Nandan B M
568 views • 6 days ago
#ಹಿಂದೂ ಭಾರತ #ಭಾರತ #✍🏻ದೇಶಭಕ್ತಿ ಶಾಯರಿ #🔱 ಭಕ್ತಿ ಲೋಕ
ಆರು ಭೂಕಂಪನವನ್ನೇ ಎದುರಿಸಿ ವಿಜ್ಞಾನಕ್ಕೆ ಸವಾಲಾಗಿ ನಿಂತ ಹಿಂದೂ ದೇವಾಲಯ,ಈವರೆಗೆ ನಿರ್ಮಾಣವಾಗಿರುವ ಪ್ರಮುಖ ರಚನೆಗಳಲ್ಲಿ ಬೃಹದೀಶ್ವರ ಮಂದಿರವೂ ಶ್ರೇಷ್ಠ ರಚನೆಯಾಗಿದೆ. ಏಕೆಂದರೆ,
ಈ ಮಂದಿರವನ್ನು ಇಂಟರ್ಲಾಕ್ ಮಾದರಿಯನ್ನು ಅನುಸರಿಸಿ ನಿರ್ಮಾಣ ಮಾಡಲಾಗಿದೆ. ಇದರ ಕಲ್ಲುಗಳ ನಡುವೆ ಪ್ಲಾಸ್ಟಿಕ್, ಸಿಮೆಂಟ್ ಅಥವಾ ಯಾವುದೇ ಅಂಟು ಪದಾರ್ಥಗಳನ್ನು ಬಳಕೆ ಮಾಡಲಾಗಿಲ್ಲ. ಇದಕ್ಕೆ 1000 ವರ್ಷಗಳ ಕಾಲ ಇದು ಉಳಿದುಕೊಂಡಿದ್ದು, 6 ಪ್ರಬಲ ಭೂಕಂಪಗಳಿಂದ ರಕ್ಷಿಸಿಕೊಂಡಿದೆ.
ಇದರ ಗೋಪುರವು 216 ಅಡಿಗಳಷ್ಟು ಎತ್ತರವಾಗಿದ್ದು, ಆ ಸಮಯದಲ್ಲಿ ಪ್ರಪಂಚದಲ್ಲೇ ಅತ್ಯಂತ ಎತ್ತರದ ಗೋಪುರ ಎಂಬ ಹಿರಿಮೆ ತನ್ನದಾಗಿಸಿಕೊಂಡಿತ್ತು.
ಈ ವಿಧಾನವನ್ನು ಅನುಸರಿಸಿ ನಿರ್ಮಾಣ ಮಾಡಲಾದ ಇತರ ರಚನೆಗಳು ಬಿಗ್ ಬೆನ್ ಮತ್ತು ಪಿಸಾದ ಲೀನಿಂಗ್ ಟವರ್ ಸಮಯ ಸರಿದಂತೆ ವಾಲುವುದಕ್ಕೆ ತೊಡಗಿದೆ. ಆದರೆ ಬೃಹದೀಶ್ವರ ಮಂದಿರವು ಶೂನ್ಯ ಡಿಗ್ರಿ ಒಲವನ್ನು ಹೊಂದಿದೆ.
ಈ ಕಟ್ಟಡದ ನಿರ್ಮಾಣಕ್ಕೆ 1,30,000 ಟನ್ ಗ್ರಾನೈಟ್ ಅನ್ನು ಬಳಕೆ ಮಾಡಲಾಗಿದ್ದು, ಇದನ್ನು 60 ಕಿಮೀ ದೂರದಿಂದ 3000 ಆನೆಗಳು ಸಾಗಾಟ ಮಾಡಿದವು.
ಭೂಮಿಯನ್ನು ಅಗೆದು ಬುನಾದಿ ಹಾಕದೆಯೇ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ಈ ಮಂದಿರದ ಗೋಪುರದ ಮೇಲಿರುವ ಕುಂಭಂನ ತೂಕ 80 ಟನ್ಗಳಷ್ಟಿದೆ. ಹಾಗೆಯೇ ಇದನ್ನು ಏಕಶಿಲೆಯಿಂದ ನಿರ್ಮಾಣ ಮಾಡಲಾಗಿದೆ.
200 ಅಡಿ ಗೋಪುರದ ಮೇಲೆ 80 ಟನ್ ತೂಕದ ಕಲ್ಲು ಹೇಗೆ ನಿಂತಿದೆ ಎಂಬುದರ ಬಗ್ಗೆ ಹಲವಾರು ಸಿದ್ಧಾಂತಗಳು ಅಸ್ತಿತ್ವದಲ್ಲಿವೆ. ಕೆಲವರು ಇದನ್ನು ಲೆವಿಟೇಶನ್ ತಂತ್ರಜ್ಞಾನ ಎನ್ನುತ್ತಾರೆ. ಈ ಕಲ್ಲನ್ನು 6 ಕಿಮೀ ಉದ್ದದ ರಾಂಪ್ ಮೇಲೆ ಎಳೆಯಲು ಅನೆಗಳನ್ನು ಬಳಕೆ ಮಾಡಲಾಗಿದೆ.
ಈ ಮಂದಿರದ ಕೆಳಗೆ ಹಲವಾರು ಭೂಗತವಾದ ಮಾರ್ಗಗಳಿವೆ ಎಂಬುದಾಗಿಯೂ ಹೇಳುತ್ತಾರೆ. ಅವುಗಳಲ್ಲಿ ಹೆಚ್ಚಿನ ಮಾರ್ಗಗಳನ್ನು ಶತಮಾನದ ಹಿಂದೆ ಮುಚ್ಚಿರುವುದಾಗಿ ಹೇಳಲಾಗುತ್ತದೆ. ಈ ರಹಸ್ಯ ದಾರಿಗಳು ಚೋಳರಿಗೆ ಸುರಕ್ಷತಾ ತಾಣ ಮತ್ತು ನಿರ್ಗಮಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು. ಹಲವು ಮೂಲಗಳು ಈ ಮಂದಿರದ ಕೆಳಗೆ ಸುಮಾರು 100 ರಹಸ್ಯ ಮಾರ್ಗಗಳಿದ್ದುದಾಗಿಯೂ ಹೇಳುತ್ತವೆ.
ಇದೊಂದು ಅನನ್ಯ, ಗಮನಾರ್ಹ ಮಂದಿರವಾಗಿದ್ದು, ಇದನ್ನು ಅನ್ಯಗ್ರಹ ಜೀವಿಗಳು ನಿರ್ಮಾಣ ಮಾಡಿರುವುದಾಗಿಯೂ ಕೆಲವರು ಹೇಳುತ್ತಾರೆ. ಬೃಹದೀಶ್ವರ ಮಂದಿರದಂತೆ ಬೇರೊಂದು ಮಂದಿರವಿಲ್ಲ. ಈ ಕಾಲಾತೀತ ಅದ್ಭುತವನ್ನು ನಾವು ಅಮೂಲ್ಯ ಎಂಬುದಾಗಿ ಪರಿಗಣಿಸಬೇಕು. ಇಂತಹ ವಾಸ್ತು ಶಿಲ್ಪ, ಕಲೆಗಳನ್ನು ಉಳಿಸುವತ್ತ ಗಮನ ಹರಿಸಬೇಕು.
9 likes
16 shares