#ಕರುನಾಡುನಮ್ಮ ಬಂಗಾರದ ಬೀಡು
#ಶ್ರೀಶೈಲಂ_ಮಲ್ಲಿಕಾರ್ಜುನ_ಸ್ವಾಮಿ_ದೇವಸ್ಥಾನ,
#ಆಂಧ್ರ_ಪ್ರದೇಶ:
#ಪವಿತ್ರವಾದ_12_ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಶಿವನ ಅವತಾರ ಮಂಜುನಾಥ ಸ್ವಾಮಿಯ ಈ ದೇವಸ್ಥಾನವು ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿದೆ.
275 ಪಾಡಲ್ ಪೆಟ್ರ ಸ್ಥಳಗಳ ಪೈಕಿ ಒಂದಾಗಿರುವ ಈ ಶ್ರೀಕ್ಷೇತ್ರವು ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಂದ ಭೇಟಿ ನೀಡಲ್ಪಡುವ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಿದೆ.
#ಸ್ಥಳಪುರಾಣ:
ಒಂದೊಮ್ಮೆ ಗಣಪತಿ ಹಾಗು ಕಾರ್ತಿಕೇಯರ ಮಧ್ಯೆ ಯಾರು ಮೊದಲು ಮದುವೆ ಮಾಡಿಕೊಳ್ಳಬೇಕೆಂಬ ಗೊಂದಲ ಏರ್ಪಟ್ಟಾಗ ಅದಕ್ಕೆ ಪರಿಹಾರ್ಥವಾಗಿ ಭಗವಂತ ಶಿವನು ಯಾರು ಮೊದಲು ಭೂಮಿಯ #ಪ್ರದಕ್ಷಿಣೆ ಹಾಕುವರೊ ಅವರು ಮೊದಲು ಮದುವೆಯಾಗಬೇಕೆಂದು ಆದೇಶಿಸಿದನು.
ಅದರಂತೆ ಕಾರ್ತಿಕೇಯನು ತನ್ನ ವಾಹನವಾದ ನವೀಲಿನ ಮೂಲಕ ವೇಗವಾಗಿ ಭೂಪ್ರದಕ್ಷಿಣೆಗೆ ತೆರಳಿದನು.
ಆದರೆ ಗಣಪನು ಸಹನೆಯಿಂದ ಇದ್ದು ಶಾಸ್ತ್ರದಲ್ಲಿ ಹೇಳಿರುವಂತೆ ತಾಯಿ ತಂದೆಯರ ಪ್ರದಕ್ಷಿಣೆ ಹಾಕಿ ಭೂಪ್ರದಕ್ಷಿಣೆಯನ್ನು ಮೊದಲು ಸಂಪೂರ್ಣಗೊಳಿಸಿ ರಿದ್ಧಿ, ಸಿದ್ಧಿ ಹಾಗು ಬುದ್ಧಿಯರನ್ನು ವರಿಸಿದನು.
ಇತ್ತ ಕಾರ್ತಿಕೇಯ ಮರಳಿದ ಮೇಲೆ ನಡೆದ ಸಂಗತಿಯನ್ನು ತಿಳಿದು ಮುನಿಸಿಕೊಂಡು ಬ್ರಹ್ಮಚಾರಿಯಾಗಿ ಕ್ರವುಂಜ ಬೆಟ್ಟದ ಮೇಲೆ ಏಕಾಂಗಿಯಾಗಿ ನೆಲೆಸಲು ತೆರಳಿದನು.
ಇದನ್ನು ತಿಳಿದ ಶಿವ ಪಾರ್ವತಿಯರು ಅವನನ್ನು ಸಮಾಧಾನಪಡಿಸಲು ತೆರಳಿದರು. ಹೀಗೆ ಶಿವ ಪಾರ್ವತಿಯರು ನೆಲೆಸಿದ ಸ್ಥಳವೆ ಇಂದು ಶ್ರೀಶೈಲಂ ಆಗಿದೆ. ನಂಬಿಕೆಯಂತೆ ಅವಮಾಸ್ಯೆ ದಿನದಂದು ಶಿವನು ಹಾಗು ಪೌರ್ಣಮಿಯ ದಿನದಂದು ಪಾರ್ವತಿಯು ಕಾರ್ತಿಕೇಯನನ್ನು ಭೇಟಿ ಮಾಡುತ್ತಾರೆ.
🌺🌺
#🌺🌺ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ 🌺🌺🙏🏻🙏🏻 #🙏 ಶ್ರೀಶೈಲ ಮಲ್ಲಿಕಾರ್ಜುನ ಭಕ್ತಿ ಸ್ಟೇಟಸ್ 🙏🌸🌼☘️ #ಶ್ರೀಶೈಲ ಮಲ್ಲಿಕಾರ್ಜುನ ಜ್ಯೊತಿರ್ಲಿಂಗ #ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಪಾದಯಾತ್ರೆ