ಶುಕ್ರವಾರ
139 Posts • 252K views
Ram Ajekar
655 views 17 days ago
#🎬 Good Morning ಸ್ಟೇಟಸ್ ಮೀನುಗಾರಿಕೆಗೂ ಗೊರಬಿನ ಸಾಥ್ ತುಳುನಾಡಿನ ಮಣ್ಣು, ಮಳೆ ಮತ್ತು ರೈತನ ಬದುಕು ಎಂದರೆ ಗೊರಬಿನ ನೆನಪು ತಪ್ಪದೇ ಮೂಡುತ್ತದೆ. ಮಳೆಯ ಝರಿಯಲ್ಲಿಯೂ ರೈತನಿಗೆ ಬಿಸಿಯ ಹಿತ ನೀಡುತ್ತಿದ್ದ ಗೊರಬು, ಕೇವಲ ಗದ್ದೆಗಳಲ್ಲಿ ಮಾತ್ರವಲ್ಲದೆ ಮೀನುಗಾರರ ಕೈಯಲ್ಲೂ ತನ್ನ ಪಾತ್ರ ವಹಿಸುತ್ತಿತ್ತು. ಉಡುಪಿ ಜಿಲ್ಲೆಯ ಮಲ್ಪೆ, ಸ್ವರ್ಣ ನದಿ ಸೇರುವ ಕೆಮ್ಮಣ್ಣು, ಬೇಂಗ್ರೆ ಹಾಗೂ ಸೀತಾ ನದಿ ಸಮುದ್ರ ಸೇರುವ ಕೋಡಿ ಸಾಸ್ತಾನ ಭಾಗಗಳಲ್ಲಿ ಭಾರೀ ಮಳೆಯಲ್ಲಿಯೂ ದೋಣಿಯ ಮೇಲೆ ಕೂತು ಮೀನು ಹಿಡಿಯುವ ಮೀನುಗಾರರ ತಲೆಯ ಮೇಲಿದ್ದದ್ದು ಗೊರಬೇ. ಗದ್ದೆಯಲ್ಲಿ ಮಳೆಗಾಳಿಗೆ ಎದುರಾಗಿ ನಿಂತ ರೈತನಿಗೆ ಹೇಗೆ ಗೊರಬು ಹಿತ ನೀಡಿತೋ, ಅದೇ ನೆರಳು ಮೀನುಗಾರನ ದೋಣಿಯಲ್ಲೂ ಅನುಭವವಾಗುತ್ತಿತ್ತು. ಪ್ರಕೃತಿಯ ಸಮತೋಲನದಲ್ಲಿ ರೈತನಿಗೂ, ಮೀನುಗಾರನಿಗೂ ಗೊರಬು ಅವಿಭಾಜ್ಯ ಸಂಗಾತಿ. ಒಮ್ಮೆ ಕಾರ್ಕಳದ ಎಳ್ಳಾರೆ ಚೆನ್ನಿಬೆಟ್ಟು ಗೊರಬಿನ ತವರೂರಾಗಿತ್ತು. ಅನಂದ ಪೂಜಾರಿ ಎಂಬ ಉದ್ಯಮಿ ಸ್ಥಳೀಯರಿಂದ ಗೊರಬುಗಳನ್ನು ಸಂಗ್ರಹಿಸಿ ಕುಂದಾಪುರದಿಂದ ಮಂಗಳೂರು, ತಲಪಾಡಿವರೆಗೆ ಮಾರಾಟ ಮಾಡುತ್ತಿದ್ದರು. ಹತ್ತು–ಇಪ್ಪತ್ತು ರೂಪಾಯಿಗೆ ಸಿಗುತ್ತಿದ್ದ ಗೊರಬು ಇಂದು ಅಪರೂಪದ ಹಸ್ತಕಲೆಯ ವಸ್ತುವಾಗಿ, ಗಾತ್ರಕ್ಕೆ ತಕ್ಕಂತೆ ಐದು ನೂರುದಿಂದ ಸಾವಿರ ರೂಪಾಯಿವರೆಗೆ ಬೆಲೆ ಕಾಣುತ್ತಿದೆ. ಬಿದಿರನ್ನು ತ್ರಿಭುಜ ಆಕಾರದಲ್ಲಿ ಜೋಡಿಸಿ, ದೂಪದ ಎಲೆಗಳನ್ನು ನಯವಾಗಿ ಹೆಣೆದು ಗೊರಬನ್ನು ತಯಾರಿಸುವುದು ಶ್ರಮದಾಯಕ ಕಲೆಯಾಗಿತ್ತು. ದಿನಕ್ಕೆ ಒಂದು ಅಥವಾ ಎರಡು ಗೊರಬು ಮಾಡುವುದು ಸಾಕಷ್ಟು ಕಷ್ಟದ ಕೆಲಸ. ಅದರ ತೂಕ ಭಾರವಾಗಿದ್ದರೂ ಒಳಗಿನ ಬಿಸಿಯ ಅನುಭವ ಅಪ್ರತಿಮ. ಮಳೆಗಾಲ ಬಂತು ಅಂದರೆ ಹೊಲದಲ್ಲಿ ನಾಟಿ, ಉಳುಮೆ, ಎಲ್ಲೆಡೆ ರೈತನ ಸಂಗಾತಿಯಾಗಿತ್ತು ಗೊರಬು. ತುಳುನಾಡಿನಲ್ಲಿ ಇದನ್ನು ಕೊರಂಬು ಅಥವಾ ಪನೋಲಿ ಎಂದೇ ಕರೆಯಲಾಗುತ್ತಿತ್ತು. ಆದರೆ ಕಾಲ ಬದಲಾಗಿದೆ. ಪ್ಲಾಸ್ಟಿಕ್‌ನ ಹಗುರತೆ ಮತ್ತು ಅಗ್ಗದ ಬೆಲೆಗೆ ಗೊರಬಿನ ಮೌಲ್ಯ ಕುಸಿತ ಕಂಡಿತು. ಇಂದಿಗೆ ಗೊರಬು ಹೆಣೆಯುವ ಕೈಗಳು ವಿರಳ. ಕೆಲ ಹೋಂಸ್ಟೇಗಳು, ರೆಸ್ಟೋರೆಂಟ್‌ಗಳು ಸಂಸ್ಕೃತಿಯ ನೆನಪಿಗಾಗಿ ಗೊರಬನ್ನು ಬಯಸುತ್ತಿದ್ದರೂ ತಯಾರಕರು ಕೈಗಣಿಸುತ್ತಿದ್ದಾರೆ. ಗೊರಬು ಕೇವಲ ಮಳೆಯಿಂದ ರಕ್ಷಿಸುವ ಸಾಧನವಲ್ಲ – ಅದು ರೈತನ ಬೆವರು, ಮೀನುಗಾರನ ಬದುಕು, ಮಣ್ಣಿನೊಡನೆ ಬೆಸೆದುಕೊಂಡಿರುವ ಸಂಸ್ಕೃತಿ. ಪ್ಲಾಸ್ಟಿಕ್ ಕಾಲದಲ್ಲಿ ಮರೆತರೂ, ಗೊರಬಿನ ನೆನಪು ತುಳುನಾಡಿನ ಹೃದಯದಲ್ಲಿ ಶಾಶ್ವತ. – ರಾಂ ಅಜೆಕಾರು, ಕಾರ್ಕಳ http://ramajekar.travel.blog/2025/09/12/daily-stories-5/ #ದಿನಕ್ಕೊಂದು ಕವನ. 🌻🎭 #ದಿನಕ್ಕೊಂದು ನುಡಿಮುತ್ತು #ಶುಕ್ರವಾರ #ದಿನಕ್ಕೊಂದುಕಥೆ #Udupi #Karkala #Tulunad #TulunadCulture #KudlaStyle #TulunaduStories #UdupiCuisine #KarkalaHeritage #CoastalKarnataka #NammaTulunadu #TuluvaNadu #UdupiTempleTown #KarkalaHistory #TulunadLifestyle #YakshaganaTulunadu #PiliveshaTulunadu #KambalaTulunad #TuluBale #TulunadBeauty #UdupiKrishna #KarkalaStatue #TuluLanguage #TulunaduFoodie #UdupiSpecial #KudlaBuzz #TulunaduFestivals #NammaKarkala #UdupiLife #TuluPride
10 likes
11 shares