ಬಯಲಲ್ಲಿ ಬಯಲಾದ ಪರಿ!
ಬಯಲು ಬಯಲನೇ ಬಿತ್ತಿ
ಬಯಲು ಬಯಲನೇ ಬೆಳೆದು
ಬಯಲು ಬಯಲಲ್ಲಿ ಬಯಯಲಾಯಿತ್ತಯ್ಯಾ..!!
ಮಣ್ಣು ಗೆದ್ದವರು ಮಣ್ಣಲ್ಲಿ ಹೋಗಿದ್ದಾರೆ,
ಆದರೆ ಮನಸ್ಸು ಗೆದ್ದವರು ಮಹಾತ್ಮರಾಗಿದ್ದಾರೆ.
ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮ ಪೂಜ್ಯ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಅನ್ನ, ಅಕ್ಷರ, ಜ್ಞಾನ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬಾಳಿಗೆ ಬೆಳಕಾದ ಶತಮಾನದ ಸಂತ ಸಾಧನೆ ಸದಾ ಸ್ಮರಣೀಯ.
ಶ್ರೀಗಳ ಪುಣ್ಯಸ್ಮರಣೆಯ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಪೂಜ್ಯರ ಬದುಕಿನ ಹಾದಿ ನಮ್ಮೆಲ್ಲರಿಗೂ ಆದರ್ಶ..
#ದಾಸೋಹ_ದಿನ #ಶಿವಕುಮಾರ_ಸ್ವಾಮೀಜಿ #ಸಿದ್ಧಗಂಗಿ #ಮಠ #ತುಮಕೂರು #tumakur #siddaganga #mutt #shuvakumara #swamiji #🔱 ಭಕ್ತಿ ಲೋಕ
ಶೇಂಗಾ ಎಳ್ಳು ಬೆಲ್ಲದ ಹದವ ಬೆರೆಸಿ ಕಟ್ಟಿದ ಪ್ರೀತಿ ಪಾಕದ ಉಂಡೆ ಇನ್ನಷ್ಟು ಸಿಹಿಯಾಗಲಿ,
ನಿಮ್ಮೆದೆಯ ತುಂಬಾ ನಗೆಯ ಪೈರು ಪಸರಿಸಲಿ,
ಅದೆಷ್ಟೇ ಸುಖ ಕಷ್ಟಗಳ ಮಧ್ಯೆಯೂ ಒಡಲ ತುಂಬಾ ಒಂದಿಷ್ಟು ನಗುವ ಹೂರಣ ತುಂಬಿರಲಿ..
ಸಮಸ್ತ ಜಗ ಜನಕ್ಕೂ, ಭಕ್ತ ಕೋಟಿಗೂ,
ಮನದಿಂದ ಮನಕೆ ಪ್ರೀತಿ ನಗೆಯ ಬೆಳಕ ಸಂಕ್ರಮಣ...
ಶುಭವೊಂದೇ ನನ್ನಾಶಯ
ನಲ್ಮೆಯ ನಾಡಿನ ಸಮಸ್ತ ಜನತೆಗೆ "#ಉತ್ತರಾಯಣ_ಪುಣ್ಯಕಾಲ - #ಮಕರ ಹಬ್ಬದ ನಿಮಿತ್ತ ಪ್ರೀತಿಯ ಶುಭಾಶಯಗಳು.
Happy #Sankratri -2026
💐🌾🌱🪴🎂
#ಸಂಕ್ರಾಂತಿ #ಸಂಕ್ರಾಂತಿ #ಸಂಕ್ರಾಂತಿ #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ #🌾ಸುಗ್ಗಿ ಹಬ್ಬ🌴
ಪ್ರಖರ ಮಾತುಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ, ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ ಸಾರಿದ ಮೇರು ಸಾಧಕ, ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಗೌರವ ನಮನಗಳು.
