Ram Ajekar
967 views • 1 months ago
#🙏ಮಂಗಳವಾರದ ಭಕ್ತಿ ಸ್ಪೆಷಲ್
ಹುಲಿಯಾಗಿ ಮಿಂಚಿದ ಚೆನ್ನ ಕಂಬಳ ಕೋಣ
ಕರಾವಳಿಗರ ಹೃದಯದಲ್ಲಿ ಕಂಬಳಕ್ಕೆ ಇರುವ ಪ್ರೀತಿ ಅಸಾಮಾನ್ಯ. ಸಿನಿಮಾ ನಟರಿಗಿಂತಲೂ ಹೆಚ್ಚು ತುಳುನಾಡಿನಲ್ಲಿ ಪೈಪೋಟಿ ಕೋಣಗಳಿಗೆ ಆರಾಧನೆ ಮಾಡುತ್ತಾರೆ ಎಂದರೆ ತಪ್ಪಲ್ಲ, ತನ್ನ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಂದು ಕೋಣವನ್ನೂ ದೇವರೆಂದು ಕಾಣುವುದು ತುಳುನಾಡಿನ ಸಂಸ್ಕೃತಿ. ಕಂಬಳದ ಗದ್ದೆಗಳಲ್ಲಿ ಕೋಣ ಓಡುವ ಶಬ್ದವೇ ಇಲ್ಲಿನ ಜನರ ಹೃದಯದ ಧ್ವನಿ
ಹುಲಿ ಬಣ್ಣ ತೊಟ್ಟು ಕುಣಿಯುವ ಪಿಲಿನಲಿಕೆ, ಗಣೇಶೋತ್ಸವದ ಸಂಭ್ರಮದಲ್ಲಿ ಮಕ್ಕಳಿಂದ ಹಿಡಿದು ಯುವಕರವರೆಗೂ ಎಲ್ಲರ ಉಲ್ಲಾಸದಿಂದ ಕಾತರಿಸುತ್ತಾರೆ. ಈ ಪಿಲಿನಲಿಕೆಯಲ್ಲಿ ಕಾಣುವ ಪ್ರತಿಯೊಂದು ಬಣ್ಣವೂ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. .
ಇಂತಹ ನೆಲದಲ್ಲಿ ಜನಿಸಿದ ಅಪರೂಪದ ಆಸ್ತಿ ಎಂದರೆ ಕೋಣ ಕೊಳಚೂರು ಕೊಂಡೆಟ್ಟು ಚೆನ್ನ.
ಇಪ್ಪತ್ತೆರಡು ವರ್ಷಗಳ ಹಿಂದೆ ಕಡಂದಲೆ ಕಾಳು ಪಾಣಾರರ ಹಟ್ಟಿಯಲ್ಲಿ ಜನಿಸಿದ ಚೆನ್ನ, ಬಾಲ್ಯದಲ್ಲೇ ಬಾರ್ಕೂರು ಶಾಂತರಾಮ ಶೆಟ್ಟರ ಕಣ್ಣಿಗೆ ಬಿತ್ತು. ಅವರೇ ಮೊದಲು ಕಂಬಳದ ಗದ್ದೆಯತ್ತ ಅದನ್ನು ಕರೆದುಕೊಂಡು ಹೋದರು. ಕೇವಲ ನಾಲ್ಕನೇ ವಯಸ್ಸಿನಲ್ಲಿ ಜ್ಯೂನಿಯರ್ ನೇಗಿಲು ವಿಭಾಗದಲ್ಲಿ ತನ್ನ ಚುರುಕಿನ ಓಟ ತೋರಿಸಿದ ಕ್ಷಣದಿಂದಲೇ ಜನರ ಹೃದಯದಲ್ಲಿ ಹೊಸ ನಕ್ಷತ್ರವಾಗಿ ಹೊಳೆಯಲು ಶುರುವಾಯಿತು. ಆ ದಿನದಿಂದ ಪ್ರಾರಂಭವಾಯಿತು ಒಂದು ದೀರ್ಘ, ಅದ್ಭುತ ಪಯಣ.
ನಂತರ ಕೊಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಹಟ್ಟಿಗೆ ಸೇರಿದ ಚೆನ್ನ, ತನ್ನ ಬಲಿಷ್ಠ ಹೆಜ್ಜೆಗಳಿಂದ ಮೈದಾನವನ್ನೇ ಕಂಪಿಸುತ್ತಿತ್ತು. ಸೀನಿಯರ್ ನೇಗಿಲು ಇರಲಿ, ಹಗ್ಗದ ಓಟ ಇರಲಿ ಯಾವ ವಿಭಾಗಕ್ಕೂ ಇಳಿದರೂ ತನ್ನ ಶಕ್ತಿಯ ಚುರುಕಿನಿಂದ ಪ್ರೇಕ್ಷಕರನ್ನು ಮೈಮರೆಸುತ್ತಿತ್ತು. ಜನರ ಚಪ್ಪಾಳೆ, ಕೂಗು, ಆನಂದದ ಅಲೆಗಳ ನಡುವೆ ಚೆನ್ನ ತನ್ನ ಮಾಲೀಕರ ಹೆಮ್ಮೆಗಾಗಿಯೇ ಓಡುತ್ತಿದ್ದಂತೆ ಕಂಡುಬರುತ್ತಿತ್ತು.
