ಆರಾಧ್ಯ creation
12.4K views
1 months ago
#😭ಖ್ಯಾತ ನಟನ ಕಾರು ಅಪಘಾತ! ನಾಯಕನಿಗೆ ಏನಾಯ್ತು?😱 ಚೆ ನ್ನೈನ ಸೆಂಟ್ರಲ್ ಕೈಲಾಶ್ ಪ್ರದೇಶದಲ್ಲಿ ನಟ ಶಿವಕಾರ್ತಿಕೇಯನ್ (Actor Sivakarthikeyan) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಮುಂದೆ ಇದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಪ್ರದೇಶದಲ್ಲಿ ಸ್ವಲ್ಪ ಗದ್ದಲ ಉಂಟಾಯಿತು ಎನ್ನಲಾಗ್ತಿದೆ.ಚೆನ್ನೈನ ವಲ್ಲುವರ್ ನಲ್ಲಿ ಕಾರ್ಯಕ್ರಮ ನಟ ಶಿವಕಾರ್ತಿಕೇಯನ್ ಪ್ರಸ್ತುತ 'ಪರಾಶಕ್ತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಮುಂದಿನ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ. ಇದಕ್ಕೂ ಮೊದಲು, ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ಚಿತ್ರದ ಸಾರವನ್ನು ವಿವರಿಸುವ ಕಿರುಚಿತ್ರ ಪ್ರದರ್ಶನವನ್ನು ನಡೆಸಲಾಗಿತ್ತು. ಕಾರಿಗೆ ಡಿಕ್ಕಿ ಇನ್ನೂ ಈ ಕಾರ್ಯಕ್ರಮದಲ್ಲಿ ರವಿ ಮೋಹನ್, ಅಥರ್ವ ಮುರಳಿ, ಶ್ರೀಲೀಲಾ, ಜಿ.ವಿ. ಪ್ರಕಾಶ್ ಮತ್ತು ಇತರರು ಭಾಗವಹಿಸಿದ್ದರು. ನಿರ್ದೇಶಕಿ ಸುಧಾ ಕೊಂಗರ ಕೂಡ ಭಾಗವಹಿಸಿದ್ದರು. ಹೀಗಿರುವಾಗ ಚೆನ್ನೈನ ವಲ್ಲುವರ್ ಕೊಟ್ಟಂನಿಂದ ಮನೆಗೆ ಹೋಗುತ್ತಿದ್ದಾಗ, ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ದಾರಿ ಮಧ್ಯೆ ಅವರ ಮುಂದೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಯಾವುದೇ ಅಪಾಯವಾಗಿಲ್ಲ ಇದರಿಂದಾಗಿ ಆ ಪ್ರದೇಶದಲ್ಲಿ ಸ್ವಲ್ಪ ಗದ್ದಲ ಉಂಟಾಯಿತು. ಅದನ್ನು ಹೊರತು ಪಡಿಸಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ನಂತರ, ಎರಡೂ ಕಾರುಗಳ ಚಾಲಕರು ಜಗಳವಾಡಿದ್ದಾರೆ . ಬಳಿಕ ಎಲ್ಲವೂ ತಣ್ಣಗಾಗಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಆಗಮಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