#NationalYouthDay
#🔱 ಭಕ್ತಿ ಲೋಕ #ಸ್ವಾಮಿ ವಿವೇಕಾನಂದ ಜಯಂತಿ 🙏 #🙏ಸ್ವಾಮಿ ವಿವೇಕಾನಂದ ಜಯಂತಿ ಶುಭಾಶಯಗಳು 💐 #🙏ಸ್ವಾಮಿ ವಿವೇಕಾನಂದ ಜಯಂತಿ💐 #💐ಸ್ವಾಮಿ ವಿವೇಕಾನಂದ ಜಯಂತಿ
ಕರ್ನಾಟಕವನ್ನು ಶೈಕ್ಷಣಿಕವಾಗಿ–ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಅಗ್ರಗಣ್ಯರಾದ ಜ್ಞಾನದಾಸೋಹಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
ಶಿರಸಂಗಿ ಸಂಸ್ಥಾನದ ಕೊನೆಯ ದೊರೆ, ತಮ್ಮ ಆಸ್ತಿಯನ್ನೆಲ್ಲ ಸಮಾಜ ಸೇವೆಗಾಗಿ ಧಾರೆ ಎರೆದ ದಾನವೀರ ಶಿರಸಂಗಿ ಲಿಂಗರಾಯ ದೇಸಾಯಿ ಅವರು 19ನೇ ಶತಮಾನದಲ್ಲೇ ಸಮಾಜವನ್ನು ಎಚ್ಚರಿಸಿ, ಶಿಕ್ಷಣದ ಜ್ಯೋತಿ ಬೆಳಗಿದರು. ಜನಕಲ್ಯಾಣಕ್ಕಾಗಿ ಕೆರೆ–ಕಟ್ಟೆಗಳು, ಕಾಲುವೆಗಳನ್ನು ನಿರ್ಮಿಸಿ ವೈಜ್ಞಾನಿಕ ಕೃಷಿಗೆ ದಿಕ್ಕು ತೋರಿದ ಜಲತಜ್ಞರು.
ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯನ್ನು ಸ್ಥಾಪಿಸಿ, ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ದೇಣಿಗೆ ನೀಡಿ ಮೊದಲ ಎರಡು ಅವಧಿಗೆ ಅದರ ಅಧ್ಯಕ್ಷರಾಗಿ ಮಹಾಸಭಾವನ್ನು ಮುನ್ನಡೆಸಿದರು.
ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣ ಮತ್ತು ಅಭಿವೃದ್ಧಿಗೆ ದಾನಮಾಡಿದ ಮಹಾದಾನಿಯ ಸೇವೆಯ ಫಲವಾಗಿ BLDE, KLE, BVV ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಅನ್ನದಾಸೋಹ ಕೇಂದ್ರಗಳು ಹುಟ್ಟಿ ಇಂದು ಕೂಡ ಜ್ಞಾನ ದಾಸೋಹದ ಪರಂಪರೆಯನ್ನು ಮುಂದುವರಿಸುತ್ತಿವೆ.
ಸಮಾಜಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಆ ಮಹಾನ್ ಚೇತನ ಸದಾ ನಮಗೆ ಪ್ರೇರಣೆ.
✍🏻- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
#Shirasangi #lingaraja #Desai #jayanti #ಶಿರಸಂಗಿ #ಲಿಂಗರಾಜ #ದೇಸಾಯಿ #ಶಿರಸಂಗಿ ಲಿಂಗರಾಜ ದೇಸಾಯಿ ಜಯಂತಿ #🔱 ಭಕ್ತಿ ಲೋಕ
ಎಂದಿಗೂ ನೋಯದಂತೆ ನೋವುಗಳೇ ಬಾರದಂತೆ.
ನಿಮ್ಮೆಲ್ಲ ನೋವುಗಳು ಮತ್ತೆ ನೆನಪಾಗದಂತೆ ಚೆಂದದ ಹೊಸದಿನಗಳು ನಿಮ್ಮದಾಗಲಿ.
ನನ್ನೆಲ್ಲ ಆತ್ಮೀಯರಿಗೆ ನೂತನ 2026 ಕ್ಯಾಲೆಂಡರ್ ವರ್ಷಾಚರಣೆಗೆ ನಲ್ಮೆಯ ಶುಭ ಹಾರೈಕೆಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
#welcome2026 #wish_you_happy_new_year #👋 ಬೈ ಬೈ 2025😊
"ಜಗತ್ತಿಗೆ ಅನ್ನ ನೀಡುವ ಅನ್ನದಾತನ ನಗು ಮಾಸದಿರಲಿ ಎಂದಿಗೂ..!!" ಎನ್ನುವ ಸದಾಶಯದೊಂದಿಗೆ ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು ಎಂದೆಂದಿಗೂ ಗೌರವಿಸೋಣ.
ಬರುಡು ಭೂಮಿಗೂ ತಾಯ್ತನವ ತುಂಬಿ ಹಸಿದ ಹೊಟ್ಟೆಗೆ ಮೃಷ್ಟಾನವಿಕ್ಕುವ ಅನ್ನದಾತ ದೇವರುಗಳಿಗೆ ರಾಷ್ಟ್ರೀಯ ರೈತ ದಿನಾಚರಣೆ ಶುಭಾಶಯಗಳು.
