📢ಸೆಪ್ಟೆಂಬರ್ 9 ರ ಅಪ್ಡೇಟ್ಸ್ 👈
66 Posts • 348K views
#📢ಸೆಪ್ಟೆಂಬರ್ 9 ರ ಅಪ್ಡೇಟ್ಸ್ 👈 #🆕ಲೇಟೆಸ್ಟ್ ಅಪ್ಡೇಟ್ಸ್ 📰 ಮದುವೆಗೆ 15 ದಿನ ಮುನ್ನವೇ ಮಸಣ ಸೇರಿದ ಯುವತಿ; ಆಪತ್ತು ತಂದ ಅಣ್ಣನ ಬೈಕ್!ಇನ್ನೇನು ಹದಿನೈದು ದಿನಗಳಲ್ಲಿ ಮದುವೆಯ ಸಂಭ್ರಮದಲ್ಲಿ ಮನೆ ತುಂಬಿರುತ್ತಿದ್ದ ಯುವತಿಯೊಬ್ಬಳು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾಳೆ.ಈ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದ ಬಳಿ ನಡೆದಿದೆ #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್
1495 likes
29 comments 1297 shares
#😭ನನಗೆ ವಿಷ ಕೊಡಿ :ಕೋರ್ಟ್ ನಲ್ಲಿ ಜಡ್ಜ್ ಗೆ ಮನವಿ ಮಾಡಿದ ನಟ ದರ್ಶನ್! ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸವಲತ್ತುಗಳಿಲ್ಲದೇ ಕಠಿಣ ಪರಿಸ್ಥಿತಿಯಲ್ಲಿ ಕಳೆಯುತ್ತಿದ್ದು, ಅವರು ನ್ಯಾಯಾಧೀಶರ ಎದುರು ಅತಿಶಯ ಆತಂಕದ ಮನವಿಯೊಂದನ್ನು ಸಲ್ಲಿಸಿದ್ದು, ಆ ಮನವಿ ಕೇಳಿದ ನ್ಯಾಯಾಧೀಶರು ಕೂಡ ಒಂದು ಕ್ಷಣ ನಿಶ್ಶಬ್ದರಾಗಿದ್ದರುಮತ್ತೊಮ್ಮೆ ಜೈಲಿಗೆ ಮರಳಿದ ದರ್ಶನ್, ಈ ಬಾರಿ ಯಾವುದೇ ವಿಶೇಷ ಸೌಲಭ್ಯ ಪಡೆಯದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರಿಂದ, ಅವರು ಸಾಮಾನ್ಯ ಕೈದಿಗಳಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಠಿಣ ನಿಯಮಗಳ ನಡುವೆ ಬದುಕುತ್ತಿದ್ದಾರೆ. ಈ ಸ್ಥಿತಿಯಿಂದಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ನ್ಯಾಯಾಲಯದ ವಿಚಾರಣೆಯಲ್ಲಿ ಬಹಿರಂಗಪಡಿಸಿದರು.ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ದರ್ಶನ್ ವಿಡಿಯೋ ಕಾಲ್ ಮುಖಾಂತರ ಹಾಜರಾಗಿ, "ಒಂದು ಮನವಿ ಇದೆ," ಎಂದು ಹೇಳಿ ನ್ಯಾಯಾಧೀಶರ ಗಮನ ಸೆಳೆದರು. "ನಾನು ಬಿಸಿಲು ನೋಡಿ ಈಗಾಗಲೇ 30 ದಿನಗಳಾಗಿವೆ. ಕೈಯಲ್ಲಿ ಫಂಗಸ್ ಬಂದಿದೆ. ನನಗೆ ಬೇರೆ ಯಾವ ಸವಲತ್ತೂ ಬೇಡ, ಕೋರ್ಟ್ ವಿಷ ನೀಡಲಿ," ಎಂದು ಕೇಳಿಕೊಂಡಿದ್ಧಾರೆ. ಈ ಮಾತು ಕೇಳಿದ ನ್ಯಾಯಾಧೀಶರು, "ಹಾಗೆಲ್ಲ ಕೇಳಬಾರದು," ಎಂದು ತಕ್ಷಣ ತಿರಸ್ಕಾರ ವ್ಯಕ್ತಪಡಿಸಿದರು. ನಂತರ, ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ಧಾರೆ.ದರ್ಶನ್ ಈ ಹಿಂದೆ ಬಂಧನಕ್ಕೊಳಗಾದ ಬಳಿಕ ಹೈಕೋರ್ಟ್ ಜಾಮೀನು ನೀಡಿದರೂ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಆ ಜಾಮೀನು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಅವರು ಹೊಂದಿದ್ದ ಜಾಮೀನನ್ನು ರದ್ದುಪಡಿಸಿದ್ದು, ವಿಶೇಷ ಸೌಲಭ್ಯ ನೀಡಬಾರದೆಂದು ಸೂಚನೆ ನೀಡಿತ್ತು. ಇದರ ಪರಿಣಾಮವಾಗಿ, ಜೈಲಿನ ಪ್ರತಿಯೊಂದು ನಿಯಮವನ್ನು ಕಠಿಣವಾಗಿ ಅನುಸರಿಸುತ್ತಿರುವ ದರ್ಶನ್, ಇದೀಗ ಜೈಲುವಾಸದಿಂದ ಹೈರಾಣಾಗಿದ್ದಾರೆ. #🍿ಸ್ಯಾಂಡಲ್ ವುಡ್ #📰ಇಂದಿನ ಅಪ್ಡೇಟ್ಸ್ 📲 #📢ಸೆಪ್ಟೆಂಬರ್ 9 ರ ಅಪ್ಡೇಟ್ಸ್ 👈 #🆕ಲೇಟೆಸ್ಟ್ ಅಪ್ಡೇಟ್ಸ್ 📰
686 likes
52 comments 1842 shares
#😱ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್: 2.13 ಲಕ್ಷ ಮಂದಿ ಖಾತೆಗೆ ಹಣ ಹಾಕಲ್ಲ.!👈 ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ "ಗೃಹಲಕ್ಷ್ಮಿ"ಯೋಜಯು ಒಂದಾಗಿದ್ದು, ದಿನಾಂಕ:-06-06-2023ರ ಆದೇಶ ಹಾಗೂ ದಿನಾಂಕ:-17-07-2023ರ ಮಾರ್ಗಸೂಚಿ ಯಂತೆ ಅನುಷ್ಠಾನಗೊಳಿಸಲಾಗುತ್ತಿದೆ.ದಿನಾಂಕ:-17-07-2023 ರಂದು ಹೊರಡಿಸಿದ ಮಾರ್ಗಸೂಚಿ ಅನ್ವಯ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿ.ಎಸ್.ಟಿ.ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ.ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯಡಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳ ಧನಸಹಾಯ ಪಾವತಿಗಾಗಿ ಮನವಿ ಸಲ್ಲಿಸಿದಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿಗಳಾಗಿರುವುದರಿಂದ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ ಇವರ ಹಂತದಲ್ಲಿ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. #📢ಸೆಪ್ಟೆಂಬರ್ 9 ರ ಅಪ್ಡೇಟ್ಸ್ 👈 #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
135 likes
1 comment 391 shares