kannada Quran
6 Posts • 3K views
ಅಧ್ಯಾಯ: 4 ಶ್ಲೋಕ: 1 ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದೇ ವ್ಯಕ್ತಿಯಿಂದ¹ ಸೃಷ್ಟಿಸಿದನು. ಅದೇ ವ್ಯಕ್ತಿಯಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವರೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ (ಹಕ್ಕು ಬಾಧ್ಯತೆಗಳನ್ನು) ಕೇಳುತ್ತೀರೋ ಆ ಅಲ್ಲಾಹನ ಮತ್ತು ಕುಟುಂಬ ಸಂಬಂಧದ ಬಗ್ಗೆ ಜಾಗೃತೆ ವಹಿಸಿ. ಅವನು ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟವನ್ನಿರಿಸಿಕೊಂಡಿ ರುವನು. ವಿವರಣೆ: ಜಗತ್ತಿನಲ್ಲಿ ಜನರು ಪರಸ್ಪರ ಹಕ್ಕುಗಳನ್ನು ಬೇಡುವಾಗ, ಅವರು ಹೆಚ್ಚಾಗಿ ಹೇಳುತ್ತಾರೆ, "ಅಲ್ಲಾಹನಿಗಾಗಿ, ನನ್ನ ಹಕ್ಕನ್ನು ನನಗೆ ಕೊಡಿ." ಈ ವಚನದ ಅರ್ಥವೇನೆಂದರೆ, ನೀವು ನಿಮ್ಮ ಹಕ್ಕುಗಳಿಗಾಗಿ ಅಲ್ಲಾಹನನ್ನು ಪ್ರಾರ್ಥಿಸುವಾಗ, ಇತರರ ಹಕ್ಕುಗಳನ್ನು ಪೂರೈಸುವಲ್ಲಿ ಅಲ್ಲಾಹನಿಗೆ ಭಯಪಡಿರಿ ಮತ್ತು ಜನರ ಹಕ್ಕುಗಳನ್ನು ಪೂರ್ಣವಾಗಿ ಪೂರೈಸಿರಿ. #quran #ಕನ್ನಡ #kannada Quran
11 likes
12 shares