಟೂರ್ ಪ್ಯಾಕೇಜ್ ಬಸ್‌ ಒಬ್ಬ ಪ್ರಯಾಣಿಕರಿಗೆ ತಲಾ 390 ರೂಪಾಯಿ ಹಾಗೂ ರಾಣಿಬೆನ್ನೂರಿನಿಂದ ತೆರಳುವ ಮಾರ್ಗಕ್ಕೆ 370 ರೂಪಾಯಿ ಇದೆ. ವಿಶೇಷ ಸೂಚನೆಯೆಂದರೆ, ಈ ವಿಶೇಷ ಬಸ್‌ಗಳಲ್ಲಿ 'ಶಕ್ತಿ ಯೋಜನೆ' ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಇರುವುದಿಲ್ಲ. ಇದನ್ನು ಗಮನಿಸಿ ಮಹಿಳೆಯರು ಸಂಚಾರ ಮಾಡುವಂತೆ NWKRTC ಪ್ರಕಟಣೆಯಲ್ಲಿ ಕೋರಿದೆ. #NEWSUPDATES #KARNATAKA #JOGFALLS #TOURPACKAGE #NWKRTC
12 likes
1 comment 14 shares