#⛈️ಮುಂದಿನ 48 ಗಂಟೆ ರಣಮಳೆ: ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್🛑 ಬೆಂಗಳೂರು, ಸೆಪ್ಟಂಬರ್ 27: ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆ ಮುನ್ಸೂಚನೆ ಇದೆ. ಈ ಪೈಕಿ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಧಾರಾಕಾರ ಮಳೆ ಅಬ್ಬರಿಸಲಿದೆ. ಇಲ್ಲಿ ಗರಿಷ್ಠ 200 ಮಿಲಿ ಮೀಟರ್ ವರೆಗೂ ಮಳೆ ನಿರೀಕ್ಷೆ ಇರುವ ಕಾರಣಕ್ಕೆ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ.ಕರಾವಳಿ ಭಾಗದ ಜಿಲ್ಲೆಗಳಲ್ಲೂ ಸಹ ಭಾರೀ ಮಳೆ ಬರಲಿದೆ ಎಂಬ ಮುನ್ಸೂಚನೆ ಇದೆ.ರಾಜ್ಯದಲ್ಲಿ ಸೆಪ್ಟಂಬರ್ 17ರಿಂದ ಮಳೆ ಚುರುಕಾಗಿದೆ. ಒಳನಾಡಿನಲ್ಲಿ ಮಾತ್ರವೇ ಕಂಡು ಬರುತ್ತಿದ್ದ ಮಳೆ ಕರಾವಳಿಗೂ ವ್ಯಾಪಿಸಿತು. ಇಂದಿನಿಂದ ಎರಡು ದಿನ (ಸೆ.28ರವರೆಗೆ) ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಎರಡು ದಿನ ಮತ್ತು ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಇವತ್ತೊಂದು ದಿನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ ಬಳ್ಳಾರಿ, ವಿಜಯನಗರದಲ್ಲೂ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