ಫಾಲೋ
Nandan B M
@nandanbm1995
1,535
ಪೋಸ್ಟ್ಸ್
5,174
ಫಾಲೋವರ್ಸ್
Nandan B M
4.4K ವೀಕ್ಷಿಸಿದ್ದಾರೆ
2 ಗಂಟೆಗಳ ಹಿಂದೆ
#ಹಿಂದೂ ಭಾರತ #ಭಾರತ ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನ. ನಾಡಿನ ಸಮಸ್ತ ಜನತೆಗೆ ಗೀತಾ ಜಯಂತಿ ಶುಭಾಶಯಗಳು. #GeetaJayanthi
Nandan B M
586 ವೀಕ್ಷಿಸಿದ್ದಾರೆ
11 ದಿನಗಳ ಹಿಂದೆ
#ಹಿಂದೂ ಭಾರತ #ಭಾರತ #✍🏻ದೇಶಭಕ್ತಿ ಶಾಯರಿ #🔱 ಭಕ್ತಿ ಲೋಕ ಆರು ಭೂಕಂಪನವನ್ನೇ ಎದುರಿಸಿ ವಿಜ್ಞಾನಕ್ಕೆ ಸವಾಲಾಗಿ ನಿಂತ ಹಿಂದೂ ದೇವಾಲಯ,ಈವರೆಗೆ ನಿರ್ಮಾಣ‌ವಾಗಿರುವ ಪ್ರಮುಖ ರಚನೆಗಳಲ್ಲಿ ಬೃಹದೀಶ್ವರ ಮಂದಿರವೂ ಶ್ರೇಷ್ಠ ರಚನೆಯಾಗಿದೆ. ಏಕೆಂದರೆ, ಈ ಮಂದಿರವನ್ನು ಇಂಟರ್‌ಲಾಕ್ ಮಾದರಿಯನ್ನು ಅನುಸರಿಸಿ ನಿರ್ಮಾಣ ಮಾಡಲಾಗಿದೆ. ಇದರ ಕಲ್ಲುಗಳ ನಡುವೆ ಪ್ಲಾಸ್ಟಿಕ್, ಸಿಮೆಂಟ್ ಅಥವಾ ಯಾವುದೇ ಅಂಟು ಪದಾರ್ಥಗಳನ್ನು ಬಳಕೆ ಮಾಡಲಾಗಿಲ್ಲ. ಇದಕ್ಕೆ 1000 ವರ್ಷಗಳ ಕಾಲ ಇದು ಉಳಿದುಕೊಂಡಿದ್ದು, 6 ಪ್ರಬಲ ಭೂಕಂಪಗಳಿಂದ ರಕ್ಷಿಸಿಕೊಂಡಿದೆ. ಇದರ ಗೋಪುರವು 216 ಅಡಿಗಳಷ್ಟು ಎತ್ತರವಾಗಿದ್ದು, ಆ ಸಮಯದಲ್ಲಿ ಪ್ರಪಂಚದಲ್ಲೇ ಅತ್ಯಂತ ಎತ್ತರದ ಗೋಪುರ ಎಂಬ ಹಿರಿಮೆ ತನ್ನದಾಗಿಸಿಕೊಂಡಿತ್ತು. ಈ ವಿಧಾನವನ್ನು ಅನುಸರಿಸಿ ನಿರ್ಮಾಣ ಮಾಡಲಾದ ಇತರ ರಚನೆಗಳು ಬಿಗ್ ಬೆನ್ ಮತ್ತು ಪಿಸಾದ ಲೀನಿಂಗ್ ಟವರ್ ಸಮಯ ಸರಿದಂತೆ ವಾಲುವುದಕ್ಕೆ ತೊಡಗಿದೆ. ಆದರೆ ಬೃಹದೀಶ್ವರ ಮಂದಿರವು ಶೂನ್ಯ ಡಿಗ್ರಿ ಒಲವನ್ನು ಹೊಂದಿದೆ. ಈ ಕಟ್ಟಡದ ನಿರ್ಮಾಣ‌ಕ್ಕೆ 1,30,000 ಟನ್ ಗ್ರಾನೈಟ್ ಅನ್ನು ಬಳಕೆ ಮಾಡಲಾಗಿದ್ದು, ಇದನ್ನು 60 ಕಿಮೀ ದೂರದಿಂದ 3000 ಆನೆಗಳು ಸಾಗಾಟ ಮಾಡಿದವು. ಭೂಮಿಯನ್ನು ಅಗೆದು ಬುನಾದಿ ಹಾಕದೆಯೇ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ಮಂದಿರದ ಗೋಪುರದ ಮೇಲಿರುವ ಕುಂಭಂ‌ನ ತೂಕ 80 ಟನ್‌ಗಳಷ್ಟಿದೆ. ಹಾಗೆಯೇ ಇದನ್ನು ಏಕಶಿಲೆಯಿಂದ ನಿರ್ಮಾಣ ಮಾಡಲಾಗಿದೆ. 200 ಅಡಿ ಗೋಪುರದ ಮೇಲೆ 80 ಟನ್ ತೂಕದ ಕಲ್ಲು ಹೇಗೆ ನಿಂತಿದೆ ಎಂಬುದರ ಬಗ್ಗೆ ಹಲವಾರು ಸಿದ್ಧಾಂತ‌ಗಳು ಅಸ್ತಿತ್ವ‌ದಲ್ಲಿವೆ. ಕೆಲವರು ಇದನ್ನು ಲೆವಿಟೇಶನ್ ತಂತ್ರಜ್ಞಾನ ಎನ್ನುತ್ತಾರೆ. ಈ ಕಲ್ಲನ್ನು 6 ಕಿಮೀ ಉದ್ದದ ರಾಂಪ್ ಮೇಲೆ ಎಳೆಯಲು ಅನೆಗಳನ್ನು ಬಳಕೆ ಮಾಡಲಾಗಿದೆ. ಈ ಮಂದಿರದ ಕೆಳಗೆ ಹಲವಾರು ಭೂಗತವಾದ ಮಾರ್ಗಗಳಿವೆ ಎಂಬುದಾಗಿಯೂ ಹೇಳುತ್ತಾರೆ. ಅವುಗಳಲ್ಲಿ ಹೆಚ್ಚಿನ ಮಾರ್ಗಗಳನ್ನು ಶತಮಾನದ ಹಿಂದೆ ಮುಚ್ಚಿರುವುದಾಗಿ ಹೇಳಲಾಗುತ್ತದೆ. ಈ ರಹಸ್ಯ ದಾರಿಗಳು ಚೋಳರಿಗೆ ಸುರಕ್ಷತಾ ತಾಣ ಮತ್ತು ನಿರ್ಗಮಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು. ಹಲವು ಮೂಲಗಳು ಈ ಮಂದಿರದ ಕೆಳಗೆ ಸುಮಾರು 100 ರಹಸ್ಯ ಮಾರ್ಗಗಳಿದ್ದುದಾಗಿಯೂ ಹೇಳುತ್ತವೆ. ಇದೊಂದು ಅನನ್ಯ, ಗಮನಾರ್ಹ ಮಂದಿರವಾಗಿದ್ದು, ಇದನ್ನು ಅನ್ಯಗ್ರಹ ಜೀವಿಗಳು ನಿರ್ಮಾಣ ಮಾಡಿರುವುದಾಗಿಯೂ ಕೆಲವರು ಹೇಳುತ್ತಾರೆ. ಬೃಹದೀಶ್ವರ ಮಂದಿರದಂತೆ ಬೇರೊಂದು ಮಂದಿರವಿಲ್ಲ. ಈ ಕಾಲಾತೀತ ಅದ್ಭುತ‌ವನ್ನು ನಾವು ಅಮೂಲ್ಯ ಎಂಬುದಾಗಿ ಪರಿಗಣಿಸಬೇಕು. ಇಂತಹ ವಾಸ್ತು ಶಿಲ್ಪ, ಕಲೆಗಳನ್ನು ಉಳಿಸುವತ್ತ ಗಮನ ಹರಿಸಬೇಕು.