Happy #National #FormersDay🌾
#formersday #former #ರೈತದಿನಾಚರಣೆ
#ಒನಕೆ ಓಬವ್ವ #ವೀರವನಿತೆ #🔱 ಭಕ್ತಿ ಲೋಕ #😍 ನನ್ನ ಸ್ಟೇಟಸ್ #ಒನಕೆಒಬವ್ವ
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ #ವೀರ_ವನಿತೆ #ಒನಕೆ_ಓಬವ್ವ ಅವರ ಜಯಂತಿ ಶುಭಾಶಯಗಳು.
ತನ್ನ ಅಸಾಧಾರಣ ಶೌರ್ಯ, ಸಾಹಸ, ಪರಾಕ್ರಮ ಮತ್ತು ನಿಷ್ಠೆಗೆ ಹೆಸರಾದ ಓಬವ್ವ ಭಾರತೀಯ ನಾರಿಯ ಶಕ್ತಿಯ ಪತೀಕವಾಗಿ ಕನ್ನಡ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
#veeravanite #OnakeObavva #chitradurga #kotenadu #fortcity #madakari_nayaka
#OnakeObavva #fortcity #trendingpost #viralchallenge #postviralシ
#🙏🌸ಕನಕದಾಸ ಜಯಂತಿ ಶುಭಾಶಯಗಳು🌸🙏 #🔱 ಭಕ್ತಿ ಲೋಕ ನಿಜ ಭಕ್ತಿಗೆ ಒಲಿಯದ ದೇವರಿಲ್ಲ ಎಂಬುದನ್ನು ಲೋಕಕ್ಕೆ ಸಾರಿದ ಪುಣ್ಯಾತ್ಮ, ವಿಶ್ವಸಂತ ದಾಸವರೇಣ್ಯ, ಕೀರ್ತನೆ ಸಾಹಿತ್ಯದ ಆದಮ್ಯ ಚೇತನ, ಸಂತಕವಿ ಶ್ರೀ ಕನಕದಾಸರ ಜಯಂತಿಯಂದು ನನ್ನ ಶತಕೋಟಿ ನಮನಗಳು.
ಕೀರ್ತನೆಗಳ ಮೂಲಕ ಸಮಾಜದ ಮೌಢ್ಯಗಳನ್ನು ಹೊಗಲಾಡಿಸಿಲು ಶ್ರಮಿಸಿದ ಅವರ ಸೇವೆ ಎಂದೆಂದಿಗೂ ಅಮರ.
ಸರ್ವರಿಗೂ ದಾಸಶ್ರೇಷ್ಠ ಶ್ರೀ #ಕನಕದಾಸ ಜಯಂತಿಯ ಶುಭಾಶಯಗಳು.
#Kanaka_Jayanti 🚩 #ಕನಕ_ಜಯಂತಿ
#ಕಿತ್ತೂರು #🎂ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ💐 #ಕಿತ್ತೂರು ರಾಣಿ ಚನ್ನಮ್ಮ #💛❤️ಕಿತ್ತೂರು ರಾಣಿ ಚೆನ್ನಮ್ಮ 💛❤️ ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರರಾಣಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಭಾರತದ ವೀರಪುತ್ರಿ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟದ ಹಾದಿಯಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.
ನಾಡಿನ ಸಮಸ್ತ ಜನತೆಗೆ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಹಾರ್ದಿಕ ಶುಭಾಶಯಗಳು.
#kitturranichennamma #jayanti #karnataka #veeravanite #KitturChennamma #jayanti #Kitturu #rani #Channamma #indipendence #freedom #🔱 ಭಕ್ತಿ ಲೋಕ
#🙏👑ಬಲಿಪಾಡ್ಯಮಿ🙏 #✨🪔ದೀಪಾವಳಿ ಸ್ಟೇಟಸ್ 🪔✨ #💰ಲಕ್ಷ್ಮೀ - ಕುಬೇರ ಪೂಜೆ 🪔 #✨ದೀಪಾವಳಿಯ ಪೌರಾಣಿಕ ಕಥೆಗಳು📖 #🔱 ಭಕ್ತಿ ಲೋಕ
ಬೆಳಕಿಗೆ ಕುಲವಿಲ್ಲ...
ಕುಂಬಾರನ ಹಣತೆ, ಗಾಣಿಗನ ಎಣ್ಣೆ, ರೈತನ ಹತ್ತಿಯ ಬತ್ತಿಗಳೆಲ್ಲ ಸೇರಿ ಬಂದ ಬೆಳಕು ಎಲ್ಲರಿಗೂ ಆದರ್ಶ.
ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ, ಪ್ರೀತಿಯಿಂದ ಪ್ರೀತಿ ಹರಡಲಿ. ದ್ವೇಷ ಅಸೂಯೆ ಕೋಪ ನಶಿಸಿ ನಿಮ್ಮ ಬಾಳಲ್ಲಿ ಪ್ರೀತಿ, ಮಮತೆ, ಸಂತೋಷ ಎಂದೆಂದಿಗೂ ಚಿಗುರಲಿ.
ದ್ವೇಷದ ಒಡಲ ಸುಡುವಂತೆ
ಒಲವ ದೀಪ ಬೆಳಗಲಿ.
ಮನೆಯಲ್ಲೂ ಮನಸಲ್ಲೂ ಬೆಳಕು ತುಂಬಲಿ.
ಸರ್ವರಿಗೂ #ದೀಪಾವಳಿ ಹಬ್ಬದ ಶುಭಹಾರೈಕೆಗಳು.
#ದೀಪಾವಳಿ #ಹಬ್ಬ #ಕರ್ನಾಟಕ
#deepavali #festivevibes #Deepavali2025









![former - చిరరలద 9 8 ದಿನದ ಮಾತು ಓ "IIi) WuSiIi] 3 ٥٥٥ ٥t٥ ಚಿತ್ರದುರ್ಗ ' జిల్ా' ಯುವ' ~05 'ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ~పేవించు ನಾಡಿನ ಸಮಸ್ತ ಅನ್ನದಾತರಿಗೆ . ರಾಷ್ಚೀಯ ರೈತ ದಿನಾಚರಣೆ 8 బభారియగళు ಮೈಲನಹಳ್ಳಿ ದಿನೇಶ್ ಕುಮಾರ್ ' 802 / ಜಿಲ್ಲಾ ' ಅಧ್ಯಕ್ಷರು;, ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ . 6' చిరరలద 9 8 ದಿನದ ಮಾತು ಓ "IIi) WuSiIi] 3 ٥٥٥ ٥t٥ ಚಿತ್ರದುರ್ಗ ' జిల్ా' ಯುವ' ~05 'ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ~పేవించు ನಾಡಿನ ಸಮಸ್ತ ಅನ್ನದಾತರಿಗೆ . ರಾಷ್ಚೀಯ ರೈತ ದಿನಾಚರಣೆ 8 బభారియగళు ಮೈಲನಹಳ್ಳಿ ದಿನೇಶ್ ಕುಮಾರ್ ' 802 / ಜಿಲ್ಲಾ ' ಅಧ್ಯಕ್ಷರು;, ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ . 6' - ShareChat former - చిరరలద 9 8 ದಿನದ ಮಾತು ಓ "IIi) WuSiIi] 3 ٥٥٥ ٥t٥ ಚಿತ್ರದುರ್ಗ ' జిల్ా' ಯುವ' ~05 'ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ~పేవించు ನಾಡಿನ ಸಮಸ್ತ ಅನ್ನದಾತರಿಗೆ . ರಾಷ್ಚೀಯ ರೈತ ದಿನಾಚರಣೆ 8 బభారియగళు ಮೈಲನಹಳ್ಳಿ ದಿನೇಶ್ ಕುಮಾರ್ ' 802 / ಜಿಲ್ಲಾ ' ಅಧ್ಯಕ್ಷರು;, ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ . 6' చిరరలద 9 8 ದಿನದ ಮಾತು ಓ "IIi) WuSiIi] 3 ٥٥٥ ٥t٥ ಚಿತ್ರದುರ್ಗ ' జిల్ా' ಯುವ' ~05 'ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ~పేవించు ನಾಡಿನ ಸಮಸ್ತ ಅನ್ನದಾತರಿಗೆ . ರಾಷ್ಚೀಯ ರೈತ ದಿನಾಚರಣೆ 8 బభారియగళు ಮೈಲನಹಳ್ಳಿ ದಿನೇಶ್ ಕುಮಾರ್ ' 802 / ಜಿಲ್ಲಾ ' ಅಧ್ಯಕ್ಷರು;, ಚಿತ್ರದುರ್ಗ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ . 6' - ShareChat](https://cdn4.sharechat.com/bd5223f_s1w/compressed_gm_40_img_374446_2953af15_1766472372807_sc.jpg?tenant=sc&referrer=user-profile-service%2FrequestType50&f=807_sc.jpg)



