🙏ಸಂಕಷ್ಟಿ ಚತುರ್ಥಿ 🕉️
235 Posts • 2M views
Edu ವೀರ
121K views 1 months ago
ಆಶ್ವಯುಜ ಮಾಸದ ಸಂಕಷ್ಟ ಚತುರ್ಥಿ ವ್ರತವನ್ನು ವಕ್ರತುಂಡ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. 2025ರ ವಕ್ರತುಂಡ ಸಂಕಷ್ಟ ಚತುರ್ಥಿಯನ್ನು ಅಕ್ಟೋಬರ್‌ 10ರಂದು ಶುಕ್ರವಾರ ಆಚರಿಸಲಾಗುವುದು. 2025ರ ವಕ್ರತುಂಡ ಸಂಕಷ್ಟ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವುದು.? ವಕ್ರತುಂಡ ಸಂಕಷ್ಟ ಚತುರ್ಥಿ ಪೂಜೆ ವಿಧಿ - ವಿಧಾನಗಳು ಯಾವುವು.? ಸಂಕಷ್ಟ ಚತುರ್ಥಿ ಮಂತ್ರ ಹಾಗೂ ಮಹತ್ವವಿದು. ಗಣೇಶನಿಗೆ ಸಮರ್ಪಿತವಾದ 13 ಸಂಕಷ್ಟಿ ಚತುರ್ಥಿ ಉಪವಾಸಗಳಲ್ಲಿ ವಕ್ರತುಂಡ ಸಂಕಷ್ಟ ಚತುರ್ಥಿ ತುಂಬಾನೇ ಪ್ರಮುಖವಾದ ವ್ರತವಾಗಿದೆ. ಈ ಪವಿತ್ರ ವ್ರತವು ಗಣಪತಿಯ ವಕ್ರತುಂಡ ರೂಪದ ಪೂಜೆಗೆ ಸಮರ್ಪಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಕ್ರತುಂಡವು ಅಷ್ಟ ವಿನಾಯಕರ ರೂಪದಲ್ಲಿ ಗಣೇಶನ ಮೊದಲ ರೂಪವಾಗಿದೆ. ಮುದ್ಗಲ ಪುರಾಣವು ಮತ್ಸರಾಸುರ ಎಂಬ ರಾಕ್ಷಸನನ್ನು ವಧಿಸಲು ಗಣೇಶನು ವಕ್ರತುಂಡ ರೂಪವನ್ನು ತೆಗೆದುಕೊಂಡನು ಎಂದು ಹೇಳುತ್ತದೆ. ಆದರೆ ಇತರ ದಂತಕಥೆಗಳು ಇಂದ್ರ ಮತ್ತು ಇತರ ದೇವತೆಗಳನ್ನು ರಾಕ್ಷಸ ದಂಭಾಸುರನಿಂದ ರಕ್ಷಿಸಲು ಗಣೇಶನು ವಕ್ರತುಂಡ ಅವತಾರವನ್ನು ತೆಗೆದುಕೊಂಡರು ಎಂದು ಹೇಳುತ್ತದೆ. ಈ ವರ್ಷ, ವಕ್ರತುಂಡ ಸಂಕಷ್ಟ ಚತುರ್ಥಿ ವ್ರತವನ್ನು ಅಕ್ಟೋಬರ್‌ 10ರಂದು ಶುಕ್ರವಾರದ ದಿನ ಆಚರಿಸಲಾಗುವುದು. 2025ರ ಅಕ್ಟೋಬರ್‌ ತಿಂಗಳಿನಲ್ಲಿ ಆಚರಿಸಲಾಗುವ ವಕ್ರತುಂಡ ಸಂಕಷ್ಟ ಚತುರ್ಥಿ 2025ರ ಕುರಿತಾದ ಮಾಹಿತಿ ಹೀಗಿದೆ. #🙏ಸಂಕಷ್ಟಿ ಚತುರ್ಥಿ 🕉️
1240 likes
16 comments 2689 shares