ವಿಷ್ಣು ಪ್ರಿಯ 🦚💙
833 views • 3 months ago
#ಆಷಾಢ ನವರಾತ್ರಿ 🙏 #varahi amma ಗುಪ್ತ ನವರಾತ್ರಿ ಆಚರಣೆ ಮಾಹಿತಿ
ಗುಪ್ತ ನವರಾತ್ರಿಯ ಮಹತ್ವ:
ಗುಪ್ತ ನವರಾತ್ರಿಯೆಂದು ಆಚರಿಸಲಾಗುವ ಆಷಾಢ ನವರಾತ್ರಿಯನ್ನು ದೇಶದ ಕೆಲವೆಡೆ ಗಾಯತ್ರಿ ದೇವಿಯ ನವರಾತ್ರಿಯೆಂದೂ ಕೂಡ ಆಚರಿಸುತ್ತಾರೆ.
ಈ ನವರಾತ್ರಿಯಂದು 9 ದಿನ ರಾತ್ರಿ ದುರ್ಗಾದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಇಂದು
ಗುಪ್ತ ಎಂದರೆ ರಹಸ್ಯವೆಂದರ್ಥ. ಈ ಪದವೇ ಸೂಚಿಸುವಂತೆ ಈ ಹಬ್ಬವನ್ನು ಗುಪ್ತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮೊಟ್ಟ ಮೊದಲ ಬಾರಿಗೆ ಗುಪ್ತ ಸಾಮ್ರಾಜ್ಯದವರು ಆಚರಿಸಿರುವುದರಿಂದ ಇದಕ್ಕೆ ಗುಪ್ತ ಎನ್ನುವ ಹೆಸರು ಬರಲು ಕಾರಣವಾಯಿತೆಂಬ ನಂಬಿಕೆಯಿದೆ.
ಕುಟುಂಬದಲ್ಲಿ ಯಾರಾದರು ವ್ರತವನ್ನು ಕೈಗೊಂಡಾಗ ಸಾವನ್ನಪ್ಪಿದರೆ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಸೇವೆಯಲ್ಲಿ ಇರುವಾಗಲೇ ದೈವಾಧೀನರಾದರೆ ಅಂತಹ ಕುಟುಂಬದಲ್ಲಿ ಈ ನವರಾತ್ರಿಯನ್ನು ಒಂಟಿಯಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದುರ್ಗಾದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಹಬ್ಬದಲ್ಲಿ ಯಾವುದೇ ಆಡಂಬರವಿರುವುದಿಲ್ಲ. ಕೇವಲ ಭಕ್ತಿಯೊಂದೇ ದೇವಿಗೆ ಅರ್ಪಿಸಲಾಗುತ್ತದೆ. ಈ ನವರಾತ್ರಿಯಂದು ದುರ್ಗೆಯನ್ನು ಆರಾಧಿಸಿದರೆ ದೇವಿಯು ಆಂತರಿಕ ಮತ್ತು ಬಾಹ್ಯ ನಕಾರಾತ್ಮಕ ಶಕ್ತಿಗಳನ್ನು , ಚಿಂತನೆಗಳನ್ನು ತೊಡೆದು ಹಾಕುತ್ತಾಳೆ. ಈ ನವರಾತ್ರಿಯ ಆಚರಣೆಯಿಂದ ಬುದ್ಧಿವಂತಿಕೆ ಮತ್ತು ಸಂಪತ್ತು ದೊರೆಯುತ್ತದೆ ಎನ್ನುವ ನಂಬಿಕೆಯೂ ಇದೆ.
ವಿಷ್ಣುವಿನ ವರಹ ಅವತಾರ
ಗುಪ್ತ ನವರಾತ್ರಿ ಸಮಯದಲ್ಲಿ ಜನರು ಸಾಮಾನ್ಯವಾಗಿ ದುರ್ಗಾ ದೇವಿಯನ್ನು ನವದುರ್ಗಾ ಎನ್ನುವ 9 ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಮಾಟಮಂತ್ರ, ಅಸೂಯೆ ಮುಂತಾದ ದುಷ್ಟ ಶಕ್ತಿಗಳ ವಿರುದ್ಧ ಈ ಪೂಜೆಯು ರಕ್ಷಣೆ ನೀಡುತ್ತದೆ. ಗುಪ್ತ ನವರಾತ್ರಿಯ 9 ರಾತ್ರಿ ದೇವಿ ಮಹಾತ್ಮ್ಯಾಂ ಅಥವಾ ದುರ್ಗಾ ಮಂತ್ರಗಳನ್ನು ಪಠಿಸಲಾಗುತ್ತದೆ.
