ಆರಾಧ್ಯ creation
178.6K views
6 months ago
#😭ಖ್ಯಾತ ಖಳ ನಟ ಅನಾರೋಗ್ಯದಿಂದ ನಿಧನ😭 #📰ಇಂದಿನ ಅಪ್ಡೇಟ್ಸ್ 📲 ಕಳೆದ ಕೆಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಟಾಲಿವುಡ್‌ನ ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ (ವೆಂಕಟ್ ರಾಜ್) ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಶ್‌ ವೆಂಕಟ್‌ ಅವರ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿದ್ದವು.ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಿಶ್ ವೆಂಕಟ್ ಕೊನೆಯುಸಿರೆಳೆದಿದ್ದಾರೆಇದರಿಂದ ಫಿಶ್ ವೆಂಕಟ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವುಂಟಾಗಿದೆ. ಅವರ ನಿಧನಕ್ಕೆ ತೆಲುಗು ಚಿತ್ರರಂಗದಲ್ಲಿ ಕಂಬನಿ ಮಿಡಿದಿದೆ. ಖ್ಯಾತ ನಟನ ಸಾವಿನಿಂದ ಟಾಲಿವುಡ್‌ ಚಿತ್ರರಂಗಕ್ಕೆ ದೊಡ್ಡ ಶಾಕ್‌ ಉಂಟಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈಗಾಗಲೇ ಫಿಶ್ ವೆಂಕಟ್‌ಗೆ ಸಹಾಯ ಮಾಡಿದ್ದರು. ಫಿಶ್ ವೆಂಕಟ್ ಚೇತರಿಸಿಕೊಳ್ಳಬೇಕೆಂದು ಅವರು ಬಯಸಿದ್ದರು. ಆದರೆ ನಟನ ಸಾವಿನ ನಂತರ ಚಿತ್ರರಂಗದ ಅನೇಕರು ದುಃಖದಲ್ಲಿ ಮುಳುಗಿದ್ದಾರೆ. ಎರಡೂ ಮೂತ್ರಪಿಂಡಗಳು ಸಹ ಹಾನಿಗೊಳಗಾಗಿದ್ದರಿಂದ ಫಿಶ್‌ ವೆಂಕಟ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಮೂತ್ರಪಿಂಡ ಕಸಿಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ಹೇಳಿದ್ದರು. ಫಿಶ್ ವೆಂಕಟ್ ಅವರ ಕುಟುಂಬ ಸದಸ್ಯರು ಈ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಚಿತ್ರರಂಗ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರು. ಫಿಶ್ ವೆಂಕಟ್ ಅವರು ಚೇತರಿಸಿಕೊಳ್ಳಲಿ ಎಂದು ಅನೇಕ ನಾಯಕರು ನೆರವು ಕೂಡ ನೀಡಿದ್ದರು. ಡಯಾಲಿಸಿಸ್‌ಗೆ ಒಳಗಾಗಿದ್ದ ಅವರನ್ನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ, ಫಿಶ್ ವೆಂಕಟ್ ಆರೋಗ್ಯ ಹದಗೆಟ್ಟ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ. #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #🍿ಸ್ಯಾಂಡಲ್ ವುಡ್