#🔴'BPL ಕಾರ್ಡ್ ರದ್ದು' ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ❌ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಕಾರ್ಡ್ ಮಾಡಿ, ಸರ್ಕಾರ ಬಡವರ ಹೊಡ್ಡೆ ಮೇಲೆ ಹೊಡೆದಿದೆ. ಕೇವಲ ಒಬ್ಬರ ಕಾರಣಕ್ಕಾಗಿ ಇಡೀ ಕುಟುಂಬ ರೇಷನ್ ಕಾರ್ಡಿನ ರೇಷನ್ ಮೇಲೆ ಅವಲಂಬಿತವಾಗಿದ್ದದ್ದನ್ನು, ರದ್ದುಗೊಳಿಸಿದ ಬಳಿಕ ಅಕ್ಕಿಗಾಗಿ ಪರದಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ.ಕಾಲ ಬದಲಾದಂತೆ ಆದಾಯವೂ ಹೆಚ್ಚಾಗುತ್ತಿದೆ. ಆದಾಯದಂತೆ ಸರ್ಕಾರದ ನಿಯಮ, ಮಾನದಂಡಗಳು ಬದಲಾವಣೆಯಾಗಬೇಕಿತ್ತು. ಆದರೇ 2017ರಲ್ಲಿ ನಿಗದಿಯಾಗಿದ್ದಂತ ಮಾನದಂಡವನ್ನೇ ಇಟ್ಟುಕೊಂಡು, ಲಕ್ಷಾಂತರ ಕುಟುಂಬಗಳ ಬಿಪಿಎಲ್ ಕಾರ್ಡ್ ಅನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.ಸಿಎಂ ಸಿದ್ಧರಾಮಯ್ಯ ಮಾತ್ರ ತಾನು ಮಾಡಿದ್ದಲ್ಲ, ಬದಲಾಗಿ ಕೇಂದ್ರ ಸರ್ಕಾರವೆಂದು ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕಚ್ಚಾಟದಲ್ಲಿ ಈಗ ಕೂಸು ಬಡವಾದಂತೆ ಬಿಪಿಎಲ್ ಕಾರ್ಡ್ ರದ್ದಾದಂತ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.ಒಂದು ಬಾರಿಗೆ ಅವಕಾಶ ಕೊಡಬೇಕಿತ್ತು
ಬಿಪಿಎಲ್ ಕಾರ್ಡ್ ಹೊಂದಿರೋರು ಯಾರೆಲ್ಲ ಆದಾಯ ತೆರಿಗೆ ಪಾವತಿ ಮಾಡ್ತಾ ಇದ್ದೀರಿ ಅವರು ನಿಮ್ಮ ಹೆಸರನ್ನು ಕಾರ್ಡ್ ನಿಂದ ಡಿಲಿಟ್ ಮಾಡಿಸಿ. ಇಲ್ಲವಾದಲ್ಲಿ ನಿಮ್ಮ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದುಗೊಳಿಸುವುದಾಗಿ ಒಮ್ಮೆ ಎಚ್ಚರಿಸಿ ಅವಕಾಶ ಕೊಟ್ಟಿದ್ದರೇ, ಲಕ್ಷಾಂತರ ಮಂದಿಯ ಪಡಿತರ ಚೀಟಿ ರದ್ದಾಗುವ ಸಂಭವವೇ ಬರುತ್ತಿರಲಿಲ್ಲ. ಆದರೇ ರೋಗಿ ಬಯಸಿದ್ದು ಹಾಲು ಅನ್ನ, ಸರ್ಕಾರ ಹಿಡನ್ ಸೀಕ್ರೆಟ್ ರೇಷನ್ ಹೊರೆ ತಪ್ಪಿಸೋದು ಎನ್ನುವಂತೆ ಏಕಾಏಕಿ ಆದಾಯ ತೆರಿಗೆ ಪಾವತಿ ನೆಪದ ಕಾರಣ ಒಂದು ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಪೊಡಿಸಿದ್ದು ಮಾತ್ರ ವಿಪರ್ಯಾಸವೇ ಸರಿ.
ಒಮ್ಮೆ ಆದಾಯ ತೆರಿಗೆ ಪಾವತಿದಾರರು ತಮ್ಮ ಹೆಸರು ಡಿಲಿಟ್ ಮಾಡಿಸಿ ಎಂಬುದಾಗಿ ಅವಕಾಶವನ್ನು ಸರ್ಕಾರ ಎಚ್ಚರಿಸಿ ನೀಡಿದ್ದೇ ಆಗಿದ್ದಲ್ಲಿ ಅನೇಕ ಬಡ ಕುಟುಂಬಗಳು ಎಚ್ಚೆತ್ತುಕೊಂಡು ಡಿಲೀಟ್ ಮಾಡಿಸುತ್ತಿದ್ದವು. ಆಗ ಆದಾಯ ತೆರಿಗೆ ಪಾವತಿದಾರನೊಬ್ಬ ಕಾರ್ಡ್ ನಿಂದ ಹೊರಗುಳಿದು, ನ್ಯಾಯಯುತವಾಗಿ ಬಡತನ ರೇಖೆಗಿಂತ ಕೆಳಗಿರುವಂತ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ನಿಂದ ಪಡಿತರ ಲಭ್ಯವಾಗುವಂತೆ ಆಗುತ್ತಿತ್ತು. ಆದರೇ ಅದ್ಯಾವುದನ್ನು ಮಾಡದೇ ಸರ್ಕಾರ ಮಾತ್ರ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟ ಒಂದರಲ್ಲೇ 2 ರಿಂದ 3 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು ಮಾಡಿದೆ.
#🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