ತುಳುನಾಡಿನ ಕಂಬಳ ಇತಿಹಾಸದಲ್ಲಿ ಅಜರಾಮರವಾದ ಅಧ್ಯಾಯವೆಂದರೆ ಚೆನ್ನ ಮತ್ತು ಮೋಡೆ ಎಂಬ ಜೋಡಿ. ಹಗ್ಗ ಹಿರಿಯ ವಿಭಾಗದಲ್ಲಿ ಇವರ ಓಟ ಜನರ ಹೃದಯದಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಟ್ಟಂತಾಗಿತ್ತು. ನಾಲ್ಕು ಬಾರಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಈ ಜೋಡಿ, ತುಳುನಾಡಿನ ಜನಪದ ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದ್ದವು.
ಹತ್ತಾರು ಕೂಟಗಳಲ್ಲಿ ಗೆದ್ದ ಪದಕಗಳು, ಅನೇಕ ಪುರಸ್ಕಾರಗಳು, ಗೌರವ ಸನ್ಮಾನಗಳು ಸಿಕ್ಕಿದ್ದವು .. ಚೆನ್ನನ ಓಟದ ನೆನಪುಗಳ ಸೊಬಗು. ಮೂರು ವರ್ಷಗಳ ಹಿಂದೆ ನಿವೃತ್ತಿಗೊಂಡ ಚೆನ್ನ ತನ್ನ ಉಳಿದ ಬದುಕನ್ನು ಗೌರವ, ಪ್ರೀತಿ, ಆರಾಧನೆಯ ನಡುವೆ ಕಳೆದಿತ್ತು.
ಆದರೆ 2025ರ ಆಗಸ್ಟ್ ತಿಂಗಳಲ್ಲಿ, 27ನೇ ವಯಸ್ಸಿನಲ್ಲಿ ವಯೋಸಹಜ ಕಾರಣಗಳಿಂದ ಚೆನ್ನ ತನ್ನ ಅಂತಿಮ ಓಟವನ್ನು ಮುಗಿಸಿ, ಈ ಲೋಕವನ್ನು ತೊರೆದಿತು. ಆದರೆ ಚೆನ್ನ ಕೇವಲ ಒಂದು ಕಂಬಳ ಕೋಣವಲ್ಲ; ಅದು ತುಳುನಾಡಿನ ಗದ್ದೆಯ ಕೀರ್ತಿ, ಕರಾವಳಿಯ ಸಂಸ್ಕೃತಿಯ ಪ್ರತೀಕ, ಜನರ ಮನದ ಹೆಮ್ಮೆ.
ಇದನ್ನೇ ಪ್ರತಿಬಿಂಬಿಸಿದಂತೆ, ಮೂಡುಬಿದಿರೆ ಗಣೇಶೋತ್ಸವದ ಬೆದ್ರ ಫ್ರೆಂಡ್ಸ್ ನೇತೃತ್ವದಲ್ಲಿ ನಡೆದ ಪಿಲಿನಲಿಕೆಯಲ್ಲಿ ಒಬ್ಬ ಅಭಿಮಾನಿ ಮೈಮೇಲೆ ಹೊತ್ತುಕೊಂಡಿದ್ದ ಚೆನ್ನನ ಚಿತ್ರ,
ರಾಂ ಅಜೆಕಾರು ಕಾರ್ಕಳ
https://ramajekar.travel.blog/2025/09/02/daily-updates-2/
#ಗೌರಿ ಗಣೇಶ ಹಬ್ಬ #ಗಣೇಶ ಚತುರ್ಥಿ #🕉️ಗಣೇಶ ಚತುರ್ಥಿ🌺🙏🙏🙏🌺 #ಹ್ಯಾಪಿ ಗಣೇಶ ಚತುರ್ಥಿ
#Pilinalike #MangaloreFolk #UdupiVibes #TulunadCulture #TigerDance #MangaloreTradition #UdupiDiaries #PilinalikeDance #Tulunadu #YakshaganaSpirit #KudlaVibes #UdupiTradition #FolkDanceFestival #MangaloreFest #TulunadFolk #UdupiCulture #PilinalikeFest #MangaloreStories #UdupiLife #TulunadFestivals #FolkHeritage #KudlaFolk #UdupiCelebrations #PilinalikeArt #MangaloreDiaries #UdupiLove #TulunaduHeritage #PilinalikeTulunad #FolkDanceMagic #MangaloreCulture
5 likes
5 shares