ಶ್ರೀ ಸುಬ್ರಹ್ಮಣ್ಯ ಸ್ವಾಮಿ
579 Posts • 4M views
#ಕರುನಾಡುನಮ್ಮ ಬಂಗಾರದ ಬೀಡು #ಘಾಟಿ_ಸುಬ್ರಹ್ಮಣ್ಯ_ದೊಡ್ಡ ಬಳ್ಳಾಪುರ ಲಕ್ಷಾಂತರ ಭಕ್ತರು #ನಾಗಾರಾಧನೆ ನಡೆಸುವ ಪ್ರಸಿದ್ದ ನಾಗ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ #ದಕ್ಷಿಣ_ಕರ್ನಾಟಕದಲ್ಲಿ ಘಾಟಿ ಪ್ರಸಿದ್ದವಾಗಿದೆ. ಈ ಕ್ಷೇತ್ರ ದೊಡ್ಡ ಬಳ್ಳಾಪುರ ತಾಲ್ಲೂಕು #ತೂಬಗೆರೆ ಹೋಬಳಿಯಲ್ಲಿದೆ. ಹರಕೆ ಹೊತ್ತ ಭಕ್ತರು ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುವ ದೃಶ್ಯ ನಿತ್ಯ ಕಂಡು ಬರುತ್ತದೆ. ನಾಗದೋಷ ನಿವಾರಣೆಗೆ ಭಕ್ತಾದಿಗಳು ನಾಗರ ಪಂಚಮಿಯಂದು ಸಾಗರೋಪಾದಿಯಲ್ಲಿ ಸೇರುತ್ತಾರೆ. ಇಲ್ಲಿನ #ನಾಗರಕಲ್ಲುಗಳು ಘಾಟಿ ವಿಶೇಷಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ನಾಗರ ಕಲ್ಲುಗಳಿಗೆ ಹಾಲೆರೆದರೆ ನಾಗದೋಷ ಕಳೆಯುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಕ್ಷೇತ್ರದಲ್ಲಿ #10_ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳಿವೆ. #ನಾಗರ_ಪಂಚಮಿ ದಿನ ಕ್ಷೀರಾಭಿಷೇಕ ಇಲ್ಲಿನ ಪ್ರಮುಖ ಆಕರ್ಷಣೆ. ನಾಗರ ಪಂಚಮಿ ದಿನ ಮುಂಜಾನೆ 5 ರಿಂದಲೇ ವಿಶೇಷ ಅಭಿಷೇಕಗಳು ನೆರವೇರುತ್ತವೆ #ಕುಕ್ಕೆ ಸುಬ್ರಹ್ಮಣ್ಯ 🙏 #ಶ್ರೀ ಸುಬ್ರಹ್ಮಣ್ಯ ಸ್ವಾಮಿ #🙏🕉️ ಜೈ ಶ್ರೀ ಸುಬ್ರಹ್ಮಣ್ಯ ಸ್ವಾಮಿ🕉🙏 🙏🕉 ಜೈ ಶ್ರೀ ಮುರುಗನ್ ಸ್ವಾಮಿ🕉🙏 ##🙏 ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ
8 likes
19 shares