Nandan B M
2.8K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🔴Live: ಮೈಸೂರು ದಸರಾ🐘 #ಭಾರತ #ಮೈಸೂರು #ದಸರಾ #✍🏻ದೇಶಭಕ್ತಿ ಶಾಯರಿ "ಸಮಸ್ತ ನಾಡಿನ ಜನತೆಗೆ ಶುಭದರ್ಶನ ಚಿನ್ನದ ಅಂಬಾರಿಯಲ್ಲಿ ನಾಡ ದೇವಿ ತಾಯಿ ಚಾಮುಂಡೇಶ್ವರಿ" #mysurudasara #chamundeshwari #chamundeshwariamma #chamundeshwaridevi #mysurudasara #dasara #dasara2025 #dasaraphoto #JambooSavari
Nandan B M
451 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#rss #ಭಾರತ #✍🏻ದೇಶಭಕ್ತಿ ಶಾಯರಿ ಭಾರತದ ಕರೆನ್ಸಿಯಲ್ಲಿ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ 🇮🇳 ಆರ್ ಎಸ್ ಎಸ್ ನೂರು ವರ್ಷಗಳ ನಿರಂತರ ಸೇವೆಗೆ ಗೌರವ 🚩🙏 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಭಾಗಿ. #RSS100Years #ಸಂಘಶತಾಬ್ದಿ
Nandan B M
19.6K ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#rss #ಭಾರತ #✍🏻ದೇಶಭಕ್ತಿ ಶಾಯರಿ. ಆತ್ಮೀಯ ಕಾರ್ಯಕರ್ತ ಬಂಧುಗಳೇ , ತಮಗೆಲ್ಲ ತಿಳಿದಿರುವ ಹಾಗೆ ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಇದರ ಶತಾಬ್ದಿ ವರ್ಷ (100 ವರ್ಷ). ಸಂಘದ ಶತಾಬ್ದಿ ವರ್ಷದಲ್ಲಿ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಿಂದೂ ಸಮಾಜದ ನಡುವೆ ಹಾಗೂ ಸಂಘ ವಿಸ್ತಾರದ ಬಗ್ಗೆ ಹಲವಾರು ಯೋಜನೆಗಳನ್ನು ಕಳೆದ ಎರಡು ವರ್ಷಗಳಿಂದ ಸಂಘದ ಪ್ರಮುಖರು ಚಿಂತಿಸಿ, ನೂರಾರು ಕಾರ್ಯಕ್ರಮಗಳನ್ನು ಈ ಶತಾಬ್ದಿ ವರ್ಷದಲ್ಲಿ ನಡೆಯಬೇಕು ಎನ್ನುವ ಹಂಬಲದೊಂದಿಗೆ ಶ್ರಮಿಸುತ್ತಿದ್ದಾರೆ . ಇದರಲ್ಲಿ ಬಹಳ ಪ್ರಮುಖವಾಗಿ ಸಮಾಜದಲ್ಲಿ ಆಗಬೇಕಾದ ಸಾಮಾಜಿಕ ಪರಿವರ್ತನೆ, ವಿಶೇಷವಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಯ ಬಗ್ಗೆ ಸಂಘ ಯೋಚಿಸಿದೆ. ಅವುಗಳನ್ನು *ಪಂಚ ಪರಿವರ್ತನೆ* ಎಂಬುವ ನೆಲೆಯಲ್ಲಿ ಯೋಚಿಸಲಾಗಿದೆ. ಅವುಗಳೆಂದರೆ 1. ಸಾಮಾಜಿಕ ಸದ್ಭಾವ 2. ಕುಟುಂಬ ಪ್ರಬೋಧನ್ 3. ಸ್ವದೇಶಿ 4.ಪರಿಸರ ಸಂರಕ್ಷಣೆ 5. ನಾಗರಿಕ ಕರ್ತವ್ಯ ಹೀಗೆ ಐದು ಭಾಗಗಳಲ್ಲಿ ನಾವು ಕಾರ್ಯವನ್ನು ಮಾಡಬೇಕಾಗಿದೆ. ಹಾಗೆಯೇ ಸಂಘದ ವಿಸ್ತಾರದ ಬಗ್ಗೆಯೂ ಕೂಡ ವಿಶೇಷ ಪ್ರಯತ್ನಗಳು ನಾವು ನಡೆಸಬೇಕಾಗುತ್ತದೆ. ಈಗ ತುರ್ತಾಗಿ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ತಮಗೆ ತಿಳಿಸಲು ಬಯಸುತ್ತೇನೆ. ನಮ್ಮ ನಿವಾಸ/ ಗ್ರಾಮದ ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ /ಮಿಲನ್ ಇದರ ಮುಖ್ಯ ಶಿಕ್ಷಕ_ ಕಾರ್ಯವಾಹ ಅಥವಾ ಇನ್ನಿತರದ ಸಂಘದ ಜವಾಬ್ದಾರಿ ಕಾರ್ಯಕರ್ತರು ಯಾರು ಎಂದು ತಿಳಿದುಕೊಂಡು, ಅವರನ್ನು ಭೇಟಿ ಮಾಡಿ, ನಿಮ್ಮ ಪರಿಚಯ ಮಾಡಿಕೊಂಡು ಶತಾಬ್ದಿ ವರ್ಷದಲ್ಲಿ ನಮ್ಮ ಸಹಭಾಗಿತ್ವದ ಬಗ್ಗೆ ತಿಳಿಸಬೇಕು. ಮೊದಲು ಗಣವೇಶ ಸಿಗುವ ಸ್ಥಳ ತಿಳಿದು ನಾವೆಲ್ಲರೂ ಸಂಘದ ಗಣವೇಶವನ್ನು ಖರೀದಿಸಬೇಕು. ಈಗಾಗಲೇ ಗಣವೇಶ ಇದ್ದಲ್ಲಿ ಒಮ್ಮೆ ಎಲ್ಲವೂ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಾದವುಗಳನ್ನು ಖರೀದಿಸಿ ಸಿದ್ದಪಡಿಸಿಕೊಳ್ಳಬೇಕು. ನಮ್ಮ ಕುಟುಂಬ ಮತ್ತು ಸ್ನೇಹಿತರ ವರ್ಗದಲ್ಲಿರುವ ಎಲ್ಲರಿಗೂ ಗಣವೇಶ ಖರೀದಿಸುವಂತೆ ತಿಳಿಸಬೇಕು. ಈಗಾಗಲೇ ಸಂಘವು ಅನೇಕ ಕಡೆಗಳಲ್ಲಿ ಗಣವೇಶ ಸಿಗುವ ಬಂಡಾರಗಳನ್ನು (Shop) ಸ್ಥಾಪಿಸಿದೆ. ಶತಾಬ್ದಿ ವಿಜಯದಶಮಿ ಉತ್ಸವ ಅಕ್ಟೋಬರ್ 2 ರಂದು ನಡೆಯಲಿದೆ. ನಾವೆಲ್ಲರೂ ಕೂಡ ಕಡ್ಡಾಯವಾಗಿ ನಮ್ಮ ಸಮೀಪದದಲ್ಲಿ ನಡೆಯುವ ವಿಜಯದಶಮಿ ಉತ್ಸವ ಸ್ಥಳ, ಸಮಯ ತಿಳಿದುಕೊಂಡು ಭಾಗವಹಿಸಬೇಕು. ನಮ್ಮ ಸ್ನೇಹಿತರು ಮತ್ತು ನಮ್ಮ ಕುಟುಂಬದ ಎಲ್ಲಾ ಪುರುಷರು ಮತ್ತು ಮಹಿಳೆಯರು ಕೂಡ ಈ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಶತಾಬ್ದಿ ವಿಜಯದಶಮಿಯ ಹಿನ್ನೆಲೆಯಲ್ಲಿ 'ಪಥಸಂಚಲನ' (Route March ) ನಡೆಯಲಿದೆ. ಸಾಮಾನ್ಯವಾಗಿ ವಿಜಯದಶಮಿ ಉತ್ಸವ ಆದ 6-7 ದಿನಗಳಲ್ಲಿ ಆಯಾ ಭಾಗದಲ್ಲಿ ಪಥಸಂಚಲನ ಅಯೋಜಿಸಿರುತ್ತಾರೆ. ಭಾರತೀಯ ಜನತಾ ಪಾರ್ಟಿ ಜವಾಬ್ದಾರಿ ಇರುವ ನಾವೆಲ್ಲರೂ ಕೂಡ ಈ ಪಥ ಸಂಚಲನದಲ್ಲಿ ಭಾಗವಹಿಸಬೇಕು. ಹಾಗೂ ನಮ್ಮ ಸ್ನೇಹಿತರನ್ನು, ನಮ್ಮ ಕುಟುಂಬ ವರ್ಗದಲ್ಲಿರುವ ಎಲ್ಲಾ ಬಾಲಕ, ತರುಣ ಹಾಗೂ ಎಲ್ಲ ಹಿರಿಯ ಸ್ವಯಂಸೇವಕರನ್ನು ಈ ಪಥಸಂಚನದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಸ್ನೇಹಿತರೇ, ತಮಗೆಲ್ಲ ತಿಳಿದಿರುವ ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ಮಾತೃ ಸಂಸ್ಥೆಯಾಗಿದೆ. ಇದರ ಶತಾಬ್ದಿಯಾದ ಈ ವರ್ಷದಲ್ಲಿ ನಾವೆಲ್ಲರೂ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮುಡಿಪಾಗಿಡೋಣ, ಶತಾಬ್ದಿ ವರ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಯತ್ನಿಸೋಣ. ಶತಾಬ್ದಿ ವರ್ಷ ಯಶಸ್ವಿಯಾಗಿ ಪೂರೈಸಲು ನಮ್ಮ ಶ್ರಮ, ಸಮಯ ನೀಡಿ ಯಶಸ್ವಿಗೊಳಿಸೋಣ.
Nandan B M
728 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#ಮೈಸೂರು #ದಸರಾ ಜಂಬೂಸವಾರಿಗೆ ಮೈಸೂರು ರೆಡಿ: 6ನೇ ಬಾರಿ ಅಂಬಾರಿ ಹೊರುತ್ತಿರುವ ಕ್ಯಾಪ್ಟನ್‌ 'ಅಭಿಮನ್ಯು' #MysuruDasara #JambooSavari #GoldenHowdah #ElephantAbhimanyu #MysuruTradition #DasaraFestival
See other profiles for amazing content