
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶರಣ ಮಧುವಯ್ಯ ನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
"ತೊತ್ತಿಂಗೇಕೆ ಲಕ್ಷಣ??? ಬಂಟಂಗೇಕೆ ಆಚಾರ??? ಆಗಮವೇಕೆ ಡಿಂಗರಿಗಂಗೆ, ಒಕ್ಕುದನುಂಬುವಂಗಯ್ಯಾ??? ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ.. ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯತ ನಮಃ.. "ತನ್ನದಾದರೇನು ಕನ್ನಡಿ, ಅನ್ಯರದಾದರೇನು ಕನ್ನಡಿ, ತನ್ನ ರೂಪ ಕಂಡರೆ ಸಾಲದೇ??? ಸದ್ಗುರು ಅವನಾದಡೇನು??? ತನ್ನನರುಹಿದಡೆ ಸಾಲದೇ??? ಹೇಳಾ ಸಿಮ್ಮುಲಿಗೆಯ ಚೆನ್ನರಾಮಾ! ✍️ ಶರಣ ಚಂದಿಮರಸರವರ ವಚನ.. ಶರಣು ಶರಣಾರ್ಥಿಗಳು🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಚಂದಿಮರಸರ ಸಂಕ್ಷಿಪ್ತ ಮಾಹಿತಿ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯನಮಃ.. "ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲವೆ.. ತನ್ನಾಚಾರಕ್ಕೆ ಹೊರಗಾದವರು ಅಣ್ಣ ತಮ್ಮನೆಂದು ತಾಯಿ ತಂದೆ ಎಂದು ಹೊನ್ನು ಮಣ್ಣು ಹೆಣ್ಣಿನವರೆಂದು ಅಂಗೀಕರಿಸಿದಡೆ ಅವರಂಗಣವ ಕೂಡಿದಡೆ ಅವರೊಂದಾಗಿ ನುಡಿದಡೆ ಭಕ್ತರು ಸತ್ಯರಿಗೆ ಮುನ್ನವೆ ಹೊರಗು.. ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗವು ಅವರನೊಳಗಿಟ್ಟುಕೊಳ್ಳಾ.. ✍️ ಶರಣೆ ಅಕ್ಕಮ್ಮ ನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
"ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ.. ನಂಟರು ಬಂದರೆ ಸಮಯವಿಲ್ಲೆನ್ನಿ.. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು.. ಸಮಯಾಚಾರಕ್ಕೆ ಒಳಗಾದಂದು.. ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು ಬಳಿಕ ಬಂಧುಗಳುಂಟೆ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಅಣ್ಣ ತಮ್ಮ ಹೆತ್ತಯ್ಯ ಆವ ಗೋತ್ರದವರಾದಡೇನು.. ಲಿಂಗ ಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ.. ನಂಟು ಭಕ್ತಿ ನಾಯಕ ನರಕ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಮರಣವೇ ಮಹಾನವಮಿ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯ ನಮಃ.. "ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಗುಹೇಶ್ವರಾ ನಿಮ್ಮಾಣೆ, ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.. ✍🏻 ಶೂನ್ಯ ಪೀಠ ಧೀಶ ಅಲ್ಲಮಪ್ರಭು ದೇವರ ವಚನ.. ಸಮಸ್ತ ನಾಡಿನ ಜನತೆಗೆ ಬಸವಧರ್ಮ ಕಲ್ಯಾಣ ಕ್ರಾಂತಿಯ ವಿಜಯೋತ್ಸವ ಹಾರ್ದಿಕ ಶುಭಾಶಯಗಳು 🙏🏻 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
"ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ??? ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