ಆಷಾಢ ನವರಾತ್ರಿಯು ವರಹಿ ದೇವಿಯನ್ನು ಕೂಡ ಪೂಜಿಸಲು ಸೂಕ್ತ ಸಮಯವಾಗಿದೆ. ವರಾಹಿ ದೇವಿಯು ಹಂದಿ ಮುಖದ ದೇವಿಯಾಗಿದ್ದು, ಈಕೆಯನ್ನು ವಿಷ್ಣುವಿನ ವರಹ ಅವತಾರದ ಅತ್ನಿಯೆಂದು ಪರಿಗಣಿಸಲಾಗುತ್ತದೆ. ಈಕೆ ಶಕ್ತಿಯುತ ಮತ್ತು ಸಹಾನುಭೂತಿಯುಳ್ಳ ದೇವತೆಯಾಗಿದ್ದಾಳೆ. ಈಕೆ ಭಕ್ತರ ಬಯಕೆಯನ್ನು ಈಡೇರಿಸುತ್ತಾಳೆ. ಹಾಗೂ ಭೌತಿಕ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ವರಹಿಯನ್ನು ಲಕ್ಷ್ಮಿ ದೇವಿಯ ಸಂಪತ್ತಿನ ರೂಪವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣದ ಪ್ರಕಾರ, ವರಹಿ ದೇವಿಯು ಧೈರ್ಯ, ಶೌರ್ಯ, ವಿಜಯ ಮತ್ತು ಬೇಡಿದ ವರಗಳನ್ನು ನೀಡುವ ದೇವಿಯಾಗಿದ್ದಳೆ.
ಗುಪ್ತ ನವರಾತ್ರಿಯ ಪೂಜಾವಿಧಿ:
1) ಮನೆಯಲ್ಲೇ ದೇವಿಗೆ ಮಂತ್ರವನ್ನು ಮತ್ತು ಪ್ರಸಾದವನ್ನು ಅರ್ಪಿಸುವುದರ ಮೂಲಕ ಸರಳವಾಗಿ ಪೂಜೆಯನ್ನು ಮಾಡಿ.
2) ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ದೇವಿಯ ಮಹಾತ್ಮ್ಯಾಂ ಓದಿ ಅಥವಾ ಬೇರೆಯವರಿಂದ ಕೇಳಿ.
3) ನಿಮ್ಮಲ್ಲಿ ಸಂಪೂರ್ಣ ದಿನ ಉಪವಾಸವಿರಲು ಸಾಧ್ಯವಾದರೆ ದಿನಪೂರ್ತಿ ಉಪವಾಸವಿರಿ ಅಥವಾ ಸಂಪೂರ್ಣ ದಿನ ಉಪವಾಸವಾಗಿರಲು ಸಾಧ್ಯವಿಲ್ಲದಿದ್ದರೆ ಒಂದು ಹೊತ್ತಾದರೂ ಉಪವಾಸವನ್ನು ಆಚರಿಸಿ.
4) ದುರ್ಗೆಯ ಪೂಜೆಯೊಂದಿಗೆ ವರಹಿ ದೇವಿಯನ್ನು ಕೂಡ ಆರಾಧಿಸಿ.
5) ಆಷಾಢ ನವರಾತ್ರಿಯ 9 ರಾತ್ರಿಗಳಲ್ಲೂ ದುರ್ಗೆಯನ್ನು ವಿಶೇಷವಾಗಿ ಪೂಜಿಸಿ, ಪೂಜೆಯ ನಂತರ ಸುಮಂಗಲಿಯರಿಗೆ ಅರಶಿಣ, ಕುಂಕುಮ, ಬಳೆ, ಅಕ್ಷತೆ ಹಾಗೂ ಸೀರೆಯನ್ನು ಅಥವಾ ರವಿಕೆಯ ಬಟ್ಟೆಯನ್ನು ನೀಡಿ.
ಗುಪ್ತ ನವರಾತ್ರಿಯ ಅಥವಾ ಆಷಾಢ ನವರಾತ್ರಿಯಾಚರಣೆಯ ಉಪಯೋಗ:
1) ನಕಾರಾತ್ಮಕ ಶಕ್ತಿಯನ್ನು ದೂರಾಗಿಸುತ್ತದೆ.
2) ಸಂಪತ್ತನ್ನು, ಹಣವನ್ನು ನೀಡಿ, ದುರಾದೃಷ್ಟದಿಂದ ನಿಮ್ಮನ್ನು ದೂರಾಗಿಸುತ್ತದೆ.
3) ಹಣಕಾಸಿನ ವಿಚಾರದಲ್ಲಿ ಅಥವಾ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದು ಹಾಕುತ್ತದೆ.
4) ಶಕ್ತಿ, ಸಾಮರ್ಥ್ಯ ಮತ್ತು ಎಲ್ಲಾ ಕಾರ್ಯದಲ್ಲೂ ಜಯವನ್ನು ನೀಡುತ್ತಾಳೆ.
5) ಆರೋಗ್ಯವಂತ ಜೀವನವನ್ನು ಕಲ್ಪಿಸುತ್ತದೆ.
ಆಷಾಢ ನವರಾತ್ರಿಯ ಅಥವಾ ಗುಪ್ತ ನವರಾತ್ರಿಯ 9 ದಿನ ರಾತ್ರಿಯು ತಾಯಿ ದುರ್ಗೆಯನ್ನು ಆರಾಧಿಸಿ ಅವಳ ಆಶೀರ್ವಾದವನ್ನು ಪಡೆದುಕೊಳ್ಳಿ. ಈ ನವರಾತ್ರಿಯು ಕೂಡ ಉಳಿದೆಲ್ಲಾ ನವರಾತ್ರಿಗಳಷ್ಟೇ ಪವಿತ್ರವಾದ ನವರಾತ್ರಿಯೆಂದು ಪರಿಗಣಿಸಲಾಗಿದೆ.
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
8 likes
11 shares